ನಾಳೆಯೇ ನೂತನ 24 ಸಚಿವರ ಪ್ರಮಾಣವಚನ: ಈ ಎಲ್ಲ ಶಾಸಕರಿಗೆ ಸಿಗಲಿದೆ ಮಂತ್ರಿ ಸ್ಥಾನ?

in Kannada News/News 382 views

ರಾಜ್ಯದ ಮುಖ್ಯಮಂತ್ರಿಯಾದ ದಿನದಿಂದ ಬಸವರಾಜ ಬೊಮ್ಮಾಯಿ ಅವರಿಗೆ ಕ ಬ್ಬಿ ಣ ದ ಕ ಡ ಲೆ ಯಾಗಿ ಕಾ ಡು ತ್ತಿ ದ್ದ ಸಂಪುಟ ವಿಸ್ತರಣೆಗೆ ಕಡೆಗೂ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಬುಧವಾರ 20ರಿಂದ 24 ಸಚಿವರು ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತ ಎಂದು ಪಕ್ಷದ ಉನ್ನತ ಮೂಲಗಳಿಂದ ಗೊತ್ತಾಗಿದೆ.

Advertisement

ಸೋಮವಾರ ರಾತ್ರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಚಿವರ ಪಟ್ಟಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಂಗಳೂರು ತಲುಪಿದ ಬಳಿಕ, ಸಚಿವರಾಗಲಿರುವ ಶಾಸಕರಿಗೆ ಸಿಎಂ ಖುದ್ದು ಕರೆ ಮಾಡಿ, ಪ್ರಮಾಣವಚನಕ್ಕೆ ತಯಾರಾಗುವಂತೆ ನಿರ್ದೇಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ರ್ಚಚಿಸಲೆಂದೇ ವರಿಷ್ಠರು ಬೊಮ್ಮಾಯಿ ಅವರನ್ನು ಭಾನುವಾರ ದೆಹಲಿಗೆ ಕರೆಸಿಕೊಂಡಿದ್ದರು. ಆದರೆ, ಭಾನುವಾರ ರಾತ್ರಿ ವರಿಷ್ಠರ ಭೇಟಿ ನಡೆದಿರಲಿಲ್ಲ.

ಸೋಮವಾರ ಸಿಎಂ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ, ರಾಜ್ಯಕ್ಕೆ ವೀಕ್ಷಕರಾಗಿ ಬಂದಿದ್ದ ಧಮೇಂದ್ರ ಪ್ರಧಾನ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳಲಿರುವ ತಮ್ಮ ಆದ್ಯತಾ ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಈ ವೇಳೆ ವರಿಷ್ಠರೂ ಒಂದಿಷ್ಟು ಬದಲಾವಣೆಗೆ ಸಲಹೆ ನೀಡಿದ್ದು, ನಡ್ಡಾ ಭೇಟಿ ವೇಳೆ ಅವರಿಂದ ಸಿಎಂ ಅಂತಿಮ ಅನುಮೋದನೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ವರಿಷ್ಠರು ಕೂಡ ರಾಜ್ಯ ಬಿಜೆಪಿಯ ವಿವಿಧ ನಾಯಕರು, ಆರ್.ಎಸ್.ಎಸ್. ಮುಖಂಡರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಸಚಿವ ಸ್ಥಾನದ ಹಂಚಿಕೆ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ.

ಕಾರ್ಕಳ ಶಾಸಕ ಸುನಿಲ್ ಕುಮಾರ್, ಸುರಪುರ ಶಾಸಕ ರಾಜುಗೌಡ, ಕಲಬುರಗಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿ ಐದಾರು ಹೊಸ ಮುಖಗಳಿಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯುವಕರಿಗೆ ಆದ್ಯತೆ ನೀಡಲು ರಾಜ್ಯ ಮತ್ತು ಕೇಂದ್ರದ ಮುಖಂಡರು ತೀರ್ವನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಲ್ಲದ್‌ಗೆ ಬೆಲ್ಲವೋ ಬೇವೋ?: ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ ಮತ್ತು ಸಿ.ಪಿ. ಯೋಗೇಶ್ವರ್ ಅವರನ್ನು ಯಾವುದೇ ಕಾರಣಕ್ಕೂ ಸಂಪುಟಕ್ಕೆ ತೆಗೆದುಕೊಳ್ಳಬಾರದು ಎಂದು ಮಾಜಿ ಸಿಎಂ ಯಡಿಯೂರಪ್ಪ ಪ ಟ್ಟು ಹಿಡಿದಿದ್ದಾರೆ. ಈ ಮೂವರೂ ತಮ್ಮ ವಿ ರು ದ್ಧ ವರಿಷ್ಠರಿಗೆ ದೂ ರು ನೀಡಿದ್ದರು ಎಂಬ ಆ ಕ್ರೋ ಶ ಬಿಎಸ್ವೈ ಮತ್ತು ಕುಟುಂಬಸ್ಥರಲ್ಲಿದೆ. ಮಾಜಿ ಸಚಿವ ಜಗದೀಶ ಶೆಟ್ಟರ್ ಕೂಡ ಬೆಲ್ಲದ್ಗೆ ಸಚಿವ ಸ್ಥಾನ ತಪ್ಪಿಸಲು ಭಾ ರಿ ಯತ್ನ ಮಾಡಿದ್ದಾರೆ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮೇಲೂ ಈ ಬಗ್ಗೆ ಒ ತ್ತ ಡ ಹೇ ರಿ ದ್ದಾರೆ. ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಶೆಟ್ಟರ್ ಪ್ರತಿಪಾದನೆ. ಬೆಲ್ಲದ್ಗೆ ವರಿಷ್ಠ ವಲಯದಲ್ಲಿ ಉತ್ತಮ ಸಂಪರ್ಕಗಳಿದ್ದು, ಮಂತ್ರಿ ಸ್ಥಾನದ ಜವಾಬ್ದಾರಿ ನೀಡುವಂತೆ ಮನವಿ ಮಾಡಿದ್ದಾರೆ. ಜೋಶಿ ಅವರಿಗೂ ತಮ್ಮನ್ನು ಬೆಂಬಲಿಸುವಂತೆ ಕೋರಿದ್ದಾರೆ. ಚೆಂ ಡು ಈಗ ಹೈಕಮಾಂಡ್ ಅಂಗಳದಲ್ಲಿದೆ. ಸಿಎಂ ಬೊಮ್ಮಾಯಿ ನಿಲುವು ಬೆಲ್ಲದ್ ಭವಿಷ್ಯ ನಿರ್ಧರಿಸಬಲ್ಲದು ಎಂದು ವಿಮರ್ಶಿಸಲಾಗಿದೆ.

ಡಿಸಿಎಂ ಹುದ್ದೆ ಸಿಎಂ ವಿವೇಚನೆಗೆ?: ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡುವ ವಿಷಯ ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ವರಿಷ್ಠರು ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಲಾಭ/ನಷ್ಟಗಳ ಬಗ್ಗೆ ಅವಲೋಕನ ಮಾಡಿ ನೀವೇ ನಿರ್ಧರಿಸಿ ಎಂದು ತಿಳಿಸಲಾಗಿದೆ. ಒಂದು ವೇಳೆ ಡಿಸಿಎಂಗಳು ನೇಮಕವಾದಲ್ಲಿ ಜಾತಿ ಆಧಾರದ ಮೇಲೆ 4-5 ಮಂದಿಯನ್ನು ನೇಮಕ ಮಾಡುವ ಸಾಧ್ಯತೆಗಳಿವೆ. 2023ರ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಎಂಗಳನ್ನು ನೇಮಕ ಸೂಕ್ತ ಕ್ರಮ ಎನ್ನುವುದು ರಾಜ್ಯ ಬಿಜೆಪಿಯ ಕೆಲ ಹಿರಿಯ ನಾಯಕರ ಅಭಿಪ್ರಾಯ.

12 ವಲಸಿಗರಿಗೂ ಸಚಿವ ಸ್ಥಾನ?: ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದ 17 ಶಾಸಕರಲ್ಲಿ 12 ಮಂದಿ ಕಳೆದ ಸಂಪುಟದಲ್ಲಿ ಸಚಿವರಾಗಿದ್ದರು. ಈ 12 ಮಂದಿಗೆ ಈ ಬಾರಿಯೂ ಸ್ಥಾನ ನೀಡಬೇಕು ಎನ್ನುವುದು ಹೈಕಮಾಂಡ್ ನಿಲುವು ಎನ್ನಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದವರನ್ನು ಕೈ ಬಿ ಟ್ಟ ಲ್ಲಿ ಬೇರೆ ರಾಜ್ಯದಲ್ಲಿ ಇರುವ ಇಂಥದ್ದೇ ಕೆಲವು ಮುಖಂಡರಿಗೆ ತ ಪ್ಪು ಸಂದೇಶ ರವಾನೆಯಾದಂತೆ ಆಗಲಿದೆ. ಹೀಗಾಗಿ, 12 ಮಂದಿಯನ್ನು ಉಳಿಸಿಕೊಳ್ಳಬೇಕು ಎಂದು ವರಿಷ್ಠ ಮುಖಂಡರೊಬ್ಬರನ್ನು ಭೇಟಿಯಾದ ವೇಳೆ ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಲಾಗಿದೆ. ವಲಸಿಗರಲ್ಲಿ ನಾಲ್ಕೈದು ಮಂದಿಯನ್ನು ಕೈ ಬಿ ಡ ಬೇ ಕು ಎಂಬ ವಾದಗಳಿವೆ. ಅಂತಿಮವಾಗಿ ಜೆಪಿ ನಡ್ಡಾ ನೀಡುವ ಸಲಹೆಯೂ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಹೇಳಲಾಗುತ್ತಿದೆ.

ಸುರೇಶ್ ಕುಮಾರ್‌ಗೆ ಇಲ್ಲ ಮಂತ್ರಿಗಿರಿ?: ಹಿರಿಯ ಶಾಸಕ ಸುರೇಶ್ ಕುಮಾರ್ಗೂ ಮಂತ್ರಿ ಸ್ಥಾನ ಕ ಳೆ ದು ಕೊಳ್ಳುವ ಭೀ ತಿ ಇದೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಎಸ್.ಎ. ರಾಮದಾಸ್ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ 12 ವ ಲ ಸಿ ಗ ಶಾಸಕರು ಮಂತ್ರಿ ಸ್ಥಾನ ಉಳಿಸಿಕೊಂಡರೆ ಬ್ರಾ ಹ್ಮ ಣ ಕೋಟಾದಲ್ಲಿ ಶಿವರಾಮ ಹೆಬ್ಬಾರ್ ಸ್ಥಾನಕ್ಕೆ ಧ ಕ್ಕೆ ಯಾಗದು. ಒಂದು ವೇಳೆ ರಾಮದಾಸ್ಗೆ ಅವಕಾಶ ಸಿಕ್ಕರೆ ಸುರೇಶ್ ಕುಮಾರ್ ಕೈ ಬಿ ಡ ಬ ಹು ದು. ಇಲ್ಲದಿದ್ದರೆ, ಸುರೇಶ್ ಕುಮಾರರನ್ನು ಸ್ಪೀಕರ್ ಮಾಡಿ ಕಾಗೇರಿಗೆ ಮಂತ್ರಿ ಸ್ಥಾನದ ಹಂಚಿಕೆಯಾಗಬಹುದು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಈಶ್ವರಪ್ಪ ಬೆನ್ನಿಗೆ ಸಂಘದ ನಾಯಕರು: ಕು ರು ಬ ಸ ಮು ದಾ ಯ ದ ಕೆ.ಎಸ್. ಈಶ್ವರಪ್ಪನವರನ್ನು ಸಂಪುಟದಿಂದ ಕೈ ಬಿ ಡು ವ ಮಾತುಗಳು ಕೇಳಿಬಂದಿದ್ದರೂ, ಸಂಘದ ಕೆಲ ಮುಖಂಡರು ಅವರ ಪರವಾಗಿ ನಿಂತಿದ್ದಾರೆ. ಅವರನ್ನು ಸಂಪುಟದಿಂದ ದೂ ರ ವಿ ಟ್ಟ ಲ್ಲಿ ಸಂಘಟನೆ ಹಾಗೂ ಕಾರ್ಯಕರ್ತ ವರ್ಗಕ್ಕೆ ತ ಪ್ಪು ಸಂದೇಶ ರವಾನೆ ಆಗಬಹುದು. ಸಂಘಟನೆ ಅಥವಾ ಮೂಲ ಬಿಜೆಪಿಯವರು ಹೇಗೂ ಸಿಎಂ ಸ್ಥಾನದಲ್ಲಿಲ್ಲ. ಹೀಗಿರುವಾಗ, ಸಂಘಟನೆ ಹಿನ್ನೆಲೆಯವರನ್ನು ಕೈ ಬಿ ಟ್ಟ ಲ್ಲಿ ಭಿ ನ್ನ ಮ ತ ಕ್ಕೆ ಕಾರಣ ಆಗಬಹುದು ಎಂಬ ವಾದವಿದೆ. ಆದರೆ, ಅವರು ಸಂಘಟನೆಗೆ ಶ್ರಮಿಸಬೇಕು ಎಂಬ ಪ್ರತಿವಾದದ ಮಧ್ಯೆ ಇದನ್ನೆಲ್ಲ ಹೈಕಮಾಂಡ್ ಹೇಗೆ ವಿಮರ್ಶಿಸಲಿದೆ ಎಂಬುದೂ ಕುತೂಹಲಕರ. ಲಂ ಚ ಸ್ವೀಕಾರ ಪ್ರ ಕ ರ ಣ ದಲ್ಲಿ ಸಿ ಲು ಕಿ ಕೊಂಡಿರುವ ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡದಿರಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಅಶೋಕ್‌ಗೆ ಸ್ಥಾನ ಸಾಧ್ಯತೆ: ಮಾಜಿ ಸಚಿವ ಆರ್.ಅಶೋಕ್-ಸಿಎಂ ಬೊಮ್ಮಾಯಿ ನಡುವಿನ ಒಡನಾಟದಿಂದಾಗಿ ಗೋವಿಂದರಾಜನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣಗೆ ಸಚಿವ ಸ್ಥಾನ ಸಿಗುವುದಿಲ್ಲವೇನೋ ಎಂಬ ಆ ತಂ ಕ ವಿ ದೆ. ವರಿಷ್ಠರ ಜತೆಗಿನ ಮಾತುಕತೆ ವೇಳೆ ಬೊಮ್ಮಾಯಿ ಅವರು ಅಶೋಕ್ ಪರ ನಿಲುವು ತಳೆದಿದ್ದಾರೆ ಎಂದು ಸಿಎಂ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ. ಸಚಿವ ಸ್ಥಾನಕ್ಕಾಗಿ ಲಾ-ಬಿ ಮಾಡಲು ದೆಹಲಿಗೆ ಬಂದಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಿಎಂ ಬೊಮ್ಮಾಯಿಯವರನ್ನು ಕರ್ನಾಟಕ ಭವನದಲ್ಲಿ ಭೇಟಿ ಮಾಡಿ, ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಮೇಲ್ಮನೆ ಕೋಟಾದಲ್ಲಿ ಸವದಿ ಬದಲಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ, ದ ಲಿ ತ ಸಮುದಾಯದ ರವಿಕುಮಾರ್ ಸೇರ್ಪಡೆ ಮಾಡಿದರೆ ಹೇಗೆ ಎಂಬ ಮಾತುಕತೆಯೂ ನಡೆದಿದೆ.

Advertisement
Share this on...