ನಟ ಸಂಚಾರಿ ವಿಜಯ್ ಬಳಿಕ ಇದೀಗ ಖ್ಯಾತ ನಟಿಯ ಅಪಘಾತ: ಸಾವು ಬದುಕಿನ‌ ಮಧ್ಯೆ ಹೋರಾಟ

in FILM NEWS/Kannada News/News 181 views

ಬೆಂಗಳೂರು(ಜು.25): ದಕ್ಷಿಣ ಭಾರತ ಚಲನಚಿತ್ರರಂಗದ ನಟಿ ಹಾಗೂ ಮಾಡೆಲ್​ ಯಶಿಕಾ ಆನಂದ್ ಶನಿವಾರ ಮಧ್ಯರಾತ್ರಿ 1 ಗಂಟೆಗೆ ಕಾರು ಅ ಪ ಘಾ ತ ಕ್ಕೀಡಾಗಿದೆ. ಮಹಾಬಲಿಪುರಂ ಸಮೀಪದ ಈಸ್ಟ್​ ಕೋಸ್ಟ್​ ರಸ್ತೆಯಲ್ಲಿ ಶನಿವಾರ ಮಧ್ಯರಾತ್ರಿ ಅ ಪ ಘಾ ತ ಸಂಭವಿಸಿದೆ. ಯಶಿಕಾ ಜೊತೆಗೆ ಆಕೆಯ ಮೂವರು ಗೆಳತಿಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಈ ದು ರಂ ತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಯಶಿಕಾ ಅವರ ಇಬ್ಬರು ಗೆಳೆಯರು ತೀ ವ್ರ ಗಾ ಯ ಗೊಂಡಿದ್ದು, ಮತ್ತೋರ್ವ ಗೆಳತಿ ವಾಲಿಚೆಟ್ಟಿ ಭವಾನಿ ಅ ಪ ಘಾ ತ ದಲ್ಲಿ ಸಾ ವ ನ್ನ ಪ್ಪಿ ದ್ದಾರೆ ಎಂದು ತಿಳಿದು ಬಂದಿದೆ. ನಟಿ ಯಶಿಕಾ ಆನಂದ್​ ಗಂ ಭೀ ರ ವಾಗಿ ಗಾ ಯ ಗೊಂಡಿದ್ದಾರೆ ಎಂದು ಸದ್ಯದ ಮಾಹಿತಿ ಲಭಿಸಿದೆ.

Advertisement

ಗಾ ಯ ಗೊಂ ಡ ಯಶಿಕಾ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಪರಿಸ್ಥಿತಿ ತೀ ರಾ ಗಂ ಭೀ ರ ವಾಗಿದೆ ಎಂದು ತಿಳಿದು ಬಂದಿದೆ. ಈ ಶಾಕಿಂಗ್​ ಸುದ್ದಿ ಕೇಳಿದ ಬಳಿಕ ದಿಗ್ಭ್ರಮೆಗೊಂಡ ಯಶಿಕಾ ತಂದೆ ದೆಹಲಿಯಿಂದ ಚೆನ್ನೈಗೆ ಧಾವಿಸಿದ್ದಾರೆ.

ಸಹ ನಟ ಎಸ್​ಜೆ ಸೂರ್ಯ ಈ ಸುದ್ದಿಯನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಯಶಿಕಾ ಶೀಘ್ರ ಗುಣಮುಖ ಆಗಲಿ ಎಂದು ಪ್ರಾರ್ಥಿಸಿದ್ದಾರೆ. ಯಶಿಕಾ ಮತ್ತು ಎಸ್​​ಜೆ ಸೂರ್ಯ ಕದಾಮೈಯಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

ಯಶಿಕಾ ಇನ್​​ಸ್ಟಾಗ್ರಾಂ ಮಾಡೆಲ್​​ ಆಗುವ ಮೂಲಕ ತನ್ನ ನಟನೆಯನ್ನು ಆರಂಭಿಸಿದ್ದರು. ತಮ್ಮ 14ನೇ ವಯಸ್ಸಿನಲ್ಲೇ ಸಾಂತಾನಮ್​ ಚಿತ್ರದಲ್ಲಿ ನಟಿಸಿದ್ದರು. ಯಶಿಕಾ ಅನೇಕ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

Advertisement
Share this on...