13 ವರ್ಷಗಳ ಹಿಂದೆ ಜೋ ಬೈಡನ್ ಪ್ರಾಣ ಉಳಿಸಿದ್ದ ವ್ಯಕ್ತಿಯನ್ನ ನಡುನೀರಲ್ಲಿ ಕೈಬಿಟ್ಟ ಅಮೇರಿಕಾ

in Kannada News/News 118 views

ಅಮೆರಿಕ ಅಧ್ಯಕ್ಷರಾಗಿರುವ ಜೋ ಬೈಡೆನ್ 13 ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಬಂದಿದ್ದಾಗ ಸೆನೆಟರ್ ಆಗಿದ್ದರು. ಆಗ ಜೀವ ಕಾಪಾಡಲು ನೆರವಾಗಿದ್ದು ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಗೆ ದುಭಾಷಿಯಾಗಿ ಸೇವೆ ಸಲ್ಲಿಸುತ್ತಿದ್ದ ಮೊಹಮದ್. ಇದೀಗ ಅವರು ತಮ್ಮ ಜೀವ ಉಳಿಸಿಕೊಳ್ಳಲು ಅಮೆರಿಕ ಅಧ್ಯಕ್ಷರನ್ನು ಬೇಡುತ್ತಿದ್ದಾರೆ. ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ಅಮೆರಿಕ ಹೊರ ನಡೆದ ನಂತರ ಜೀವಭಯದಲ್ಲಿ ಮೊಹಮದ್ ನಲುಗಿ ಹೋಗಿದ್ದಾರೆ.

Advertisement

‘ಮಾನ್ಯ ಅಧ್ಯಕ್ಷರೇ ನನ್ನನ್ನು ಮತ್ತು ನನ್ನ ಕುಟುಂಬವನ್ನು ಕಾಪಾಡಿ’ ಎಂದು ಮೊಹಮದ್ ವಾಲ್​ಸ್ಟ್ರೀಟ್ ಜರ್ನಲ್ ಪ್ರತಿನಿಧಿ ಜೊತೆಗೆ ಮಾತನಾಡುತ್ತಾ ಮನವಿ ಮಾಡಿದರು. ತಮ್ಮ ಸುರಕ್ಷೆಯ ದೃಷ್ಟಿಯಿಂದ ಪೂರ್ಣ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು.

ಇದೀಗ ಮೊಹಮದ್ ತಮ್ಮ ಹೆಂಡತಿ ಮತ್ತು ನಾಲ್ವರು ಮಕ್ಕಳೊಂದಿಗೆ ಬಚ್ಚಿಟ್ಟುಕೊಂಡಿದ್ದಾರೆ. 2008ರಲ್ಲಿ ಸೆನೆಟರ್ ಆಗಿದ್ದಾಗ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ಜೋ ಬೈಡೆನ್ ಅವರೊಂದಿಗೆ ಇತರ ಸೆನೆಟರ್​ಗಳಾದ ಚುಕ್ ಹಗೆಲ್, ನೆಬ್, ಜಾನ್ ಕೆರಿ, ಮಾಸ್ ಸಹ ಇದ್ದರು. ಹಿಮಪಾತದ ಕಾರಣದಿಂದಾಗಿ ಅವರಿದ್ದ ಹೆಲಿಕಾಪ್ಟರ್​ಗಳು ಅಫ್ಘಾನಿಸ್ತಾನದ ಬಹುದೂರದ, ಒಳನಾಡಿನ ಕಣಿವೆಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಆ ದಿನಗಳಲ್ಲಿ ಮೊಹಮದ್ ಅಮೆರಿಕ ಸೇನೆಯ ದುಭಾಷಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅವರನ್ನು ಬಲ್ಲವರು ಹೇಳುತ್ತಾರೆ.

ತನ್ನನ್ನು ರಕ್ಷಿಸುವಂತೆ ಮೊಹಮದ್ ಮಾಡಿಕೊಂಡಿರುವ ವಿನಂತಿಯು ಇದೀಗ ಅಧ್ಯಕ್ಷ ಬೈಡೆನ್ ಅವರ ಆಪ್ತವಲಯವನ್ನು ತಲುಪಿದೆ. ಮೊಹಮದ್ ಮತ್ತು ಅವರ ಕುಟುಂಬದ ಸದಸ್ಯರನ್ನು ಅಮೆರಿಕಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಸ್​ಕಿ ಹೇಳಿದ್ದಾರೆ.

‘ಮಾರ್ಚ್​ ತಿಂಗಳಲ್ಲಿ ವಾರಕ್ಕೆ 100 ವಿಸಾಗಳನ್ನು ನೀಡಲಾಗುತ್ತಿತ್ತು. ಆದರೆ ಈಚೆಗೆ ವಾರಕ್ಕೆ 813 ವಿಸಾಗಳನ್ನು ನೀಡಲಾಗುತ್ತಿದೆ. ಮೊಹಮದ್ ಅವರನ್ನು ಕೆಲಸಕ್ಕೆ ನಿಯೋಜಿಸಿದ್ದ ರಕ್ಷಣಾ ಗುತ್ತಿಗೆದಾರ ಮುಖ್ಯ ದಾಖಲೆಗಳನ್ನು ಕಳೆದುಕೊಂಡ ಕಾರಣ ಅವರ ವಿಸಾ ಮನವಿಗೆ ಮಾನ್ಯತೆ ಸಿಗುವುದು ತಡವಾಗುತ್ತಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ಹೊರಡುವ ಪ್ರಯತ್ನದಲ್ಲಿದ್ದ ಮೊಹಮದ್​ ಅವರನ್ನು ಸ್ವೀಕರಿಸಲು ಅಮೆರಿಕ ಆಡಳಿತ ಸಿದ್ಧವಿತ್ತು. ಆದರೆ ಅವರ ಕುಟುಂಬವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಮೊಹಮದ್ ಸಹ ಅಫ್ಘಾನಿಸ್ತಾನದಲ್ಲಿಯೇ ಉಳಿದರು.

‘ನನಗೆ ತುಂಬಾ ಭಯವಾಗುತ್ತಿದೆ. ನಾವು ಮನೆಬಿಟ್ಟು ಹೊರಗೆ ಬರಲಾರೆ’ ಎಂದು ಹೇಳುತ್ತಿರುವ ಮೊಹಮದ್ ಅವರಿಗೆ ಇನ್ನಷ್ಟು ದಿನ ಕಾಯುವುದು ಬಿಟ್ಟರೆ ಈಗ ಬೇರೆ ಆಯ್ಕೆಯೇ ಉಳಿದಿಲ್ಲ.ನಿಮ್ಮ ಪರಿಶ್ರಮವನ್ನು ನಾವು ಗೌರವಿಸುತ್ತೇವೆ. ನಿಮ್ಮನ್ನು ಅಲ್ಲಿಂದ ಕರೆತರುತ್ತೇವೆ. ಈ ಕಾರ್ಯ ಪೂರ್ಣಗೊಳಿಸಲು ನಾವು ಬದ್ಧರಾಗಿದ್ದೇವೆ’ ಎಂದು ಪಸ್​ಕಿ ತಿಳಿಸಿದರು. ಮೊಹಮದ್ ಅವರಂತೆ 20 ವರ್ಷಗಳಿಂದ ಅಮೆರಿಕ ಸೇನೆಯನ್ನು ಬೆಂಬಲಿಸಿದ್ದ ಹಲವು ಅಫ್ಘಾನ್ ಪ್ರಜೆಗಳು ಇದೀಗ ತಾಲಿಬಾನಿಗಳಿಂದ ಪ್ರತೀಕಾರದ ಭೀತಿ ಎದುರಿಸುತ್ತಿದ್ದಾರೆ. ಅಮೆರಿಕ ಪ್ರವೇಶಿಸಲು ಬೇಕಾಗಿರುವ ವಿಶೇಷ ವಲಸಿಗರ ವಿಸಾ ಪಡೆಯುವುದೇ ದೊಡ್ಡ ಸವಾಲಾಗಿದೆ.

ವಿಶೇಷ ವಲಸಿಗರ ವಿಸಾ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಆಗಾಗ ಕಾಣಿಸಿಕೊಳ್ಳುತ್ತಿದೆ. ವಿವಿಧ ಅಧಿಕಾರಿಗಳ ನಡುವೆ ಕಾರ್ಯನಿರ್ವಹಣೆಯಲ್ಲಿ ಹೊಂದಾಣಿಕೆಯ ಕೊರತೆಯೂ ಇದೆ. ಒಬ್ಬ ವ್ಯಕ್ತಿ ವಿಸಾ ಪಡೆಯಲು 14 ಹಂತಗಳ ಪ್ರಕ್ರಿಯೆ ದಾಟಿಬರಬೇಕಿದೆ ಎಂದು ವಾಷಿಂಗ್​ಟನ್ ​ಪೋಸ್ಟ್​ ವರದಿ ಹೇಳಿದೆ.

ಮಾರ್ಚ್​ ತಿಂಗಳಲ್ಲಿ ವಾರಕ್ಕೆ 100 ವಿಸಾಗಳನ್ನು ನೀಡಲಾಗುತ್ತಿತ್ತು. ಆದರೆ ಈಚೆಗೆ ವಾರಕ್ಕೆ 813 ವಿಸಾಗಳನ್ನು ನೀಡಲಾಗುತ್ತಿದೆ. ಮೊಹಮದ್ ಅವರನ್ನು ಕೆಲಸಕ್ಕೆ ನಿಯೋಜಿಸಿದ್ದ ರಕ್ಷಣಾ ಗುತ್ತಿಗೆದಾರ ಮುಖ್ಯ ದಾಖಲೆಗಳನ್ನು ಕಳೆದುಕೊಂಡ ಕಾರಣ ಅವರ ವಿಸಾ ಮನವಿಗೆ ಮಾನ್ಯತೆ ಸಿಗುವುದು ತಡವಾಗುತ್ತಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ಹೊರಡುವ ಪ್ರಯತ್ನದಲ್ಲಿದ್ದ ಮೊಹಮದ್​ ಅವರನ್ನು ಸ್ವೀಕರಿಸಲು ಅಮೆರಿಕ ಆಡಳಿತ ಸಿದ್ಧವಿತ್ತು. ಆದರೆ ಅವರ ಕುಟುಂಬವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಮೊಹಮದ್ ಸಹ ಅಫ್ಘಾನಿಸ್ತಾನದಲ್ಲಿಯೇ ಉಳಿದರು.

‘ನನಗೆ ತುಂಬಾ ಭಯವಾಗುತ್ತಿದೆ. ನಾವು ಮನೆಬಿಟ್ಟು ಹೊರಗೆ ಬರಲಾರೆ’ ಎಂದು ಹೇಳುತ್ತಿರುವ ಮೊಹಮದ್ ಅವರಿಗೆ ಇನ್ನಷ್ಟು ದಿನ ಕಾಯುವುದು ಬಿಟ್ಟರೆ ಈಗ ಬೇರೆ ಆಯ್ಕೆಯೇ ಉಳಿದಿಲ್ಲ.

Advertisement
Share this on...