“ಮದುವೆ ಆದರೆ ಅವನನ್ನೇ ಇಲ್ಲವಾದರೆ ಮದುವೆಯೇ ಆಗಲ್ಲ” ಹಠಬಿಡದೇ ಕೊನೆಗೂ ಅಂಕಿತ್‌ನನ್ನ ಮದುವೆಯಾದ ರುಬೀನಾ

in Kannada News/News 5,146 views

ಮಕ್ಕಳ ಹಠದೆದುರು ಪೋಷಕರು ಸದಾ ತಲೆಬಾಗುತ್ತಾರೆ.‌ ಅಷ್ಟೇ ಅಲ್ಲದೆ ಒಂದು ವೇಳೆ ಪ್ರೀತಿಯು ನಿಜವಾಗಿದ್ದರೆ ಅಂತಹ ಪ್ರೇಮಿಗಳು ಒಂದಾಗೇ ಆಗುತ್ತಾರೆ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳು ನಮಗೆ ಕಾಣಸಿಗುತ್ತವೆ.‌ ಇಂತಹುದೇ ಒಂದು ಪ್ರೇಮಗಾಥೆ ಬಿಹಾರದ ಛಪರಾ ದಲ್ಲಿ ಕಂಡುಬಂದಿದೆ. ಈ ಮದುವೆಯ ಸುದ್ದಿ ಈಗ ಬಿಹಾರ ರಾಜ್ಯದಿಂದ ಹಿಡಿದು ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಮದುವೆ ಚರ್ಚೆಯಾಗಲು ಕಾರಣ ವಧು ಹಾಗು ವರರ ಭಿನ್ನ ಧರ್ಮಗಳಾಗಿವೆ.

Advertisement

ಸಿಕ್ಕಿತು ಸಾಮಾಜಿಕ ಮಾನ್ಯತೆ

ಸಮಾಜ ಏನನ್ನುತ್ತೋ ಅನ್ನೋದನ್ನೂ ಲೆಕ್ಕಿಸದೆ ರುಬೀನಾ‌ ಖಾತೂನ್ ಎಂಬ ಯುವತಿ ಅಂಕಿತ್ ಎಂಬ ಯುವಕನ ಜೊತೆ ಸಪ್ತಪದಿ ತುಳಿದಿದ್ದಾಳೆ. ಇಬ್ಬರೂ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ರುಬೀನಾ ಖಾತೂನ್ ಜೊತೆ ಮದುವೆಯಾದ ಬಳಿಕ ಯುವಕ ತನ್ನ ಪತ್ನಿಯ ಜೊತೆ ತನ್ನ ಮನೆಗೆ ಬಂದಾಗ ಹುಡುಗನ ತಾಯಿಯ ಖುಷಿ ಹೇಳತೀರದ್ದಾಗಿತ್ತು. ಅಷ್ಟೇ ಅಲ್ಲ ಯುವಕನ ಕುಟುಂಬವೂ ಸಂತಸ ಪಟ್ಟಿತು.

ಎರಡೂ ಕುಟುಂಬಗಳಲ್ಲಿ ಖುಷಿಯ ವಾತಾವರಣ

ಅಷ್ಟೇ ಅಲ್ಲದೆ ಈ ಮದುವೆಗೆ ಸಾಮಾಜಿಕ ಮಾನ್ಯತೆಯೂ ಸಿಕ್ಕಿದೆ. ಅಕ್ಕ ಪಕ್ಕದ ಜನ ಕೂಡ ಈ ಮದುವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎರಡೂ ಧರ್ಮದ ಜನರು ಜೋಡಿಗಳಿಗೆ ಶುಭಾಷಯ ತಿಳಿಸುತ್ತಿದ್ದಾರೆ.‌ ಗ್ರಾಮದ ಆಸುಪಾಸಿನ ಜನ ಆಶೀರ್ವದಿಸಲು ನವಜೋಡಿಯ ಮನೆಗೆ ಬರುತ್ತಿದ್ದಾರೆ. ಎರಡೂ ಕುಟುಂಬದ ಸದಸ್ಯರು ಈ‌ ಮದುವೆಗೆ ಸಹಮತಿ ನೀಡಿದ್ದಾರೆ. ಈಗಿನ ಸಮಯದಲ್ಲಿ ಅಂತರ್ ಜಾತಿಯ ವಿವಾಹಗಳೇ ಅಪರೂಪವಾಗಿರುವ ಸಂದರ್ಭದಲ್ಲಿ ಈ ಮದಯವೆಯಂತೂ ಅಂತರ್ ಧರ್ಮೀಯ ಮದುವೆಯಾಗಿದೆ.

ಸುದ್ದಿ ಮೂಲಗಳ ಪ್ರಕಾರ ಭೇಲ್ದಿ ಠಾಣಾ ವ್ಯಾಪ್ತಿಯ ಬೇಡವಾಲಿಯಾ ಗ್ರಾಮದ ನಿವಾಸಿಯಾಗಿರುವ ನಾಸಿರ್ ಅನ್ಸಾರಿ ಮಗಳಾದ ರುಬೀನಾ ಖಾನೂಮ್ ತನ್ನದೇ ಗ್ರಾಮ ನಿವಾಸಿಯಾದ ದಿನೇಶ್ ಸಿಂಗ್ ಅವರ ಪುತ್ರನಾದ ಅಂಕಿತ್ ಕುಮಾರ್ ಜೊತೆ ದೀರ್ಘಕಾಲದಿಂದ ಪ್ರೀತಿಸುತ್ತಿದ್ದಳು.

ಯುವತಿಯ ಮನೆಯವರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ಆದರೆ ಇಬ್ಬರೂ ಒಬ್ಬರನ್ನೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಇಬ್ಬರ ನಡುವಿನ ಈ ಪ್ರೀತಿ ಈ ಮದುವೆಗೆ ಒಪ್ಪುವಂತೆ ಮಾಡಿತು. ಹುಡುಗ ಹುಡುಗಿಯ ಹಠದ ಎದುರು ಯಾರ ಮಾತೂ ನಡೆಯಲಿಲ್ಲ. ಹುಡುಗ ಹಾಗು ಹುಡುಗಿಯ ತಂದೆ ತಾಯಿ ಒಮ್ಮತಕ್ಕೆ ಬಂದು ಇಬ್ಬರ ಮದುವೆ ಮಾಡಿಸಲು ನಿರ್ಧರಿಸಿದರು. ಬಳಿಕ ಎರಡೂ ಕುಟುಂಬದವರು ಅಂಬಿಕಾ ಭವಾನಿ ಮಂದಿರದಲ್ಲಿ ಮದುವೆ ಮಾಡಿಸಿದರು.

ಮದಯವೆಯಾದರೆ ಅಂಕಿತ್‌ನನ್ನೇ ಇಲ್ಲಾಂದ್ರೆ ಮದುವೆಯೇ ಆಗಲ್ಲ: ರುಬೀನಾ ಖಾನೂಮ್

ಈ ಮದುವೆಯ ಚರ್ಚೆ ಈಗ ಗ್ರಾಮದ ಸುತ್ತಮುತ್ತಲಿನ ಜನರಲ್ಲಿ ಶುರುವಾಗಿದೆ. ಮಾಧ್ಯಮಗಳ ಜೊತೆ ಮಾತನಾಡಿದ ರುಬೀನಾ ಖಾನೂಮ್ “ಮದುವೆಯಾದರೆ ನಾನು ಅಂಕಿತ್‌ನನ್ನೇ ಮದುವೆಯಾಗಬೇಕು, ಅದು ಆಗದಿದ್ದರೆ ನಾನು ಮದುವೆಯೇ ಆಗಲ್ಲ ಅಂತ ನಿರ್ಧರಿಸಿದ್ದೆ” ಎನ್ನುತ್ತಾಳೆ. ರುಬೀನಾ ಹೇಳುವ ಪ್ರಕಾರ ಆಕೆಯ ಕುಟುಂಬ ತನ್ನ ಮಗಳ ಖುಷಿ ನೋಡಿದರೇ ಹೊರತು ಸಮಾಜದ ಬಗ್ಗೆ ಚಿಂತಿಸಲಿಲ್ಲ. ಎರಡು ಬೇರೆ ಬೇರೆ ಸಮುದಾಯದವರಾದರೂ ಕೂಡ ಈ ಮದುವೆಯಿಂದ ಎರಡೂ ಕುಟುಂಬದಲ್ಲಿ ಖುಷಿ ಮನೆ ಮಾಡಿದೆ. ಈಗಿನ ಕಾಲದಲ್ಲಿ ಇಂತಹ ಮದುವೆಗಳಿಗೆ ಎರಡೂ ಕುಟುಂವದವರು ಒಪ್ಪುವ ನಿದರ್ಶನಗಳು ತೀರಾ ಕಡಿಮೆಯೆಂದೇ ಹೇಳಬಹುದು.

Advertisement
Share this on...