ಭಾರತಕ್ಕಾಗಿ ಬರೋಬ್ಬರಿ 28 ಚಿನ್ನದ ಪದಕ ಗೆದ್ದವಳು ಈಗ ರಸ್ತೆಯಲ್ಲಿ ಮಾಡುತ್ತಿರೋದಾದರೂ ಏನು? ಇಂಥಾ ಹೀನಾಯ ಸ್ಥಿತಿ ಯಾವ ಮನುಷ್ಯನಿಗೂ ಬರಬಾರದು ನೋಡಿ

in Kannada News/News/ಕ್ರೀಡೆ 61 views

Dilraj Kaur: ದಿಲ್ರಾಜ್​ ಕೌರ್​​ 2005ರಲ್ಲಿ ಕ್ರೀಡಾ ಜೀವನ ಪ್ರಾರಂಭಿಸಿದರು. ಸುಮಾರು 15 ವರ್ಷಗಳ ಕಾಲ ಭಾರತವನ್ನು ಪ್ರತಿಸಿಧಿಸಿದರು. ಕಷ್ಟಗಳಿದ್ದರು ಅದನ್ನೆಲ್ಲಾ ಕ್ಯಾರೆ ಅನ್ನದೆ ಹೋರಾಡಿದರು. ರಾಷ್ಟ್ರೀಯ, ಅಂತರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ.

Advertisement

ದೇಶಕ್ಕಾಗಿ ಹೋರಾಡುವುದು,  ಒಲಿಂಪಿಕ್ಸ್​ನಲ್ಲಿ ಭಾಗವಹಿಸುವುದು ಅನ್ನೋದೆ ಹೆಮ್ಮೆಯ ಸಂಗತಿ. ಎಲ್ಲರಿಗೂ ಈ ಸೇವೆಯ ಮಾಡುವ ಭಾಗ್ಯ ದೊರಕುವುದಿಲ್ಲ. ಆದರೆ ನಿರಂತರ ಪರಿಶ್ರಮ ಮತ್ತು ದೇಶ ಪ್ರೇಮ ಇದ್ದವರಿಗೆ ಮಾತ್ರ ಇದು ಸಾಧ್ಯ. ಅದರೆ ಇಲ್ಲೊಂದು ಘಟನೆ ಮನಸ್ಸನ್ನೇ ಕರಗಿಸುತ್ತೆ. ಕಾರಣ ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಮಹಿಳೊಬ್ಬರು ಸದ್ಯದ ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ಚಿಪ್ಸ್​ ಮಾರಾಟ ಮಾಡುತ್ತಿದ್ದಾರೆ!.

ದೇಶದ ಮೊದಲ ಪ್ಯಾರಾಶೂಟರ್​ ದಿಲ್ರಾಜ್​ ಕೌರ್​ ಬಗ್ಗೆ ಕೇಳಿರುತ್ತೀರಿ. ಭಾರತಕ್ಕೆ ಒಂದಲ್ಲಾ.. ಎರಡಲ್ಲಾ.. 28 ಚಿನ್ನದ ಪದಕ ಗೆದ್ದಿದ್ದಾರೆ. ಆದರೀಗ ಜೀವನ ನಿರ್ವಹಣೆಗಾಗಿ ಉತ್ತರಾಖಂಡದ ಡೆಹ್ರಾಡೂನ್​ನ ಗಾಂಧಿ ಪಾರ್ಕ್​​ ಬಳಿ ಬಿಸ್ಕತ್​​ ಮತ್ತು ಚಿಪ್ಸ್​ ಮಾರಾಟ ಮಾಡುತ್ತಿದ್ದಾರೆ.

ದಿಲ್ರಾಜ್​ ಕೌರ್​​ 2005ರಲ್ಲಿ ಕ್ರೀಡಾ ಜೀವನ ಪ್ರಾರಂಭಿಸಿದರು. ಸುಮಾರು 15 ವರ್ಷಗಳ ಕಾಲ ಭಾರತವನ್ನು ಪ್ರತಿಸಿಧಿಸಿದರು. ಕಷ್ಟಗಳಿದ್ದರು ಅದನ್ನೆಲ್ಲಾ ಕ್ಯಾರೆ ಅನ್ನದೆ ಹೋರಾಡಿದರು. ರಾಷ್ಟ್ರೀಯ, ಅಂತರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಆದರೀಗ ವಿಕಲ ಅಂಗಗಳ ಜತೆ ಬದುಕುತ್ತಾ ದಿಲ್ರಾಜ್​ ಇವತ್ತು ಕಣ್ಣೀರು ಹಾಕಿಕೊಂಡು ಬದುಕುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ್ದ ದಿಲ್ರಾಜ್​ ಕೌರ್​ ತನ್ನ ಕಣ್ಣೀರ ಕಥೆ ಹಂಚಿಕೊಂಡಿದ್ದಾರೆ. ನಾನು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ಯಾರಾಶೂಟರ್​​ ಆಗಿ ದೇಶಕ್ಕಾಗಿ ಈವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 3 ಕಂಚಿನ ಪದಕ ಪಡೆದಿದ್ದೇನೆ. ಆದರೀಗ ಜೀವನ ನಿರ್ವಹಣೆಗಾಗಿ ಬಿಸ್ಕತ್​ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಇನ್ನು ತನ್ನ ಕಷ್ಟದ ಕುರಿತಾಗಿ ಪ್ಯಾರಾಶೂಟಿಂಗ್​ ಕ್ರೀಡಾ ಇಲಾಖೆಗೆ ತಿಳಿಸಿದಾಗ ಯಾವುದೇ ನೆರವು ಸಿಕ್ಕಿಲ್ಲ. ಯಾವುದಾದರು ಸರ್ಕಾರಿ ಉದ್ಯೋಗ ದೊರಕಿಸಿಕೊಡಿ ಎಂದರು ಕೆಲಸ ಸಿಕ್ಕಿಲ್ಲ  ಎಂದು ​​ಬೇಸರ ತೋಡಿಕೊಂಡಿದ್ದಾರೆ.

ನೆರವಿಗೆ ಬಾರದ ಸರಕಾರ:

“ನಾನು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ದೇಶಕ್ಕಾಗಿ ಅನೇಕ ಪದಕಗಳನ್ನೂ ಗೆದ್ದಿದ್ದೇನೆ. ಆದರೆ ನನಗೆ ಅಗತ್ಯವಿರುವಾಗ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಉತ್ತರಾಖಂಡ ಸರಕಾರದಿಂದ ಯಾವುದೇ ನೆರವು ಸಿಗಲಿಲ್ಲ. ನನ್ನ ಯಶಸ್ಸಿನ ಆಧಾರದ ಮೇಲೆ ಕ್ರೀಡಾ ಕೋಟಾದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಲೇ ಇದ್ದೇನೆ. ಆದರೆ ಪ್ರತೀ ಬಾರಿಯೂ ಈ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ’ ಎಂದು ನೋವಿನಿಂದ ನುಡಿಯುತ್ತಾರೆ ದಿಲ್ರಾಜ್‌ ಕೌರ್‌‌.

ಆರ್ಥಿಕ ಸ್ಥಿತಿ ಚಿಂತಾಜನಕ:

“2019ರಲ್ಲಿ ನನ್ನ ತಂದೆ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದರು. ಮನೆಯ ಆಧಾರಸ್ತಂಭವಾಗಿದ್ದ ನನ್ನ ಸಹೋದರನ್ನೂ ಕಳೆದುಕೊಂಡೆ. ಅವರ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೆವು. ಇದರಿಂದ ಸಾಲ ಬೆಳೆಯಿತೇ ಹೊರತು ಬೇರೇನೂ ಸಾಧ್ಯವಾಗಲಿಲ್ಲ. ಸದ್ಯ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ರಸ್ತೆಬದಿಯಲ್ಲಿ ಚಿಪ್ಸ್‌, ಬಿಸ್ಕತ್‌ ಮಾರಾಟ ಮಾಡಿ ಬಾಡಿಗೆ ಮತ್ತು ಇತರ ವೆಚ್ಚಗಳನ್ನು ನಿಭಾಯಿಸುತ್ತಿದ್ದೇನೆ’ ಎಂದು ಕೌರ್‌ ತಮ್ಮ ಅಸಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

Advertisement
Share this on...