ಬೆಂಗಳೂರು: ಬಿಗ್‌ಬಾಸ್ ಸೀಸನ್ 8ನೇ ಆವೃತ್ತಿಯ ಎರಡನೇ ಇನ್ನಿಂಗ್ಸ್ ಅಂತಿಮ ಹಂತಕ್ಕೆ ಬಂದಿದೆ. ಸೆಕೆಂಡ್ ಇನ್ನಿಂಗ್ಸ್ ಆರಂಭವಾದಾಗಿನಿಂದ ಅರವಿಂದ್ ಕೆ.ಪಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಕಾಯ್ದುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಕೇವಲ ಸ್ಪರ್ಧಿಯಲ್ಲದೆ, ಕರ್ನಾಟಕ ವಲಯದ ಬೈಕ್ ರೇಸರ್ ಆಗಿ ಖ್ಯಾತಿಯನ್ನು ಪಡೆದಿದ್ದಾರೆ. ಇನ್ನು ಸೀಸನ್ 8 ಕನ್ನಡಿಗರ ಮನೆ ಮಾತಾಗಲು ಮುಖ್ಯ ಕಾರಣ ಕಿಚ್ಚ ಸುದೀಪ್ ಅವರ ಸ್ಟೈಲೀಶ್ ನಿರೂಪಣೆ.
ಸದ್ಯ ಟ್ರೆಂಡ್ ಪ್ರಕಾರ ಅರವಿಂದ್ ವೀಕ್ಷಕರ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಶೋ ಆರಂಭವಾದಾಗಿನಿಂದ ಈ ಬಾರಿ ಟ್ರೋಫಿ ಗೆಲ್ಲುವುದು ಯಾರು ಎಂಬ ಜನಗಳ ಊಹೆ ಬದಲಾಗದೇ ಇರುವುದು ಅಚ್ಚರಿಯ ಸಂಗತಿ. ಮೊದಲಿನಿಂದಲೇ ಜನಗಳ ಬಾಯಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರೆಂದರೆ ಅದು ಅರವಿಂದ್. ವೀಕ್ಷಕರು ಅಥವಾ ನೆಟ್ಟಿಗರು ಮಾತ್ರವಲ್ಲ ಮನೆಯ ಒಳಗಡೆ ಇರುವ ಸ್ಪರ್ಧಿಗಳ ಬಾಯಲ್ಲೂ ಅರವಿಂದ್ ಹೆಸರೇ ಹೆಚ್ಚಾಗಿ ಕೇಳಿಬರುತ್ತಿದೆ.
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಅರವಿಂದ್ ಜತೆ ಜಗಳ ಮಾಡಿಕೊಳ್ಳಲು ಸಹ ಹೆದರುತ್ತಿದ್ದಾರೆ. ಅರವಿಂದ್ರನ್ನು ನಾಮಿನೇಟ್ ಮಾಡುವ ಸ್ಪರ್ಧಿಗಳು ಅರವಿಂದ್ ಅಭಿಮಾನಿಗಳ ಕಣ್ಣಿಗೆ ಗುರಿಯಾಗಿ ಟ್ರೋಲ್ ಆಗುತ್ತಿದ್ದಾರೆ. ಇನ್ನು ನಿನ್ನೆ ನಡೆದ ಮತ್ತೊಂದು ಸುತ್ತಿನ ನಾಮಿನೇಶನ್ ಪ್ರಕ್ರಿಯೆಯಲ್ಲಿ ಸೂಕ್ತ ಕಾರಣ ನೀಡಿ ಒಬ್ಬೊಬ್ಬ ಎದುರಾಳಿ ಸ್ಪರ್ಧಿಯನ್ನು ನಾಮಿನೇಟ್ ಮಾಡುವಂತೆ ಕೇಳಲಾಯಿತು. ಈ ವೇಳೆ ಯಾರೊಬ್ಬರು ಸಹ ಅರವಿಂದ್ ಹೆಸರನ್ನೇ ತೆಗೆದುಕೊಳ್ಳಲೇ ಇಲ್ಲ.
ನಾಮಿನೇಶನ್ ಮಾಡದಿರುವುದು ಅರವಿಂದ್ ಕೆ.ಪಿ ಕನ್ನಡ ಬಿಗ್ ಬಾಸ್ 8ರ ವಿಜೇತರು ಎಂದು ಸ್ಪರ್ಧಿಗಳೇ ತಮ್ಮ ಮನಸ್ಸಿನಲ್ಲಿ ಅಂದುಕೊಂಡಿರುವುದು ಸಾಕಷ್ಟು ಸ್ಪಷ್ಟವಾಗಿದೆ. ಈ ವಾರ ಎಲಿಮಿನೇಷನ್ಗಾಗಿ ಒಬ್ಬ ಸ್ಪರ್ಧಿಯು ಕೂಡ ಅರವಿಂದ್ ಹೆಸರನ್ನು ನಾಮನಿರ್ದೇಶನ ಮಾಡಲಿಲ್ಲ.
ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್ ಮತ್ತು ಶೋ ನಡೆಸುವ ಕಲರ್ಸ್ ಕನ್ನಡ ವಾಹಿನಿ ಕೂಡ ಸೀಸನ್ 8ರ ಅಂತಿಮ ವಿಜೇತ ಅರವಿಂದ್ ಕೆ.ಪಿ ಎಂಬ ಸುಳಿವು ನೀಡುತ್ತಿರುವಂತೆ ಕಾಣುತ್ತದೆ. ಇದೇ ರೀತಿಯಲ್ಲಿ ಆಟ ಮುಂದುವರಿಸಿದರೆ ಅರವಿಂದ್ ಬಿಗ್‌ಬಾಸ್ ಟ್ರೋಫಿ ಮತ್ತು 50 ಲಕ್ಷ ರೂ. ನಗದು ಬಹುಮಾನದೊಂದಿಗೆ ಮನೆಗೆ ಹೋಗುವುದನ್ನು ನಿರೀಕ್ಷಿಸಬಹುದಾಗಿದೆ. ಆದರೆ, ಬಿಗ್ ಬಾಸ್ ಆಟದಲ್ಲಿ ಕೊನೆಯ ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ನಾವಿಲ್ಲಿ ಮರೆಯುವಂತಿಲ್ಲ. ಏಕೆಂದರೆ ಎಲ್ಲವು ವೀಕ್ಷಕರು ಅಥವಾ ಮತದಾರರ ಕೈಯಲ್ಲಿರುತ್ತದೆ.