ಪ್ರತಿದಿನ ಹೆಚ್ಚೆಚ್ಚು ಟೀ ಕುಡಿಯುವ ಅಭ್ಯಾಸವಿದೆಯೇ? ಹಾಗಿದ್ದರೆ ತಪ್ಪದೇ ಈ ಸ್ಟೋರಿ‌ ಓದಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 114 views

ಚಹಾ ಕುಡಿಯುವ ಅಭ್ಯಾಸ ಕೆಟ್ಟದ್ದು ಎಂದು ಬಹಳಷ್ಟು ಜನ ಹೇಳುತ್ತಾರೆ. ಆದರೆ ಅವರಿಗೆ ಗೊತ್ತಿರುವುದಿಲ್ಲ. ಚಹಾದಲ್ಲಿ ಬಳಕೆ ಮಾಡುವ ಹಾಲು ಮತ್ತು ಸಕ್ಕರೆ ಆರೋಗ್ಯಕ್ಕೆ ಅಹಿತಕರ ಎಂದು. ಇಲ್ಲಿ ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಪ್ರತಿಯೊಂದು ನಮ್ಮ ದೇಹಕ್ಕೆ ಆರೋಗ್ಯಕರವಾಗಿರುತ್ತದೆ. ಆದರೆ ಪ್ರತಿ ದಿನ ಐದರಿಂದ ಆರು ಕಪ್ ಚಹಾ ಕುಡಿಯುವವರು ಹಾಲು ಮತ್ತು ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದರಿಂದ ಹೃದಯಕ್ಕೆ ತೊಂದರೆ ಉಂಟಾಗುತ್ತದೆ.

Advertisement

ಮತ್ತು ಇಲ್ಲದೇ ಇದ್ದರೂ ಕೂಡ ಮಧುಮೇಹ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಹಾಲು ಮತ್ತು ಸಕ್ಕರೆ ಬೆರೆಸದೆ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಅತ್ಯುತ್ತಮ ಆರೋಗ್ಯ ಲಾಭಗಳನ್ನು ನಾವು ನಿರೀಕ್ಷೆ ಮಾಡಬಹುದು. ಆರೋಗ್ಯದ ವಿಚಾರದಲ್ಲಿ ನಮಗೆ ಯಾವ ಆಹಾರ ಪದಾರ್ಥಗಳಿಂದ ಹೇಗೆ ಲಾಭಗಳು ಸಿಗುತ್ತವೆ ಎಂದು ಹೇಳುವುದಕ್ಕೆ ಬರುವುದಿಲ್ಲ.

ಹಾಗಾಗಿ ನೈಸರ್ಗಿಕ ವಿಧಾನದಲ್ಲಿ ನಾವು ಸೇವನೆ ಮಾಡುವ ಪ್ರತಿಯೊಂದು ಆಹಾರ ಪದಾರ್ಥ ನಮಗೆ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ ಜೊತೆಗೆ ಆರೋಗ್ಯಕರ ಎಂದು ನಂಬಬಹುದು. ಪ್ರತಿದಿನ ಚಹಾ ಕುಡಿಯುವ ಅಭ್ಯಾಸ ಇದ್ದವರು ತುಂಬಾ ಆರೋಗ್ಯವಂತರು ಎಂದು ಹೇಳುತ್ತಾರೆ.

ಚಹಾದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಸಾಕಷ್ಟು ಕಂಡುಬರುವುದರಿಂದ, ಇವುಗಳು ನಮ್ಮ ದೇಹದಲ್ಲಿ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಉತ್ತೇಜಿಸುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಹೊರಗಿನ ಮಾಲಿನ್ಯಕಾರಕ ವಾತಾವರಣದಿಂದ ಕೂಡ ಇಂದು ಮನುಷ್ಯನ ಆರೋಗ್ಯ ಮತ್ತು ಸೌಂದರ್ಯ ಹಾಳಾಗುತ್ತಿದೆ.

ಹಾಗಾಗಿ ಇಂತಹ ವಾತಾವರಣದಲ್ಲಿ ಬದುಕುತ್ತಿರುವ ಮನುಷ್ಯ ತನ್ನ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕುವ ಸಲುವಾಗಿ ಕೆಲವೊಂದು ಆರೋಗ್ಯಕರ ಆಹಾರ ಅಭ್ಯಾಸ ಮಾಡಿಕೊಳ್ಳುವುದರಿಂದ ಸಕಾರಾತ್ಮಕ ಪರಿಣಾಮಗಳನ್ನು ಕಂಡುಕೊಳ್ಳಬಹುದು. ಇದರಲ್ಲಿ ಚಹಾ ಕುಡಿಯುವುದು ಕೂಡ ಒಂದು ಒಳ್ಳೆಯ ಅಭ್ಯಾಸ.

ಚಹಾ ಸೇವನೆಯಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆಯಿಂದ ದೂರಾಗಬಹುದು. ಏಕೆಂದರೆ ಚಹಾ ಕುಡಿದ ನಂತರದಲ್ಲಿ ಹೃದಯದ ಅಪಧಮನಿಗಳು ಮೃದುವಾಗುತ್ತವೆ ಎಂದು ಹೇಳುತ್ತಾರೆ.

ಹೀಗಾಗಿ ಕೊಲೆಸ್ಟ್ರಾಲ್ ಅಂಶದಿಂದ ಮುಕ್ತಿ ಪಡೆದುಕೊಳ್ಳಲು ಚಹಾ ಒಂದು ಅತ್ಯದ್ಭುತ ಪಾನೀಯ ಎಂದು ಗುರುತಿಸಿಕೊಂಡಿದೆ. ಪ್ರತಿದಿನ ಮೂರರಿಂದ ಐದು ಕಪ್ ಚಹ ಕುಡಿಯುವುದರಿಂದ ಕಾಲುಭಾಗದಷ್ಟು ಹೃದಯದ ತೊಂದರೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

ಚಹಾ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ. ಅಧ್ಯಯನಗಳು ಹೇಳುವಂತೆ ಯಾರಿಗೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ ಯಾವುದೇ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದರೂ ಕೂಡ ಇತರರಿಗೆ ಹೋಲಿಸಿದರೆ ಬಲಶಾಲಿಗಳಾಗಿರುತ್ತಾರೆ.

ಹಾಗಾಗಿ ದೈಹಿಕ ಸದೃಢತೆಯಲ್ಲಿ ಎಷ್ಟೊಂದು ಅನುಕೂಲ ಕೊಡುವ ಚಹಾ ಸೇವನೆಯನ್ನು ನೀವು ಸಹ ಇನ್ನು ಮುಂದೆ ಅಭ್ಯಾಸ ಮಾಡಿಕೊಳ್ಳಬಹುದು.

ಚಹಾ ಕುಡಿಯುವುದರಿಂದ ಕೇವಲ ದೇಹ ಮಾತ್ರ ಸದೃಢವಾಗುತ್ತದೆ ಎಂದೇನಿಲ್ಲ. ಮೊದಲೇ ಹೇಳಿದಂತೆ ಚಹಾ ಸೇವನೆ ಮಾಡುವವರಿಗೆ ದೇಹದಲ್ಲಿ ಮೂಳೆಗಳು ಬಲವಾಗಿರುತ್ತವೆ ಎನ್ನುವುದಕ್ಕೆ ಹೊಂದಿಕೊಂಡಂತೆ ಹಲ್ಲುಗಳು ಸಹ ಮೂಳೆಗಳ ಒಂದು ಭಾಗ ಆಗಿರುವುದರಿಂದ ಹಲ್ಲುಗಳು ಮತ್ತು ವಸಡುಗಳು ಸಮಸ್ಯೆಗಳಿಂದ ಮುಕ್ತವಾಗುತ್ತವೆ.

ಹೃದಯಾಘಾತದಿಂದ ತಪ್ಪಿಸುವಲ್ಲಿ ನಿಮ್ಮ ಈ ಅಭ್ಯಾಸಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ

ಸಿಡಿಸಿ ಪ್ರಕಾರ ಪ್ರತೀ 43 ಸೆಕೆಂಡ್‌ಗೆ ಒಬ್ಬರಿಗೆ ಹೃದಯಾಘಾತ ಸಂಭವಿಸುತ್ತಿದೆ. ಹೃಯದಾಘಾತ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿದೆ ಎಂದೇನು ಇಲ್ಲ, ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಉಂಟಾಗುತ್ತಿದೆ. 16 ವರ್ಷ, 18 ವರ್ಷದ ಪ್ರಾಯದವರಲ್ಲಿಯೂ ಹೃದಯಾಘಾತ ಕಂಡು ಬರುತ್ತಿದೆ! ಇದಕ್ಕೆ ಒತ್ತಡದ ಜೀವನ ಶೈಲಿ ಒಂದು ಕಾರಣವಾಗಿದೆ.

ನಾವು ಸಾಕಷ್ಟು ಒತ್ತಡಕ್ಕೆ ಒಳಗಾಗುವುದು ನಮ್ಮ ಹೃದಯಕ್ಕೆ ಒಳ್ಳೆಯದಲ್ಲ, ನಮ್ಮ ಜೀವನಶೈಲಿ ಮೂಲಕ ಈ ಅಪಾಯವನ್ನು ತಪ್ಪಿಸಬಹುದಾಗಿದೆ. ನಾವಿಲ್ಲಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಯಾವ ಬಗೆಯ ಜೀವನಶೈಲಿ ಸಹಾಯ ಮಾಡುತ್ತೆ ಎಂದು ಹೇಳಿದ್ದೇವೆ ನೋಡಿ:

1. ಉತ್ತಮವಾಗಿರುವುದನ್ನ ತಿನ್ನಿ

ನಮ್ಮ ಆಹಾರ ಶೈಲಿ ಉತ್ತಮವಾಗಿದ್ದರೆ ಅನೇಕ ಕಾಯಿಲೆ ತಡೆಗಟ್ಟಬಹುದು. ನೀವು ತಿನ್ನುವ ಆಹಾರಶೈಲಿಯನ್ನು ಒಂದೇ ದಿನದಲ್ಲಿ ಬದಲಾಯಿಸಬೇಕಾಗಿಲ್ಲ. ನಿಮ್ಮ ಆಹಾರಕ್ರಮದಲ್ಲಿ ನಿಧಾನಕ್ಕೆ ದವಸ ಧಾನ್ಯಗಳು, ಮೊಳಕೆ ಕಾಳುಗಳು, ಸೊಪ್ಪು, ತರಕಾರ, ಹಣ್ಣುಗಳು ಇವುಗಳನ್ನು ಸೇರಿಸುತ್ತಾ ಬನ್ನಿ. ಕೊಬ್ಬಿನಂಶದ ಆಹಾರ ಕಡಿಮೆ ಮಾಡಿ, ಸಕ್ಕರೆ ಸೇವನೆ ಕಡಿಮೆ ಮಾಡಿ. ನಾರಿನ ಪದಾರ್ಥಗಳು ನಿಮ್ಮ ಆಹಾರದಲ್ಲಿ ಇರಲಿ.

2. ನಿಮ್ಮ ದೇಹಕ್ಕೆ ಸ್ವಲ್ಪ ಚಲನೆ ಇರಲಿ

ತುಂಬಾ ಹೊತ್ತು ಕೂರುವುದು, ದೇಹಕ್ಕೆ ಯಾವುದೇ ದೈಹಿಕ ಶ್ರಮ ಇಲ್ಲದಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ವಾರದಲ್ಲಿ 5 ದಿನ 30 ನಿಮಿಷ ವ್ಯಾಯಾಮ ಮಾಡಿ. ವ್ಯಾಯಾಮ ಅಂದ್ರೆ ಸೈಕಲ್ ತುಳಿಯುವುದು, ಮಕ್ಕಳ ಜೊತೆ ಆಡುವುದು, ಈಜುವುದು, ಡ್ಯಾನ್ಸ್ ಮಾಡುವುದು ಹೀಗೆ ನಿಮಗೆ ಇಷ್ಟವಾದದ್ದನ್ನು ಮಾಡಿ. ಪ್ರತಿದಿನ ಸ್ವಲ್ಪ ಬೆವರು ದೇಹದಿಂದ ಬರುವಂತೆ ಪ್ರಯತ್ನ ಮಾಡಿ, ಇದು ಆರೋಗ್ಯದ ದೃಷ್ಟಿಯಿಂದ ಅವಶ್ಯಕವಾಗಿದೆ.

3. ಧೂಮಪಾನ ಬಿಡಿ

ಧೂಮಪಾನ ಅಭ್ಯಾಸವಿದ್ದರೆ ಅದು ರಕ್ತ ನಾಳಗಳಿಗೆ ಹಾನಿಯುಂಟು ಮಾಡಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಧೂಮಪಾನ ಅಭ್ಯಾಸವಿದ್ದರೆ ಅದನ್ನು ಬಿಡುವುದು ಕಷ್ಟ, ಆದರೆ ಮುಂದೆ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಧೂಮಪಾನ ಅಭ್ಯಾಸ ಬಿಡಲು ಪ್ರಯತ್ನಿಸುವುದು ಒಳ್ಳೆಯದು.

4. ಮದ್ಯ ಮಿತಿಯಲ್ಲಿರಲಿ

ಮದ್ಯಪಾನ ಮಿತಿ ಮೀರದಿರಲಿ, ಮದ್ಯಪಾನಿಗಳು ಸರಿಯಾಗಿ ಆಹಾರ ಸೇವಿಸುವುದಿಲ್ಲ, ಇದೆಲ್ಲಾ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಪುರುಷರಾಗಲಿ, ಮಹಿಳೆಯರಾಗಲಿ ದಿನಾ ಮಿತಿಯಲ್ಲಿ ಕುಡಿಯುವುದು ಒಳ್ಳೆಯದು.

5. ಹಲ್ಲುಗಳ ಕಡೆಯಿರಲಿ ಗಮನ

ವಸಡಿನ ಸಮಸ್ಯೆ ಹೃದಯಾಘಾತದ ಲಕ್ಷಣವಾಗಿದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಆದ್ದರಿಂದ ವಸಡಿನ ಸಮಸ್ಯೆ ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ ಹಾಗೂ ಹಲ್ಲುಗಳ ಸ್ವಚ್ಛತೆ ಕಡೆಗೆ ಗಮನ ನೀಡಿ.

6. ಹೆಚ್ಚು ಟೀ ಕುಡಿಯಿರಿ

ಜೋಹನ್‌ ಹಾಪ್‌ಕಿನ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಯಾರು ಹೆಚ್ಚು ಟೀ ಕುಡಿಯುತ್ತಾರೋ ಅವರಿಗೆ ಹೃದಯಾಘಾತ ಸಾಧ್ಯತೆ ಕಡಿಮೆ ಎಮದು ತಿಳಿದು ಬಂದಿದೆ. ರಿಲ್ಯಾಕ್ಸ್ ಆಗಿ ಕುಳಿತು ಒಂದು ಕಪ್‌ ಟೀ ಹೀರುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದೇ ಎಂದು ಅಧ್ಯಯನ ಹೇಳಿದೆ.

7. ಅಪಾಯವಿದ್ದರೆ ಆಸ್ಪಿರಿನ್ ತೆಗೆದುಕೊಳ್ಳಿ

ಈಗಾಗಲೇ ಹೃದಯಾಘಾತದ ಅಪಾಯ ಇರುವವರು ಕಡಿಮೆ ಡೋಸ್‌ನ ಆಸ್ಪಿರಿನ್‌ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದು. ನಿಮ್ಮ ವೈದ್ಯರ ಸಲಹೆಯನ್ನು ಪಡೆದ ಬಳಿಕವಷ್ಟೇ ಈ ಮಾತ್ರೆ ತೆಗೆದುಕೊಳ್ಳಿ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ.

Advertisement
Share this on...