Fact Check: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಕಾರಣ ಅಲ್ಲಿನ ನಾಗರಿಕರು ಸಾ ವ ನ್ನು ಅಪ್ಪಿಕೊಂಡು ವಿಮಾನದ ರೆಕ್ಕೆಗಳ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಫೇಸ್ಬುಕ್ ಪೇಜ್ ಗುಲಿಸ್ತಾನ್ ನ್ಯೂಸ್ ಚಾನೆಲ್ ವಿಡಿಯೋವನ್ನು ಹಂಚಿಕೊಂಡಿದೆ.
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ, ಅಫ್ಘಾನಿಸ್ತಾನ ನಾಗರಿಕರು ಯು ದ್ಧ ದಿಂದ ಹಾನಿಗೊಳಗಾದ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಹೃದಯ ವಿ ದ್ರಾ ವ ಕ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿಕೊಂಡಿವೆ. ಕಾಬೂಲ್ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ವಿಮಾನಗಳಲ್ಲಿ ಹೋಗಲು ಪ್ರಯತ್ನಿಸುತ್ತಿರುವ ಭಯಾನಕ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ವಿಮಾನದ ಮೇಲೆ ಕುಳಿತು ಪ್ರಯಾಣಿಸಲು ಯತ್ನಿಸಿ ಮೂವರು ಮೃತಪಟ್ಟಿರುವ ಘಟನೆಯೂ ವರದಿಯಾಗಿತ್ತು. ದೇಶ ಬಿಟ್ಟು ಹೋಗಲು ಯತ್ನಿಸಿ ಹಲವರು ಬಲಿಯಾಗಿದ್ದಾರೆ ಎಂಬ ವರದಿಗಳೂ ಕೇಳಿಬರುತ್ತಿವೆ.
ವಿಮಾನದ ಟಾಪ್ ಹತ್ತಿ ನಿಂತ ಜನ, ಅಗತ್ಯಕ್ಕಿಂತ ಹೆಚ್ಚು ಜನಸಂದಣಿಯಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಿರುವುದು – ಈ ರೀತಿಯ ಮುಂತಾದ ಘಟನೆಗಳೂ ನಡೆದಿದೆ. ಇದರ ಜತೆಗೆ ಹಲವು ನಕಲಿ ಫೋಟೋ, ವಿಡಿಯೋಗಳೂ ಹರಿದಾಡುತ್ತಿದೆ. ಈ ಬಿ ಕ್ಕ ಟ್ಟಿ ನ ನಡುವೆ ವಿಮಾನವೊಂದು ಟರ್ಬೈನ್ ಎಂಜಿನ್ನಲ್ಲಿ ಹಾರಾಡುತ್ತಿರುವಾಗ ಅದರ ಮೇಲೆ ಅಂಟಿಕೊಂಡಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆತ ತಾಲಿಬಾನ್ ಆಕ್ರಮಿತ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಅಫ್ಘಾನಿಸ್ತಾನದ ಪ್ರಜೆ ಎಂದು ಹೇಳಿಕೊಳ್ಳಲಾಗಿದೆ.
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಕಾರಣ ಅಲ್ಲಿನ ನಾಗರೀಕರು ಸಾ ವ ನ್ನು ಅಪ್ಪಿಕೊಂಡು ವಿಮಾನದ ರೆಕ್ಕೆಗಳ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಫೇಸ್ಬುಕ್ ಪೇಜ್ ಗುಲಿಸ್ತಾನ್ ನ್ಯೂಸ್ ಚಾನೆಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್ನಲ್ಲೂ ಅನೇಕ ಬಳಕೆದಾರರು ಇದೇ ವಿಡಿಯೋ ಕ್ಲಿಪ್ ಅನ್ನು ಶೇರ್ ಮಾಡಿಕೊಂಡಿದ್ದು, ಇದೇ ರೀತಿಯ ಕ್ಯಾಪ್ಷನ್ಗಳನ್ನು ಬರೆದುಕೊಂಡಿದ್ದಾರೆ. ಆದರೆ, ವಿಡಿಯೋದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ಅನುಸರಿಸಿ ಪಿಂಟರೆಸ್ಟ್ನಲ್ಲಿ ಇದೇ ರೀತಿಯ ಟರ್ಬೈನ್ ಎಂಜಿನ್ನಲ್ಲಿ ಕುರ್ಚಿಯ ಮೇಲೆ ಕುಳಿತ ವ್ಯಕ್ತಿಯೊಂದಿಗೆ ವಿಡಿಯೋವನ್ನು ತೋರಿಸಲಾಗಿದೆ.
ಈ ವಾಟರ್ಮಾರ್ಕ್ನ ಮತ್ತಷ್ಟು ಗೂಗಲ್ ಹುಡುಕಾಟವು ಯೂಟ್ಯೂಬ್ ವಿಡಿಯೋವನ್ನು ಡಿಸೆಂಬರ್ 17, 2020 ರಂದು ‘ಕ್ವಾನ್ ಹೋವಾ’ ಹೆಸರಿನ ಚಾನಲ್ ಮೂಲಕ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ವಿಡಿಯೋದಲ್ಲಿ, ಮನುಷ್ಯನು ಹಾರುವ ವಿಮಾನದ ಟರ್ಬೈನ್ ಎಂಜಿನ್ನಲ್ಲಿ ಕುಳಿತುಕೊಳ್ಳುವುದು, ಕೆಲಸ ಮಾಡುವುದು ಮತ್ತು ಅಡುಗೆ ಮಾಡುವುದು ಮುಂತಾದ ವಿವಿಧ ಚಟುವಟಿಕೆಗಳನ್ನು ಮಾಡುವುದನ್ನು ಕಾಣಬಹುದು, ಇದು ಕೆಲವು ಉತ್ತಮ ಫೋಟೊಶಾಪಿಂಗ್ ಕೌಶಲ್ಯಗಳನ್ನು ಪ್ರದರ್ಶಿಸುತ್ತದೆ.
ಯೂಟ್ಯೂಬ್ ಚಾನೆಲ್ ಬಗ್ಗೆ ವಿಭಾಗವನ್ನು ವಿಯೆಟ್ನಾಮ್ ಭಾಷೆಯ ಪಠ್ಯದಲ್ಲಿ ಬರೆಯಲಾಗಿದೆ, ಇದನ್ನು ಇಂಗ್ಲಿಷ್ಗೆ ಅನುವಾದಿಸಿದಾಗ, “ಚಾನಲ್ ದೈನಂದಿನ ಜೀವನ ಮತ್ತು ಫೋಟೊಶಾಪ್ನಿಂದ ಅನೇಕ ಆಸಕ್ತಿದಾಯಕ ವಿಷಯಗಳ ನಡುವೆ ಆಸಕ್ತಿದಾಯಕ ವ್ಲಾಗ್ ವೀಡಿಯೋಗಳಲ್ಲಿ ಪರಿಣತಿ ಪಡೆದಿದೆ. ಇದು ನನ್ನ ಅಧಿಕೃತ ಚಾನೆಲ್, ಯಾವುದೇ ಉಪ-ಚಾನೆಲ್ಗಳಿಲ್ಲ” ಎಂದು ಹೇಳುತ್ತದೆ.
#Citizens of Afghanistan scared of TB occupation hugging deaths and riding on the wings of the Airplane pic.twitter.com/cl8AwCL20Z
— Kamlesh Kumar Ojha🇮🇳 (@Kamlesh_ojha1) August 17, 2021
ಆದ್ದರಿಂದ, ಹಾರುವ ವಿಮಾನದ ಟರ್ಬೈನ್ ಎಂಜಿನ್ಗೆ ಅಂಟಿಕೊಂಡಿರುವ ಅಫ್ಘಾನ್ ಮನುಷ್ಯನ ವೈರಲ್ ವಿಡಿಯೋ ನಕಲಿ ಮತ್ತು ಕೇವಲ ಫೋಟೋಶಾಪ್ ಎಂದು ತೀರ್ಮಾನಿಸಬಹುದು.