ನವದೆಹಲಿ:
1976ರಲ್ಲಿ ಬಿಹಾರಿ ಮೃತಕ್ ಅವರು ಬದುಕಿದ್ದರೂ ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು. ಸರ್ಕಾರಿ ದಾಖಲೆಯನ್ನು ಸರಿಮಾಡಿಸಿ ತಾನು ಬದುಕಿದ್ದೇನೆಂದು ಸಾಬೀತು ಮಾಡಲು ಬಿಹಾರಿ ಮೃತಕ್ 18 ವರ್ಷ ಹೋರಾಟ ಮಾಡಿದ್ದರು.
ಇದೀಗ ಬಿಹಾರಿ ಮೃತಕ್ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದ್ದು, 56 ವರ್ಷದ ತನ್ನ ಪತ್ನಿ ಕರ್ಮಿ ದೇವಿಯನ್ನು ಮರು ಮದುವೆ ಆಗಲು ನಿರ್ಧರಿಸಿದ್ದಾರೆ. ಏಕೆಂದರೆ, ಸರ್ಕಾರಿ ದಾಖಲೆಗಳಲ್ಲಿ ಅವರು ಜೀವಂತವಾಗಿ ಬೆಳೆದು ಇದೀಗ 27 ವರ್ಷಗಳಾಗಿವೆ. ಜೂನ್ 30, 1994 ರಂದು ಅವರನ್ನು ಜೀವಂತವಾಗಿದ್ದಾರೆಂದು ಘೋಷಿಸಲಾಯಿತು.
ಮಾಧ್ಯಮದೊಂದಿಗೆ ಮಾತನಾಡಿರುವ ಬಿಹಾರಿ ಮೃತಕ್, ಸರ್ಕಾರಿ ದಾಖಲೆಗಳ ಪ್ರಕಾರ ನಾನು ಹುಟ್ಟಿ 27 ವರ್ಷಗಳಾಗಿವೆ. 2022ರಲ್ಲಿ ನನ್ನ ವಿವಾಹ ಸಮಾರಂಭ ನಡೆಯಲಿದೆ. ಸರ್ಕಾರಿ ದಾಖಲೆಗಳಲ್ಲಿ ನನ್ನ ಪುನರ್ಜನ್ಮದ ಬಳಿಕ ನಾನು 28 ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನು ನನ್ನ ಪ್ರಕರಣದಲ್ಲಿ ಹೋರಾಡಿ ಗೆದ್ದಿದ್ದೇನೆ, ಆದರೆ ವ್ಯವಸ್ಥೆಯಲ್ಲಿ ಯಾವುದೇ ದೊಡ್ಡ ಬದಲಾವಣೆಗಳು ಸಂಭವಿಸಿಲ್ಲ. 18 ವರ್ಷಗಳಿಂದ ನನ್ನನ್ನು ಸರ್ಕಾರಿ ದಾಖಲೆಗಳಲ್ಲಿ” ಸತ್ತ ” ವ್ಯಕ್ತಿ ಎಂದು ಪಟ್ಟಿ ಮಾಡಲಾಗಿತ್ತು ಎಂದು ಹೇಳಿದರು.
ನನ್ನಂತೆಯೇ ಸತ್ತರೆಂದು ಘೋಷಿಸಲ್ಪಟ್ಟ ಜನರಿದ್ದಾರೆ ಮತ್ತು ಅವರಿಗೆ ಸಂಬಂಧಿಸಿದ ಭೂಮಿಯನ್ನು ಸಂಬಂಧಿಕರು ಸರ್ಕಾರಿ ಅಧಿಕಾರಿಗಳ ನೆರವಿನೊಂದಿಗೆ ಕಬಳಿಸಿದ್ದಾರೆ. ಅಂತಹ ಬಲಿಪಶುಗಳಿಗೆ ಹಲವು ದಿನಗಳಿಂದ ನಾನು ಸಹಾಯ ಮಾಡುತ್ತಿದ್ದೇನೆ ಮತ್ತು ನನ್ನ ಅಭಿಯಾನವನ್ನು ನಾನು ಮುಂದುವರಿಸುತ್ತೇನೆಂದು ಬಿಹಾರಿ ಮೃತಕ್ ತಿಳಿಸಿದ್ದಾರೆ.
1975 ರಲ್ಲಿ ಅಜಮ್ಗಢ ಜಿಲ್ಲೆಯ ಅಮಿಲೋ ಗ್ರಾಮದ ನಿವಾಸಿ ಲಾಲ್ ಬಿಹಾರಿ ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು. ತನ್ನ ಗುರುತನ್ನು ಪುನಃ ಪಡೆದುಕೊಳ್ಳುವ ಕಾನೂನು ಹೋರಾಟದ ಸಮಯದಲ್ಲಿ, ಅವರು ತಮ್ಮ ಹೆಸರಿಗೆ ‘ಮೃತಕ್’ (ಸತ್ತವರು) ಎಂದು ಸೇರಿಸಿಕೊಂಡರು. ಈ ರೀತಿಯ ಘಟನೆಗಳನ್ನು ಎತ್ತಿ ಹಿಡಿಯಲು ಅವರು ಮೃತಕ್ ಸಂಘವನ್ನು ಸ್ಥಾಪಿಸಿದ್ದಾರೆ. ಮೃತಕ್ಗೆ ಮೂವರು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ.
ಕಂದನ ಮುಖ ನೋಡುವ ಮುನ್ನವೇ ತಂದೆಗೆ ಈ ಸ್ಥಿತಿ ಬರುತ್ತೇಂತ ಯಾರೂ ಊಹಿಸಿರಲಿಲ್ಲ, ಮಗು ಜನಿಸುವ ಮುನ್ನವೇ ಹೆಂಡತಿ…. ಕಣ್ಣೀರು ತರಿಸುತ್ತೆ ಈ ಕಥೆ
ದಾವಣಗೆರೆ: ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ… ಎಂದು ಪದೇಪದೆ ಹಿಡಿಶಾಪ ಹಾಕಬೇಕೆನ್ನಿಸುತ್ತೆ ಈ ಕರುಣಾಜನಕ ಸ್ಟೋರಿ ಕೇಳಿದ್ರೆ…
ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ನಿವಾಸಿ ರೋಜಾ ತುಂಬು ಗರ್ಭಿಣಿ. ನಾಲ್ಕೈದು ದಿನದಲ್ಲಿ ಹೆರಿಗೆ ಆಗಲಿದ್ದು, ಇಡೀ ಕುಟುಂಬ ಪುಟ್ಟ ಕಂದನ ಸ್ವಾಗತಿಸಲು ಕಾಯುತಿತ್ತು. ರೋಜಾಳ ಗಂಡ ಸುರೇಶ್ ನಾಯ್ಕ ತನ್ನ ಮಗುವನ್ನ ಕಣ್ತುಂಬಿಕೊಳ್ಳಲು ಚಾತಕಪಕ್ಷಿಯಂತೆ ಕಾಯುತ್ತಿದ್ದ.
ಇಡೀ ಕುಟುಂಬ ಮಗು ಬರುವ ಸಂಭ್ರಮದಲ್ಲಿ ಮಿಂದೇಳಲು ತವಕಿಸುತ್ತಿತ್ತು. ಅಷ್ಟರಲ್ಲಿ ಎಂಟ್ರಿ ಕೊಟ್ಟ ಮಹಾಮಾರಿ ಕರೊನಾ ಸುರೇಶ್ ನಾಯ್ಕನ ಪ್ರಾಣ ತೆಗೆದಿದೆ! ಮೂಲತಃ ಹೊಳಲ್ಕೆರೆ ತಾಲೂಕಿನ ಐನಹಳ್ಳಿ ಗ್ರಾಮದ ಸುರೇಶ್ ನಾಯ್ಕ, ಸಂತೆಬೆನ್ನೂರು ಬೆಸ್ಕಾಂ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದ. ಕರೊನಾ ಸೋಂಕು ತಗುಲಿದ್ದರಿಂದ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ 10 ದಿನಗಳಿಂದ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.
ಗಂಡ ಗುಣಮುಖವಾಗಿ ಮನೆಗೆ ಬಂದೇ ಬರುತ್ತಾನೆ ಎಂದು ಬರುವ ದಾರಿಯನ್ನೇ ಕಾಯುತ್ತಿದ್ದ ಪತ್ನಿಗೆ ಗಂಡನ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಜೂನ್ 3ರಂದು ರೋಜಾಗೆ ಹೆರಿಗೆ ದಿನಾಂಕವನ್ನ ವೈದ್ಯರು ಕೊಟ್ಟಿದ್ದಾರೆ.
ಇದನ್ನೂ ಓದಿ: ಒಂದೇ ದಿನ ತಾಯಿ-ತಂದೆ ಕೊರೋನಾಗೆ ಬಲಿ, ಅನಾಥವಾದ ಮಗು
ಚಾಮರಾಜನಗರದ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಕೊರೊನಾ ಸೋಂಕಿಗೆ ಪತಿ, ಪತ್ನಿ ಇಬ್ಬರೂ ಮೃತಪಟ್ಟಿರುವ ಘಟನೆ ನಡೆದಿದ್ದು, ಅವರ 5 ವರ್ಷದ ಮಗು ಅನಾಥವಾಗಿದೆ.
ಮೃತಪಟ್ಟವರನ್ನು ಆಟೋ ಚಾಲಕರಾಗಿದ್ದ ಗುರುಪ್ರಸಾದ್ (35) ಅವರ ಪತ್ನಿ ರಶ್ಮಿ (30) ಎಂದು ಗುರುತಿಸಲಾಗಿದೆ.
10 ದಿನಗಳ ಹಿಂದೆ ಗುರುಪ್ರಸಾದ್ಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲಾ ಕೊರೊನಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ನಾಲ್ಕೂ ದಿನಗಳ ಹಿಂದೆ ಮೃತಪಟ್ಟವರು. ಅವರ ಪತ್ನಿ ರಶ್ಮಿಗೂ ಸೋಂಕು ತಗುಲಿ ಹೋಂ ಐಸೋಲೇಷನ್ ಆಗಿದ್ದು, ಅವರು ರವಿವಾರ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಇಬ್ಬರಿಗೂ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಮಗುವನ್ನು ರಶ್ಮಿ ತಂಗಿಯ ಮನೆಯಲ್ಲಿ ಇರಿಸಿದ್ದರು. ರಶ್ಮಿ ಹೋಂ ಐಸೋಲೇಷನ್ನಲ್ಲಿದ್ದರಿಂದ ಅವರ ತಂದೆ ತಾಯಿ ಕೊತ್ತಲವಾಡಿಯ ಮಗಳ ಮನೆಗೆ ಬಂದು ಆರೈಕೆ ಮಾಡುತ್ತಿದ್ದರು.