ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್‌ಗೆ ಭ ಯೋತ್ಪಾ ದಕ ಸಂಘಟನೆ ಐಸಿಸ್ ಹೆಸರಿನಲ್ಲಿ ಮತ್ತೊಮ್ಮೆ ಬೆದರಿಕೆ ಹಾಕಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಗೌತಮ್ ಗಂಭೀರ್‌ಗೆ ಇದು ಮೂರನೇ ಬೆದರಿಕೆಯಾಗಿದೆ. ಐಸಿಸ್‌ಗೆ ದೆಹಲಿ ಪೊಲೀಸರಲ್ಲೂ ಗೂಢಚಾರರಿದ್ದಾರೆ ಎಂದು ಈ ಬೆದರಿಕೆಯಲ್ಲಿ ಹೇಳಲಾಗಿದೆ. ಇ-ಮೇಲ್ ಮೂಲಕ ಅವರಿಗೆ ಈ ಬೆದರಿಕೆ ಹಾಕಲಾಗಿದೆ. ಇದರಲ್ಲಿ ಐಪಿಎಸ್ ಶ್ವೇತಾ ಚೌಹಾಣ್ ಅವರ ಹೆಸರೂ ಇದೆ. ಶ್ವೇತಾ ಚೌಹಾಣ್ ಪ್ರಸ್ತುತ ದೆಹಲಿ ಪೊಲೀಸ್‌ನಲ್ಲಿ ಕೇಂದ್ರೀಯ ಡಿಸಿಪಿ ಹುದ್ದೆಯಲ್ಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಬೆದರಿಕೆ ಇಮೇಲ್ ಶನಿವಾರ (27 ನವೆಂಬರ್ 2021) ಮಧ್ಯಾಹ್ನ 1.27 ಕ್ಕೆ ಬಂದಿದೆ. ಕಳುಹಿಸುವವರ yahoo ಖಾತೆಯು [emailprotected] ಆಗಿದೆ. ನಿಮ್ಮ ಪ್ರತಿಯೊಂದು ಮಾಹಿತಿಯನ್ನು ಪಡೆಯುತ್ತಿದ್ದೇವೆ ಎಂದು ಬೆದರಿಕೆಯಲ್ಲಿ ತಿಳಿಸಿದ್ದಾರೆ. ದೆಹಲಿ ಪೊಲೀಸರಲ್ಲೂ ನಮ್ಮ ಜನ ಇದ್ದಾರೆ. ಪೊಲೀಸರು ಮತ್ತು ಐಪಿಎಸ್ ಶ್ವೇತಾ ಚೌಹಾಣ್ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬಂದಿದ್ದ ಬೆದರಿಕೆಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ಶ್ವೇತಾ ಚೌಹಾಣ್, ಪೊಲೀಸರು ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.
Gautam Gambhir receives third threat. This time threat is from Kashmir. Someone sent him an email threatening him of dire consequences. The email reads "DCP and entire Delhi Police can't save you"@DCPCentralDelhi @DelhiPolice @GautamGambhir pic.twitter.com/sPYup1vOd9
— Atulkrishan (@iAtulKrishan) November 28, 2021
ಕಳೆದ ವಾರ ಗೌತಮ್ ಗಂಭೀರ್ ತನ್ನನ್ನು ಕೊ ಲ್ಲು ವ ಬೆದರಿಕೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ನಂತರ ಮೇಲ್ ಮಾಡಿರುವವವರು ತಮ್ಮನ್ನ ತಾವು ಐಸಿಸ್ ಕಾಶ್ಮೀರ ದವರು ಎಂದು ಪರಿಚಯಿಸಿಕೊಂಡು ಬೆದರಿಕೆ ಮೇಲ್ ಕಳುಹಿಸುತ್ತಿದೆ ಎಂದು ಹೇಳಿಕೊಂಡಿದ್ದಾನೆ. ನವೆಂಬರ್ 23 ರ ರಾತ್ರಿ ಗಂಭೀರ್‌ಗೆ ಮೊದಲ ಬೆದರಿಕೆ ಬಂದಿತು. ಮೊದಲ ಇ-ಮೇಲ್‌ನಲ್ಲಿ, ‘ಶೀಘ್ರದಲ್ಲೇ ನಿನ್ನ ಕುಟುಂಬ ಸದಸ್ಯರನ್ನು ಕೊ ಲ್ಲ ಲಾಗುತ್ತದೆ, ನೀನು ನಿನ್ನ ಕುಟುಂಬವನ್ನು ಪ್ರೀತಿಸುತ್ತಿದ್ದರೆ ರಾಜಕೀಯದಿಂದ ದೂರವಿದ್ದುಬಿಡು’. ಈ ಎರಡನೇ ಮೇಲ್ ಅನ್ನು ನವೆಂಬರ್ 24 ರಂದು ಕಳುಹಿಸಲಾಗಿದೆ.
ಎರಡನೇ ಇ-ಮೇಲ್‌ನಲ್ಲಿ ಗೌತಮ್ ಗಂಭೀರ್ ಅವರ ಮನೆಯ ಹೊರಗಿನಿಂದ ಮಾಡಿದ ವೀಡಿಯೊವನ್ನು ಸಹ ಲಗತ್ತಿಸಲಾಗಿದೆ. ತನಿಖೆಯ ವೇಳೆ ದೆಹಲಿ ಪೊಲೀಸರು ಗೂಗಲ್ ನಿಂದ ಬೆದರಿಕೆ ಕಳುಹಿಸಿದವರ ಬಗ್ಗೆ ಮಾಹಿತಿ ಕೇಳಿದ್ದರು. ಇ-ಮೇಲ್ ಕಳುಹಿಸಿದವರ ವಿಳಾಸ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆದರಿಕೆಗಳ ನಂತರ ಗೌತಮ್ ಗಂಭೀರ್ ಕುಟುಂಬದ ಭದ್ರತೆಯನ್ನು ಹೆಚ್ಚಿಸಲಾಗಿದೆ.