ಕೊನೆಗೂ ಪ್ರಕಟವಾಯ್ತು ಸಂಭಾವ್ಯ ಸಚಿವರ ಲಿಸ್ಟ್: ನೋಡಿ ಯಾರಿಗೆಲ್ಲಾ ಸಿಗಲಿದೆ ಮಂತ್ರಿಗಿರಿ

in Kannada News/News 6,012 views

ಬೆಂಗಳೂರು, ಆ.2:

Advertisement
ಸಚಿವ ಸಂಪುಟ ರಚನೆಗೆ ಸಂಬಂಧಿಸಿ ಪಕ್ಷದ ವರಿಷ್ಠರ ಭೇಟಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ತೆರಳಿರುವ ಬೆನ್ನಲ್ಲೆ ಸಚಿವರ ಸಂಭಾವ್ಯ ಪಟ್ಟಿಯೊಂದಿಗೆ ಹರಿದಾಡುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ -ಗೃಹ, ಬಿಡಿಎ ಖಾತೆಯನ್ನು ತನ್ನಲ್ಲೆ ಉಳಿಸಿಕೊಳ್ಳಲಿದ್ದರೆ, ಉಪ ಮುಖ್ಯಮಂತ್ರಿಗಳಾಗಿ ಆರ್.ಅಶೋಕ್, ಬಿ.ಶ್ರೀರಾಮುಲು ಸ್ಥಾನ ಪಡೆಯಲಿದ್ದಾರೆ. ಅದೇರೀತಿ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಸಚಿವ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಗೋವಿಂದ ಕಾರಜೋಳ ಡಿಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ರೇಣುಕಾಚಾರ್ಯ, ಎಸ್.ರಾಮದಾಸ್ ಅವರಿಗೆ ಸಚಿವ ಸ್ಥಾನ ಲಭಿಸಲಿದೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸಂಜೆಯ ವೇಳೆ ಸಚಿವರ ಅಂತಿಮ ಪಟ್ಟಿ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಸಂಭಾವ್ಯ ಸಚಿವರು ಎಂದು ಹರಿದಾಡುತ್ತಿರುವ ಪಟ್ಟಿ

ಬೊಮ್ಮಾಯಿ ಸಂಪುಟದಲ್ಲಿ ಯುವ ಶಾಸಕರಿಗೆ ಆದ್ಯತೆ?

ಯುವ ಪಡೆ

ಪೂರ್ಣಿಮಾ ಶ್ರೀನಿವಾಸ, ಪ್ರೀತಂಗೌಡ, ಸುನಿಲ್ ಕುಮಾರ್, ಅರಗಜ್ಞಾನೇಂದ್ರ, ರಾಜೂಗೌಡ ನಾಯಕ, ಅಂಗಾರ, ಡಾ.ಕೆ.ಸುಧಾಕರ್, ಅಶ್ವತ್ಥ ನಾರಾಯಣ್​, ರೇಣುಕಾಚಾರ್ಯ, ಪಿ. ರಾಜೀವ್್, ಮುನಿರತ್ನ

ಸಿನಿಯರ್ಸ್ ಲಿಸ್ಟ್

ಆರ್​.ಅಶೋಕ್, ಕೆ.ಈಶ್ವರಪ್ಪ, ಉಮೇಶ್ ಕತ್ತಿ, ಸುರೇಶ್ ಕುಮಾರ್, ಬಾಲಚಂದ್ರ ಜಾರಕಿಹೊಳಿ, ವಿ. ಸೋಮಣ್ಣ, ಮುರುಗೇಶ್​ ನಿರಾಣಿ, ಎಸ್​.ಟಿ. ಸೋಮಶೇಖರ್್, ಬೈರತಿ ಬಸವರಾಜ್, ಎಂಟಿಬಿ ನಾಗರಾಜ್, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್

ಕಿಕ್ ಔಟ್ ಲಿಸ್ಟ್

ಪ್ರಭು ಚವ್ಹಾಣ್, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ, ಲಕ್ಷ್ಮಣ್​ ಸವದಿ, ಶ್ರೀಮಂತ ಪಾಟೀಲ್, ಗೋಪಾಲಯ್ಯ

ವಿಜಯೇಂದ್ರಗೆ ಮಂತ್ರಿಸ್ಥಾನದ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು?

ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಸಂಜೆ ಪಕ್ಷದ ಸಭೆ ನಡೆಯಲಿದೆ. ಸಂಪುಟ ರಚನೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಮಾಜಿ ಸಚಿವರು ಶಾಸಕರ ಜೊತೆಗೆ ಚರ್ಚೆ ಮಾಡಿದ್ದೀನಿ. ಈಗಿನ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನೂ ಒಟ್ಟು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕಿದೆ ಎಂದರು.

ಎಲ್ಲ ಶಾಸಕರಿಗೂ ಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಗೊತ್ತಿದೆ. ಪ್ರಾದೇಶಿಕ ಭಾಗವನ್ನು ಗಮನದಲ್ಲಿಟ್ಟುಕೊಂಡು ರಚನೆ ಮಾಡಲಾವುದು. ಇಂದು ಅಂತಿಮ ಸ್ವರೂಪಕ್ಕೆ ಬರಲಿದೆ. ಎಷ್ಟು ಹಂತದಲ್ಲಿ ಮಾಡಬೇಕು ಎಷ್ಟು ಜನರ ಇರಬೇಕು ಎಂದು ಇವತ್ತು ಚರ್ಚೆ ಆಗಲಿದೆ. ಇಂದು ರಾತ್ರಿಯೇ ನಿರ್ಣಯವಾಗಲಿದೆ ಎಂದು ಹೇಳಿದರು.

ನಾಳೆ ಬೆಂಗಳೂರು ವಾಪಸ್ ಹೋದ್ರೆ ನಾಡಿದ್ದು ಸಂಪುಟ ರಚನೆ ಪಕ್ಕಾ. ಸದ್ಯ ಅಮಿತ್ ಶಾ ಭೇಟಿಗೆ ಪ್ರಯತ್ನ ಮಾಡುತ್ತೇನೆ. ಇನ್ನು ವಿಜಯೇಂದ್ರ ಸಂಪುಟದಲ್ಲಿ ಇರುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಬೊಮ್ಮಾಯಿ ತಿಳಿಸಿದರು.

Advertisement
Share this on...