“ಡುಮ್ಮ ನಿನ್ನಿಂದ ಏನೂ ಆಗಲ್ಲ” ಅಂತ ಬಲವಂತವಾಗಿ ಅಥ್ಲೀಟ್‌ಗೆ ಕಳಿಸಿದ್ದ ತಂದೆ ತಾಯಿಗೆ ಉಡುಗೊರೆ ಕೊಟ್ಟ ನೀರಜ್ ಚೋಪ್ರಾಗೆ ಭರ್ಜರಿ ಗಿಫ್ಟ್ ಘೊಷಿಸಿದ ಆನಂದ್ ಮಹೀಂದ್ರಾ

in Kannada News/News/ಕ್ರೀಡೆ 602 views

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿರುವ ಜಾವೆಲಿನ್ ಥ್ರೋ ಆಟಗಾರ ನೀರಜ್ ಅವರಿಗೆ ದೇಶದಾದ್ಯಂತ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ. ಕಳೆದ 13 ವರ್ಷಗಳ ನಂತರ ಭಾರತಕ್ಕೆ ಈ ಆಟದಲ್ಲಿ ಚಿನ್ನದ ಪದಕ ಸಿಕ್ಕಿದೆ. ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನ ಅವರನ್ನು ಅಭಿನಂದಿಸುತ್ತಿದ್ದಾರೆ.

Advertisement

23 ವರ್ಷದ ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದು ಭಾರತಕ್ಕೆ ಮೊದಲ ಚಿನ್ನದ ಪದಕವಾಗಿದ್ದು, ಇಲ್ಲಿಯವರೆಗೆ 7 ಪದಕಗಳನ್ನು ಭಾರತೀಯ ಆಟಗಾರರು ಆಟದಲ್ಲಿ ಗೆದ್ದಿದ್ದಾರೆ. ಸ್ವಲ್ಪ ಸಮಯದ ಹಿಂದೆ, ಭಜರಂಗ್ ಪುನಿಯಾ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಹಾಗೆಯೇ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪರ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ತಮ್ಮ ಎರಡನೇ ಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅಂತಿಮವಾಗಿ ಚಿನ್ನದ ಪದಕ ತಮ್ಮದಾಗಿಸಿದರು.

ಚಿನ್ನದ ಬೇ ಟೆ ಯಾಡಿರುವ ಚೋಪ್ರಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರು ಶುಭ ಕೋರಿದ್ದಾರೆ. ಇದೀಗ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ವಿಶೇಷ ಉಡುಗೊರೆಯೊಂದನ್ನು ಘೋಷಿಸಿದ್ದಾರೆ.

ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಅವರು ಚಿನ್ನದ ಹುಡುಗ ನೀರಜನಿಗೆ ಭರ್ಜರಿ ಉಡುಗೊರೆ ನೀಡುವುದಾಗಿ ಹೇಳಿಕೊಂಡಿದ್ದಾರೆ. ಮಹೀಂದ್ರಾ XUV 700 ಕಾರು ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ನೀರಜ್ ಉಡುಗೊರೆ ನೀಡಲು XUV 700 ಕಾರು ಸಿದ್ಧಪಡಿಸಿ ಎಂದು ತಮ್ಮ ತಂಡಕ್ಕೆ ಸೂಚಿಸಿದ್ದಾರೆ.

ಇನ್ನು ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಹರಿಯಾಣ ಸರ್ಕಾರ ನಗದು ಬಹುಮಾನವನ್ನು ಘೋಷಿಸಿತು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಒಲಿಂಪಿಕ್ಸ್​ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾ ಅವರಿಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.

ಪುರುಷರ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದು ಕೊಂಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದರು. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದ ನೀರಜ್, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಜಾವೆಲಿನ್ ಎಸೆದರು. ಆದರೆ ಮೂರನೇ ಪ್ರಯತ್ನದಲ್ಲಿ ನೀರಜ್ 76.79 ಮೀಟರ್ ಎಸೆದರು.

ನಾಲ್ಕನೇ ಸುತ್ತಿನಲ್ಲಿ ಫೌಲ್ ಆಯಿತು. ಐದನೇ ಸುತ್ತು ಕೂಡಾ ಫೌಲ್ ಆಯಿತು. ಅಂತಿಮ ಸುತ್ತಿನವರೆಗೂ ಗರಿಷ್ಠ ದೂರ ಕಾಪಾಡಿದ ನೀರಜ್ ಚೋಪ್ರಾ ಜಯಶಾಲಿಯಾದರು.

ಚಿಕ್ಕವನಿದ್ದಾಗ ಗೇಲಿ ಮಾಡಿದ್ದ ಜನ

11ನೇ ವಯಸ್ಸಿನಲ್ಲಿ, ನೀರಜ್ ಚೋಪ್ರಾ 80 ಕೆಜಿ ತೂಕ ಹೊಂದಿದ್ದರು. ಆಗ ಅವರು ಗ್ರಾಮದಲ್ಲಿ ಕುರ್ತಾ ಧರಿಸಿ ಹೊರಬಂದಾಗ, ಮಕ್ಕಳು ಆತನನ್ನು ಸರ್ಪಂಚ್ ಎಂದು ಕರೆದು ಕೀಟಲೆ ಮಾಡುತ್ತಿದ್ದರು. ಬಾಲ್ಯದಲ್ಲಿ ಹೊಟ್ಟೆ ಹಾಗೂ ಕೊಬ್ಬು ಇರುವ ಅದೇ ಸರ್ಪಂಚ್ ಇಂದು ವಿಶ್ವದ ಅತ್ಯುತ್ತಮ ಜಾವೆಲಿನ್ ಎಸೆಯುವವರಾಗಿದ್ದಾರೆ.

ಹರಿಯಾಣದಲ್ಲಿ ಬೆಳೆದ ನೀರಜ್‌ಗೆ ಹಾಲು ಮತ್ತು ತುಪ್ಪದ ಬಗ್ಗೆ ಒಲವಿದ್ದ ನಿರಜ್, ತೂಕವು ನಿಯಂತ್ರಿಸಲಾಗದಂತಾದಾಗ, ಕುಟುಂಬದ ಸದಸ್ಯರು ಅವರನ್ನು ಬಲವಂತವಾಗಿ ಈ ಕ್ಷೇತ್ರಕ್ಕೆ ಕಳುಹಿಸಿದರು. ನೀರಜ್ ಫಿಟ್ನೆಸ್ ಪಡೆಯಲು ಪಾಣಿಪತ್‌ನ ಶಿವಾಜಿ ಕ್ರೀಡಾಂಗಣವನ್ನು ತಲುಪಿದಾಗ, ಅವರು ಹೊಸ ಹವ್ಯಾಸದೊಂದಿಗೆ ಮನೆಗೆ ಬಂದ ಆತ ಹಿರಿಯ ಹುಡುಗರು ಮೈದಾನದಲ್ಲಿ ಜಾವೆಲಿನ್ ಎಸೆಯುವುದನ್ನು ನೋಡಿದಾಗ, ನನ್ನ ಮನಸ್ಸಿನಲ್ಲಿ ಆಸೆ ಹುಟ್ಟಿತು ಎಂದರು. ಅವರ ಫಿಟ್ನೆಸ್ ಸುಧಾರಿಸಿದಾಗ, ಅವರು ಜಾವೆಲಿನ್ ನಲ್ಲಿ ತಮ್ಮ ಕೈಯನ್ನು ಪ್ರಯತ್ನಿಸಿದರು. ಹಿರಿಯರು ಅವರ ಶಕ್ತಿ ಮತ್ತು ಸಹಜ ಪ್ರತಿಭೆಯನ್ನು ಇಷ್ಟಪಟ್ಟಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಭಿನವ್ ಬಿಂದ್ರಾ ನಂತರ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ. 23 ವರ್ಷದ ನೀರಜ್‌ಗಿಂತ ಮೊದಲು ಈ ವರ್ಷ ಭಾರತ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ ಪದಕವನ್ನು ಗೆದ್ದಿರಲಿಲ್ಲ.

Advertisement
Share this on...