ಶ್ರೀಲಂಕಾದಲ್ಲಿ ಸೀತಾಮಾತೆಯನ್ನ ಹನುಮ ಭೇಟಿಯಾದ ಅಶೋಕ ವಾಟಿಕಾ ಈಗ ಹೇಗಿದೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 266 views

ರಾಮಾಯಣ – ಮಹಾಭಾರತಗಳೆಲ್ಲ ನಮಗೆ ಪೂಜ್ಯನೀಯ ಪೌರಾಣಿಕ ಗ್ರಂಥಗಳು. ಕೆಲವರಿಗೆ ಅವೆಲ್ಲ ಕಲ್ಪನೆ, ಇನ್ನು ಕೆಲವರಿಗೆ ಸತ್ಯಕಥೆ. ಇಲ್ಲಿ ಯಾರನ್ನೂ ನಂಬಿಸುವ – ಒಪ್ಪಿಸುವ ಕೆಲಸ ನಮ್ಮದಲ್ಲ, ಆ ಜರೂರತ್ತು ಕೂಡ ಇಲ್ಲ. ಯಾಕೆಂದರೆ ರಾಮಾಯಣ ಮಹಾಭಾರತದ ಕುರಿತಾದ ಸಾಕಷ್ಟು ಸಾಕ್ಷಿಗಳು – ನಿದರ್ಶನಗಳು ಕಣ್ಣಮುಂದಿವೆ.

Advertisement

ಮಹಾಭಾರತದ ಹತ್ತಾರು ಕ್ಷೇತ್ರಗಳು ಇಂದಿಗೂ ಅದೇ ಹೆಸರಲ್ಲಿದ್ದರೆ, ರಾಮಾಯಣದ ಘಟನಾವಳಿಗಳು ನಡೆದ ಸ್ಥಳಗಳೆಲ್ಲ ಇಂದಿಗೂ ಹಾಗೇ ಇವೆ. ಅವುಗಳಲ್ಲಿ ಶ್ರೀಲಂಕಾದ ಅಶೋಕವನ ಕೂಡ ಒಂದು. ರಾವಣ ಸೀತೆಯನ್ನು ಅಪಹರಿಸಿ ಆಕಾಶಮಾರ್ಗವಾಗಿ ಲಂಕೆಗೆ ಹೋದ. ಅವರ ಪುಷ್ಪಕ ವಿಮಾನ ಇಳಿದಿದ್ದು ವೆರಗಂಟೋಟ ಎಂಬ ಸ್ಥಳದಲ್ಲಿ.

ಅಲ್ಲಿನ ಅರಮನೆಯಲ್ಲಿ ರಾವಣನ ರಾಣಿ ಮಂಡೋದರಿ ವಾಸವಿದ್ದಳು. ಸೀತೆಯನ್ನು ಇಲ್ಲಿಗೆ ಕರೆತಂದಿದ್ದು ಮಂಡೋದರಿಗೆ ಸರಿ ಅನಿಸಲಿಲ್ಲ, ಆಕೆ ಒಪ್ಪದ ಕಾರಣಕ್ಕೆ ಸೀತಾಮಾತೆಯನ್ನು ಅಶೋಕ ವಾಟಿಕಾ ಎಂಬಲ್ಲಿ ಇರಿಸಿದ. ಇಲ್ಲಿ ಸೀತೆ ಇದ್ದುದರಿಂದ‌ ಇದನ್ನು ಈಗ ಸೀತೆಯ ಕೋಟೆ ಎಂದು ಕೂಡ ಕರೆಯಲಾಗುತ್ತದೆ‌.

ಕ್ಯಾಂಡಿಯಿಂದ 66 ಕಿ.ಮೀ ದೂರದಲ್ಲಿರುವ ಸಾಕಷ್ಟು ಕಡಿದಾದ – ಕಿರಿದಾದ ರಸ್ತೆಯ ಮೂಲಕ ಸಾಗಿದಾಗ ಸಿಗುವ ರಮ್ಯ ತಾಣ ಅಶೋಕ ವಾಟಿಕಾ. ಅಲ್ಲಿಂದ ಅಶೋಕವನಕ್ಕೆ ಕರೆತಂದ ನಂತರ ಸೀತಾಮಾತೆ ಇದೇ ವನದಲ್ಲಿಯೇ ರಾವಣನ ಮಹಿಳಾ ಸೈನಿಕರ ನಡುವೆ ಬಂಧಿಯಾಗಿದ್ದಳು.

ಹನುಮಂತ ಶ್ರೀರಾಮನ ಸಂದೇಶ ಹೊತ್ತು ತಾಯಿಯನ್ನು ಭೇಟಿಯಾಗಿದ್ದು ಕೂಡ ಇಲ್ಲಿಯೇ. ಅಶೋಕ ಮರಗಳು ಹೆಚ್ಚು ಇದ್ದುದರಿಂದ ಇದಕ್ಕೆ ಅಶೋಕವನ ಎನ್ನಲಾಗುತ್ತದೆ. ಈಗ ಮೊದಲಿನಂತೆ ಅಷ್ಟೊಂದು ಅಶೋಕ ಮರಗಳು ಇಲ್ಲವಾದರೂ ನೂರಾರು ಬಗೆಯ ಗಿಡ ಮರ ಬಳ್ಳಿಗಳು ಇಲ್ಲಿ ಇದ್ದು, ಸ್ಥಳವನ್ನು ನಯನ ಮನೋಹರವನ್ನಾಗಿಸಿವೆ.

ಈ ವನದ ಎದುರಿನಲ್ಲಿಯೇ ಹೊಳೆಯೊಂದು ಹರಿಯುತ್ತಿದ್ದು, ಸೀತಾ ಮಾತೆ ಸ್ನಾನ ಮಾಡುತ್ತಿದ್ದುದು ಇಲ್ಲಿಯೇ ಎಂದು ನಂಬಲಾಗಿದೆ. ಇಲ್ಲಿ ಸೀತಾ ಅಮ್ಮನ ದೇಗುಲ ಅಂತ ತಾಯಿ ಸೀತಾ ಮಾತೆಯನ್ನು ಪೂಜಿಸುವ ದೇವಾಲಯ ಕೂಡ ಇದೆ. ಹಾಗೆಯೇ ಈ ಹೊಳೆಯ ಸುತ್ತಮುತ್ತ ಮತ್ತು ಬಂಡೆಗಳ ಮೇಲೆ ದೊಡ್ಡ ದೊಡ್ಡ ತಗ್ಗುಗಳಿದ್ದು ಅವು ಹನುಮಾನ್ ಹೆಜ್ಜೆ ಗುರುತುಗಳು ಎನ್ನಲಾಗುತ್ತದೆ.

ಹೀಗೆ ಸಾಕಷ್ಟು ಸಾಕ್ಷಿ ಪುರಾವೆಗಳು ನಮಗೆ ರಾಮಾಯಣದ ಕುರಿತಂತೆ ಕಥೆ ಹೇಳುತ್ತವೆ. ಸಧ್ಯ ಮೇಲಿರುವ ವಿಡಿಯೊ ಅಶೋಕವನದ್ದು, ವಿಡಿಯೊ ತುಂಬಾ ಸುಂದರವಾಗಿ ಮೂಡಿಬಂದಿರುವುದರಿಂದ ಅದನ್ನು ಇಲ್ಲಿ ಹಾಕಲಾಗಿದೆ. ತಮಗೂ ಇಷ್ಟವಾಗಬಹುದು, ಆಸಕ್ತಿ ಇರುವವರು ನೋಡಿ. ಈ ವಿಡಿಯೊ ಕಳೆದ ಎರಡು ಮೂರು ವಾರದಿಂದ ಫೇಸ್ಬುಕ್ – ಯೂಟ್ಯೂಬ್ ನಲ್ಲಿ ವೈರಲ್‌ ಆಗಿದೆ.

ನೀವಿಲ್ಲಿ Amazing World ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಹಾಕಿದ ವಿಡಿಯೊ ನೋಡಬಹುದು. ವಿಡಿಯೊದಲ್ಲಿ ಅಶೋಕವನ, ಮಂದಿರ, ಸುತ್ತಲಿನ ಪರಿಸರ, ಹತ್ತಿರದ ಹೊಳೆ, ಹನುಮ ಅಡ್ಡಾಡಿದ ಜಾಗ, ಸೀತಾಮಾತೆ ನೆಲೆಸಿದ್ದ ಸ್ಥಳ ಹೀಗೆ ಸಾಕಷ್ಟು ವಿವರವಾಗಿ ತೋರಿಸಲಾಗಿದೆ.

ಏಳೂವರೆ ನಿಮಿಷದ ಈ ವಿಡಿಯೊ ನಿಮಗೆ ಸಮಾಧಾನ ತರಬಹುದು, ನೋಡಿ. ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ…

 

Advertisement
Share this on...