ವಿರಾಟ್ ಕೊಹ್ಲಿಗೆ ಸಿಕ್ಕ ಭಾಗ್ಯ, ಅದೃಷ್ಟ ಮಾತ್ರ ಧೋನಿಗೆ ಸಿಗಲಢ ಇಲ್ಲ: ಮಹೇಂದ್ರ ಸಿಂಗ್ ಧೋನಿಗೆ ಹೆಲ್ಮೆಟ್ ಮೇಲಿಂದ ತ್ರಿವರ್ಣ ಧ್ವಜ ತೆಗೆಸಿದ್ಯಾಕೆ ಗೊತ್ತಾ?

in Kannada News/News/ಕನ್ನಡ ಮಾಹಿತಿ/ಕ್ರೀಡೆ 47 views

ಭಾರತೀಯ ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಮಹೇಂದ್ರ ಸಿಂಗ್​ ಧೋನಿ ಎಂದರೇ ಅಂದಿಗೂ ಇಂದಿಗೂ ವಿಶೇಷ ಅಭಿಮಾನ. ಪಂದ್ಯ ನಡೆಯುವಾಗ ಮೈದಾನದಲ್ಲಿ ನಿಂತು ತಂಡವನ್ನು ಮುನ್ನಡೆಸುವ ಕ್ಯಾಪ್ಟನ್​ ಕೂಲ್​ ಆಗಿದ್ದ ಧೋನಿಯನ್ನು ಕ್ರಿಕೆಟ್​ ಹೊರತಾಗಿಯೂ ಇಷ್ಟಪಡಲು ಅನೇಕ ಕಾರಣಗಳಿವೆ. ಅಂದು ತಂಡದ ನಾಯಕನಾಗಿದ್ದ ಧೋನಿ ಬ್ಯಾಟ್​ ಹಿಡಿದು ಮೈದಾನಕ್ಕೆ ಬಂದರೆ ನೋಡುವವರ ಮೈ ರೋಮಾಂಚಿತವಾಗುತ್ತಿತ್ತು. ಎಂತಹ ಕಠಿಣ ಸಂದರ್ಭವಿದ್ದರೂ ಧೋನಿ ಇದ್ದಾರೆ ಎಂಬ ನಂಬಿಕೆಯಲ್ಲೇ ಕ್ರಿಕೆಟ್​ ಪ್ರೇಮಿಗಳು ತುದಿಗಾಲಿನಲ್ಲಿ ಕೂತು ಕೊನೆಯ ಬಾಲ್​ ತನಕವೂ ಕಾಯುತ್ತಿದ್ದರು. ಆದರೆ, ನೀವು ಸೂಕ್ಷ್ಮವಾಗಿ ಗಮನಿಸಿದ್ದರೆ ಒಂದು ಅಂಶ ನಿಮ್ಮನ್ನು ಕಾಡಿರಲೂ ಸಾಕು. ಅದೇನೆಂದರೆ ಬ್ಯಾಟ್​ ಹಿಡಿದು, ಹೆಲ್ಮೆಟ್​ ಧರಿಸಿ ಮೈದಾನಕ್ಕಿಳಿಯುತ್ತಿದ್ದ ಕೊಹ್ಲಿ, ರೋಹಿತ್ ಶರ್ಮಾ ಆದಿಯಾಗಿ ಎಲ್ಲರ ಹೆಲ್ಮೆಟ್​ನಲ್ಲೂ ಭಾರತದ ಧ್ವಜ ಇದ್ದರೆ, ಧೋನಿ ಹೆಲ್ಮೆಟ್​ನಲ್ಲಿ ಬಿಸಿಸಿಐ ಚಿಹ್ನೆಯೊಂದೇ ಇರುತ್ತಿತ್ತು. ಭಾರತೀಯ ಕ್ರಿಕೆಟ್​ ತಂಡದ ನಾಯಕನಾಗಿ, ಎಲ್ಲರ ಮನಗೆದ್ದ ಧೋನಿ ಹೆಲ್ಮೆಟ್​ಗೆ ತ್ರಿವರ್ಣ ಧ್ವಜವನ್ನು ಹೊಂದುವ ಭಾಗ್ಯ ಏಕೆ ಸಿಗುತ್ತಿರಲಿಲ್ಲ ಎನ್ನುವುದನ್ನು ತಿಳಿದರೆ ನಿಜಕ್ಕೂ ಧೋನಿಯ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚುತ್ತದೆ.

Advertisement

ಭಾರತ ತಂಡದ ನಾಯಕನಾಗಿದ್ದ ಧೋನಿ ವಿಕೆಟ್​ ಕೀಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಧಾರಣವಾಗಿ ವಿಕೆಟ್​ ಕೀಪರ್​ ಆಗಿದ್ದವರಿಗೆ ಆಗಾಗ ತಮ್ಮ ಹೆಲ್ಮೆಟ್​ ಕಳಚಿ ಕೆಳಗಿಡಬೇಕಾದ ಅನಿವಾರ್ಯತೆಗಳು ಎದುರಾಗುತ್ತಿರುತ್ತವೆ. ಹೆಲ್ಮೆಟ್​ ಧರಿಸದೇ ಇರುವಾಗ ತಮ್ಮ ಪಕ್ಕದಲ್ಲೋ ಅಥವಾ ಕೊಂಚ ಹಿಂಬದಿಯಲ್ಲೋ ಮೈದಾನದ ಮೇಲೆ ಹೆಲ್ಮೆಟ್​ ಇಡುವುದು ಸಹಜ ಕೂಡಾ. ಆದರೆ, ರಾಷ್ಟ್ರಧ್ವಜ ಎನ್ನುವುದು ಆಯಾ ದೇಶದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗುವ ಚಿಹ್ನೆಯಾಗಿದ್ದು, ರಾಷ್ಟ್ರಧ್ವಜವನ್ನು ನೆಲದ ಮೇಲೆ ಇಡುವುದು ಸರಿಯಲ್ಲ. ಈ ನೆಲದ ಕಾನೂನು ಕೂಡಾ ರಾಷ್ಟ್ರಧ್ವಜಕ್ಕೆ ಅತಿಹೆಚ್ಚು ಗೌರವ ನೀಡಬೇಕು ಎನ್ನುವುದನ್ನೇ ಅನುಮೋದಿಸುತ್ತದೆ.

ಮೇಲಾಗಿ, ಎಲ್ಲಕ್ಕಿಂತ ಹೆಚ್ಚು ದೇಶವನ್ನು ಪ್ರೀತಿಸುವ, ದೇಶದ ಮೇಲೆ ಅಭಿಮಾನ ಹೊಂದಿದ ಧೋನಿ ಎಂತಹ ವ್ಯಕ್ತಿತ್ವ ಹೊಂದಿದವರು ಎಂದು ಎಲ್ಲರಿಗೂ ಗೊತ್ತು. ನಾನು ಕ್ರಿಕೆಟರ್​ ಆಗಿರದಿದ್ದರೆ ಭಾರತೀಯ ಸೇನೆಗೆ ಸೇರುತ್ತಿದ್ದೆ ಎನ್ನಿಸುತ್ತದೆ ಎನ್ನುವುದನ್ನೂ ಸ್ವತಃ ಧೋನಿಯೇ ಹೇಳಿಕೊಂಡಿದ್ದಾರೆ. ಹೀಗಾಗಿಯೇ ಅವರು ರಾಷ್ಟ್ರಧ್ವಜದ ಗೌರವಕ್ಕೆ ಚ್ಯುತಿ ಬರಬಾರದು ಎಂಬ ಕಾರಣಕ್ಕೆ ಹೆಲ್ಮೆಟ್​ ಮೇಲೆ ಧ್ವಜವನ್ನು ಅಂಟಿಸಿಕೊಳ್ಳುತ್ತಿರಲಿಲ್ಲ.

ನೋಡುಗರ ಕಣ್ಣು ಕುಕ್ಕುತ್ತಿದೆ ಧೋನಿಯ ಹೊಸ ಲುಕ್! ಮೀಸೆ ತಿರುವಿ ಸಾಮಾಜಿಕ ಅರಿವು ಮೂಡಿಸಿದ ಮಹೀ

ಭಾರತಕ್ಕಾಗಿ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಭಾರತದ ಅತ್ಯಂತ ಯಶಸ್ವಿ ನಾಯಕ ಎಂ.ಎಸ್. ಧೋನಿ. ಎಲ್ಲಾ ಭಾರತೀಯರ ಅಚ್ಚುಮೆಚ್ಚಿನ ಕ್ರಿಕೆಟಿಗ ಎಂಬುದರಲ್ಲಿ ಎರಡು ಮಾತಿಲ್ಲ. ಧೋನಿ ಮಾಡುವ ಎಲ್ಲ ಚಟುವಟಿಕೆಯೂ ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಧೋನಿಯ ಹೊಸ ನೋಟ ಅಥವಾ ಅವರು ತೆಗೆದುಕೊಂಡ ಹೊಸ ಬೈಕು ಇರಲಿ ಇವೆಲ್ಲವೂ ಬಾರೀ ಸುದ್ದಿಯಾಗುತ್ತವೆ. ಐಪಿಎಲ್ ರದ್ದಾದ ನಂತರ ಧೋನಿ ಪ್ರಸ್ತುತ ಕುಟುಂಬದೊಂದಿಗೆ ಶಿಮ್ಲಾದಲ್ಲಿ ರಜೆಯಲ್ಲಿದ್ದಾರೆ. ಈ ಬಾರಿ ಧೋನಿ ಮೀಸೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಧೋನಿ ತನ್ನ ಮಗಳ ಜೊತೆಗಿನ ಫೋಟೋಗಳು ವೈರಲ್ ಆಗಿದ್ದವು.

ಗಿಡಗಳನ್ನು ನೆಡಿ ಮತ್ತು ಮರಗಳನ್ನು ಕಾಪಾಡಿ
ಈಗ ಧೋನಿ ನಾಯಕತ್ವದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಧೋನಿಯ ಹೊಸ ಲುಕ್​ನ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಏತನ್ಮಧ್ಯೆ, ಈ ಫೋಟೋಕ್ಕೆ ನೆಟಿಜನ್‌ಗಳು ವಿಭಿನ್ನ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ ಮತ್ತು ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ. ಸಿಎಸ್​ಕೆ ಹಮಚಿಕೊಂಡಿರುವ ಧೋನಿ ಮೀಸೆ ಬಿಟ್ಟಿರುವ ಈ ಫೋಟೋದಲ್ಲಿ ಮರದಿಂದ ತಯಾರಾದ ಹೋಟೆಲ್ ಬಳಿ ನಿಂತಿರುವ ಧೋನಿ ನಿಂತಿದ್ದಾರೆ. ಹಾಗೆಯೇ ಒಂದು ಮರದ ತುಂಡಿನ ಮೇಲೆ ಗಿಡಗಳನ್ನು ನೆಡಿ ಮತ್ತು ಮರಗಳನ್ನು ಕಾಪಾಡಿ ಎಂದು ಬರೆಯಲಾಗಿದೆ.

ಉಳಿದ ಐಪಿಎಲ್‌ಗಾಗಿ ಕ್ರಿಕೆಟಿಗರು ಉತ್ಸುಕರಾಗಿದ್ದಾರೆ
ಕೊರೊನಾ ಬಿಕ್ಕಟ್ಟಿನಿಂದ ಮುಂದೂಡಲ್ಪಟ್ಟ ಐಪಿಎಲ್ 2021 ಸೆಪ್ಟೆಂಬರ್-ಅಕ್ಟೋಬರ್ ನಡುವೆ ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕೆಲವು ದಿನಗಳ ಹಿಂದೆ ತಿಳಿಸಿದೆ. ಏತನ್ಮಧ್ಯೆ, ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದರಿಂದ, ಅಭಿಮಾನಿಗಳು ಧೋನಿ ಆಡುವದನ್ನು ನೋಡುವ ಏಕೈಕ ಆಯ್ಕೆ ಐಪಿಎಲ್ ಆಗಿದೆ.

Advertisement
Share this on...