ಸ್ನೇಹಿತರೆ ನಾವು ನೀಡುವ ಕೆಲವು ವ್ಯಕ್ತಿಗಳು ನಮಗೆ ತಿಳಿದಷ್ಟು ದೊಡ್ಡ ವ್ಯಕ್ತಿಗಳು ಆಗಿರುತ್ತಾರೆ ಎಂದು ಹೇಳಬಹುದು ಮತ್ತು ಅವರ ಬಗ್ಗೆ ತಿಳಿದುಕೊಂಡ ಮೇಲೆ ನಾವು ಶಾಕ್ ಆಗುತ್ತೇವೆ ಎಂದು ಹೇಳಬಹುದು. ಚಿತ್ರಗಳಲ್ಲಿ ಮತ್ತು ಧಾರಾವಾಹಿಯಲ್ಲಿ ನಾವು ನೋಡುವ ಹಾಗೆ ನಿಜ ಜೀವನದಲ್ಲಿ ನಡೆದರೆ ಎಲ್ಲರಿಗೂ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಸ್ನೇಹಿತರೆ ನಾವು ಹೇಳುವ ಒಬ್ಬ ವ್ಯಕ್ತಿಯ ಹಿನ್ನಲೆಯನ್ನ ನೋಡಿ ಇಡೀ ವಿಶ್ವವೇ ಶಾಕ್ ಆಯಿತು ಮತ್ತು ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳು ಕೂಡ ಈ ವ್ಯಕ್ತಿಯ ಹಿನ್ನಲೆಯನ್ನ ಕೇಳಿ ಶಾಕ್ ಆಗಿ ಅವರಿಗೆ ರೆಸ್ಪೆಕ್ಟ್ ಕೊಟ್ಟರು ಎಂದು ಹೇಳಬಹುದು. ಹಾಗಾದರೆ ಈ ವ್ಯಕ್ತಿ ಯಾರು ಮತ್ತು ಇವರ ಹಿನ್ನಲೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಸ್ನೇಹಿತರೆ ನಾವು ಹೇಳುತ್ತಿರುವ ಈ ವ್ಯಕ್ತಿಯ ಅಲೋಕ್ ಸಾಗರ್, ಸ್ನೇಹಿತರೆ ಅಲೋಕ್ ಸಾಗರ್ ಅವರು ಈಗ ಮಧ್ಯಪ್ರದೇಶದ ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಿದ್ದಾರೆ. ಗಡ್ಡ ಬಿಟ್ಟುಕೊಂಡು ಸೈಕಲ್ ನಲ್ಲಿ ಸದಾ ಸವಾರಿ ಮಾಡುವ ಇವರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ ಎಂದು ಹೇಳಬಹುದು. ಹಳೆ ಬಿಳಿ ಬಟ್ಟೆ ಧರಿಸಿಕೊಂಡು ತನಗೆ ಇಷ್ಟವಾದ ಸಣ್ಣಪುಟ್ಟ ಕೆಲಸವನ್ನ ಮಾಡಿಕೊಂಡು ಬದುಕುತ್ತಿದ್ದ ಅಲೋಕ್ ಸಾಗರ್ ಬಗ್ಗೆ ಅಲ್ಲಿನ ಪೊಲೀಸರಿಗೆ ತಿಳಿಯುತ್ತದೆ. ಇನ್ನು ಒಮ್ಮೆ ಅವರು ನೆಲೆಸಿದ ಊರಿನಲ್ಲಿ ಚುನಾವಣೆ ಆದಕಾರಣ ಅಲ್ಲಿ ಪೊಲೀಸರಿಗೆ ಕಾರ್ಯನಿರ್ವಹಣೆ ಮಾಡಲು ಬಂದ ಪೋಲೀಸರ ಕಣ್ಣಿಗೆ ಈ ಅಲೋಕ್ ಸಾಗರ್ ಬೀಳುತ್ತಾರೆ. ಇನ್ನು ಊರಿನಲ್ಲಿ ಚುನಾವಣೆ ಇದ್ದಕಾರಣ ಅಧಿಕಾರಿಯೊಬ್ಬರು ಅಲೋಕ್ ಸಾಗರ್ ಇದ್ದ ಊರಿಗೆ ಭೇಟಿಮಾಡುತ್ತಾರೆ ಮತ್ತು ಅಲ್ಲಿ ಸೈಕಲ್ ನಲ್ಲಿ ಸುತ್ತಾಡುತ್ತಿದ್ದ ಅಲೋಕ್ ಸಾಗರ್ ಅವರನ್ನ ನೋಡುತ್ತಾರೆ.
ಇನ್ನು ಅಲೋಕ್ ಸಾಗರ್ ಬಗ್ಗೆ ಊರಿನವರ ಬಳಿ ಅಧಿಕಾರಿಗಳು ವಿಚಾರಣೆ ಮಾಡಿದಾಗ ಅವರ ಹೆಸರು ಅಲೋಕ್ ಸಾಗರ್ ಮತ್ತು ಹಲವು ವರ್ಷಗಳಿಂದ ಊರಿನಲ್ಲಿ ಇದ್ದು ಸಣ್ಣ ಪುಟ್ಟ ಕೆಲಸಗಳನ್ನ ಮಾಡಿಕೊಂಡು ಬದುಕುತ್ತಿದ್ದಾರೆ ಹಾಗೆ ಇದಕ್ಕೂ ಹೆಚ್ಚಾಗಿ ನಮಗೆ ಅವರ ಬಗ್ಗೆ ತಿಳಿದಿಲ್ಲ ಎಂದು ಅಲ್ಲಿನ ಜನರು ಹೇಳುತ್ತಾರೆ. ಇನ್ನು ಈ ಸಮಯದಲ್ಲಿ ಪೊಲೀಸ್ ಠಾಣೆಗೆ ಅಲೋಕ್ ಸಾಗರ್ ಅವರನ್ನ ಕರೆಸಿಕೊಂಡ ಅವರು ಅವರ ಬಗ್ಗೆ ಪ್ರಶ್ನೆಗಳನ್ನ ಕೇಳುತ್ತಾರೆ ಮತ್ತು ಅವರ ಗುರುತಿನ ಚೀಟಿಯನ್ನ ಕೇಳುತ್ತಾರೆ, ಈ ಸಮಯದಲ್ಲಿ ಅಲೋಕ್ ಸಾಗರ್ ಅವರು ನಾನು ಅದನ್ನ ಮನೆಯಲ್ಲಿ ಇಟ್ಟು ಬಂದಿದ್ದೇನೆ, ನಾನು ಒಬ್ಬ ಭಾರತೀಯ ನಾನು ಕೂಡ ಎಲ್ಲರ ಹಾಗೆ ಸಾಮಾನ್ಯವಾಗಿ ಬದುಕುತ್ತಿದ್ದೇನೆ ಎಂದು ಪೊಲೀಸರಿಗೆ ಉತ್ತರವನ್ನ ಕೊಡುತ್ತಾರೆ ಅಲೋಕ್ ಸಾಗರ್.
ಇನ್ನು ಇದರಿಂದ ಪೊಲೀಸರಿಗೆ ಇನ್ನಷ್ಟು ಅನುಮಾನ ಬಂದಕರಣ ಅವರ ಭಾಷೆಯಲ್ಲಿ ವಿಚಾರ ಮಾಡಲು ಮುಂದಾಗಿ ಅಲೋಕ್ ಸಾಗರ್ ಅವರಿಗೆ ಹೆದರಿಸಿ ನಿನ್ನ ಪೂರ್ತಿ ವಿವರವನ್ನ ನಿಜ ಹೇಳು ಎಂದು ಹೆದರಿಸಿದಾಗ ಅಲೋಕ್ ಸಾಗರ್ ನಾನು ಯಾವ ಭಾಷೆಯಲ್ಲಿ ಉತ್ತರ ಕೊಡಲಿ ಎಂದು ಪೊಲೀಸರಿಗೆ ಪ್ರಶ್ನೆಯನ್ನ ಕೇಳಿದ್ದಾರೆ. ಸ್ನೇಹಿತರೆ ಅಲೋಕ್ ಸಾಗರ್ ಅವರು ತಮಾಷೆಗೆ ಈ ಮಾತನ್ನ ಹೇಳಲಿಲ್ಲ ಹೊರತಾಗಿ ಅವರಿಗೆ ಹಿಂದಿ, ಉರ್ದು, ಮಲಯಾಳಂ, ಇಂಗ್ಲಿಷ್, ಅಸ್ಸಾಮಿ, ಬಂಗಾಳಿ ಮತ್ತು ಅವರಿಗೆ ಎಂಟು ಭಾಷೆ ಬರುತ್ತಿದ್ದವು.
ನಾನು ಒಬ್ಬ ದೆಹಲಿಯ IIT ಪ್ರೊಫೆಸರ್ ಆಗಿದ್ದು ಅಮೇರಿಕಾದಲ್ಲಿ ಕೂಡ PHD ಅನ್ನು ಪೂರೈಸಿದ್ದೀನಿ ಹಾಗು RBI ನ ಸದ್ಯದ ಗವರ್ನರ್ ಆಗಿರುವ ರಂಗರಾಜನ್ ತನ್ನ ಶಿಷ್ಯರಲ್ಲಿ ಒಬ್ಬ ಮತ್ತು ನಿಮಗೆ ಏನಾದರು ಅನುಮಾನ ಇದ್ದರೆ ಅವರಿಗೆ ಕರೆಮಾಡಿ ಕೇಳಿ ಎಂದು ಉತ್ತರವನ್ನ ಕೊಡುತ್ತಾರೆ ಅಲೋಕ್ ಸಾಗರ್ ಅವರು ಮತ್ತು ಇವಿಷ್ಟನ್ನು ಕೂಡ ಅವರು ಸ್ಟ್ಯಾಂಡರ್ಡ್ ಇಂಗ್ಲಿಷ್ ಭಾಷೆಯಲ್ಲಿ ಹೇಳುತ್ತಾರೆ. ಇನ್ನು ಈ ಮಾತುಗಳನ್ನ ಕೇಳಿ ಪೊಲೀಸರಿಗೆ ಒಂದುಕ್ಷಣ ತಲೆ ತಿರುಗಿದಂತೆ ಆಗುತ್ತದೆ, ಇನ್ನು ಪೊಲೀಸರು ಅವರ ಬಗ್ಗೆ ವಿಚಾರಣೆ ಮಾಡಿದಾಗ ಅವರು ಹೇಳಿದ್ದು ನಿಜ ಎಂದು ತಿಳಿಯುತ್ತದೆ ಮತ್ತು ನಿಜ ತಿಳಿದ ಪೊಲೀಸರು ಅಲೋಕ್ ಸಾಗರ್ ಅವರ ಬಳಿ ಬಂದು ಕ್ಷಮೆಯನ್ನ ಕೂಡ ಕೇಳುತ್ತಾರೆ. ಸ್ನೇಹಿತರೆ ಅಲೋಕ್ ಸಾಗರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.