ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆ ರೆ ಹಾ-ವ-ಳಿ ಪರಿಹಾರ ಕೆಲಸಗಳ ಪರಿಶೀಲನೆಗೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ, ಸಚಿವರುಗಳನ್ನು ಜಿಲ್ಲೆಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ, ಮುಂದಿನ ಆದೇಶದವರೆಗೆ ಹಂಚಿಕೆ ಮಾಡಿ ಆದೇಶಿಸಿದ್ದಾರೆ.
ಸಚಿವರುಗಳಿಗೆ ಜಿಲ್ಲೆಗಳನ್ನು ತಾತ್ಕಾಲಿಕವಾಗಿ ಹಂಚಿಕೆ ಮಾಡಲಾಗಿದೆ. ಸಚಿವರು ಹಂಚಿಕೆಯಾದ ಜಿಲ್ಲೆಗಳಿಗೆ ತೆರಳಿ ಕೋವಿಡ್ ನಿರ್ವಹಣೆ ಮತ್ತು ನೆ-ರೆ ಹಾ ವ ಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಲು ಸಚಿವರಿಗೆ ಸೂಚನೆ ನೀಡಲಾಗಿದೆ. ಮುಂದಿನ ಆದೇಶದವರೆಗೆ ಸಚಿವರು ಹಂಚಿಕೆಯಾದ ಜಿಲ್ಲೆಗಳ ಉಸ್ತುವಾರಿ ವಹಿಸಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಹುತೇಕ ನಿರೀಕ್ಷೆಯಂತೆ ಆಯಾ ಜಿಲ್ಲೆಗಳಿಂದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದವರಿಗೆ ಉಸ್ತುವಾರಿ ಸಿಕ್ಕಿದೆ. ಕೆಲ ಸಚಿವರುಗಳಿಗೆ ಅಕ್ಕಪಕ್ಕದ ಜಿಲ್ಲೆ ಸಿಕ್ಕಿದೆ. ಈ ಪಟ್ಟಿ ಮುಂದಿನ ಬದಲಾವಣೆಗೆ ಒಳಪಟ್ಟಿದೆ. ಸಚಿವರ ಪ್ರಾತಿನಿಧ್ಯ ಕಾಣದ 13 ಜಿಲ್ಲೆಗಳಿಗೆ ಸದ್ಯಕ್ಕೆ ಉಸ್ತುವಾರಿ ಸಚಿವರುಗಳೇ ದಿ ಕ್ಕು ಎನ್ನಬಹುದು. ಆಗಸ್ಟ್ 15ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಈ ಸಚಿವರುಗಳೇ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಚಿವರಿಗೆ ಹಂಚಿಕೆಯಾದ ಜಿಲ್ಲೆಗಳು
ಕೆ ಎಸ್ ಈಶ್ವರಪ್ಪ – ಶಿವಮೊಗ್ಗ, ಆರ್ ಅಶೋಕ್ – ಬೆಂಗಳೂರು ನಗರ, ಬಿ ಶ್ರೀರಾಮುಲು – ಚಿತ್ರದುರ್ಗ, ಉಮೇಶ್ ವಿ ಕ ತ್ತಿ – ಬಾಗಲಕೋಟೆ, ಎಸ್ ಅಂಗಾರ – ದಕ್ಷಿಣ ಕನ್ನಡ, ಜೆಸಿ ಮಾಧುಸ್ವಾಮಿ – ತುಮಕೂರು, ಅರಗ ಜ್ಞಾನೇಂದ್ರ – ಚಿಕ್ಕಮಗಳೂರು, ಸಿ ಎನ್ ಅಶ್ವತ್ಥ್ ನಾರಾಯಣ – ರಾಮನಗರ, ಸಿ ಸಿ ಪಾಟೀಲ್ – ಗದಗ, ಆನಂದ್ ಸಿಂಗ್ – ಬಳ್ಳಾರಿ ಮತ್ತು ವಿಜಯ ನಗರ, ಕೋಟ ಶ್ರೀನಿವಾಸ ಪೂಜಾರಿ – ಕೊಡಗು, ಪ್ರಭು ಚವ್ಹಾಣ್ – ಬೀದರ್, ಮುರುಗೇಶ್ ರುದ್ರಪ್ಪ ನಿರಾಣಿ – ಕಲಬುರಗಿ, ಅರೆಬೈಲ್ ಹೆಬ್ಬಾರ್ ಶಿವರಾಮ್ – ಉತ್ತರ ಕನ್ನಡ, ಎಸ್ ಟಿ ಸೋಮಶೇಖರ್ – ಉತ್ತರ ಕನ್ನಡ, ಬಿ ಸಿ ಪಾಟೀಲ್ - ಹಾವೇರಿ, ಬಿ ಎ ಬಸವರಾಜ್ – ದಾವಣಗೆರೆ, ಡಾ ಕೆ ಸುಧಾಕರ್ - ಚಿಕ್ಕಬಳ್ಳಾಪುರ, ಕೆ ಗೋಪಾಲಯ್ಯ– ಹಾಸನ, ಶಶಿಕಲಾ ಜೊಲ್ಲೆ – ವಿಜಯಪುರ, ಎಂಟಿಬಿ ನಾಗರಾಜ್– ಬೆಂಗಳೂರು ಗ್ರಾಮಾಂತರ, ಕೆ ಸಿ ನಾರಾಯಣ ಗೌಡ – ಮಂಡ್ಯ, ಬಿ ಸಿ ನಾಗೇಶ್ - ಯಾದಗಿರಿ, ಸುನೀಲ್ ಕುಮಾರ್ – ಉಡುಪಿ, ಆಚಾರ್ ಹಾಲಪ್ಪ ಬಸಪ್ಪ – ಕೊಪ್ಪಳ, ಶಂಕರ್ ಬಿ ಪಾಟೀಲ್ ಮುನೇನಕೊಪ್ಪ – ಧಾರವಾಡ, ಮುನಿರತ್ನ – ಕೋಲಾರ
ಸಚಿವರು ನಾಳೆಯಿಂದಲೇ ಈ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಕುರಿತು ಅವಲೋಕಿಸಬೇಕಿದೆ. ಅಲ್ಲದೇ ನೆ-ರೆ ಪೀ ಡಿ ತ ಪ್ರದೇಶಗಳಲ್ಲಿ ಆದ ಹಾ-ನಿ ಸಂಬಂಧ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.
13 ಜಿಲ್ಲೆಗಳಿಗೆ ಸಿಗದ ಪ್ರಾತಿನಿಧ್ಯ: ಮೈಸೂರು, ಚಾಮರಾಜನಗರ, ರಾಮನಗರ, ವಿಜಯಪುರ, ಕೊಡಗು, ಯಾದಗಿರಿ, ಹಾಸನ, ಚಿಕ್ಕಮಗಳೂರು, ಕೋಲಾರ ಜಿಲ್ಲೆಯ ಶಾಸಕರನ್ನು ನೂತನ ಸಂಪುಟಕ್ಕೆ ಪರಿಗಣಿಸಲಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ವಿಜಯನಗರ, ಕೊಪ್ಪಳ, ಬೀದರ್ ಜಿಲ್ಲೆಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ.
2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾ-ತಿ, ಮ ತ, ಪಂ-ಥ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಸಚಿವ ಸ್ಥಾನಕ್ಕೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಬೆಂಗಳೂರು ಭಾಗದ 7 ಮಂದಿ ಶಾಸಕರಿಗೆ ಸಚಿವರಾಗುವ ಅವಕಾಶ ದಕ್ಕಿದೆ, ಈ ಮೂಲಕ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ.
ಹಿರಿಯ ಶಾಸಕರಾದ ಆರ್. ಅಶೋಕ, ವಿ. ಸೋಮಣ್ಣ ಸಚಿವರಾಗಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಕೆ. ಗೋಪಾಲಯ್ಯ, ಬೈರತಿ ಬಸವರಾಜ, ಡಾ. ಸಿ. ಎನ್. ಅಶ್ವತ್ಥ ನಾರಾಯಣ ಬೊಮ್ಮಾಯಿ ಸಂಪುಟದಲ್ಲಿಯೂ ಮುಂದುವರೆಯಲಿದ್ದಾರೆ.