ಗರ್ಲ್ ಫ್ರೆಂಡ್ ಹಾಗು ಮದುವೆಯ ಬಗ್ಗೆ ಖ್ಯಾತ ಆಟಗಾರರೊಬ್ಬರು ಪ್ರಶ್ನಿಸಿದಾಗ ನಾಚಿ ನೀರಾದ ನೀರಜ್ ಕೊಟ್ಟ ಉತ್ತರವೇನಿತ್ತು ನೋಡಿ

in Kannada News/News/ಕ್ರೀಡೆ 121 views

ಟೋಕಿಯೋ ಒಲಿಂಪಿಕ್ಸ್​​ನ

Advertisement
 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಭಾರತೀಯ ಅಥ್ಲೀಟ್ ನೀರಜ್ ಚೋಪ್ರ ಮದುವೆ ವಿಚಾರವಾಗಿ ಮಾತನಾಡಿದ್ದಾರೆ.

1983 ವಿಶ್ವಕಪ್ ಕ್ರಿಕೆಟ್ ವಿಜೇತ ತಂಡದ ನಾಯಕನಾಗಿದ್ದ ಕಪಿಲ್, ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ನೀರಜ್ ಮದುವೆ ಯೋಜನೆ ಬಗ್ಗೆ ಮಾತನಾಡಿದ್ದಾರೆ. ‘ನೀವು ಮದುವೆ ವಿಚಾರವಾಗಿ ಒತ್ತಡಗಳನ್ನು ಹೇಗೆ ಎದುರಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ’. ಇದಕ್ಕೆ ಪ್ರತಿಕ್ರಿಯೆ ನೀಡಿರುವ 23 ವರ್ಷದ ನೀರಜ್, ‘ನನ್ನ ಸಂಪೂರ್ಣ ಗಮನವನ್ನು ಕ್ರೀಡೆ ಕಡೆ ಹರಿಸಿದ್ದೇನೆ. ಮದುವೆ ಹಾಗೂ ಇತರೆ ವಿಚಾರಗಳು ಸರಿಯಾದ ಸಮಯಕ್ಕೆ ನಡೆಯುತ್ತದೆ ಎಂದು ನಾಚಿ ನೀರಾಗಿ ಉತ್ತರಿಸಿದ್ದಾರೆ’.

ಕ್ರೀಡೆಯಲ್ಲಿಯೇ ನನ್ನ ಸಂಪೂರ್ಣ ಗಮನ ಇರಲಿದೆ. ಇದಕ್ಕಾಗಿ ನಾನು ಸಾಕಷ್ಟು ಕಠಿಣ ಪರಿಶ್ರಮ ಪಡುತ್ತೇನೆ ಎಂದು ತಮ್ಮ ಮುಂದಿನ ಗುರಿ ಬಗ್ಗೆ ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಎಸೆದು ಇತಿಹಾಸ ಸೃಷ್ಟಿಸಿದರು. ಈ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ಚಿನ್ನ ಗೆಲ್ಲುತ್ತಲೇ ಅಪ್ಪನ ಜೊತೆ ಮಾತನಾಡುತ್ತ ನೀರಜ್ ಹೇಳಿದ್ದೇನು ನೋಡಿ

ಟೋಕ್ಯೋ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತದ ಆಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ, 2008ರ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ.

ಚಿನ್ನದ ಪದಕ ಗೆಲ್ಲುತ್ತಲೇ ಭಾರೀ ಖುಷಿಯಲ್ಲಿ ತಮ್ಮ ತಂದೆಯೊಂದಿಗೆ ಮಾತನಾಡಿದ ಚೋಪ್ರಾ, “ನನ್ನ ಗುರುತು ಸ್ಥಾಪಿಸಿರುವೆ ಅಪ್ಪ,” ಎಂದು ಅವರಿಗೆ ತಿಳಿಸಿದ್ದಾರೆ.

ಮಗನ ಸಾಧನೆ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ಚೋಪ್ರಾ ತಂದೆ ಸತೀಶ್ ಕುಮಾರ್‌, “ನನ್ನ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನನಗೆ ಅತೀವ ಸಂತಸವಾಗಿದೆ. ನನ್ನ ಮಗನ ಪರಿಶ್ರಮದಿಂದ ದೇಶದ ಕನಸೊಂದು ಈಡೇರಿದೆ ಎಂದು ತಿಳಿಯಲು ನನಗೆ ಬಹಳ ಖುಷಿಯಾಗುತ್ತದೆ. ನಾವು ರೈತ ಕುಟುಂಬದವರು. ರೈತನಿಗೆ ತನ್ನ ಇಚ್ಛೆಯಂತೆ ಬದುಕಲು ಸಾಕಷ್ಟು ದುಡಿಮೆ ಇರುವುದಿಲ್ಲ. ಸೌಲಭ್ಯಗಳ ಕೊರತೆಯೊಂದಿಗೆ ಬದುಕುತ್ತಿರುವ ಅನೇಕ ಮಂದಿ ಮೂಲ ಸೌಕರ್ಯಗಳ ಪ್ರಾಮುಖ್ಯತೆ ಅರಿತು, ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಧೈರ್ಯ ಹೊಂದಿರುತ್ತಾರೆ ಎಂದು ನಂಬಿದ್ದೇನೆ,” ಎಂದಿದ್ದಾರೆ.

“ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿ ನೋಡಿಕೊಳ್ಳದೇ ಇದ್ದಲ್ಲಿ ನಾವು ಯಶಸ್ಸು ಸಾಧಿಸುವುದು ಸಾಧ್ಯವಿಲ್ಲ ಎಂದು ನಂಬಿದ್ದೇನೆ. ನೀರಜ್ ಸಹ ಅದನ್ನೇ ಮಾಡಿದ್ದಾನೆ. ನಾವು ನಾಲ್ವರು ಸಹೋದರರ ಕುಟುಂಬ. ನಮ್ಮ ಕುಟುಂಬದಲ್ಲಿ ಎಲ್ಲರೂ ಸಹ ನೀರಜ್‌ನನ್ನು ಚೆನ್ನಾಗಿ ನೋಡಿಕೊಂಡು ಆತ ಒಬ್ಬ ಒಳ್ಳೆಯ ಕ್ರೀಡಾಪಟು ಆಗಲು ಎಲ್ಲರೂ ಬೆಂಬಲಿಸಿದ್ದಾರೆ. ಆತನ ಯಶಸ್ಸಿಗೆ ಇಡೀ ಗ್ರಾಮವೇ ಪ್ರಾರ್ಥಿಸಿದೆ. ಚಿನ್ನ ಗೆಲ್ಲುವ ಸಾಮರ್ಥ್ಯ ನಮ್ಮ ಮಗನಲ್ಲಿದೆ ಎಂದು ನಾವೆಲ್ಲಾ ನಂಬಿದ್ದೆವು, ಇಂದು ಆತ ಅದನ್ನು ಸಾಬೀತುಪಡಿಸಿದ್ದಾನೆ!” ಎಂದು ಸತೀಶ್ ಮಗನ ಸಾಧನೆಯ ಬಗ್ಗೆ ಮಾತನಾಡಿದ್ದಾರೆ.

Advertisement
Share this on...