“ಕಿವುಡ, ಇವನಿಗೆ ಕಿವಿನೇ ಕೇಳಿಸಲ್ಲ, ಚಪರಾಸಿ ಆಗೋಕೂ ಇವನು ಲಾಯಕ್ಕಿಲ್ಲ” ಎಂದವನೆದುರೇ ಖಡಕ್ ಐಪಿಎಸ್ ಅಧಿಕಾರಿಯಾದ ವ್ಯಕ್ತಿ

in Kannada News/News/Story/ಕನ್ನಡ ಮಾಹಿತಿ 298 views

ಎಲ್ಲಿ ಇಚ್ಛಾಶಕ್ತಿಯಿರುತ್ತೋ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಒಬ್ಬ ವ್ಯಕ್ತಿಗೆ ತನ್ನ ಗುರಿಯನ್ನು ಸಾಧಿಸಲು ಶ್ರಮಿಸುವ ಸಾಕಷ್ಟು ಇಚ್ಛಾಶಕ್ತಿ ಮತ್ತು ಧೈರ್ಯವನ್ನು ಹೊಂದಿದ್ದರೆ, ಆತ ತನ್ನ ಗುರಿಯನ್ನು ಖಂಡಿತವಾಗಿಯೂ ಸಾಧಿಸುತ್ತಾನೆ. ಇಂದು ನಾವು ಅಂತಹುದೇ ಒಂದು ಸ್ಪೂರ್ತಿದಾಯಕ ಕಥೆಯನ್ನು ಹೇಳಲಿದ್ದೇವೆ. ಇದು ಐಎಎಸ್ ಅಧಿಕಾರಿ ಮಣಿ ರಾಮ್ ಶರ್ಮಾ ಅವರ ಕಥೆ.

Advertisement

ಇವರ ತಂದೆ ಕೂಲಿಕೆಲಸ ಮಾಡುತ್ತಿದ್ದು ತಾಯಿ ದೃಷ್ಟಿಹೀನರಾಗಿದ್ದರು. ಬಡತನದಲ್ಲಿ ಬೇಯುತ್ತಿದ್ದ ಈ ಕುಟುಂಬದ ಮಗನೇ ಮಣಿರಾಮ್ ಶರ್ಮಾ. ಇವರೂ ಕೂಡ ಕಿವುಡರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮಣಿರಾಮ್ ಶರ್ಮಾ ಎದೆಗುಂದಲಿಲ್ಲ ಹಾಗು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದರು ಹಾಗು ತಮ್ಮ ಕನಸನ್ನ ನನಸು ಮಾಡಿಕೊಂಡರು.

ಯಾರು ಈ ಐಎಎಸ್ ಮಣಿರಾಮ್ ಶರ್ಮಾ?

ಮಣಿರಾಮ್ ಶರ್ಮಾ ರಾಜಸ್ಥಾನದ ಅಲ್ವರ್ ಜಿಲ್ಲೆಯ ಬಂಡಿಗಢ್ ಎಂಬ ಸಣ್ಣ ಹಳ್ಳಿಯ ನಿವಾಸಿ. ಈ ಗ್ರಾಮವು ಬಹಳ ಹಿಂದುಳಿದಿದೆ ಮತ್ತು ಮೂಲಭೂತ ಸೌಲಭ್ಯಗಳು ಸಹ ಇಲ್ಲಿ ಲಭ್ಯವಿಲ್ಲ. ಈ ಗ್ರಾಮದಲ್ಲಿ ಯಾವುದೇ ಶಾಲೆ ಇರಲಿಲ್ಲ. ಅದಕ್ಕಾಗಿಯೇ ಮಣಿರಾಮ್ ಶರ್ಮಾ ಅವರು ಓದಲು 5 ಕಿ.ಮೀ ದೂರದಲ್ಲಿರುವ ಶಾಲೆಗೆ ಹೋಗುತ್ತಿದ್ದರು. ಅವರ ಮನೆಯ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅದಕ್ಕಾಗಿಯೇ ಅವರು ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದರು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಮಣಿರಾಮ್ ಶರ್ಮಾ ಈ ಶಾಲೆಯಿಂದಲೇ 10 ಮತ್ತು 12 ನೇ ಅಧ್ಯಯನವನ್ನು ಮುಗಿಸಿದರು. ಮಣಿರಾಮ್ ಶರ್ಮಾ 10 ಮತ್ತು 12 ನೇ ತರಗತಿಯಲ್ಲಿ ರ‌್ಯಾಂಕ್ ಸ್ಟೂಡೆಂಟ್ ಆಗಿದ್ದರು. ಅವರು ರಾಜ್ಯ ಮಟ್ಟದಲ್ಲಿ ಐದನೇ ಮತ್ತು ಏಳನೇ ಸ್ಥಾನ ಗಳಿಸಿದ್ದರು.

ಚಪರಾಸಿ ಕೆಲಸವನ್ನೂ ಬಿಡಿಓ ಕೊಟ್ಟಿರಲಿಲ್ಲ

ಮಣಿರಾಮ್ ಶರ್ಮಾ 12 ನೇ ತರಗತಿಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ್ದರು. ಅವರು ತಮ್ಮ ಮನೆಗೆ ಬಂದು ಈ ಸುವಾರ್ತೆಯನ್ನು ಹೇಳಿದಾಗ, ಅವರ ಕುಟುಂಬ ಸದಸ್ಯರು ಕೂಡ ತುಂಬಾ ಸಂತೋಷಪಟ್ಟರು. ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರ ತಂದೆ ಮಣಿರಾಮ್ ಶರ್ಮಾರವರಿಗೆ ಕೆಲಸ ಕೊಡಲ ಬಿಡಿಓ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್‌ನ ಬಳಿ ಕರೆದೊಯ್ದರು. ಪಿಯೋನ್ ಆಗಿ ಕೆಲಸ ಕೊಡಿಸಲು ತಂದೆ ಅವರನ್ನ ಬಿಡಿಓ ಹತ್ತಿರ ಕರೆದೊಯ್ದಿದ್ದರು. “ಈ ಹುಡುಗನಿಗೆ ಕಿವಿ‌ ಕೇಳಿಸಲ್ಲ ಹಾಗಿದ್ದಮೇಲೆ ಶಾಲೆಯ ಗಂಟೆ ಹೇಗೆ ಕೇಳಿಸುತ್ತೆ? ಇವನಿಗೆ ಏನಾದರೂ ಕೆಲಸ ಹೇಳಿದರೂ ಕಿವಿ ಕೇಳಿಸಲ್ಲ, ಇವನು ಪಿಯೋನ್ ಆಗೋಕೂ ಲಾಯಕ್ಕಿಲ್ಲ” ಎಂದು ಹೇಳಿ ಕಳಿಸಿದ್ದರು.

ಬಿಡಿಓ ಮಾತು ಕೇಳಿದ ಮಣಿರಾಮ್ ಶರ್ಮಾ ತಂದೆ ಕಣ್ಣುಗಳು ತೇವವಾಗಿದ್ದವು. ಮಣಿರಾಮ್ ಹತ್ತಿರ ನಿಂತು ಇದನ್ನೆಲ್ಲಾ ನೋಡುತ್ತಿದ್ದ. ನಂತರ ತಂದೆ ಮಣಿರಾಮ್‌ಗೆ ಯಾಕೆ ಕೆಲಸ ಸಿಗಲಿಲ್ಲ ಎಂದು ವಿವರಿಸಿದರು. ಈ ಕುರಿತು ಮಣಿರಾಮ್ ಶರ್ಮಾ ತಮ್ಮ ತಂದೆಗೆ “ನನ್ನನ್ನು ನಂಬಿರಿ, ಒಂದು ದಿನ ನಾನು ಖಂಡಿತವಾಗಿಯೂ ದೊಡ್ಡ ಅಧಿಕಾರಿಯಾಗುತ್ತೇನೆ” ಎಂದು ಭರವಸೆ ನೀಡಿದನು.

ಡಿಗ್ರಿ, ಪಿಜಿ ಹಾಗು ಪಿಎಚ್‌ಡಿ ಯನ್ನೂ ಮುಗಿಸಿದ ಮಣಿರಾಮ್ ಶರ್ಮಾ

ಮಣಿರಾಮ್ 12 ನೇ ತರಗತಿಯ ನಂತರ ಅಲ್ವರ್ ಕಾಲೇಜಿನಿಂದ ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿದರು. ಇಲ್ಲಿ ಅವರು ಲಿಪಿಕ್ ತರಗತಿಯಲ್ಲಿ ಅಧ್ಯಯನ ಮಾಡಿದರು ಮತ್ತು ಇಲ್ಲಿಂದ ಅವರು ಸ್ನಾತಕೋತ್ತರ ಪದವಿಯನ್ನು ಸಹ ಪಡೆದರು. ಅದರ ನಂತರ ಅವರು ಪಿಎಚ್‌ಡಿ ಅಧ್ಯಯನ ಮಾಡಿದರು, ಮಣಿರಾಮ್ ತಾವು ಅನುಭವಿಸಿದ್ದ ಆ ಅವಮಾನವನ್ನ ಮರೆಯಲಿಲ್ಲ. ಗುರಿಯನ್ನು ಸಾಧಿಸುವ ಉತ್ಸಾಹ ಅವರ ಮನಸ್ಸಿನಲ್ಲಿ ಇನ್ನೂ ಇತ್ತು. ಅವರು ಯುಪಿಎಸ್ಸಿಗೆ ತಯಾರಿ ಪ್ರಾರಂಭಿಸಿದರು ಮತ್ತು ಅವರು ಐಎಎಸ್ ಆಗಿಯೇ ಸಿದ್ಧ ಎಂದು ತೀರ್ಮಾನ ಮಾಡಿದರು.

ರಾಜಸ್ಥಾನ್ ಪಬ್ಲಿಕ್ ಸರ್ವಿಸ್ ಕಮಿಷನ್ (RPSC) ಯಲ್ಲಿ ಉತ್ತೀರ್ಣರಾಗಿ ಆದರು ಪ್ರೊಫೆಸರ್

ಮಣಿರಾಮ್ ಶರ್ಮಾ ಅವರು ರಾಜಸ್ಥಾನ ಪಬ್ಲಿಕ್ ಸರ್ವಿಸ್ ಕಮಿಷನ್ (RPSC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕ್ಲರ್ಕ್ ಕೆಲಸ ಪಡೆದರು. ಅಷ್ಟೇ ಅಲ್ಲ, ಅವರು ತಮ್ಮ ವಿಶ್ವವಿದ್ಯಾಲಯದಲ್ಲಿ ಉನ್ನತ ಸ್ಥಾನವನ್ನೂ ಪಡೆದರು. ಅದರ ನಂತರ ನೆಟ್ ಪರೀಕ್ಷೆಯನ್ನೂ ಕ್ಲಿಯರ್ ಮಾಡಿ ಪ್ರಾಧ್ಯಾಪಕರಾದರು. ತುಂಬಾ ಕಠಿಣ ಪರಿಶ್ರಮದ ಬಲದ ಮೇಲೆ, ಅವರು ಪ್ರತಿ ಹಂತದಲ್ಲೂ ಯಶಸ್ಸನ್ನು ಸಾಧಿಸುತ್ತಲೇ ಇದ್ದರು. ಮಣಿರಾಮ್ ಶರ್ಮಾ ಓದಿನಲ್ಲಿ ಚುರುಕಾಗಿದ್ದರು, ಅದಕ್ಕಾಗಿಯೇ ಅವರು ಹೆಚ್ಚಿನ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಿದ್ದರು. ಆದರೆ ಅವರ ಕಿವುಡುತನದಿಂದಾಗಿ ಅವರು ನಿರಾಶೆಯನ್ನು ಎದುರಿಸಬೇಕಾಯಿತು.

ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದ ನಂತರ ಮಣಿರಾಮ್ ಐಎಎಸ್ ತಲುಪಲು 15 ವರ್ಷಗಳನ್ನು ತೆಗೆದುಕೊಂಡರು. ಮಣಿರಾಮ್ 2005, 2006 ಮತ್ತು 2009 ರ ವರ್ಷಗಳಲ್ಲಿ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು, ಆದರೆ ಅವರ ಕಿವುಡುತನದಿಂದಾಗಿ ಅವರು ಆಯ್ಕೆಯಾಗಲು ಸಾಧ್ಯವಾಗಲಿಲ್ಲ.

ಕಿವಿಯ ಆಪರೇಷನ್ ಮಾಡಿಸಿದರು

ಇದರ ಹೊರತಾಗಿಯೂ, ಮಣಿರಾಮ್ ಧೈರ್ಯವನ್ನು ಕಳೆದುಕೊಳ್ಳಲಿಲ್ಲ. 2009 ರಲ್ಲಿ, ಅವರು ಮತ್ತೆ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮಣಿರಾಮ್ ಅವರ ಕಿವಿ ಆಪರೇಷನ್ ಕೂಡ ಮಾಡಿಸಿಕೊಂಡರು.‌ಮಣಿರಾಮ್ ಈ ಆಪರೇಷನ್ ಗಾಗಿ 8 ಲಕ್ಷ ಖರ್ಚು ಮಾಡಿದರು.

ಈ ಹಣವನ್ನ ಎಲ್ಲಿ ಮತ್ತು ಹೇಗೆ ಅರೇಂಜ್ ಮಾಡಿದೆ ಅನ್ನೋದು ನನಗೇ ಗೊತ್ತು ಎಂದು ಮಣಿರಾಮ್ ಹೇಳುತ್ತಾರೆ. ಈ ಹಣವನ್ನ ಅನೇಕ ಜನರು ಒಟ್ಟಾಗಿ ಸಂಗ್ರಹಿಸಿದ್ದರು. ಕೊನೆಗೂ ಹಣವನ್ನು ಹೊಂದಿಸಿ ನಂತರ ಮಣಿರಾಮ್ ಗೆ ಕಿವಿಯ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆಪರೇಷನ್ ಯಶಸ್ವಿಯಾದ ನಂತರ, ಮಣಿರಾಮ್ ಕಿವಿ ಸರಿ ಹೋಯಿತು.‌ ಅವರೀಗ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದರು. ಮಣಿರಾಮ್ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗಾಗಿ ಯಶಸ್ಸನ್ನು ಪಡೆದರು ಮತ್ತು ಪ್ರಸ್ತುತ ಪಾಲ್ವಾಲ್ ಜಿಲ್ಲೆಯ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

– Vinod Hindu Nationalist

Advertisement
Share this on...