ರೈತ ಎಂದರೆ ದೇಶದ ಅನ್ನದಾತ. ರೈತ ನಮ್ಮ ದೇಶದ ಬೆನ್ನೆಲುಬು ಆದರೆ ದೇಶಕ್ಕೆ ಅನ್ನ ನೀಡುವ ರೈತರು ಇಂದು ತುಂಬಾ ಕಷ್ಟದಲ್ಲಿ ಇದ್ದಾರೆ. ರೈತರು ಬೀಳುವ ಕಷ್ಟಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ದೇಶದ ಎಷ್ಟೋ ರೈತರು ಹಲವಾರು ಸಮಸ್ಯೆ ಸಂಕಷ್ಟಗಳಿಂದ ಪ್ರತಿವರ್ಷ ಸಾವಿರಾರು ಜನ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇನ್ನು ದೇಶದ ಪ್ರಧಾನಿಯು ರೈತರ ಕಷ್ಟ ತಿಳಿಯಲು ರೈತರಂತೆ ವೇಷ ತೊಟ್ಟು ಪೋಲಿಸ್ ಸ್ಟೇಷನ್ ಗೆ ಹೋದರು. ಇದು ಯಾವುದೋ ಬೇರೆ ದೇಶದ ಕಥೆಯಲ್ಲ. ಬದಲಾಗಿ ನಮ್ಮ ದೇಶದ ಕಥೆ.
ನಮ್ಮ ಪ್ರಧಾನಿಯವರು ಮಾರುವೇಷದಲ್ಲಿ ರೈತನ ವೇಷ ತೊಟ್ಟು ಪೋಲಿಸ್ ಸ್ಟೇಷನ್ ಗೆ ಹೋದರು. ನಂತರ ಅಲ್ಲಿ ನಡೆದ ಒಂದು ಇಂಟರೆಸ್ಟಿಂಗ್ ಕಥೆ ಏನು ಗೊತ್ತಾ..? ಸಂಜೆ 6 ಗಂಟೆಯ ಸಮಯದಲ್ಲಿ ಹಿತಾವ ಜಿಲ್ಲೆಯ ಪೊಲೀಸ್ ಸ್ಟೇಷನ್ ಗೆ ಒಬ್ಬ ರೈತ ಒಂದು ಸಮಸ್ಯೆಯೊಂದಿಗೆ ಬಂದರು. ಆತ ಸಾಧಾರಣವಾದ ದೋತಿ, ಕುರ್ತ ಹಾಕಿಕೊಂಡಿದ್ದನು ಹಾಗೂ ಮೈಯೆಲ್ಲಾ ಕೆಸರಾಗಿತ್ತು. ಅಲ್ಲಿ ಸ್ಟೇಷನ್ ನಲ್ಲಿ ಪೊಲೀಸರು ಯಾರಯ್ಯ ನೀನು ಎಂದು ಕೇಳಿದಾಗ ನನ್ನ ಎಮ್ಮೇ ಕಳೆದು ಹೋಗಿದೆ ಸ್ವಾಮಿ ಎಂದು ಸ್ಟೇಷನ್ ಒಳಗಡೆ ಆತುರದಿಂದ ನುಗ್ಗಿದ.
ಅಲ್ಲಿದ ಕಾನ್ಸ್ ಟೇಬಲ್ ಗಳು ನಿನ್ನ ಹೆಸರೇನು ಎಲ್ಲಿಂದ ಬರುತ್ತಿದ್ದೀಯಾ ನಿನ್ನ ಎಮ್ಮೆ ಎಲ್ಲಿ ಕಳೆದು ಹೋಯಿತು. ಎಮ್ಮೆ ಕಳೆದು ಹೋದರೆ ಕಂಪ್ಲೆಂಟ್ ಕೊಡುತ್ತೀಯಾ..? ಮೊದಲು ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಹುಡುಕು ಎಂದು ಗದರಿ ವಾಪಸು ಕಳುಹಿಸಿದರು. ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸು ಹೋಗುತ್ತಿದ್ದಾಗ ಅಲ್ಲಿಯೇ ಇದ್ದ ಮತ್ತೊಬ್ಬ ಕಾನ್ಸ್ಟೇಬಲ್ ಕಾಫಿ, ಟೀ ಗೆ ದುಡ್ಡು ಕೊಡು ರಿಪೋರ್ಟ್ ಬರೆದು ಕೊಡುತ್ತಿನಿ ಎನ್ನುತ್ತಾನೆ. ಅದಕ್ಕೆ ಆ ರೈತ ನಾನೊಬ್ಬ ಬಡವನಯ್ಯ ನನ್ನ ಹತ್ತಿರ ಕೇವಲ 35 ರೂಪಾಯಿ ಮಾತ್ರ ಇದೆ ಎಂದು ಲಂಚ ಕೊಟ್ಟನು.
ನಂತರ ಅಲ್ಲಿಯೇ ಕುಳಿತಿದ್ದ ಮತ್ತೋರ್ವ ಕಾನ್ಸ್ಟೇಬಲ್ ಆ ರೈತನ ಕಂಪ್ಲೇಂಟ್ ತೆಗೆದುಕೊಂಡನು. ಕಂಪ್ಲೇಂಟ್ ಬರೆದ ಮೇಲೆ ನೀನು ಸಹಿ ಮಾಡುತ್ತೀಯಾ ಇಲ್ಲ ಹೆಬ್ಬೆಟ್ಟು ಹಾಕುತ್ತೀಯಾ ಎಂದು ತಮಾಷೆ ಮಾಡಿದರು. ಆಗ ಪಕ್ಕದಲ್ಲೇ ಇದ್ದ ಪೊಲೀಸರು ವ್ಯಂಗ್ಯವಾಗಿ ನಕ್ಕರು. ಆದರೆ ರೈತ ಹೆಬ್ಬೆಟ್ಟು ಯಾಕೆ ಸ್ವಾಮಿ ನನಗೆ ಸಹಿ ಮಾಡಲು ಬರುತ್ತದೆ ಎಂದು ಸ್ಟೈಲಾಗಿ ಹೇಳಿದ. ಸರಿ ಹಾಗಾದರೆ ಸಹಿ ಮಾಡು ನೋಡೋಣ ಎಂದು ಪೇನ್ ಎಸೆದರು. ಪೆನಿನ್ನ ಜೊತೆಗೆ ಪೋಲೀಸ್ ಸ್ಟೇಷನ್ ನಲ್ಲಿದ್ದ ತಮ್ಬ್ ಪ್ಯಾಡ್ ಅನ್ನು ತೆಗೆದುಕೊಂಡನು ಆ ರೈತ. ಆದರೆ ಸಹಿ ಮಾಡಿದಾಗ ಚೌಧರಿ ಚರಣ್ ಸಿಂಗ್ ಎಂದು ಸ್ಟೈಲ್ ಆಗಿ ಸಹಿ ಮಾಡಿದರು. ಜೊತೆಗೆ ತನ್ನ ಜೇಬಿನಲ್ಲಿದ್ದ ಸೀಲ್ ಅನ್ನು ತೆಗೆದುಕೊಂಡು ತಮ್ಬ್ ಪ್ಯಾಡ್ ಮೇಲೆ ಬಲವಾಗಿ ಗುದ್ದಿ ಆ ಸೀಲ್ ಅನ್ನು ಸಹಿ ಬರೆದ ಜಾಗದಲ್ಲಿ ಹಾಕಿದರು ಮತ್ತು ಆ ಪೇಪರ್ ಅನ್ನು ಪೊಲೀಸರಿಗೆ ಕೊಟ್ಟರು ಅಷ್ಟೇ ಆ ಮುದ್ರೆಯನ್ನು ನೋಡಿ ಶಾಕ್ ಆಗಿ ಬಿಚ್ಚಿ ಬಿದ್ದರು ಆ ಪೊಲೀಸರು. ಆ ಮುದ್ರೆ ಏನು ಗೊತ್ತಾ..?
ಪ್ರೈ ಮಿನಿಷ್ಟರ್ ಆಫ್ ಇಂಡಿಯಾ ಎಂದು. ನಂತರ ಇಡೀ ಸ್ಟೇಷನ್ ನಲ್ಲಿದ್ದ ಪೋಲಿಸರನ್ನು ಲಂಚ ಕೇಳಿದ ಆರೋಪಕ್ಕೆ ಸಸ್ಪೆಂಡ್ ಮಾಡಿದರು. ಈ ಘಟನೆ 1979 ರಲ್ಲಿ ನಡೆದಿತ್ತು. ರೈತರ ಕಷ್ಟವನ್ನು ನಿವಾರಿಸಲು ಖುದ್ದು ಅಂದಿನ ಪ್ರಧಾನಿ ಚೌದರಿ ಸಿಂಗ್ ಅವರೇ ಮಾರು ವೇಷದಲ್ಲಿ ಬಂದಿದ್ದರು. ಇಂತಹ ಪ್ರಧಾನಿ ಹಾಗೂ ಜನ ನಾಯಕರು ಇದ್ದರೆ ನಮ್ಮ ದೇಶ ಮುಂದುವರಿಯುತ್ತದೆ. ಈ ಕಥೆ ಹಲವರಿಗೆ ತಿಳಿದಿಲ್ಲ ಅದನ್ನು ತಿಳಿಸುವ ಪ್ರಯತ್ನ ನಮ್ಮದಾಗಿದೆ.
– ಸುಷ್ಮಿತಾ