ಹತ್ತಲ್ಲ ಇಪ್ಪತ್ತಲ್ಲ ಬರೋಬ್ಬರಿ 700 ವರ್ಷಗಳಿಂದ ಈ ಊರಿನ ಜನ 2 ಅಂತಸ್ತಿನ ಮನೆ ಕಟ್ಟೇ ಇಲ್ಲ: ಕಾರಣ ಮಾತ್ರ ದಂಗುಬಡಿಸುತ್ತೆ

in Kannada News/News/ಕನ್ನಡ ಮಾಹಿತಿ 213 views

ಈಗಂತೂ ಮಹಾನಗರಗಳಲ್ಲಿ ಮಹಡಿಗಳ ಮೇಲೆ ಮಹಡಿಗಳನ್ನು ಕಟ್ಟುವುದು ಸಾಮಾನ್ಯ. ಆದರೆ ಎಲ್ಲರ ಮನೆಗಳಲ್ಲೂ ಕೇವಲ ಒಂದೇ ಮಹಡಿ ನಿರ್ಮಿಸಿರುವ ಯಾವುದಾದರೂ ಸ್ಥಳವನ್ನು ನೀವು ಎಂದಾದರೂ ನೋಡಿದ್ದೀರಾ?. ಆದರೆ ನಾವಿಂದು ಅಂತಹ ಒಂದು ಸ್ಥಳದ ಬಗ್ಗೆ ನಿಮಗೆ ಹೇಳಲಿದ್ದೇವೆ. ಆ ಸ್ಥಳ ರಾಜಸ್ಥಾನದ ಚುರು ಜಿಲ್ಲೆಯ ಸರ್ದರ್ಶಹರ್ ತಹಸಿಲ್ ಒಳಗೆ ಇದೆ. ಅದರ ಹೆಸರು ಉಡ್ಸರ್ ಗ್ರಾಮ. ಇಲ್ಲಿ ಎಲ್ಲಾ ಮನೆಗಳಲ್ಲೂ ಕೇವಲ ಒಂದೇ ಮಹಡಿಯಿದೆ. ಕಳೆದ 700 ವರ್ಷಗಳಿಂದ ಈ ಗ್ರಾಮದಲ್ಲಿ ಯಾವುದೇ ಮನೆಯಲ್ಲೂ ಎರಡನೇ ಮಹಡಿಯನ್ನು ಕಟ್ಟಿಲ್ಲ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣವನ್ನು ತಿಳಿದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ. ವಿಚಿತ್ರ ಆಚರಣೆಗಳನ್ನು ಮಾಡುವ ಇಂತಹ ಅನೇಕ ಹಳ್ಳಿಗಳ ಬಗ್ಗೆ ನೀವು ಕೇಳಿರಬೇಕು. ದಂತಕಥೆಯ ಪ್ರಕಾರ ಆ ಹಳ್ಳಿಗಳಿಗೆ ಶಾಪ ತಟ್ಟಿರುವುದರಿಂದ ಅವು ಶಾಪದ ಫಲವನ್ನು ಅನುಭವಿಸುತ್ತಿರುತ್ತವೆ.

Advertisement

ಈ ಹಳ್ಳಿಯ ಬಗ್ಗೆ ಜನರು ಹೇಳುವ ಪ್ರಕಾರ ನೂರಾರು ವರ್ಷಗಳ ಹಿಂದೆ ಭೋಮಿಯಾ ಎಂಬ ವ್ಯಕ್ತಿ ಈ ಗ್ರಾಮದಲ್ಲಿ ವಾಸವಾಗಿದ್ದ. ಒಮ್ಮೆ ಈ ಹಳ್ಳಿಗೆ ಕಳ್ಳರು ಬಂದರು. ಭೋಮಿಯಾ ಆ ಕಳ್ಳರ ಜೊತೆ ಜಗಳವಾಡಲು ಪ್ರಾರಂಭಿಸಿದ. ಆ ನಂತರ ಕಳ್ಳರು ಭೋಮಿಯಾನನ್ನು ತುಂಬಾ ಹೊಡೆದರು. ಅವರು ಚೆನ್ನಾಗಿ ಹೊಡೆದ ಪರಿಣಾಮ ಭೋಮಿಯಾ ಸ್ಥಿತಿ ಗಂಭೀರವಾಯಿತು. ಕೊನೆಗೆ ಭೋಮಿಯಾ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ತನ್ನ ಅಳಿಯಂದಿರ ಮನೆಗೆ ತಲುಪಿದನು. ಅಲ್ಲಿ ಅವನು ಎರಡನೇ ಮಹಡಿಯಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಭೋಮಿಯಾನನ್ನು ಸುತ್ತಲೂ ಹುಡುಕಾಡಿದ ಕಳ್ಳರಿಗೆ ಭೋಮಿಯಾ ಅಳಿಯಂದಿರ ಮನೆ ತಲುಪಿದ ವಿಚಾರ ಕಿವಿಗೆ ಬಿದ್ದಿತು. ಕೊನೆಗೆ ಕಳ್ಳರು ಭೋಮಿಯಾ ಅಳಿಯನ ಮನೆಗೆ ನುಗ್ಗಿ, ಅವನು ಎಲ್ಲಿದ್ದಾನೆಂದು ಹೇಳಿ ಎಂದು ಮನೆಯ ಸದಸ್ಯರನ್ನು ಹೊಡೆಯಲು ಪ್ರಾರಂಭಿಸಿದರು. ಕೊನೆಗೆ ಕಳ್ಳರಿಗೆ ಅವನು ಮನೆಯಲ್ಲಿ ಅಡಗಿರುವ ಜಾಗ ತಿಳಿದುಬಂದಿತು. ಕಳ್ಳರು ನೇರವಾಗಿ ಭೋಮಿಯಾ ಇರುವ ಕಡೆ ಹೋಗಿ ಅವನ ಕುತ್ತಿಗೆಯನ್ನು ಕ#ತ್ತರಿಸಿದರು. ಆದರೆ ಅವನು ಕಳ್ಳರೊಂದಿಗೆ ಜಗಳವಾಡುತ್ತಾ ತನ್ನ ಹಳ್ಳಿಗೆ ಬಂದು ತನ್ನ ಪ್ರಾಣವನ್ನು ತ್ಯಜಿಸಿದನು. ಈ ಘಟನೆಯ ನಂತರ “ಯಾರಾದರೂ ಮನೆಯ ಎರಡನೇ ಮಹಡಿಯನ್ನು ನಿರ್ಮಿಸಿದರೆ, ಅದರಿಂದ ಅವನಿಗೆ ಕೆಟ್ಟದಾಗುತ್ತದೆ” ಎಂದು ಭೋಮಿಯಾ ಪತ್ನಿ ಶಪಿಸಿದಳು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ಗ್ರಾಮದಲ್ಲಿ ಯಾವುದೇ ಮನೆಯಲ್ಲಿ ಎರಡನೇ ಮಹಡಿ ಕಟ್ಟುವುದಿಲ್ಲ.

Advertisement
Share this on...