ಸಚಿವ ಸ್ಥಾನ ಸಿಗದ ಬಸನಗೌಡ ಪಾಟೀಲ್ ಯತ್ನಾಳ್ ಮುಂದಿನ ನಡೆ ಹೀಗಿರಲಿದೆಯಂತೆ: ಅಚ್ಚರಿಯ ಹೇಳಿಕೆ ಕೊಟ್ಟ ಯತ್ನಾಳ್

in Kannada News/News 766 views

ವಿಜಯಪುರ: ‘ಸಚಿವ ಸ್ಥಾನ ನೀಡದಿದ್ದರೇ ಬೊಮ್ಮಾಯಿ ಸರ್ಕಾರಕ್ಕೆ ಶಾ ಕ್‌ ಕೊಡಬೇಕಾಗುತ್ತದೆ’ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಮುಂದಿನ ನಡೆ ಏನೆಂಬುದು ಇದೀಗ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.

Advertisement

‘ಬೊಮ್ಮಾಯಿ ಸಂಪುಟ ಸೇರುವುದು ನೂರಕ್ಕೆ ನೂರು ಖಚಿತ’ ಎಂದು ಸ್ವತಃ ಯತ್ನಾಳ ಅವರೇ ಎರಡು ದಿನಗಳ ಹಿಂದಷ್ಟೇ ಮಾಧ್ಯಮಗಳ ಎದುರು ವಿಶ್ವಾಸ ವ್ಯಕ್ತಪಡಿಸಿದ್ದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಮುಖ್ಯ ಪಾತ್ರ ವಹಿಸಿರುವುದೇ ಅವರ ಈ ಅಚಲ ವಿಶ್ವಾಸಕ್ಕೆ ಕಾರಣವಾಗಿತ್ತು. ಅಲ್ಲದೇ, ಬಿಜೆಪಿ ವರಿಷ್ಠರಿಂದಲೂ ಅವರಿಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು ಎಂದು ಅವರ ಆಪ್ತರು ಹೇಳುತ್ತಿದ್ದರು. ಆದರೆ, ಇದೀಗ ಅವರಿಗೆ ವಿಶ್ವಾಸ ‘ಘಾ ತ’ವಾಗಿದೆ.

ಯತ್ನಾಳರಿಗೆ ವಿಶ್ವಾಸ ಘಾ ತ ಮಾಡಿದವರು ಯಾರು? ಹೇಗಾಯಿತು? ಏಕಾಯಿತು? ಗೌಡರಿಗೆ ಹೀಗಾಗಬಾರದಿತ್ತು ಎಂದು ಅವರ ಬೆಂಬಲಿಗರು ಮ ರು ಗು ತ್ತಿದ್ದಾ ರೆ.

ಯಡಿಯೂರಪ್ಪ ವಿ ರೋ ಧಿ ಬ ಣ ಯತ್ನಾಳ ಅವರನ್ನು ಬಳಸಿ ಬಿ ಸಾ ಡಿ ತೇ? ಅಥವಾ ಯಡಿಯೂರಪ್ಪನವರಿಂದಲೇ ಸಚಿವ ಸ್ಥಾನ ತಪ್ಪಿತೇ? ಎಂಬ ಅ ನು ಮಾ ನ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ದಿನ ಬೆಳಗಾದರೆ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿ ರು ದ್ಧ ಭ್ರ ಷ್ಟಾ ಚಾ ರ ಆ ರೋ ಪ‌ ಗಳ ಸುರಿಮಳೆಗೈಯುತ್ತಿದ್ದ ಯತ್ನಾಳ ಅವರು, ಬೊಮ್ಮಾಯಿ ಅವರನ್ನು ಅದೇ ರೀತಿ ಕಾ ಡು ತ್ತಾ ರೋ ಅಥವಾ ಮೌನಕ್ಕೆ ಶ ರ ಣಾ ಗುತ್ತಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲೂ ವಿ ರೋ ಧ: ಯಡಿಯೂರಪ್ಪ ಅವರನ್ನು ಎ ದು ರು ಹಾಕಿಕೊಂಡ ಪರಿಣಾಮ ಕ್ಷೇತ್ರಕ್ಕೆ ನಿರೀಕ್ಷಿತ ಅನುದಾನ ಲಭಿಸದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲದಿರುವುದು ಈಗಾಗಲೇ ನಗರದ ಸಾರ್ವಜನಿಕರಿಗಷ್ಟೇ ಅಲ್ಲ, ಸ್ವತಃ ಬಿಜೆಪಿ ಮುಖಂಡರು, ಕಾರ್ಯಕರ್ತರ ಬಹಿರಂಗ ಆ ಕ್ರೋ ಶ ಕ್ಕೆ ಕಾರಣವಾಗಿದೆ.

ವಿಧಾನಸಭಾ ಚುನಾವಣೆಯೂ ಹತ್ತಿರವಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಗೌಡರ ನಡೆ ಯತ್ತ ಕಡೆ ಎಂಬುದು ಅವರ ಆಪ್ತರಿಗೂ ತಿಳಿಯದಾಗಿದೆ.

ವಿ ರೋ ಧಿ ಗಳು ಖುಷ್‌: ಯತ್ನಾಳ ಅವರಿಗೆ ಸ್ವಂತಃ ಕ್ಷೇತ್ರವಾದ ವಿಜಯಪುರದಲ್ಲೇ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ಇತರೆ ಜನಪ್ರತಿನಿಧಿಗಳ ಜೊತೆ ಸೌಹಾರ್ದ ಸಂಬಂಧವಿಲ್ಲ. ತಮ್ಮ ನೇರ ನಡೆ-ನುಡಿಯಿಂದಾಗಿ ಎಲ್ಲರ ವಿ ರೋ ಧ ಕಟ್ಟಿಕೊಂಡಿದ್ದಾರೆ. ಗೌಡರಿಗೆ ಸಚಿವ ಸ್ಥಾನ ಲಭಿಸದೇ ಇರುವುದು ವಿ ರೋ ಧಿ ಗಳಿಗೆ ಹಾಲು-ತುಪ್ಪ ಉಂಡಷ್ಟು ಖುಷಿಯಾಗಿದ್ದಾರೆ.

ನಡಹಳ್ಳಿಯೂ ವಿ ಫ ಲ: ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಸಂಬಂಧ ಯಡಿಯೂರಪ್ಪ ಅವರ ಮೂಲಕ ಸಾಕಷ್ಟು ಲಾಬಿ ನಡೆಸಿದ್ದರು. ಅವರೂ ಸಹ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ವಿ ಫ ಲ ರಾಗಿದ್ದಾರೆ.

ಉಳಿದಂತೆ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮತ್ತು ವಿಧಾನ ಪರಿಷತ್‌ ಅರುಣ ಶಹಾಪುರ ಅವರು ಸಚಿವ ಸ್ಥಾನದ ಆಕಾಂಕ್ಷೆಯನ್ನು ಎಲ್ಲಿಯೂ ವ್ಯಕ್ತಪಡಿಸಿರಲಿಲ್ಲ. ಆದರೆ, ಅವರ ಬೆಂಬಲಿಗರು ಸಚಿವ ಸ್ಥಾನ ನೀಡಬೇಕು ಎಂದು ಒ ತ್ತಾ ಯಿ ಸಿ ದ ರು.

ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಜಿಲ್ಲೆಯ ಯಾರೊಬ್ಬರಿಗೂ ಸಚಿವ ಸ್ಥಾನ ಸಿಗದೇ ಇರುವುದು ಪಕ್ಷ ಸಂಘಟನೆಗೂ ಹಿನ್ನಡೆಯಾಗಲಿದೆ ಎಂಬ ಅಭಿಪ‍್ರಾಯ ದಟ್ಟವಾಗಿದೆ.

Advertisement
Share this on...