ಆನಂದ್ ಸಿಂಗ್ ಸಮೇತ ಈ ಎಲ್ಲ ಶಾಸಕರಿಗೂ ಖಡಕ್ ವಾರ್ನಿಗ್ ಕೊಟ್ಟ ಬಿಜೆಪಿ ಹೈಕಮಾಂಡ್: ಬೆಚ್ಚಿಬಿದ್ದ ಅತೃಪ್ತ ಶಾಸಕರು

in Kannada News/News 326 views

ಹೊಸಪೇಟೆ:

Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ್ ಸೇರಿದಂತೆ, ಅಸಮಾಧಾನಿತ ಯಾರೂ ಕೂಡ ಅಸಮಾಧಾನ ತೋಡಿಕೊಳ್ಳಲು ದೇಹಲಿಗೆ ಬರಬೇಕಾದ ಅಗತ್ಯವಿಲ್ಲಾ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ನಿರ್ದೇಶನ ನೀಡಿದೆಯಂತೆ.

ರಾಜ್ಯದಲ್ಲಿ ಖಾತೆ ಹಂಚಿಕೆಯ ಖ್ಯಾತೆ ತಾರಕಕ್ಕೇರುತ್ತಿದ್ದಂತೆ ಪದೆ ಪದೆ ಕರೆಮಾಡಿ ಬೆಂಗಳೂರಿಗೆ ಸಚಿವ ಆನಂದಸಿಂಗ್ ಸೇರಿದಂತೆ ಎಂ.ಟಿ.ಬಿ.ನಾಗರಾಜ್, ಎಂ.ಶಂಕರ್ ಮುಖ್ಯಮಂತ್ರಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿದ್ದು ನಂತರ ಸ್ವಲ್ಪಮಟ್ಟಿನ ಸಮಾಧಾನವಾದಂತೆ ಕಂಡುಬಂದು ಒಟ್ಟುಸೇರಿ ಹೇಳಿಕೆ ನೀಡಿದ್ದರೂ ಇದೇ ಆಗಸ್ಟ್ 15ರಂದು ದೆಹಲಿಗೆ ಹೋಗಿ ವರಿಷ್ಠರನ್ನು ಕಂಡು ಸಮಸ್ಯೆ ಬಹೆಹರಿಸುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ತಕ್ಷಣವೇ ಕಾರ್ಯಪ್ರವೃತ್ತರಾದ ದೆಹಲಿಯ ಹೈಕಮಾಂಡ ಮುಖ್ಯಮಂತ್ರಿಯಾದಿಯಾಗಿ ಯಾವುದೆ ಅಸಮಾಧಾನಿತ ಸಚಿವರು ಮತ್ತು ದೆಹಲಿಯಲ್ಲಿಯೇ ಮುಕ್ಕಾಂ ಹೂಡಿರುವ ಸಿ.ಪಿ.ಯೋಗೇಶ್ವರ ಸೇರಿದಂತೆ ರಾಜ್ಯದ ಯಾವುದೆ ನಾಯಕರು ಸಚಿವ ಸಂಪುಟ ರಾಜ್ಯದ ಆಂತರಿಕ ರಾಜಕೀಯ ಸಮಸ್ಯೆಗಳನ್ನು ದೆಹಲಿಗೆ ತರಬಾರದು,  ಒಂದುು ಸಾರಿ ನಿರ್ಧರಿಸಿದ ನಿರ್ದೇಶನದಂತೆ ಕಾರ್ಯನಿರ್ವಹಿಸುವುದು ಮತ್ತು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಅದರಂತೆ ನಡೆಯುವುದು ಮುಖ್ಯಮಂತ್ರಿಗಳ ಬಿಟ್ಟದ್ದು ಇದಕ್ಕಾಗಿ ಪದೆ ಪದೆ ಬಂದು ದೆಹಲಿಯಲ್ಲಿ ಕಾಯುವುದು ಸರಿಯಾದ ಕ್ರಮವಲ್ಲ.

ತಮಗೆ ನೀಡಿದ ಕೆಲಸದಲ್ಲಿ ಎಷ್ಟು ಪ್ರಾಮಾಣಿಕವಾಗಿ ಜನಸೇವೆ ಮಾಡಬಹುದು, ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಬೇಕು, ಆಮೂಲಕ ಹೈಕಮಾಂಡ್ ಮುಂದಿನ ದಿನಗಳಲ್ಲಿ ಅವರ ಸಾಮಥ್ಯಕ್ಕೆ ಅನುಗುಣವಾಗಿ ಕಾರ್ಯವೈಖರಿಯ ಮೌಲ್ಯಮಾಪನದ ಮೇಲೆ ಉತ್ತಮ ಜವಾಬ್ದಾರಿಗಳನ್ನು ಪ್ರತಿಯೊಬ್ಬರಿಗೂ ವಹಿಸಲಿದೆ ಎಂದು ತಿಳಿಸಿದ್ದಾರೆ, ರಾಷ್ಟ್ರೀಯ, ಅಂತರ್ ರಾಜ್ಯ ವಿಚಾರವಾಗಿ ಬರುವುದಾದರೆ ಪೂರ್ವಾನುಮತಿಯೊಂದಿಗೆ ದೆಹಲಿಗೆ ಬರಬಹುದು ಎಂದು ರಾಜ್ಯದ ಮುಖಂಡರುಗಳಿಗೆ ಬಿಜೆಪಿ ಉನ್ನತ ನಾಯಕರು ಎಚ್ಚರಿಕೆ ನೀಡಿದ್ದಾರಂತೆ.

16ಕ್ಕೆ ರಾಜ್ಯ ಉಸ್ತುವರಿ ಅರುಣ್‍ಸಿಂಗ್ ರಾಜ್ಯಕ್ಕೆ
ಆದಾಗ್ಗೂ ರಾಜ್ಯ ಬಿಜೆಪಿ ಹೈಕಮಾಂಡ್ ಪ್ರತಿನಿಧಿಯಾಗಿ ರಾಜ್ಯ ಉಸ್ತೂವಾರಿ ವಹಿಸಿರುವ ಅರುಣ್‍ಸಿಂಗ್ ಇದೇ 16ರಂದು ರಾಜ್ಯ ಪ್ರವಾಸ ಮಾಡಲಿದ್ದು ಎರಡು ದಿನ ಬೆಂಗಳೂರಿನಲ್ಲಿಯೇ ಇರಲಿದ್ದಾರೆ, ಎಲ್ಲಾ ಅಸಮಾಧಾನಿತರು, ಸಚಿವ ಸ್ಥಾನ ಆಕಾಂಕ್ಷಿಗಳು ಸೇರಿದಂತೆ ರಾಜ್ಯಾಧ್ಯಕ್ಷರು ಹಾಗೂ ಮುಖಂಡರೊಂದಿಗೆ ಚೆರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಎಲ್ಲರೂ ರಾಗಬದಲಿಸುತ್ತಿದ್ದು ವಿಷಯವನ್ನು ತಮಗೆ ಬೇಕಾದಂತೆ ಬದಲಾಯಿಸುತ್ತೀದ್ದಾರೆ.

ವರಸೆ ಬದಲಿಸಿದ ಸಚಿವ ಆನಂದಸಿಂಗ್
ನಾನು ನನ್ನ ಅಸಮಾಧಾನ ಸೇರಿದಂತೆ ಎಲ್ಲಾ ವಿಚಾರ ಮುಖ್ಯಮಂತ್ರಿಗಳಿಗೆ ಹೇಳಿರುವೆ. ಅವರು ಹೇಗೆ ಸಮಸ್ಯೆ ಬಗೆಹರಿಸುತ್ತಾರೆ ಕಾದು ನೋಡೋಣ ಎಂದು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೊಸಪೇಟೆಯಲ್ಲಿ ಹೇಳಿದರು.

ನಗರದ ಪಟೇಲ್‍ನಗರದ ಶ್ರೀವೇಣುಗೋಪಾಲಕೃಷ್ಣ ದೇಗುಲದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಮನವಿ ಏನಿದೆಯೋ ಅದನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೇರವಾಗಿಯೇ ಹೇಳಿರುವೆ. ಅವರು ಹೇಗೆ ಸಮಸ್ಯೆ ಬಗೆಹರಿಸುತ್ತಾರೆ ಕಾದು ನೋಡೋಣ. ನಾನು ದಿಲ್ಲಿಗೆ ಹೋಗುತ್ತೇನೆ. ವರಿಷ್ಠರನ್ನು ಭೇಟಿಯಾಗುವೆ ಎಂದು ಎಲ್ಲಿಯೂ ನಾನು ಹೇಳಿಲ್ಲ. ಆಗಸ್ಟ್ 15ರಂದು ಹೊಸಪೇಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಬೆಂಗಳೂರಿಗೆ ತೆರಳುವೆ” ಎಂದರು. ಮಾಜಿ ಸಿಎಂ ಯಡಿಯೂರಪ್ಪ ಅವರು ನಮ್ಮ ಹಿರಿಯ ನಾಯಕರು. ಅವರ ಆಶೀರ್ವಾದ ಪಡೆಯಲು ಭೇಟಿಯಾಗಿದ್ದೆ.

ಬಿಎಸ್‍ವೈ ಅವರ ಬಳಿ ಏನೂ ಮಾತನಾಡಿಲ್ಲ. ಸಿಎಂ ಬಳಿಯೇ ಮಾತನಾಡಿರುವೆ ಎಂದರು. ಯಡಿಯೂರಪ್ಪನವರು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಎಂದು ತಮ್ಮ ಹಿರಿತನದಿಂದ ಅನುಭವದ ಮಾತುಗಳನ್ನು ಹೇಳಿದ್ದಾರೆ. ನಾವು ಕೆಲವೊಮ್ಮೆ ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಂಡು ಬೀಡುತ್ತೇವೆ. ಹೀಗಾಗಿ ಅವರು ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಚಿವನಾಗುವ ಆಸೆಯೇ ಇಲ್ಲ, ಅದಕ್ಕಿಂತಲೂ ಹೆಚ್ಚಿದ್ದೇನೆ ಎಂದ ರಮೇಶ್ ಜಾರಕಿಹೊಳಿ

ಸಚಿವ ಸ್ಥಾನಕ್ಕಾಗಿ ಭಾರಿ ಕಸರತ್ತು ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಚಿವನಾಗುವ ಯಾವುದೇ ಆಸೆಯಿಲ್ಲ, ನಾನು ಮಂತ್ರಿ ಸ್ಥಾನಕ್ಕಿಂತ ಮೇಲಿದ್ದೇನೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ನನಗೆ ಸ್ಥಾನ ಸಿಗಲಿ, ಸಿಗದೇ ಇರಲಿ, ಆದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತೆಗೆದ ಖುಷಿ ಇದೆ. ಇಲ್ಲವಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಬಿಡುತ್ತಿತ್ತು ಈಗ ಸಂತೋಷವಾಗಿದ್ದೇನೆ ಎಂದಿದ್ದಾರೆ.

ಸಚಿವರಾಗಬೇಕು ಎಂಬ ಆಸೆ ಜಾರಕಿಹೊಳಿ ಕುಟುಂಬಕ್ಕೆ ಇಲ್ಲ. ಸರ್ಕಾರದಲ್ಲಿ ನಾವು ಸಚಿವರಾಗ್ತಿವೋ ಬಿಡ್ತಿವೋ ಆದರೆ ನಾನಿಗಲೂ ಮಂತ್ರಿಗಿಂತ ಹೆಚ್ಚಿದ್ದೇನೆ ಎಂದು ಹೇಳಿದರು.

ಶಾಸಕ ಸ್ಥಾನದಿಂದ ರಾಜೀನಾಮೆ ನೀರ್ಧಾರದಿಂದ ಹಿಂದೆ ಸರಿದಿದ್ದೇನೆ. ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ. ಆದರೆ ಸುತ್ತೂರು ಶ್ರೀಗಳು ಕೆಲ ಸಲಹೆ ಸೂಚನೆ ನೀಡಿದರು. ಹಾಗಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದೆ. ಕಾಂಗ್ರೆಸ್ ನವರು 20 ವರ್ಷ ನಡೆಸಿಕೊಂಡಷ್ಟು, ಬಿಜೆಪಿ ಹೈಕಮಾಂಡ್ 1 ವರ್ಷದಲ್ಲಿ ನಮ್ಮನ್ನು ನಡೆಸಿಕೊಂಡಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಬಿಜೆಪಿಯಲ್ಲಿ ಮುಂದುವರೆದಿದ್ದೇನೆ ಎಂದರು.

ಇದೇ ವೇಳೆ ಸಿಡಿ ಕೇಸ್ ಬಗ್ಗೆಯೂ ಮಾತನಾಡಿದ ಜಾರಕಿಹೊಳಿ, ಪ್ರಕರಣವನ್ನು ಇನ್ನೂ ಒಂದು ವರ್ಷ ಬೇಕಾದರೂ ಹಾಗೇ ಇಟ್ಟಿರಲಿ. ನನಗೇನೂ ಅವಸರವಿಲ್ಲ. ನನ್ನ ತಮ್ಮ ಇದ್ದಾನೆ, ಮಹೇಶ್ ಕುಮಟಳ್ಳಿ ಇದ್ದಾರೆ. ನಾನೇ ಸಚಿವನಾಗಬೇಕು ಎಂಬ ಆಸೆ ನನಗಿಲ್ಲ, ಈ ಅವಧಿಯಲ್ಲಿ ಸಚಿವರಾಗದಿದ್ದರೂ ಪರವಾಗಿಲ್ಲ. ಸಿಡಿ ಕೇಸ್ ಕೋರ್ಟ್ ನಲ್ಲಿರುವುದರಿಂದ ಈ ಬಗ್ಗೆ ಚರ್ಚೆ ಮಾಡಲ್ಲ ಎಂದು ಹೇಳಿದರು.

Advertisement
Share this on...