ನೀವು ಆನ್ಲೈನ್ ಶಾಪಿಂಗ್ ಪ್ರಿಯರಾಗಿದ್ರೆ, ನಿಮಗೊಂದು ಗುಡ್ ನ್ಯೂಸ್ ಹೇಳುತ್ತಿದ್ದೇವೆ. ಈ ರೀತಿಯಾಗಿ ಶಾಪಿಂಗ್ ಮಾಡಿದ್ದಲ್ಲಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಕಡಿಮೆಯಲ್ಲಿ ಹೇಗೆ ಆನ್ಲೈನ್ ಶಾಪಿಂಗ್ (Online Shopping) ಮಾಡುವ ‘ರಹಸ್ಯ ವೆಬ್ಸೈಟ್’ ಬಗ್ಗೆ ಹೇಳುತ್ತಿದ್ದೇವೆ. ಈ ರಹಸ್ಯ ವೆಬ್ಸೈಟ್ ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಶಾಪಿಂಗ್ ಮಾಡಬಹುದಾಗಿದೆ. ಈ ರಹಸ್ಯ ವೆಬ್ಸೈಟ್ ಬೇರೆ ಯಾವುದೋ ಅಲ್ಲ. ಇ-ಕಾಮರ್ಸ್ (E-Commerce)ನ ಜನಪ್ರಿಯ ಶಾಪಿಂಗ್ ವೆಬ್ಸೈಟ್ ಅಮೆಜಾನ್. ಇಲ್ಲಿ ನಿಮಗೆ ಏಳು ಸಾವಿರ ರೂಪಾಯಿ ಮೌಲ್ಯದ ಉತ್ಪನ್ನ (Products) ಕೇವಲ ಎರಡು ಸಾವಿರ ರೂಪಾಯಿಗೆ ಸಿಗುತ್ತೆ. ಅಮೆಜಾನ್ ಈ ರಹಸ್ಯ ವೆಬ್ಸೈಟ್ ನಲ್ಲಿ ನಿಮಗೆ ರಿಟರ್ನ್ ಪ್ರೊಡೆಕ್ಟ್ ಅಥವಾ ಲಘುವಾಗಿ ಹಾನಿಗೊಳಗಾದ ಪ್ರೊಡೆಕ್ಟ್ ಗಳು ಅತೀ ಕಡಿಮೆ ಬೆಲೆಗೆ ದೊರಕುತ್ತವೆ.
ಮಾರ್ಟಿನ್ ಲೂಯಿಸ್ ವೆಬ್ಸೈಟ್ ಪ್ರಕಾರ. ಅಮೆಜಾನ್ ವೇರ್ ಹೌಸ್ ನಿಂದ ಗ್ರಾಹಕರು 7-8 ಸಾವಿರ ರೂ.ವರೆಗೆ ಸೇವಿಂಗ್ ಮಾಡಬಹುದಾಗಿದೆ. ಪ್ರೆಶರ್ ವಾಶರ್ ಬೆಲೆ ಪ್ರಮುಖ ಆನ್ಲೈನ್ ಶಾಪಿಂಗ್ ವೆಬ್ಸೈಟ್ ನಲ್ಲಿ ಅಂದಾಜು 20 ಸಾವಿರ ರೂ.ಇದೆ. ಆದ್ರೆ ಇದೇ ಪ್ರೊಡೆಕ್ಟ್ ಅಮೆಜಾನ್ ವೇರ್ ಹೌಸ್ ನಲ್ಲಿ 13 ಸಾವಿರ ರೂ.ಗೆ. ಲಭ್ಯವಾಗುತ್ತದೆ. ಇಷ್ಟ ಮಾತ್ರ ಅಲ್ಲದೇ ನೆಸ್ಕಫೆ ಸಿಂಗಲ್-ಸರ್ವ್ ಕಾಫಿ ಮಶೀನ್ ಬೆಲೆ ಇಲ್ಲಿ ಕೇವಲ ಎರಡು ಸಾವಿರ ರೂಪಾಯಿ ಆಸುಪಾಸಿನಲ್ಲಿಯೇ ಸಿಗುತ್ತದೆ. ಬೇರೆ ವೆಬ್ಸೈಟ್ ಗಳಲ್ಲಿ ಇದರ ಬೆಲೆ 5 ರಿಂದ 7 ಸಾವಿರ ರೂ.ಗಳಿಷ್ಟಿದೆ.
ರಹಸ್ಯ ವೆಬ್ಸೈಟ್ ಬಗ್ಗೆ ಗ್ರಾಹಕರು ಹೇಳಿದ್ದೇನು?
moneysavirngexpert.com ಜೊತೆ ಓರ್ವ ಬಳೆಕದಾರ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಪ್ರೆಶರ್ ವಾಶರ್ ಖರೀದಿಸಲು ಅಮೆಜಾನ್ ವೇರೆಹೌಸ್ ಗೆ ಹೋದೆ. ಬೇರೆ ವೆಬ್ಸೈಟ್ ನಲ್ಲಿ ಪ್ರೆಶರ್ ವಾಶರ್ ಬೆಲೆ 20 ಸಾವಿರ ರೂ.ಕ್ಕೂ ಅಧಿಕ ಇತ್ತು. ಆದ್ರೆ ನನಗೆ ಅದೇ ಪ್ರೊಡೆಕ್ಟ್ ಅಮೆಜಾನ್ ವೇರ್ ಹೌಸ್ ನಲ್ಲಿ 13 ಸಾವಿರ ರೂ.ಗೆ ಸಿಕ್ಕಿದೆ. ಈ ಆನ್ಲೈನ್ ಶಾಪಿಂಗೆ ನನಗೆ ತುಂಬಾ ಇಷ್ಟವಾಗಿದೆ. ಈಗ ಇಲ್ಲಿಂದಲೇ ನಾನು ನನ್ನ ಮೆಚ್ಚಿನ ವಸ್ತುಗಳನ್ನು ಖರೀದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ರಹಸ್ಯ ವೆಬ್ಸೈಟ್ ಪಾಲಿಸಿ ತಿಳಿದುಕೊಳ್ಳಿ
ಈ ರಹಸ್ಯ ವೆಬ್ಸೈಟ್ ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರಿಗೆ ಅಮೆಜಾನ್ ಕಡೆಯಿಂದ ಕಸ್ಟಮರ್ ಸರ್ವಿಸ್ ಸಿಗುತ್ತದೆ. ಇದರ ಜೊತೆಗೆ ಅಮೆಜಾನ್ ರಿಟರ್ನ್ ಪಾಲಿಸಿ ಪ್ರಕಾರ ಗ್ರಾಹಕರು ಖರೀದಿಸಿದ ವಸ್ತುಗಳನ್ನು ಹಿಂದಿರುಗಿಸುವ ಆಯ್ಕೆಯೂ ಇದೆ. ನೀವು ಖರೀದಿಸಿದ ಉತ್ಪನ್ನ ನಿಮಗೆ ಇಷ್ಟವಾಗದಿದ್ದರೆ 30 ದಿನಗೊಳಗೆ ರಿಟರ್ನ್ ಮಾಡುವ ಅವಕಾಶವನ್ನು ಅಮೆಜಾನ್ ನೀಡಿದೆ. ಅಮೆಜಾನ್ ರಹಸ್ಯ ವೆಬ್ಸೈಟ್ ಪ್ರಕಾರ, ಇಲ್ಲಿ ಮಾರಲಾಗುವ ಪ್ರತಿ ಉತ್ಪನ್ನದ ಗುಣಮಟ್ಟ, ಕ್ಷಮತೆ ಸೇರಿದಂತೆ ಇನ್ನಿತರ ಅಂಶಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಗುಣಮಟ್ಟದ ಪರೀಕ್ಷೆಯ ನಂತರವೇ ಉತ್ಪನ್ನ ಗ್ರೇಡ್ ನೀಡಿ ಮಾರಾಟ ಮಾಡಲಾಗುತ್ತದೆ.
40 ಸಾವಿರಕ್ಕೂ ಅಧಿಕ ಉತ್ಪನ್ನಗಳು ಲಭ್ಯ:
ಅಮಜಾನ್ ವೇರ್ ಹೌಸ್ ನಲ್ಲಿ 40,000ಕ್ಕೂ ಅಧಿಕ ಪ್ರೊಡೆಕ್ಟ್ ಗಳಿವೆ. ಇವುಗಳನ್ನು ಗ್ರಾಹಕರು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಗ್ರಾಹಕರಿಗೆ ಇಲ್ಲಿ ಸುಮಾರು 34 ಸೆಕ್ಷನ್ ಗಳು ಲಭ್ಯ ಇವೆ. ಕಂಪ್ಯೂಟರ್ ಸೇರಿದಂತೆ ಇನ್ನಿತರ ಉತ್ಪನ್ನಗಳು, ಮನೆ ಮತ್ತು ಕಿಚನ್, ಆಟಿಕೆ, ವಿಡಿಯೋ ಗೇಮ್, ಇಲೆಕ್ಟ್ರಾನಿಕ್ಸ್ ಮತ್ತು ಫೋಟೋ ಸೇರಿದಂತೆ ಹಲವು ಸೆಕ್ಷನ್ ಗಳನ್ನು ಅಮೆಜಾನ್ ವೇರ್ ಹೌಸ್ ಹೊಂದಿದೆ. ನೀವೂ ನಿಮ್ಮ ಇಷ್ಟವಾದ ಉತ್ಪನ್ನಗಳನ್ನು ಇಲ್ಲಿ ಖರೀದಿಸಬಹುದಾಗಿದೆ.