ನವರಾತ್ರಿ ಪ್ರಯುಕ್ತ ಹಿಂದೂ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದ ಮುಸ್ಲಿಂ ಮಹಿಳೆ: ಅಷ್ಟಕ್ಕೂ ಮುಸ್ಲಿಂ ಮಹಿಳೆ ಈ ಹಿಂದೂ ದೇವಾಲಯಕ್ಕೇ ಬಂದಿದ್ಯಾಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 403 views

ಶಿವಮೊಗ್ಗ: ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಹೆಮ್ಮೆ.. ಅದೆಷ್ಟೋ ಸಮುದಾಯಗಳು. ಪಂಥಗಳು ಇದ್ದರೂ ಒಂದಾಗಿ ಸಾಗುತ್ತಾರೆ. ಈಗ ಹೇಳುತ್ತಿರುವ ಸುದ್ದಿಯೂ ಅಂಥದ್ದೇ ಒಂದು ನಿದರ್ಶನ. ಸಮುದಾಯಗಳ ನಡುವಿನ ಬಂಧವನ್ನು ಇವು ಹೇಳುತ್ತವೆ.

Advertisement

ತನ್ನ ಪತಿ ನಿರ್ಮಾಣ ಮಾಡಿದ್ದ ದೇವಾಲಯಲಕ್ಕೆ ಪೂಜೆ ಸಲ್ಲಿಸಲು ಮುಸ್ಲಿಂ ಮಹಿಳೆಯೊಬ್ಬರು ಬಂದಿದ್ದಾರೆ. ನವರಾತ್ರಿ (Navratri) ಪೂಜೆಯಲ್ಲಿ ಭಾಗವಹಿಸಿದ್ದಾರೆ.

ಶಿವಮೊಗ್ಗ(Shivamogga) ಜಿಲ್ಲೆ ಸಾಗರದ (Sagar) ದೇವಾಲಯಕ್ಕೆ ಗಂಡನ ನೆನಪಿನ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಿದ್ದಾರೆ. ಕಳೆದೆ ಐವತ್ತು ವರ್ಷಗಳ ಹಿಂದೆ ನನ್ನ ಪತಿ ಭಗವತಿ ಅಮ್ಮನವರ ದೇವಾಲಯ ನಿರ್ಮಾಣಕ್ಕೆ ಕೈಜೋಡಿಸಿದ್ದರು. ಹಿಂದು ಸಮುದಾಯಕ್ಕೆ ನಂತರ ಹಸ್ತಾಂತರ ಮಾಡಿದ್ದರು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ರಾಜಕಾರಣ ಮತ್ತು ನಾಯಕರ ಆರೋಪಗಳು ಏನೇ ಇದ್ದರೂ ಜನರ ನಡುವಿನ ಬಾಂಧವ್ಯ ಹಾಗೆ ಉಳಿದುಕೊಂಡಿದೆ ಎನ್ನುವುದಕ್ಕೆ ಈ ಘಟನೆಯೇ ಒಂದು ನಿದರ್ಶನ.

ಆಂಜನೇಯನ ದೇವಸ್ಥಾನಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ದಾನ ನೀಡಿದ ಮುಸ್ಲಿಂ ವ್ಯಕ್ತಿ: ಕಾರಣವೇನು ನೋಡಿ

ಬೆಂಗಳೂರಿನ ಹೊರವಲಯದಲ್ಲಿರುವ ಹನುಮಾನ್ ದೇವಾಲಯವನ್ನು ವಿಸ್ತರಿಸಲು ಮುಸ್ಲಿಂ ಉದ್ಯಮಿಯೊಬ್ಬರು 1634 ಚದರ ಅಡಿ ಭೂಮಿಯನ್ನು ದಾನ ಮಾಡಿದ್ದಾರೆ. ಈ ಜಮೀನಿನ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ ಎಂದು ಹೇಳಲಾಗ್ತಿದೆ. ಓರ್ವ ಮುಸ್ಲಿಂ ವ್ಯಕ್ತಿ ಹಿಂದೂ ದೇವರಿಗೆ ಈ ರೀತಿಯ ದಾನ‌ ನೀಡುವ ಮೂಲಕ ಹಿಂದು ಮುಸ್ಲಿಮರ ಐಕ್ಯತೆಯನ್ನು ಸಾಬೀತುಪಡಿಸಿದ್ದಾರೆ.

ಇದೀಗ ಆ ಮುಸ್ಲಿಂ ವ್ಯಕ್ತಿ ಮಾಡಿದ ಈ ಕಾರ್ಯಕ್ಕೆ ಹಿಂದುಗಳು ಸೇರಿದಂತೆ ಅಲ್ಲಿನ ಸುತ್ತಲಿನ ಜನರು ಶ್ಲಾಘಿಸುತ್ತಿದ್ದಾರೆ. ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿರುವ ಎಂಎಂಜಿ ಬಾಷಾ ಅವರು ಹನುಮಾನ್ ದೇವಸ್ಥಾನ ನಿರ್ಮಿಸಲು ತನ್ನ ಮೂರು ಎಕರೆ ಭೂಮಿ ನೀಡಿದ್ದಾರೆ. ಈ ಸ್ಥಳ ಅವರು ವಾಸಿಸುವ ಸ್ಥಳಕ್ಕೆ ಬಹಳ ಹತ್ತಿರದಲ್ಲಿದೆ ಎಂದು ಹೇಳಲಾಗ್ತಿದೆ.

ಈ ದೇವಾಲಯದಲ್ಲಿ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿತ್ತು. ಇದರಿಂದ ಬಹಳಷ್ಟು ಜನರಿಗೆ ಅಲ್ಲಿ ಸ್ಥಳಾವಕಾಶ ಸಿಗದೆ ತೊಂದರೆಗಳು ಉಂಟಾಗುತ್ತಿತ್ತು. ಹೀಗಾಗಿ ದೇವಾಲಯವನ್ನು ವಿಸ್ತರಿಸಲು ಟ್ರಸ್ಟ್ ನಿರ್ಧರಿಸಿತು. ಆದರೆ, ಹಣದ ಕೊರತೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆಗ ಬಾಷಾ ಅವರು ತಮ್ಮ ಭೂಮಿಯನ್ನು ದಾನ ಮಾಡುವುದಾಗಿ ತಿಳಿಸುದ್ದಾರೆ ಎಂದು ದೇವಾಲಯದ ಜನರಿಗೆ ತಿಳಿಸಿದರು.

ಈ ಭೂಮಿ ರಾಷ್ಟ್ರಿಯ ಹೆದ್ದಾರಿಗೆ ಹತ್ತಿರದಲ್ಲಿರುವುದರಿಂದ ಅದಕ್ಕೆ ಸಾಕಷ್ಟು ಬೇಡಿಕೆಯಿತ್ತು ಎನ್ನಲಾಗಿದೆ. ಆದರೆ, ಟೆಂಪಲ್ ಟ್ರಸ್ಟ್ ಕೇವಲ 1089 ಚದರ ಅಡಿ ಭೂಮಿಯನ್ನು ಕೋರಿತ್ತು, ಆದರೆ ಬಾಷಾ ತಮ್ಮ ಕುಟುಂಬದೊಂದಿಗೆ ಮಾತನಾಡಿದ ನಂತರ 1634 ಚದರ ಅಡಿ ಭೂಮಿಯನ್ನು ದಾನ ಮಾಡಿದರು. ಈ ಜಮೀನಿನ ಮೌಲ್ಯ 1 ಕೋಟಿ ರೂಪಾಯಿಯಾಗುದೆ.

ಆದರೆ ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ ಈ ಭೂಮಿಯನ್ನು ದೇವಸ್ಥಾನಕ್ಕೆ ಭಾಷಾ ಅವರು ದಾನ ಮಾಡಿದರು. ಬಾಷಾ ಮತ್ತು ಅವರ ಕುಟುಂಬಕ್ಕೆ ಧನ್ಯವಾದ ಹೇಳಲು ಟ್ರಸ್ಟ್ ದೇವಸ್ಥಾನದ ಆ ಸ್ಥಳದಲ್ಲಿ ಒಂದು ಬ್ಯಾನರ್ ಕೂಡ ಹಾಕಿ ಧನ್ಯವಾದ ತಿಳಿಸಿದ್ದಾರೆ.

ಇಲ್ಲಿ ಆಂಜನೆಯ ದೇವಸ್ಥಾನ ನಿರ್ಮಿಸಿದರೆ ಹಿಂದೂಗಳು ಮತ್ತು ಮುಸ್ಲಿಮರು ದೀರ್ಘಕಾಲ ಒಟ್ಟಿಗೆ ಸೇರಬಹುದು ಎಂದು ಬಾಷಾ ಮಾಧ್ಯಮಕ್ಕೆ ತಿಳಿಸಿದರು. ಇತ್ತಿಚಿನ ದಿನಗಳಲ್ಲಿ ರಾಮ‌ ಮಂದಿರ ನಿರ್ಮಾಣದ ಕಾರ್ಯ ಶುರುವಾದಾಗಿನಿಂದ ಹಿಂದೂ ಮುಸ್ಲಿಮರ ಕುರಿತಾಗಿ ಸಾಕಷ್ಟು ವಿಭಜಕ ಚರ್ಚೆಗಳು ನಡೆಯುತ್ತಿವೆ. ಆದರೆ ನಾವು ಪ್ರಗತಿ ಹೊಂದಲು ಬಯಸಿದರೆ ದೇಶವು ಏಕತೆಯಿಂದ ಬದುಕಲು ಸಾಧ್ಯ ಎಂದು ಹೇಳಬಹುದು. ಈ ವ್ಯಕ್ತಿಯು ತೆಗೆದುಕೊಂಡ ನಿರ್ಧಾರವನ್ನು ಅಲ್ಲಿನ ಜನರಷ್ಟೇ ಅಲ್ಲ ದೇಶದಾದ್ಯಂತ ಎಲ್ಲಾ ಸಮಾಜದ ಜನರು ಹೊಗಳುತ್ತಿದ್ದಾರೆ.

Advertisement
Share this on...