ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ, ಮೋದಿ ಸರ್ಕಾರ ಈ ಕೆಲಸ ಮಾಡಲಿ ತಮ್ಮ ಅಭ್ಯಂತರವಿಲ್ಲ ಎಂದ ತಾಲಿಬಾನ್: ಏನದು ನೋಡಿ

in Kannada News/News 728 views

ನವದೆಹಲಿ: ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿರುವ ತಾಲಿಬಾನ್, ಭಾರತ ಬಯಸುವುದಾದರೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ಅದರ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.

Advertisement

ಯಾರ ವಿ ರು ದ್ಧ ವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ. ಇದು ಸ್ಪಷ್ಟ, ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಯೋಜನೆಗಳನ್ನು, ನಿರ್ಮಾಣಗಳನ್ನು ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ. ಭಾರತ ಬಯಸುವುದಾದರೆ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಯೋಜನೆಗಳು ಜನರ ಪರವಾಗಿದೆ ಎಂದು ವಕ್ತಾರ ಶಹೀನ್ ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ದುವಿನಲ್ಲಿ ಹೇಳಿದ್ದಾರೆ.

ಕಳೆದ ಸೋಮವಾರ ಅಫ್ಘಾನಿಸ್ತಾನವನ್ನು ತಾಲಿಬಾನೀಯರು ವ ಶ ಪ ಡಿ ಸಿ ಕೊಂಡ ನಂತರ ಭಾರತ ಬಗ್ಗೆ ನೀಡುತ್ತಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ.

ತಾಲಿಬಾನ್ ಉ ಗ್ರ ರೊಂದಿಗೆ ಮಾತುಕತೆ, ಸಂವಹನಕ್ಕೆ ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಸೂಚನೆ ನೀಡಿದ್ದರೂ ಕೂಡ ತಾಲಿಬಾನ್ ಒಂದು ಅಧಿಕೃತ ಸಂಘಟನೆಯಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ವೃತ್ತಿಪರರನ್ನು ಭಾರತ ಇತ್ತೀಚೆಗೆ ಹಿಂದಕ್ಕೆ ಕರೆಸಿಕೊಂಡಿತ್ತು.

ಈ ಯು ದ್ಧ ಪೀ ಡಿ ತ ಅಫ್ಘಾನಿಸ್ತಾನದಲ್ಲಿ ಭಾರತ ಹೂಡಿಕೆ ಮಾಡಿರುವ ಮೊತ್ತ 3 ಬಿಲಿಯನ್ ಡಾಲರ್. ಶಟೂಟ್ ಅಣೆಕಟ್ಟು, ಸಲ್ಮಾ ಅಣೆಕಟ್ಟು, ಅಫ್ಘಾನಿಸ್ತಾನದ ಸಂಸತ್ತು ಮತ್ತು ಹಲವು ರಚನಾತ್ಮಕ ರಸ್ತೆಗಳ ನಿರ್ಮಾಣಕ್ಕೆ ಅಫ್ಘಾನಿಸ್ತಾನ ಭಾರತದ ನೆರವನ್ನು ಪಡೆದಿದೆ.

ಈ ಯೋಜನೆಗಳು ಮುಗಿದ ಬಳಿಕ ಇದರಲ್ಲಿ ಭಾರತದ ಪಾತ್ರವೇನೂ ಇರುವುದಿಲ್ಲ, ನಂತರ ಅದನ್ನು ಕಾಪಾಡಿಕೊಳ್ಳುವುದು ಅಫ್ಘಾನಿಸ್ತಾನಕ್ಕೆ ಬಿಟ್ಟ ವಿಚಾರ ಎಂದು ಕಳೆದ ವಾರ ವಿದೇಶಾಂಗ ಸಚಿವಾಲಯ ಹೇಳಿತ್ತು.

ತಮ್ಮ ಶ ತ್ರು ಗ ಳು, ಮಿಲಿಟರಿ ಉದ್ದೇಶಕ್ಕಾಗಿ ಅಥವಾ ಬೇರೆ ಯಾವುದೇ ರೀತಿಯ ತಮ್ಮ ಸ್ವ ಹಿತಾಸಕ್ತಿಗೆ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ನೋಡಿದರೆ ಅಂತವರ ಉದ್ದೇಶ ಈಡೇರುವುದಿಲ್ಲ, ತಮ್ಮ ಸಂಘಟನೆ ನೀತಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಭಾರತ ಸರ್ಕಾರವನ್ನ ಶ್ಲಾಘಿಸಿದ್ದ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ಭಾರತದ ಯೋಜನೆಗಳ ಬಗ್ಗೆ ತಾಲಿಬಾನ್ ದೊಡ್ಡ ಹೇಳಿಕೆಯನ್ನು ನೀಡಿದೆ. ಅಫ್ಘಾನಿಸ್ತಾನದ ಜನರಿಗಾಗಿ ಭಾರತ ಮಾಡಿದ ಎಲ್ಲ ಕಾರ್ಯಗಳನ್ನೂ ನಾವು ಪ್ರಶಂಸಿಸುತ್ತೇವೆ ಎಂದು ತಾಲಿಬಾನ್ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಭಾರತದಿಂದ ನೆರವಾಗುತ್ತಿರುವ ಯೋಜನೆಗಳ ಕುರಿತು ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿದ ತಾಲಿಬಾನ್ ವಕ್ತಾರ ಮೊಹಮ್ಮದ್ ಸುಹೇಲ್ ಶಾಹೀನ್, “ಅಫ್ಘಾನಿಸ್ತಾನದ ಜನರಿಗಾಗಿ ಅಣೆಕಟ್ಟುಗಳು, ಮೂಲಸೌಕರ್ಯ ಯೋಜನೆಗಳು ಮತ್ತು ಅಫ್ಘಾನಿಸ್ತಾನದ ಅಭಿವೃದ್ಧಿ, ಪುನರ್ನಿರ್ಮಾಣ ಮತ್ತು ಆರ್ಥಿಕ ಸಮೃದ್ಧಿಗಾಗಿ ಮಾಡುತ್ತಿರುವ ಪ್ರತಿಯೊಂದು ಕೆಲಸವನ್ನೂ ನಾವು ಶ್ಲಾಘಿಸುತ್ತೇವೆ” ಎಂದು ತಾಲಿಬಾನ್ ಹೇಳಿದೆ.

ಮೊಹಮ್ಮದ್ ಸುಹೈಲ್ ಮುಂದೆ ಮಾತನಾಡುತ್ತ, “ಪಾಕಿಸ್ತಾನ ಹಾಗು ಪಾಕಿಸ್ತಾನ ಬೇಸ್ಡ್ ಉ ಗ್ರ ರ ಸಮೂಹದೊಂದಿಗೆ ತಾಲಿಬಾನ್ ನ ಆಳವಾದ ಸಂಬಂಧವಿದೆ ಹಾಗು ಅಲ್ಲಿಂದಲೇ ನಮಗೆ ಸಹಾಯ ಸಿಗುತ್ತೊದೆ ಅನ್ನೋ ಆರೋಪ ಸತ್ಯಕ್ಕೆ ದೂರವಾಗಿದೆ” ಎಂದು ಹೇಳಿದ್ದಾನೆ.

ಸುಹೈಲ್ ಶಾಹಿಲ್ ಭಾರತ-ತಾಲಿಬಾನ್ ನಡುವಿನ ಮಾತುಕತೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾನೆ. ಈ ಬಗ್ಗೆ ಮಾತನಾಡಿರುವ ಶಾಹೀನ್, “ಭಾರತೀಯ ನಿಯೋಗವು ನಮ್ಮ ನಿಯೋಗವನ್ನು ಭೇಟಿ ಮಾಡಿದ ವರದಿಗಳಿವೆ, ಆದರೆ ನಾನು ಅದನ್ನು ದೃಢೀಕರಿಸಲು ಸಾಧ್ಯವಿಲ್ಲ. ನನಗೆ ತಿಳಿದಂತೆ ಸಭೆ ನಡೆದಿಲ್ಲ, ಆದರೆ ನಿನ್ನೆ ನಾವು ದೋಹಾದಲ್ಲಿ ಸಭೆ ನಡೆಸಿದ್ದೆವು, ಅದರಲ್ಲಿ ಭಾರತೀಯ ನಿಯೋಗದ ಒಬ್ಬ ಸದಸ್ಯರೂ ಭಾಗವಹಿಸಿದ್ದರು” ಎಂದು ಹೇಳಿದ್ದಾನೆ.

ಅಫ್ಘಾನಿಸ್ತಾನದಲ್ಲಿ ಭಾರತದ ಸೇನಾ ಹಸ್ತಕ್ಷೇಪ ಬೇಡ: ತಾಲಿಬಾನ್

ಅಫ್ಗಾನಿಸ್ತಾನದಲ್ಲಿ ಭಾರತವು ಮಾನವೀಯ ನೆಲೆಯಲ್ಲಿ ಮಾಡಿರುವ ಕೆಲಸಗಳು ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ತಾಲಿಬಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ, ಸೇನಾ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ನೀಡಿದೆ.

Advertisement
Share this on...