ತಾವು ಕೊಟ್ಟ ಮಾತಿನಂತೆ ಪಿವಿ ಸಿಂಧು ಆಸೆಯನ್ನ ಈಡೇರಿಸಿದ ಪ್ರಧಾನಿ ಮೋದಿ

in Kannada News/News/ಕ್ರೀಡೆ 106 views

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಶಟ್ಲರ್ ಪಿವಿ ಸಿಂಧು 21-13, 21-15 ಮೂಲಕ ಚೀನಾದ ಹೀ ಬಿಂಗ್ಜಿಯಾವೊ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದರು. ಭಾರತದಲ್ಲಿ ಪಿವಿ ಸಿಂಧು ಅವರ ಈ ಗೆಲುವಿಗೆ ಈಗ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಶಟ್ಲರ್ ಪಿವಿ ಸಿಂಧು ಅವರನ್ನು ಭಾರತದ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು. ಅದೇ ಸಮಯದಲ್ಲಿ, ಪಿವಿ ಸಿಂಧು ಬಗ್ಗೆ ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡುತ್ತ, “ಪಿವಿ ಸಿಂಧು ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಅವರು ಸ್ಥಿರತೆ, ಸಮರ್ಪಣೆ ಮತ್ತು ಶ್ರೇಷ್ಠತೆಯ ಹೊಸ ಮಾನದಂಡವನ್ನು ಸ್ಥಾಪಿಸಿದ್ದಾರೆ. ಭಾರತಕ್ಕೆ ಹೆಮ್ಮೆ ತಂದಿದ್ದಕ್ಕಾಗಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದಿದ್ದರು. ಅದೇ ಸಮಯದಲ್ಲಿ, ಸಿಂಧು ಅವರ ತಂದೆ ಪಿವಿ ರಮಣ ಅವರು ಪಿವಿ ಸಿಂಧು ಅವರಿಗೆ ಪಿಎಂ ಮೋದಿಯವರು ನೀಡಿದ ಭರವಸೆಯ ಬಗೆಗಿನ ಆಸಕ್ತಿದಾಯಕ ವಿಷಯವನ್ನೂ ಹಂಚಿಕೊಂಡಿದ್ದರು.

Advertisement

ಪಿವಿ ರಮಣ್ ಮಾತನಾಡುತ್ತ, “ಮಗಳು ಪಿವಿ ಸಿಂಧು ಪದಕ ಗೆದ್ದಿರುವುದನ್ನು ನೋಡಿ ನಮಗೆ ತುಂಬಾ ಖುಷಿಯಾಗಿದೆ. ನೀವು ಸಾಮಾನ್ಯವಾಗಿ ಮೂರನೆ ಅಥವಾ ನಾಲ್ಕನೇ ಸ್ಥಾನಕ್ಕಾಗಿ ಆಡುತ್ತಿರುವಾಗ ಅದು ತುಂಬಾ ನೋವಿನಿಂದ ಕೂಡಿದೆ. ಇಂತಹ ಪರಿಸ್ಥಿತಿಯಲ್ಲಿ, ನಾನು ನಿನ್ನೆ ಸಿಂಧು ಜೊತೆ ಮಾತನಾಡಿ ಆಕೆಯನ್ನು ಪ್ರೇರೇಪಿಸಿದೆ. ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಮೊದಲ ಮಹಿಳೆ ಅವಳು ಎಂದು ನನಗೆ ಸಂತೋಷವಾಗಿದೆ” ಎಂದಿದ್ದಾರೆ. ಅವರು ಮುಂದೆ ಮಾತನಾಡುತ್ತ, “ಪಿವಿ ಸಿಂಧು ಉತ್ತಮ ಕಮ್ ಬ್ಯಾಕ್ ಮಾಡಿದ್ದಾಳೆ ಮತ್ತು ಇಂದು ದೇಶಕ್ಕಾಗಿ ಪದಕ ಗೆದ್ದಿದ್ದಾಳೆ” ಎಂದಿದ್ದಾರೆ.

ಟೋಕ್ಯೋ ಒಲಿಂಪಿಕ್ಸ್ ಗೆ ಹೋಗೋಕೂ ಮುನ್ನ ಪ್ರಧಾನಿ ಮೋದಿಯವರು ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳ ಜೊತೆ ಮಾತನಾಡುತ್ತ ಅವರ ಆತ್ಮವಿಶ್ವಾಸ ಹೆಚ್ಚಿಸಿದ್ದರು. ಈಗ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಹಾಗು ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಜೊತೆ ಪ್ರಧಾನಿ ಮೋದಿ ಮಾತನಾಡುತ್ತ ಅವರಿಗೆ ಟೋಕ್ಯೋ ಒಲಿಂಪಿಕ್ಸ್ ಗಾಗಿ ಶುಭಾಷಯ ತಿಳಿಸಿದ್ದರು.‌ ಈ ಮಾತುಕತೆಯಲ್ಲಿ ಪ್ರಧಾನಿ ಮೋದಿಯವರು ಟೋಕ್ಯೋ ದಲ್ಲಿ ನೀವು ಗೆದ್ದು ಬಂದರೆ ನಿಮ್ಮ ಜೊತೆ ಐಸ್ ಕ್ರೀಂ ತಿನ್ನುತ್ತೇನೆ ಎಂದೂ ಹೇಳಿದ್ದರು.

ವಿಡಿಯೋ ನೋಡಿ

ಐಸ್ ಕ್ರೀಂ ತಿನ್ನುವ ವಿಷಯದ ಬಗ್ಗೆ ಖುದ್ದು ಪ್ರಧಾನಿ ಮೋದಿಯವರೇ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಿವಿ ಸಿಂಧು ತಂದೆ, “ಕ್ರೀಡೆಯಲ್ಲಿ ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ಪಿವಿ ಸಿಂಧು ನಾವು ಅಭ್ಯಾಸದ ಸಮಯದಲ್ಲಿ ಐಸ್ ಕ್ರೀಂ ತಿನ್ನುವುದನ್ನು ತಡೆದಿದ್ದೆವು. ಹಾಗಾಗಿ ಸಿಂಧು ಐಸ್ ಕ್ರೀಂ ತಿನ್ನುವುದನ್ನು ತಡೆಯಲಾಗಿತ್ತು. ಪಿವಿ ಸಿಂಧು ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಕಂಚಿನ ಪದಕ ಗೆದ್ದಿದ್ದಾರೆ, ಈ ಸಂತೋಷದ ಸಂದರ್ಭದಲ್ಲಿ, ಪಿಎಂ ಮೋದಿಯವರು ತಮ್ಮ ಭರವಸೆಯನ್ನು ಈಡೇರಿಸುತ್ತಾರೆ” ಎಂದು ಹೇಳಿದ್ದರು.

ಇದೀಗ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ತಂದಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಜೊತೆಗೆ ಪ್ರಧಾನಿ ಮೋದಿಯವರು ಐಸ್ ಕ್ರಿಮ್ ಸವಿದಿದ್ದಾರೆ. ಈ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಟೊಕಿಯೋ ಒಲಂಪಿಕ್ಸ್ ನಿಂದ ಹಿಂತಿರುಗಿದ ಬಳಿಕ ಸಿಂಧು ಜೊತೆಗೆ ಐಸ್ ಕ್ರೀಂ ತಿನ್ನುವುದಾಗಿ ಪ್ರಧಾನಿ ಮಾತು ನೀಡಿದ್ದರು. ಅದರಂತೆ ಇಂದು(ಆ.16) ತಮ್ಮ ನಿವಾಸದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಆತಿಥ್ಯ ನೀಡಿ, ಸಿಂಧು ಜೊತೆಗೆ ಐಸ್ ಕ್ರೀಂ ಸವಿದಿದ್ದಾರೆ.

ಪ್ರಧಾನಿ ಮೋದಿಯವರು ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಎಂದು ಕ್ರೀಡಾಪಟುಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಅಭಿನಂದಿಸುವ ಮೂಲಕ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದರು.

ಜುಲೈ ತಿಂಗಳಲ್ಲಿ ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಕ್ರೀಡಾಪಟುಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನಿ, ರಿಯೋ ಒಲಂಪಿಕ್ಸ್ ಮೊದಲು ಪಿವಿ ಸಿಂಧು ಜೊತೆ ಐಸ್ ಕ್ರೀಂ ತಿನ್ನುವುದನ್ನು ಏಕೆ ತಡೆಹಿಡಿಯಲಾಗಿತ್ತು ಎಂಬುದನ್ನು ಹೇಳಿದ್ದ ಮೋದಿ, ಈ ಬಾರಿಯೂ ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಶ್ರಮ ಪಟ್ಟು ಆಟವಾಡಿ, ನೀವು ಮತ್ತೊಮ್ಮೆ ಯಶಸ್ವಿಯಾಗುತ್ತೀರಿ ಎಂಬ ವಿಶ್ವಾಸ ನನಗಿದ್ದು, ನೀವೆಲ್ಲರೂ ಒಲಿಂಪಿಕ್ಸ್‌ನಿಂದ ಹಿಂತಿರುಗಿದಾಗ, ನಿಮ್ಮೊಂದಿಗೆ ಐಸ್ ಕ್ರೀಂ ಸೇವಿಸುವುದಾಗಿ ಮೋದಿ ಹೇಳಿದ್ದರು. ಅದೇ ರೀತಿಯಾಗಿ ಸೋಮವಾರ ಅವರೊಂದಿಗೆ ಐಸ್ ಕ್ರೀಂ ಸವಿದು ಅಭಿನಂದಿಸಿದರು.

Advertisement
Share this on...