ಅಫ್ಘನ್ ನಿಂದ ಪರಾರಿಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ ಕೊನೆಗೂ ಈ ದೇಶದಲ್ಲಿ ಈ ಸ್ಥಿತಿಯಲ್ಲಿ ಪತ್ತೆ

in Kannada News/News 402 views

ನವದೆಹಲಿ:

Advertisement
ಇಡೇ ದೇಶವನ್ನು ತಾಲಿಬಾನ್ ಆ ಕ್ರ ಮಿ ಸಿ ಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದಿಂದ ಪ ರಾ ರಿ ಯಾಗಿದ್ದ ಆಫ್ಘಾನ್​ನ ಮಾಜಿ ಅಧ್ಯಕ್ಷ ಅಶ್ರಫ್​ ಘನಿಗೆ ಯುನೈಟೆಡ್​ ಅರಬ್​ ಎಮಿರೆಟ್ಸ್ (ಯುಎಇ)​ ಮಾನವೀಯ ನೆಲೆಗಟ್ಟಿನಲ್ಲಿ ಬುಧವಾರ ಆತಿಥ್ಯವನ್ನು ನೀಡಿದೆ.

ಯುಎಇ ವಿದೇಶಾಂಗ ಸಚಿವಾಲಯ ಮತ್ತು ಅಂತಾರಾಷ್ಟ್ರೀಯ ಸಹಕಾರ ಇಲಾಖೆಯು ಈ ವಿಚಾರವನ್ನು ಖಚಿತಪಡಿಸಿದೆ. ಆಫ್ಘಾನ್​ನ ಮಾಜಿ ಅಧ್ಯಕ್ಷ ಮತ್ತು ಅವರ ಕುಟುಂಬವನ್ನು ಮಾನವೀಯ ನೆಲೆಗಟ್ಟಿನಲ್ಲಿ ಸ್ವಾಗತಿಸುತ್ತದೆ ಎಂದು ಯುಎಇ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತಾಲಿಬಾನಿಗಳು ಕಾಬೂಲ್​​ ಕಡೆ ಬರುತ್ತಿದ್ದಂತೆ ಅಶ್ರಫ್​ ಘನಿ ಭಾನುವಾರ ಅಫ್ಘಾನಿಸ್ತಾನದಿಂದ ಕಾಲ್ಕಿತ್ತರು. ಇದರ ಬೆನ್ನಲ್ಲೇ ಓಡಿಹೋಗಿದ್ದಕ್ಕೆ ಫೇಸ್​ಬುಕ್​ನಲ್ಲಿ ಸ್ಪಷ್ಟನೆ ನೀಡಿದ ಘನಿ, ತಾಲಿಬಾನ್​ ಜಯಿಸಿದೆ ಮತ್ತು ರ ಕ್ತ ದ ಪ್ರ ವಾ ಹ ವನ್ನು ತಪ್ಪಿಸಲು ಓಡಿಹೋಗಿದ್ದಾಗಿ ತಿಳಿಸಿದರು.

ಬುಧವಾರದವರೆಗೂ ಘನಿ ಎಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ಇದರ ನಡುವೆ ಘನಿ ಅವರು ತಜಕಿಸ್ತಾನ, ಉಜ್ಬೇಕಿಸ್ತಾನ ಅಥವಾ ಒಮನ್​ನಲ್ಲಿ ಇರಬಹುದು ಎಂದು ವರದಿಗಳಾಗಿದ್ದವು. ಇದೀಗ ಯುಎಇ ಅಧಿಕೃತವಾಗಿ ಹೇಳಿಕೆಯನ್ನೇ ಬಿಡುಗಡೆ ಮಾಡಿದ್ದು, ಘನಿ ಅವರಿಗೆ ಆತಿಥ್ಯವನ್ನು ನೀಡಿದೆ.

ತಾಲಿಬಾನ್ ಆಡಳಿತ ಅತ್ಯುತ್ತಮ, ಸುರಕ್ಷಿತ: ರಷ್ಯಾ

ಸ್ಥಾಪಿತ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ ಅಫ್ಘಾನಿಸ್ತಾನದಲ್ಲಿ ರಚನೆಯಾದ ತಾಲಿಬಾನ್‌ ಉ ಗ್ರ ರ ಸರ್ಕಾರವನ್ನು ವಿಶ್ವವೇ ಟೀಕಿಸುತ್ತಿದ್ದರೆ ರಷ್ಯಾ, ಪಾಕಿಸ್ತಾನ, ಚೀನಾ ಮತ್ತು ಇರಾನ್ ಸರ್ಕಾರ ಸ್ವಾಗತಿಸಿವೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಭೂಭಾಗಗಳಲ್ಲಿ ತಾಲಿಬಾನಿಗಳ ಆ ಕ್ರ ಮ ಣ ಮುಂದುವರಿದಿದೆ. ಬಹುತೇಕ ಜನರು ದಿಕ್ಕಾಪಾಲಾಗಿದ್ದು, ಮನೆಗಳಲ್ಲೇ ಉಳಿದಿರುವ ಮಂದಿ ರಕ್ಷಣೆಗಾಗಿ ಕಾದು ಕುಳಿತಿದ್ದಾರೆ.

ಆದರೆ ತಾಲಿಬಾನ್ ಉ ಗ್ರ ರು ಮಾತ್ರ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಈಗಾಗಲೇ 24 ಗಂಟೆಗಳು ಕಳೆದಿವೆ. ಈ ಅವಧಿಯಲ್ಲಿ ಹಿಂದಿನ ಪ್ರಜಾಪ್ರಭುತ್ವ ಸರ್ಕಾರಕ್ಕಿಂತ ತಾಲಿಬಾನಿಗಳ ಕೈಯಲ್ಲಿ ಕಾಬೂಲ್​ ನಗರ ಸುರಕ್ಷಿತವಾಗಿದೆ ಎಂದು ರಷ್ಯಾ ಹೇಳಿದೆ.

ತಾಲೀಬಾನಿಗಳು ಕಾಬೂಲ್​ ನಗರವನ್ನು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರಿಸಿದ್ದಾರೆ ಎಂದು ಅಫ್ಘಾನಿಸ್ತಾನದ ರಷ್ಯಾ ರಾಜತಾಂತ್ರಿಕ ಡಿಮಿಟ್ರಿ ಝಿರನೋವ್ ಹೇಳಿದ್ದಾರೆ.

ಅಶ್ರಫ್ ಘನಿಗಿಂತ ಉತ್ತಮವಾಗಿದೆ

ಅಫ್ಘಾನಿಸ್ತಾನದಲ್ಲಿನ ರಷ್ಯಾದ ರಾಯಭಾರಿ ಡಿಮಿಟ್ರಿ ಝಿರನೋವ್ ತಾಲಿಬಾನರ ನಡವಳಿಕೆಯನ್ನು ‘ಉತ್ತಮ, ಸಕಾರಾತ್ಮಕ ಮತ್ತು ವ್ಯಾಪಾರ’ ಲಕ್ಷಣ ಎಂದು ವಿವರಿಸಿದ್ದಾರೆ. ’24 ಗಂಟೆಗಳ ಮೊದಲು ಕಾಬೂಲ್‌ನಲ್ಲಿ ಕಠಿಣ ಅಧಿಕಾರಿಗಳಿದ್ದರು. ಈಗ ತಾಲಿಬಾನ್ ಅಡಿಯಲ್ಲಿರುವ ಕಾಬೂಲ್‌ನ ಪರಿಸ್ಥಿತಿ (ಅಧ್ಯಕ್ಷ) ಅಶ್ರಫ್ ಘನಿಗಿಂತ ಉತ್ತಮವಾಗಿದೆ. ಎಂದು ಝಿರನೋವ್ ಮಾಸ್ಕೋದ ಎಖೋ ಮಾಸ್ಕ್ವಿ ರೇಡಿಯೋ ಕೇಂದ್ರದೊಂದಿಗೆ ಮಾತನಾಡುತ್ತಾ ಹೇಳಿದರು,’ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ‘ತಾಲಿಬಾನ್ ಸಂಘಟನೆಯು ಗುಲಾಮಗಿರಿಯ ಸಂಕೋಲೆಯನ್ನು ತುಂ ಡ ರಿ ಸಿ ದೆ ಎಂದು ವಿಶ್ಲೇಷಿಸಿ ಇಂಗ್ಲಿಷ್ ಶಾಲೆಗಳಿಂದ ಅಫ್ಘನ್ ಸಂಸ್ಕೃತಿ ನಾಶವಾಗುತ್ತಿತ್ತು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ನೀವು ಮತ್ತೊಂದು ಸಂಸ್ಕೃತಿಯನ್ನು ನಿಮ್ಮದಾಗಿಸಿಕೊಂಡು ಮಾನಸಿಕವಾಗಿ ಅಡಿಯಾಳಾಗುತ್ತೀರಿ. ಇದು ನಿಜವಾದ ಗುಲಾಮಗಿರಿಗಿಂತಲೂ ಕೆಟ್ಟದ್ದು. ಈಗ ತಾಲಿಬಾನ್ ಆ ಗುಲಾಮಗಿರಿಯ ಸಂಕೋಲೆಯನ್ನು ತುಂ ಡ ರಿ ಸಿ ದೆ,’ ಎಂದು ಬಣ್ಣಿಸಿದ್ದಾರೆ.

ಚೀನಾಗೆ ಭಯ ಯಾಕೆ?

ಸದ್ಯದ ಅಫ್ಘಾನಿಸ್ತಾನ ಪರಿಸ್ಥಿತಿ ಬಗ್ಗೆ ಚೀನಾ ಸರ್ಕಾರದ ವಕ್ತಾರರು ಪ್ರತಿಕ್ರಿಯಿಸಿ, ನಾವು ಹೊಸ ಸರ್ಕಾರಕ್ಕೆ ಸಹಕಾರ ನೀಡಲಿದ್ದೇವೆ. ತಾಲಿಬಾನ್ ಜತೆ ಸಹಕಾರ ಹಾಗೂ ಸ್ನೇಹ ಸಂಬಂಧ ಇರಿಸಿಕೊಳ್ಳಲು ನಾವು ಸಿದ್ಧವಾಗಿದ್ದೇವೆ ಎಂದಿದ್ದಾರೆ.

ಅಫ್ಘಾನಿಸ್ತಾನದ ಜತೆ ಚೀನಾ 76 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಚೀನಾದಲ್ಲಿ ಉಯಿಘರ್ ಮು ಸ್ಲಿ‌ ಮ ರಿ ದ್ದಾರೆ. ಈ ಹಿಂದೆ ಉಯಿಘುರ್ ಮು ಸ್ಲಿ ಮ ರು ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟು ದಾ ಳಿ ಮಾಡಿದ ಹಿನ್ನೆಲೆಯಲ್ಲಿ ಇವರನ್ನು ಚೀನಾ ಕಟುವಾಗಿ ನಡೆಸಿಕೊಳ್ಳುತ್ತಿದೆ. ಈ ವಿಚಾರದ ಬಗ್ಗೆ ವಿಶ್ವದ ಮು ಸ್ಲಿಂ ರಾಷ್ಟ್ರಗಳು ಮಾನವ ಹಕ್ಕುಗಳ ಉ ಲ್ಲಂ‌ಘ ನೆ ಆಗುತ್ತಿದೆ ಎಂದು ದೂರುತ್ತಿವೆ. ಶ ತ್ರು ವಿನ ಶ ತ್ರು ಮಿತ್ರ ಎನ್ನುವ ಮಾತಿನಂತೆ ಈಗ ತಾಲಿಬಾನ್ ಹಾಗೂ ಉಯಿಘುರ್‍ಗಳು ಒಂದಾಗುವ ಸಾಧ್ಯತೆ ಇದೆ. ಇದು ಚೀನಾದ ಆ ತಂ ಕ ಹೆಚ್ಚಿಸಿದ್ದು, ಈ ಕಾರಣಕ್ಕೆ ತಾಲಿಬಾನ್ ಜೊತೆ ಉತ್ತಮ ಸಂಬಂಧ ಬೆಳೆಸಲು ಚೀನಾ ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಇರಾನ್ ಬೆಂಬಲ

ವಿಶ್ವದ ದೊಡ್ಡಣ್ಣ ಅಮೆರಿಕದ ವಿ ರು ದ್ಧ ಕಿ ಡಿ ಕಾ ರು‌ ತ್ತಿ ರುವ ಇರಾನ್, ಅಫ್ಘಾನಿಸ್ತಾನದಲ್ಲಿ ಸ್ಥಾಪನೆಯಾದ ತಾಲಿಬಾನ್ ಸರ್ಕಾರವನ್ನು ಬೆಂಬಲಿಸಿದೆ. ಇರಾನ್ ಸರ್ಕಾರದ ಅಧಿಕಾರಿ ಹಿಂ ಸೆ ಮತ್ತು ಯು ದ್ಧ ಎಂದಿಗೂ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ನಾಯಕ ಹಮೀದ್ ಕರ್ಜಾಯ್ ಸರ್ಕಾರ ರಚಿಸಲು ಅಫ್ಘನ್ ನಾಯಕರ ಸಮನ್ವಯ ಮಂಡಳಿ ರಚಿಸುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದು ಅಫ್ಘಾನಿಸ್ತಾನದಲ್ಲಿ ಮಾತುಕತೆ ಮತ್ತು ಶಾಂತಿಯುತ ಪರಿವರ್ತನೆಗೆ ಕಾರಣವಾಗಬಹುದು ಎಂದು ನಾವು ಭಾವಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

Advertisement
Share this on...