“ಇನ್ನೇನು ಕೆಲವೇ ನಿಮಿಷಗಳಲ್ಲಿ ನಿನ್ನೆದುರು ಇರ್ತೀನಿ” ಎಂದ ಪತಿ ಊರು ಹತ್ತಿರ ಬರುತ್ತಲೇ….

in Kannada News/News 546 views

ಕರ್ನೂಲ್ ​(ಆಂಧ್ರಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ, ಗರ್ಭಿಣಿ ಪತ್ನಿಯನ್ನು ನೋಡಲು ಊರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃ-ತ-ಪಟ್ಟಿರುವ ದಾ&ರು-ಣ ಘಟನೆ ನಂದಾವರಂ ವಲಯದ ಕನಕವೀಡು ಪೇಟದಲ್ಲಿ ನಡೆದಿದೆ.

Advertisement

ಮನೋಹರ್​ (29) ಮೃ-ತ ಯೋಧ. ಇವರು ರಜೆ ಪಡೆದು ಗರ್ಭಿಣಿ ಪತ್ನಿಯನ್ನು ನೋಡಲು ಬರುತ್ತಿದ್ದರು. ಮಧ್ಯಪ್ರದೇಶದಲ್ಲಿ ರೈಲಿನಿಂದ ಇಳಿದು, ಮತ್ತೊಂದು ರೈಲಿಗೆ ಹತ್ತುವಾಗ ಕಾಲು ಜಾರಿ ಕೆಳಕ್ಕೆ ಬಿ-ದ್ದು ಮೃ-ತ-ಪಟ್ಟಿದ್ದಾರೆ. ಸ್ವಲ್ಪ ಹೊತ್ತಿನಲ್ಲಿಯೇ ಊರು ತಲುಪುವೆ ಎಂದು ಕರೆ ಮಾಡಿದ್ದವರು ಮರಳಿದ್ದು ಶ-ವ-ವಾಗಿ!

ಗರ್ಭದಲ್ಲಿ ಮಗು ಹೊತ್ತು ಪತಿಗಾಗಿ ಕಾಯುತ್ತಿದ್ದ ಇವರ ಪತ್ನಿ ರಮಾದೇವಿ ಗಂಡ ಸ-ತ್ತ ಸುದ್ದಿ ಕೇಳುತ್ತಲೇ ಕ್ರಿ-ಮಿ-ನಾ-ಶಕ ಸೇವಿಸಿ ಆ-ತ್ಮ-ಹ-ತ್ಯೆ-ಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೋಹರ್​ ಮತ್ತು ರಮಾದೇವಿ ಅವರ ಮದುವೆ ಮೂರು ವರ್ಷಗಳ ಹಿಂದೆ ನಡೆದಿತ್ತು. ಗರ್ಭಿಣಿಯಾಗಿದ್ದ ಅವರು ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ಪತಿಗಾಗಿ ಕಾದಿದ್ದರು. ಆದರೆ ಅಲ್ಲಿ ಬಂದದ್ದು ಸಾವಿನ ಸುದ್ದಿ! ಇಡೀ ಗ್ರಾಮ ಶೋಕದಲ್ಲಿ ಮುಳುಗಿದೆ.

ಕರ್ನಾಟಕದ ಚಾಮರಾಜನಗರದ ಯೋಧನ ಕತೆಯೂ ಹೀಗೇ ಆಗಿತ್ತು

ಚಾಮರಾಜನಗರ: ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮರಳಿ ಬರುತ್ತೇನೆಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಬಳಿಕ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಗುಂಡ್ಲುಪೇಟೆಯ ಯೋಧ ಕೊನೆಯುಸಿರೆಳೆದಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಶಿವಕುಮಾರ್(31) ಮೃತ ಸಿಆರ್ ಪಿಎಫ್ ಯೋಧ. ಹೃದಯಾಘಾತದಿಂದ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮತ್ತೆ ಮನೆಗೆ ಬರುತ್ತೇನೆಂದು ಸಮಾಧಾನ ಹೇಳಿ ಫೋನ್ ಕಟ್ ಮಾಡಿದ್ದು, ಬಳಿಕ 3 ಗಂಟೆಗಳಲ್ಲಿ ಹೃದಯಾಘಾತವಾಗಿದೆ. ಯೋಧನನ್ನು ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಮೃ-ತ ಯೋಧನಿಗೆ ಎರಡು ಮಕ್ಕಳಿದ್ದು, ಇಂದು ರಾತ್ರಿ ಶಿವಕುಮಾರ್ ಪಾರ್ಥಿವ ಶರೀರ ಹುಟ್ಟೂರಿಗೆ ಬರುವ ಸಾಧ್ಯತೆ ಇದೆ.
ಯೋಧ ಶಿವಕುಮಾರ್ ಕಳೆದ 8 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ದೆಹಲಿಯಲ್ಲಿ ನಿಯೋಜನೆಗೊಂಡಿದ್ದರು. ಕೊರೊನಾ ಸಮಯದಲ್ಲಿ ಮೂರು ತಿಂಗಳು ರಜೆ ತೆಗೆದುಕೊಂಡು ಊರಿಗೆ ಬಂದಿದ್ದ ಶಿವಕುಮಾರ್, ಕಳೆದ 8 ದಿನಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ಮರಳಿದ್ದರು.

Advertisement
Share this on...