ಆನಂದ್ ಸಿಂಗ್ ಸಮಸ್ಯೆ ಬಗೆಹರಿಯುತ್ತಲೇ ಸಿಡಿದೆದ್ದ ಮತ್ತೊಬ್ಬ ಬಿಜೆಪಿ ಶಾಸಕ

in Kannada News/News 68 views

ದೇವದುರ್ಗ ಶಾಸಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಹಿರಿಯ ನಾಯಕರ ವಿರುದ್ಧ ಕಿಡಿಕಾರಿದ್ದು,  ಪರಿಶಿಷ್ಟ ಜಾತಿಗೆ ಮೂರು ಸ್ಥಾನ ಕೊಡಿಸಬೇಕಾದ ಹಿರಿಯರು ಮೌನವಾಗಿದ್ದಾರೆ‌, ರಾಜಕೀಯವಾಗಿ ಶಾಸಕನ ಮತವನ್ನು ಬಳಿಸಿಕೊಳ್ಳುತ್ತಿದ್ದಾರೆ ವಿನಃ ಶಾಸಕರಿಗೆ ಸ್ಥಾನ ಮಾನ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.

Advertisement

13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲ. 6 ಜಿಲ್ಲೆಗಳಿಗೆ ಎರಡೆರಡು ಸಚಿವ ಸಂಪುಟ ಸ್ಥಾನಮಾನ‌ ಕೊಟ್ಟಿದ್ದಾರೆ. ಕೆವಲ 17 ಜಿಲ್ಲೆಗೆ ಮಾತ್ರ ಸಂಪುಟ ವಿಸ್ತರಣೆ ಸೀಮಿತವಾಗಿದೆ. ಇಡೀ ಸಾಮಾಜಿಕ‌ ನ್ಯಾಯ ಜೊತೆಗೆ ಪ್ರಾದೇಶಿಕವಾರು ಸಮತೋಲನ ಮಾಡುವ ಕೆಲಸ ಸಿಎಂ ಮಾಡಬೇಕು, ಹೈ-ಕ ಭಾಗದಲ್ಲಿ 17-18ಶಾಸಕರಿದೀವಿ, ಭಾರೀ ಅನ್ಯಾಯ ಆಗಿದೆ, ಈ ಅನ್ಯಾಯವನ್ನು ಗುರುತಿಸಲು ರಾಜ್ಯದ ಹಿರಿಯರು ವಿಫಲರಾಗಿದ್ದಾರೆ. ರಾಯಚೂರು ಬಗ್ಗೆ ಮಾತಾಡದೇ ಇರೋ ಹಿರಿಯ ನಾಯಕರ ಬಗ್ಗೆ ನಮಗೆ ಬೇಸರ ಇದೆ.

ಪರಿಶಿಷ್ಟ ಜಾತಿಗೆ ಮೂರು ಸ್ಥಾನ ಕೊಡಿಸಬೇಕಾದ ಹಿರಿಯರು ಮೌನವಾಗಿದ್ದಾರೆ‌, ರಾಜಕೀಯವಾಗಿ ಶಾಸಕನ ಮತವನ್ನು ಬಳಿಸಿಕೊಳ್ಳುತ್ತಿದ್ದಾರೆ ವಿನಃ ಶಾಸಕರಿಗೆ ಸ್ಥಾನ ಮಾನ ಕೊಡುತ್ತಿಲ್ಲ. ಹಿರಿಯರ ತುಳಿತಕ್ಕೆ ನಾವು ಒಳಗಾಗಿದ್ದೇವೆ, ಇದು ನಮಗೆ ಬಹಳ ನೋವಾಗಿದೆ. ಪಕ್ಷದ ರಾಷ್ಟ್ರದ ನಾಯಕರು ನಮ ಹೆಸರನ್ನು ಕೊಟ್ಟು ಸಚಿವರನ್ನಾಗಿ ಮಾಡಿ ಎಂದು ಸೂಚನೆ ನೀಡಿದ್ರೂ, ರಾಷ್ಟ್ರದ ನಾಯಕರು ಸೂಚನೆಯನ್ನ ರಾಜ್ಯದ ನಾಯಕರು ತಡೆ ಹಿಡಿದ್ರೂ. ಸ್ಪಷ್ಟವಾದ ಮಾಹಿತಿಯನ್ನ  7-8 ದಿನ ಹಿಂದೆ ಸಂಗ್ರಹ ಮಾಡಿದ್ದೇನೆ. BSY ಜೊತೆ ನಾವು ಪ್ರಾಮಾಣಿಕವಾಗಿದ್ದು, ಪಕ್ಷವನ್ನು ಎಂದೂ ಕೂಡ ಬಿಟ್ಟು ಹೋಗಿಲ್ಲ, ಪಕ್ಷದಲ್ಲಿ ಒಬ್ಬ ಮಗನಾಗಿ ಕೆಲಸ ಮಾಡಿದ್ದೇನೆ, ಕೆಲ ಜನ ಸೇರಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಅದನ್ನ ನಿಲ್ಲಿಸಬೇಕು ಸಾಮಾಜಿಕ ನ್ಯಾಯವನ್ನು ಒದಗಿಸಬೇಕು,  ಈ ಭಾಗಕ್ಕೆ, ಈ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಎಂದು ದೇವದುರ್ಗ ಶಾಸಕ ಶಿವನಗೌಡ  ಅಸಮಧಾನ ವ್ಯಕ್ತ ಪಡಿಸಿದ್ದು, ಹಿರಿಯ ನಾಯಕರ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ: ‘ನಾನು ನಾಲಿಗೆ ಸರಿ ಇದ್ದಿದ್ದಕ್ಕೇ ರಾಜ್ಯದಲ್ಲಿ ಇಷ್ಟೆಲ್ಲಾ ಬದಲಾವಣೆ ಆದವು’: ಯತ್ನಾಳ್

‘ಪಕ್ಷದೊಳಗೆ ಯಾರೂ ನನ್ನನ್ನು ಚಿವುಟಿಲ್ಲ. ಯಾರಾದರೂ ಚಿವುಟಲು ಬಂದರೆ ಕಪಾಳಕ್ಕೆ ಹೊಡೆಯುವ ಮಗ ನಾನು. ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಸಿ.ಎಂ ಹುದ್ದೆಯಿಂದ ಕೆಳಗಿಳಿದರು. ಅವರಿಗೆ ವಿರುದ್ಧವಾಗಿದ್ದಕ್ಕೆ ನಾನು ಸಚಿವನಾಗಲಿಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡಪಾಟೀಲ ಯತ್ನಾಳ ಹೇಳಿದರು.

ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಪಂಚಮಸಾಲಿ ಮೀಸಲಾತಿ ಚಳವಳಿಗಾರರ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ನಾಲಿಗೆ ಸರಿ ಇಲ್ಲ. ಅದಕ್ಕಾಗಿ ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಲವರು ಹೇಳುತ್ತಾರೆ. ನಾಲಿಗೆ ಸರಿ ಇದ್ದಿದ್ದಕ್ಕಾಗಿಯೇ ರಾಜ್ಯದಲ್ಲಿ ಇಷ್ಟೆಲ್ಲಾ ಬದಲಾವಣೆಗಳಾಗಿವೆ’ ಎಂದರು.

‘ಯಡಿಯೂರಪ್ಪ ಅವರ ಷರತ್ತು ಮತ್ತು ಒತ್ತಡವೇ ಬೊಮ್ಮಾಯಿ ಸಿ.ಎಂ ಆಗಲು ಮಾನದಂಡ. ಹಾಗಂತ ಅವರು, ಬಿಎಸ್‌ವೈ ನೆರಳು ಎಂದು ನಿರ್ಣಯಿಸಲಾಗದು. ನಾಯಕ ವೈಯಕ್ತಿಕ ಛಾಪು ಇಟ್ಟುಕೊಳ್ಳಬೇಕು. ಬೊಮ್ಮಾಯಿ ಬದಲಾಗಲೇಬೇಕು. ಮೇಲಿನವರ ಮಾತು ಕೇಳಲೇಬೇಕು. ಅದರ ಭಾಗವಾಗಿಯೇ ಯಡಿಯೂರಪ್ಪ ಅವರು ಇದ್ದಾಗಿನ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ’ ಎಂದು ಹೇಳಿದರು.

‘ಖಾತೆ ಬದಲಾಯಿಸಿ ಹಾಗೂ ನಮ್ಮವರನ್ನು ಸಚಿವರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಬಾರದು. ರಾಜ್ಯದಲ್ಲಿ ಪ್ರವಾಹ ಸೇರಿದಂತೆ ಹಲವು ಸಮಸ್ಯೆಗಳಿವೆ. ಹಿಂದಿನ ಸಿ.ಎಂ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಕೊಡುತ್ತೇನೆ ಎಂದು, ₹1 ಲಕ್ಷ ಕೊಟ್ಟು ಕೈ ತೊಳೆದುಕೊಂಡರು. ಇವುಗಳ ಹಿಂದಿರುವ ಸೂತ್ರದಾರರು ಮಗು ಚಿವುಟಿ, ತೊಟ್ಟಿಲನ್ನೂ ತೂಗುತ್ತಾರೆ. ಬಳಿಕ, ಅರವಿಂದ ಬೆಲ್ಲದ ಮತ್ತು ನನ್ನತ್ತ ಕೈ ತೋರಿಸುತ್ತಾರೆ. ರಮೇಶ ಜಾರಕಿಹೊಳಿ ಅವರನ್ನೂ ಹೀಗೆಯೇ ಸಿಲುಕಿಸಿದರು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement
Share this on...