ಶಾರುಖ್ ಪುತ್ರ ಆಯ್ತು ಈಗ ಅಜಯ್ ದೇವಗನ್ ಕುಟುಂಬದ ಹೆಸರು ಹಾಳು ಮಾಡಲು ಮುಂದಾದ ಪುತ್ರಿ ನ್ಯಾಸಾ ದೇವಗನ್… ಇವರ ಹಣೆಬರಹ ಇಷ್ಟೇ ಎಂದ ನೆಟ್ಟಿಗರು

in Kannada News/News/ಸಿನಿಮಾ 4,298 views

ನವದೆಹಲಿ:

Advertisement
ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಪುತ್ರಿ ನ್ಯಾಸಾ ದೇವಗನ್ ಆಗಾಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರುತ್ತಾಳೆ ಮತ್ತು ಜನರು ಇಂಟರ್ನೆಟ್‌ನಲ್ಲಿ ನ್ಯಾಸಾ ಳನ್ನ ಜನ ಸಾಕಷ್ಟು ಟ್ರೋಲ್ ಮಾಡುತ್ತಲೇ ಇರುತ್ತಾರೆ. ನ್ಯಾಸಾ ದೇವಗನ್ ಕೆಲವೊಮ್ಮೆ ತನ್ನ ಸಣ್ಣ ಬಟ್ಟೆಗಳ ಬಗ್ಗೆ ಚರ್ಚೆಯಲ್ಲಿದ್ದರೆ ಇನ್ನು ಕೆಲವೊಮ್ಮೆ ತನ್ನ ಸ್ಕಿನ್ ಟೋನ್ ಕುರಿತಾಗಿ ಟ್ರೋಲ್‌ಗೊಳಗಾಗುತ್ತಲೇ ಇರುತ್ತಾಳೆ. ಸೋಷಿಯಲ್ ಮೀಡಿಯಾದಲ್ಲಿ ಈ ವರ್ತನೆಗಳಿಂದಾಗಿ, ಅಜಯ್ ದೇವಗನ್ ಕೂಡ ಆಗಾಗ್ಗೆ ಟ್ರೋಲರ್‌ಗಳ ಮೇಲೆ ರೇಗುತ್ತಿರುತ್ತಾರೆ.

ಒಮ್ಮೆ ನ್ಯಾಸಾ ತನ್ನ ತಂದೆ ಅಜಯ್ ದೇವಗನ್ ಜೊತೆ ದೇವಸ್ಥಾನದಿಂದ ಹೊರಗೆ ಬರುತ್ತಿರುವುದನ್ನು ಕಂಡಾಗ ಕೆಲವರು ಆಕೆಯ ಬಟ್ಟೆಗಳ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು. ನ್ಯಾಸಾ ಟ್ರೋಲಿಂಗ್‌ಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಈಕೆಯನ್ನ ಟ್ರೋಲ್‌ ಮಾಡಿದ್ದಾರೆ.

2019 ರಲ್ಲಿ, ದೀಪಾವಳಿಯಂದು ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಪಾರ್ಟಿ ನಡೆದಾಗ, ಬಾಲಿವುಡ್‌ನ ಎಲ್ಲಾ ಸೆಲೆಬ್ರಿಟಿಗಳನ್ನ ಆ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಅಜಯ್ ದೇವಗನ್ ತಮ್ಮ ಇಡೀ ಕುಟುಂಬದೊಂದಿಗೆ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ನ್ಯಾಸಾ ಬಿಳಿ ಬಣ್ಣದ ಲೆಹೆಂಗಾ ಧರಿಸಿದ್ದರು. ನ್ಯಾಸಾಳ ಮೇಕಪ್ ಜನರಿಗೆ ಇಷ್ಟವಾಗಿರಲಿಲ್ಲ.

ಆ ಪಾರ್ಟಿಯಲ್ಲಿ ನ್ಯಾಸಾ ಐ ಲೈನರ್ ಜೊತೆಗೆ ಗ್ಲಾಸಿ ಲಿಪ್ ಸ್ಟಿಕ್ ಹಚ್ಚಿದ್ದರು ಮತ್ತು ಅವಳು ತನ್ನ ಕೆನ್ನೆಗಳನ್ನು ಹೈಲೈಟ್ ಮಾಡಲಾಗಿತ್ತು, ನ್ಯಾಸಾ ನಿಸ್ಸಂದೇಹವಾಗಿ ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆಂದು ಭಾವಿಸಿದ್ದಳು ಆದರೆ ಜನರು ಆಕೆಯ ಮೇಕಪ್ ಅನ್ನು ಅಷ್ಟೊಂದು ಇಷ್ಟಪಡಲಿಲ್ಲ.

ಇದಲ್ಲದೆ, ಅಜಯ್ ದೇವಗನ್ ಅವರ ತಂದೆ ವೀರು ದೇವಗನ್ 2019 ರಲ್ಲಿ ನಿಧನರಾಗಿದ್ದರು. ಮರುದಿನವೇ, ನ್ಯಾಸಾ ಸಲೂನ್‌ನಿಂದ ಹೊರಬರುತ್ತಿರುವ ಫೋಟೋ ವೈರಲ್ ಆಗಿತ್ತು. ಇದಕ್ಕೂ ನ್ಯಾಸಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು. ಕೇವಲ ಒಂದು ದಿನದ ಹಿಂದೆ ತನ್ಬ ಅಜ್ಜ ನಿಧನರಾದರೂ ನ್ಯಾಸಾ ಸಲೂನ್ ಸುತ್ತುತ್ತಿದ್ದಾರೆ ಎಂದು ಜನರು ಟ್ರೋಲ್ ಮಾಡಿದ್ದರು.

ನ್ಯಾಸಾ ತನ್ನ ಚಿಕ್ಕ ಬಟ್ಟೆಗಳಿಂದಾಗಿ ಲೈಮ್ ಲೈಟ್ ನಲ್ಲಿರುತ್ತಾಳೆ. ಒಮ್ಮೆ ನ್ಯಾಸಾ ನೀಲಿ ಬಣ್ಣದ ಹೂಡಿಯಲ್ಲಿ ಕಾಣಿಸಿಕೊಂಡಳು. ಆಗ ಜನರು ನ್ಯಾಸಾ ಳನ್ನ ತುಂಬಾ ಗೇಲಿ ಮಾಡಿಧದರು. ಈ ಹುಡುಗಿ ತನ್ನ ಪ್ಯಾಂಟ್ ಧರಿಸಲು ಮರೆತಿದ್ದಾಳೆ ಎಂದು ಒಬ್ಬ ಬಳಕೆದಾರರು ಕಾಮೆಂಟ್‌ನಲ್ಲಿ ಬರೆದಿದ್ದರು.

ನ್ಯಾಸ ದಿನವೂ ಚಿಕ್ಕ ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಾಳೆ. ನ್ಯಾಸಾಗೆ ಈ ಬಟ್ಟೆಗಳೇ ಕಮ್ಫರ್ಟೇಬಲ್ ಅನಿಸುತ್ತವಂತೆ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ಜನರು ಈ ಬಟ್ಟೆಯಲ್ಲಿ ಆಕೆಯ ನೋಡಿದ ಕೂಡಲೇ ಟ್ರೋಲ್ ಮಾಡಲು, ಆಕ್ಷೇಪಿಸಲು ಪ್ರಾರಂಭಿಸುತ್ತಾರೆ.

ಇತ್ತೀಚಿಗೆ ನ್ಯಾಸಾ ಕೊನೆಯ ಬಾರಿ ಕಾಣಿಸಿಕೊಂಡಾಗ ನ್ಯಾಸಾ ಸ್ವಲ್ಪ ಬೆಳ್ಳಗೆ ಕಾಣುತ್ತಿದ್ದಳು. ಇದಕ್ಕೂ ಮುನ್ನ ನ್ಯಾಸಾ ಫೋಟೋಗಳು ನೋಡಿದರೆ ಆಕೆ ಸ್ವಲ್ಪ ಕಪ್ಪಾಗಿ ಕಾಣುತ್ತಿದ್ದಳು. ಆದರೆ ಈಗ್ಗೆ ಕೆಲವು ದಿನಗಳ ಹಿಂದೆ ನ್ಯಾಸಾ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಾಗ, ಆಕೆ ಫೇರ್ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಳು. ಅಂದಿನಿಂದ ಜನರು ಆಕೆ ಸ್ಕಿನ್ ಲೈಟ್‌ನಿಂಗ್ ಟ್ರೀಟ್‌ಮೆಂಟ್ ಮಾಡಿಸಿಕೊಂಡಿದ್ದಾಳೆ  ಎಂದು ಊಹಿಸಲು ಪ್ರಾರಂಭಿಸಿದ್ದರು.

ಇದೀಗ ನ್ಯಾಸಾ ಕೇವಲ 17 ವರ್ಷ ವಯಸ್ಸಿನವಳಾಗಿದ್ದು ತನ್ನ ಮೈಬಣ್ಣದ ಬಗ್ಗೆ ತುಂಬಾ ಕಾನ್ಶಿಯಸ್ ಆಗಿದ್ದು, ಆಕೆ ಸ್ಕಿನ್ ಲೈಟ್‌ನಿಂಗ್ ಕೂಡ ಮಾಡಿಸಿಕೊಂಡಿದ್ದಾಳೆ.

Advertisement
Share this on...