ಸೂರ್ಯಾಸ್ತದ ಬಳಿಕ ಅಂದರೆ ಸೂರ್ಯ ಮುಳುಗಿದ ಬಳಿಕ ಅಪ್ಪಿತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 151 views

ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು ಮಾಡಬಾರದು.

Advertisement

ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಇದನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. ಮನೆಯಲ್ಲಿ ತುಳಸಿಯಿರುವುದು ಶುಭಕರ. ಧರ್ಮಗ್ರಂಥದ ಪ್ರಕಾರ ಸೂರ್ಯಾಸ್ತದ ನಂತ್ರ ಅಪ್ಪಿತಪ್ಪಿಯೂ ತುಳಸಿ ಗಿಡವನ್ನು ಮುಟ್ಟಬಾರದು. ಅದಕ್ಕೆ ನೀರನ್ನು ಹಾಕಬಾರದು. ಇದ್ರಿಂದ ತಾಯಿ ಲಕ್ಷ್ಮಿ ಕೋಪಗೊಳ್ತಾಳೆ.

ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಆದರೆ ಸೂರ್ಯಾಸ್ತದ ನಂತರ ಮೊಸರನ್ನು ಎಂದಿಗೂ ದಾನ ಮಾಡಬಾರದು. ಮೊಸರು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಇದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಸಂಜೆ ಮೊಸರು ದಾನ ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಮಸ್ಯೆ ಎದುರಾಗುತ್ತದೆ.

ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು. ಆಹಾರವನ್ನು ಸೇವಿಸಬಾರದು. ಇದರಿಂದ ಆರ್ಥಿಕ ನಷ್ಟವಾಗುತ್ತದೆ. ಇದರ ಜೊತೆಗೆ ಆರೋಗ್ಯ ಸಮಸ್ಯೆ ಕಾಡುತ್ತದೆ.

ಸೂರ್ಯಾಸ್ತದ ಸಮಯದಲ್ಲಿ ಮನೆಯನ್ನು ಗುಡಿಸಿ, ಸ್ವಚ್ಛಗೊಳಿಸಬಾರದು. ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸಿದ್ರೆ ಮನೆಯಲ್ಲಿ ಸಂತೋಷ ಮಾಯವಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಆಟವಾಡಬಹುದು. ವ್ಯಾಯಾಮ ಮಾಡಬಹುದು.

ಸೂರ್ಯಾಸ್ತದ ನಂತರ ಕೂದಲು ಕತ್ತರಿಸಬೇಡಿ. ಸೂರ್ಯಾಸ್ತದ ನಂತರ ಅನೇಕ ಜನರು ತಮ್ಮ ಕೂದಲನ್ನು ಕತ್ತರಿಸುತ್ತಾರೆ ಅಥವಾ ಕ್ಷೌರ ಮಾಡುತ್ತಾರೆ. ಇದನ್ನು ಮಾಡುವುದರಿಂದ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಣದ ಸಮಸ್ಯೆ ಎದುರಾಗುತ್ತದೆ.

ರಾತ್ರಿ ಹೊತ್ತು ಅರಳಿಮರದ ಬಳಿ ಕೂಡ ಹೋಗಬಾರದು.. ಯಾಕೆ ಗೊತ್ತಾ?

ಅರಳಿಮರ ಹಿಂದೂಗಳಿಗೆ ದೈವಸಮಾನ. ಪ್ರತಿ ದೇವಸ್ಥಾನದ ಹೊರಗು ಸಾಮಾನ್ಯವಾಗಿ ಅರಳಿ ಮರ ಇದ್ದೇ ಇರುತ್ತದೆ. ಅದರ ಅಡಿಯಲ್ಲಿ ನಾಗರು, ಭೂತ, ನವಗ್ರಹ, ಚೌಡಿ ಪ್ರತಿಷ್ಠೆ ಮಾಡಿರುತ್ತಾರೆ. ದೇವಸ್ಥಾನಕ್ಕೆ ಬಂದವರು ಅರಳಿ ಮರಕ್ಕೂ ಪ್ರದಕ್ಷಿಣೆ ಹಾಕಿ ಹೋಗುತ್ತಾರೆ. ಆದರೆ ಎಂದಾದರೂ ರಾತ್ರಿ ಅರಳಿಮರ ಪ್ರದಕ್ಷಿಣೆ ಹಾಕುವುದನ್ನು ನೋಡಿದ್ದೀರಾ?

ಹಿರಿಯರು ರಾತ್ರಿ ಅರಳಿಮರ ಪ್ರದಕ್ಷಿಣೆ ಹಾಕಬಾರದು ಎನ್ನುತ್ತಾರೆ. ಏಕೆಂದರೆ ಅರಳಿ ಮರ ರಾತ್ರಿ ಸಮಯದಲ್ಲಿ ಅಧಿಕ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುವುದರಿಂದ, ಉಸಿರು ಕಟ್ಟಿ ಸಾವು ಸಂಭವಿಸಬಹುದು ಎಂದು ರಾತ್ರಿ ಅರಳಿ ಮರದ ಬಳಿ ಹೋಗುವುದನ್ನು ನಿಷೇಧಿಸಲಾಗಿದೆ.

ಮನೆ ಮುಂದೆ ಎಂದೂ ಬೆಳೆಸಬೇಡಿ ಈ ಮರವನ್ನ

ಮರ-ಗಿಡಗಳಿಂದ ನಾವು ಬದುಕಿದ್ದೇವೆ. ಈಗಿನ ದಿನಗಳಲ್ಲಿ ಶುದ್ಧ ಗಾಳಿಯ ಅವಶ್ಯಕತೆ ಹೆಚ್ಚಿದೆ. ಮನುಷ್ಯ ಸ್ವಾರ್ಥಕ್ಕೆ ಮರಗಿಡಗಳನ್ನು ಕಡಿದು ಬಯಲು ಮಾಡಿದ್ದರಿಂದ ಸಮಸ್ಯೆ ಜಾಸ್ತಿಯಾಗ್ತಿದೆ. ಪ್ರತಿಯೊಬ್ಬರೂ ಮನೆ ಆಸುಪಾಸು ಗಿಡ ಬೆಳೆಸಬೇಕಾದ ಅವಶ್ಯಕತೆಯಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲ ಮರಗಳನ್ನು ಶುಭವೆಂದು ಪರಿಗಣಿಸಿದ್ರೆ ಮತ್ತೆ ಕೆಲ ಮರಗಳನ್ನು ಅಶುಭವೆನ್ನಲಾಗುತ್ತದೆ. ಮನೆ ಮುಂದೆ ಕೆಲ ಮರಗಳಿದ್ದರೆ ದೌರ್ಭಾಗ್ಯ ಬರುತ್ತದೆ ಎಂದು ನಂಬಲಾಗಿದೆ.

ಕೆಲವರು ಮನೆ ಮುಂದೆ ಬೆರ್ರಿ ಗಿಡವನ್ನು ಬೆಳೆಸುತ್ತಾರೆ. ಬೆರ್ರಿ ಹಣ್ಣು ತಿನ್ನಲು ರುಚಿಯಾಗಿರುತ್ತದೆ. ಆದ್ರೆ ಮನೆ ಮುಂದೆ ಬೆರ್ರಿ ಗಿಡವಿದ್ದರೆ ಜೀವನದಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ, ಮನೆ ಮುಂದೆ ಮುಳ್ಳಿನ ಗಿಡವನ್ನು ಬೆಳೆಸಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ವಾಸ್ತು ಪ್ರಕಾರ, ಹುಣಸೆ ಮರ ಕೂಡ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆ ಮುಂದೆ ಹುಣಸೆ ಮರವಿದ್ದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಭಯ, ಕೆಟ್ಟ ದೃಷ್ಟಿ ಸಮಸ್ಯೆಯುಂಟಾಗುತ್ತದೆ.

ಸಾಮಾನ್ಯವಾಗಿ ಜನರು ಮನೆ ಮುಂದೆ ಅಶ್ವತ್ಥ ಮರವನ್ನು ಬೆಳೆಸುವುದಿಲ್ಲ. ಮಳೆಗಾಲದಲ್ಲಿ ತಾನಾಗಿಯೇ ಇದು ಹುಟ್ಟಿಕೊಳ್ಳುತ್ತದೆ. ಇದನ್ನು ಜನರು ಕಡಿಯದೆ ಬೆಳೆಯಲು ಬಿಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಮುಂದಿರುವ ಅಶ್ವತ್ಥ ಮರ ಹಣ ನಷ್ಟಕ್ಕೆ ಕಾರಣವಾಗುತ್ತದೆ. ಹಾಗೆ ಮನೆ ಮುಂದೆ ಬೆಳೆದ ಮರವನ್ನೂ ಕತ್ತರಿಸಬಾರದು ಎನ್ನಲಾಗಿದೆ. ಕತ್ತರಿಸಲು ಕೆಲ ವಿಧಿ-ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

Advertisement
Share this on...