ಬಾಲಿವುಡ್ ನಲ್ಲಿ ಖ್ಯಾತ ನಟರಾಗಿರುವ ಮಿಥುನ್ ಚಕ್ರವರ್ತಿಯವರನ್ನ ದೇಶದ ಜನರಿಗೆ ಪರಿಚಯ ಮಾಡಿಕೊಡುವ ಅವಶ್ಯಕತೆಯೇ ಇಲ್ಲ. ಬಾಲಿವುಡ್ ಫಿಲಂ ಇಂಡಸ್ಟ್ರಿಯಲ್ಲಿ ಅವರ ತಮ್ಮ ವಿಶೇಷ ಛಾಪನ್ನ ಹೊಂದಿರುವ ನಟರಾಗಿದ್ದಾರೆ. ಜನ ಈಗಲೂ ಅವರ ಚಿತ್ರಗಳನ್ನ ನೋಡಲು ಇಷ್ಟಪಡುತ್ತಾರೆ. ಅವರ ‘ಶೇರಾ’, ‘ಡಿಸ್ಕೋ ಡ್ಯಾನ್ಸರ್’ ನಂತಹ ಸೂಪರ್ ಹಿಟ್ ಚಿತ್ರಗಳ ಕ್ರೇಜ್ 90 ರ ದಶಕದಲ್ಲಿ ಹೇಗಿತ್ತೋ ಈಗಲೂ ಆ ಕ್ರೇಜ್ ಹಾಗೇ ಇದೆ.
ಆದರೆ ಇದು ಕೇವಲ ಅವರ ಫಿಲ್ಮಿ ದುನಿಯಾದ ವಿಷಯವಾಯ್ತು ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲೂ ಯಾವ ಹೀರೋಗಿಂತಲೂ ಕಮ್ಮಿಯೇನಲ್ಲ. ಹೌದು ನಾವಿಂದು ಮಿಥುನ್ ಚಕ್ರವರ್ತಿಯವರ ಜೀವನದ ಅಂತಹ ಘಟನೆಯೊಂದನ್ನ ತಿಳಿಸಲಿದ್ದೇವೆ, ಅದನ್ನ ಕೇಳಿದ ಬಳಿಕ ಅವರ ಬಗೆಗಿನ ನಿಮ್ಮ ಗೌರವ ಮತ್ತಷ್ಟು ಹೆಚ್ಚಾಗಲಿದೆ.
ಮಿಥುನ್ ಚಕ್ರವರ್ತಿಯವರ ಜೀವನದ ಆ ಸತ್ಯವೊಂದನ್ನ ತಿಳಿಸುತ್ತೇವೆ
ಮಿಥುನ್ ಚಕ್ರವರ್ತಿಯವರಿಗೆ ದಿಶಾನಿ ಚಕ್ರವರ್ತಿ ಎಂಬ ಮಗಳಿದ್ದಾಳೆ ಎಂಬುದು ಎಲ್ಲರಿಗೂ ಗೊತ್ತಿದೆ ಆದರೆ ಆಕೆ ಮಿಥುನ್ ಚಕ್ರವರ್ತಿಯವರ ಸ್ವಂತ ಮಗಳಲ್ಲ ಬದಲಾಗಿ ದತ್ತು ತೆಗೆದುಕೊಂಡ ಮಗಳಾಗಿದ್ದಾಳೆ ಅನ್ನೋದು ಬಹುಶಃ ಬಹಳ ಜನರಿಗೆ ಗೊತ್ತಿರುವುದಿಲ್ಲ. ಆದರೆ ಮಿಥುನ್ ಚಕ್ರವರ್ತಿ ಆ ಮಗುವನ್ನ ಎಲ್ಲಿಂದ ತಂದಿದ್ದರು ಅನ್ನೋದು ನಿಮಗೆ ಗೊತ್ತಾ?
ನಿಮಗೆ ಈ ವಿಷಯ ಕೇಳಿ ಆಶ್ಚರ್ಯವಾಗಬಹುದು, ದಿಶಾ ಚಕ್ರವರ್ತಿಯ ಅಸಲಿ ತಂದೆ ತಾಯಿ ಆಕೆಯನ್ನ ಪುಟ್ಟ ಮಗುವಾಗಿದ್ದಾಗಲೇ ಆಕೆಯನ್ನ ಕಸದ ತೊಟ್ಟಿಗೆ ಎಸೆದು ಹೋಗಿದ್ದರು. ಹೌದು ಹಲವು ವರ್ಷಗಳ ಹಿಂದೆ ಬಂಗಾಳದ ಪತ್ರಿಕೆಯೊಂದರಲ್ಲಿ ಕಸದ ತೊಟ್ಟಿಯಲ್ಲಿ ಮಗುವೊಂದು ಸಿಕ್ಕಿದೆ ಎಂಬ ಸುದ್ದಿ ಮಿಥುನ್ ಚಕ್ರವರ್ತಿಯವರಿಗೆ ತಿಳಿಯಿತು. ಆ ಮಗುವನ್ನ ಎತ್ತಿಕೊಳ್ಳಲು ಅಥವ ಅದನ್ನ ಸಾಕಲು ಯಾರೂ ಮುಂದೆ ಬರುತ್ತಿಲ್ಲ ಎಂಬ ಸುದ್ದಿಯೂ ಬರೆಯಲಾಗಿತ್ತು. ಮಿಥುನ್ ಚಕ್ರವರ್ತಿಯವರಿಗೆ ಈ ವಿಷಯ ತಿಳಿಯುತ್ತಲೇ ಅವರು ಆ ಪತ್ರಿಕೆಯನ್ನ ಸಂಪರ್ಕಿಸಿ ಮಗುವಿನ ಮಾಹಿತಿ ಪಡೆದು ಎಲ್ಲಾ ಫಾರ್ಮಾಲಿಟೀಸ್ ಗಳನ್ನು ಪೂರ್ಣಗೊಳಿಸಿ ಆ ಮಗುವನ್ನ ದತ್ತು ತೆಗೆದುಕೊಂಡು ಮನೆಗೆ ಕೊಂಡೊಯ್ದರು.
ಅದಾದ ಬಳಿಕ ಮಿಥುನ್ ಚಕ್ರವರ್ತಿ ಆ ಮಗುವಿಗೆ ದಿಶಾನಿ ಚಕ್ರವರ್ತಿ ಎಂದು ನಾಮಕರಣ ಮಾಡಿದರು. ಮಿಥುನ್ ಚಕ್ರವರ್ತಿ ಅಷ್ಟೇ ಅಲ್ಲದೆ ಅವರ ಮಡದಿ ಯೋಗಿತಾ ಚಕ್ರವರ್ತಿ ಕೂಡ ಮಗುವಿನ ಪಾಲನೆ ಪೋಷಣೆ ಮಾಡುವಲ್ಲಿ ಮಹತ್ವದ ಯೋಗದಾನ ನೀಡಿದರು. ದಿಶಾನಿ ಚಕ್ರವರ್ತಿ ಈಗ ಬೆಳೆದು ದೊಡ್ಡವಳಾಗಿದ್ದಾನೆ ಹಾಗು ನೋಡಲು ಕೂಡ ಸುಂದರವಾಗಿದ್ದಾಳೆ. ಫಿಲ್ಮಿ ಪರಿವಾರದಲ್ಲಿ ಆಕೆಯ ಪೋಷಣೆಯಾದ ಕಾರಣ ಆಕೆಗೂ ಫಿಲ್ಮ್ ಎಂದರೆ ಪಂಚಪ್ರಾಣ, ಅದೇ ಕಾರಣದಿಂದ ಆಕೆ ಫಿಲ್ಮ್ ಅಕಾಡೆಮಿಯನ್ನ ಜಾಯಿನ್ ಆಗಿ ತನ್ನ ಓದನ್ನ ಮುಂದುವರೆಸುತ್ತಿದ್ದಾಳೆ
ಮಿಥುನ್ ಚಕ್ರವರ್ತಿಯವರ ಇಂತಹ ಉದಾರ ಹಾಗು ಮಾನವೀಯತೆಯ ಗುಣಗಳಿಂದಲೇ ಅವರನ್ನ ಬಾಲಿವುಡ್ ನಲ್ಲಿ ಹಾಗು ಸಮಾಜದಲ್ಲಿ ಜನ ‘ದಾದಾ’ ಅಂತ ಕರೆಯುತ್ತಾರೆ.
– Vinod Hindu Nationalist