ಮೊಹಮ್ಮದ್ ಘಜ್ನಿಯ 35000 ಸೇನೆಯನ್ನ ಕೇವಲ 500 ಜನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸಿದ್ದ, ಇತಿಹಾಸದ ಪುಟಗಳಲ್ಲಿ ಎಲ್ಲೂ ಕಾಣ ಸಿಗದ ಚುಡೈಲ್ (ಮಾಟಗಾತಿ) ರಾಣಿ ದಿಡ್ಡಾ ಸಾಹಸಗಾಥೆ

in Kannada News/News/ಕನ್ನಡ ಮಾಹಿತಿ 152 views

ತಮ್ಮ ಶೌರ್ಯದಿಂದ ದೇಶದ ಶತ್ರುಗಳ ಮಣ್ಣುಮುಕ್ಕಿಸಿರುವ ಅನೇಕ ವೀರಾಂಗಣಿಯರು ಭಾರತದಲ್ಲಿದ್ದಾರೆ. ಬಾಲ್ಯದಿಂದಲೂ ನಾವು ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ವೀರಗಾಥೆಯನ್ನು ಕೇಳುತ್ತಿದ್ದೇವೆ. ಇವರಲ್ಲದೆ, ತಮ್ಮ ಶೌರ್ಯವನ್ನು ಸಾಧಿಸಿದ ಇನ್ನೂ ಅನೇಕ ವೀರಾಂಗಣಿಯರು ಭಾರತದಲ್ಲಿದ್ದಾರೆ. ಈ ವೀರವನಿತೆಯ ಬಗ್ಗೆ ನೀವು ಹಿಂದೆಂದೂ ಕೇಳಿರುವುದಿಲ್ಲ, ಅಂತಹ ಭಾರತದ ರಾಣಿಯ ವೀರಗಾಥೆಯನ್ನು ಇಂದು ನಾವು ನಿಮಗೆ ಹೇಳುತ್ತೇವೆ,

Advertisement

ಹೌದು ಭಾರತದ ಒಬ್ಬ ವೀರ ರಾಣಿಯು ತನ್ನ ಸಂಸಾರವನ್ನೇ ತ್ಯಜಿಸಿದವಳು, ಆದರೆ ತನ್ನ ಬುದ್ದಿವಂತಿಕೆಯಿಂದ ಆಕೆ ಅದೆಷ್ಟೋ ಅಸಂಖ್ಯಾತ ಶತ್ರುಗಳಿಗೆ ಮಣ್ಣುಮುಕ್ಕಸಿ ವಿಜಯ ಸಾಧಿಸಿದ್ದಳು. ಆಕೆಯನ್ನು ಜನರು ಲಂಗ್ಡಿ (ಕುಂಟಿ) ರಾಣಿ ಎಂದೂ ಕರೆಯುತ್ತಿದ್ದರು. ಆಕೆಯ ಕುಂಟತನದ ಪರಿಣಾಮವು ತನ್ನ ಕೆಲಸದ ಮೇಲೆ ಪರಿಣಾಮ ಬೀರಲು ಆಕೆ ಎಂದಿಗೂ ಬಿಡಲಿಲ್ಲ ಮತ್ತು ಮೊಹಮ್ಮದ್ ಘಜ್ನವಿಯಂತಹ ಲೂಟಿಕೋರ ದೇಶದಿಂದ ಒಂದಲ್ಲ ಎರಡೆರಡು ಬಾರಿ ಹೊರಹಾಕಿದ್ದಳಂತ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅಂತಹ ಧೈರ್ಯ ಮತ್ತು ಧೈರ್ಯದಿಂದ ತುಂಬಿದ ರಾಣಿಯ ಹೆಸರು ದಿಡ್ಡಾ, ಹೌದು ಈ ವೀರಾಂಗಣಿಯ ಬಗ್ಗೆ ಬಹುಶಃ ಯಾರೂ ಓದಿರುವುದೂ ಇಲ್ಲ, ಕೇಳಿರುವುದೂ ಇಲ್ಲ.

ಯಾರು ಈ ರಾಣಿ ದಿಡ್ಡಾ?

ಲೋಹರ್ ರಾಜವಂಶದಲ್ಲಿ ಜನಿಸಿದ ದಿಡ್ಡಾ ಬಹಳ ಸುಂದರವಾದ ಮಗುವಾಗಿದ್ದಳು. ಚಂದ್ರನಲ್ಲಿ ಒಂದು ಕಲೆ ಇದ್ದೆ ಇರುತ್ತೆ ಅಂತ ಹೇಳ್ತಾರಲ್ಲ ಹಾಗೆಯೇ ರಾಣಿ ದಿಡ್ಡಾ ಅವರ ಬಳಿಯೂ ಒಂದು ಕಲೆಯಿತ್ತು ಅದುವೇ ಆಕೆ ಅಂಗವಿಕಲಳಾಗಿದ್ದಳು. ಅಂಗವಿಕಲನೆಂಬ ಕಾರಣಕ್ಕೆ ತಂದೆ-ತಾಯಿ ಕೈಬಿಟ್ಟಿದ್ದರು. ದಿಡ್ಡಾ ಒಬ್ಬ ಸೇವಕಿಯಿಂದ ಬೆಳೆದಳು ಮತ್ತು ಆಕೆಯೇ ದಿಡ್ಡಾಗೆ ಹಾಲುಣಿಸಿದಳು. ಅಂಗವಿಕಲರಾಗಿದ್ದರೂ ದಿಡ್ಡಾ ಸಮರ ಕಲೆ ಮತ್ತು ಕ್ರೀಡೆಗಳಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದರು. ಕಾಶ್ಮೀರದ ರಾಜ ಕ್ಷೇಮಗುಪ್ತನು ಬೇಟೆಯ ಸಮಯದಲ್ಲಿ ಈಕೆಯನ್ನ ನೋಡಿದ ಕೂಡಲೇ ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೇಮಾಂಕುರವಾಯಿತು. ಒಂದು ಕಾಲು ಕುಂಟಿದ್ದರೂ, ಅವನು ದಿಡ್ಡಾಳನ್ನ ಮದುವೆಯಾಗಲು ಒಪ್ಪಿಕೊಂಡನು. ಕ್ಷೇಮ್ ಗುಪ್ತಾ ಅವಳನ್ನು ಪ್ರೀತಿ ಮತ್ತು ಪೂರ್ಣ ಗೌರವದಿಂದ ಇಟ್ಟುಕೊಂಡಿದ್ದ. ಮಗ ರತ್ನನ ಜೊತೆಗೆ ಕ್ಷೇಮಗುಪ್ತನೂ ಆಡಳಿತದಲ್ಲಿ ಪಾಲ್ಗೊಳ್ಳತೊಡಗಿದ. ಈ ಗೌರವಾರ್ಥವಾಗಿ ಆತ ತನ್ನ ಹೆಂಡತಿಯ ಹೆಸರಿನಲ್ಲಿ ನಾಣ್ಯವನ್ನು ಬಿಡುಗಡೆ ಮಾಡಿದನು. ಗುಪ್ತನು ಎಂತಹ ಮಹಾನ್ ರಾಜನಾಗಿದ್ದನೆಂದರೆ, ಅವನು ಮೊಟ್ಟ ಮೊದಲ ಬಾರಿಗೆ ತನ್ನ ಹೆಂಡತಿಯ ಹೆಸರಿನಿಂದ ಕರೆಯಲ್ಪಟ್ಟನು.

ಕೇವಲ 500 ಸೈನಿಕರೊಂದಿಗೆ 35000 ಸೈನ್ಯವನ್ನ ಸೋಲಿಸಿದ ಕ್ಷಣ

ರಾಣಿ ದಿಡ್ಡಾ ಎಂತಹ ಬುದ್ಧಿವಂತ ಮತ್ತು ಕ್ರಾಂತಿಕಾರಿ ಮಹಿಳೆಯಾಗಿದ್ದಳೆಂದರೆ, ಕೆಲವೇ ನಿಮಿಷಗಳಲ್ಲಿ ರಣರಂಗದಲ್ಲಿ ಇಡೀ ಆಟವನ್ನೇ ತಿರುಗಿಸಿ ಶತ್ರುಗಳನ್ನ ಮಣ್ಣುಮುಕ್ಕಿಸಿಬಿಡುತ್ತಿದ್ದಳು. ಇಂದು ಇಡೀ ವಿಶ್ವವೇ ಕಮಾಂಡೋಗಳು ಮತ್ತು ಗೆರಿಲ್ಲಾ ಯುದ್ಧದಲ್ಲಿ ಹೋರಾಡುತ್ತಿರುವ ಸೇನೆಗೆ ಈ ಕುಂಟ ರಾಣಿಯೇ ಕಾರಣ. ನಾವು ಇತಿಹಾಸವನ್ನು ನೋಡಿದರೆ, ಚುಡೈಲ್ ಲಂಗ್ಡಿ ರಾಣಿ 35000 ಸೈನ್ಯದ ಮುಂದೆ ತನ್ನ 500 ಸಣ್ಣ ಪಡೆಯೊಂದಿಗೆ ತಲುಪಿ ಕೇವಲ 45 ನಿಮಿಷಗಳಲ್ಲಿ ಯುದ್ಧವನ್ನು ಗೆದ್ದ ಬಗ್ಗೆ ಉಲ್ಲೇಖವಿದೆ. ಪತಿ ತನ್ನ ಹೆಸರಿನ ಮುಂದೆ ತನ್ನ ಹೆಂಡತಿಯ ಹೆಸರನ್ನ ಸೇರಿಸಿಕೊಂಡು ದಿಡ್ಡ ಕ್ಷೇಮಗುಪ್ತ ಎಂದು ಹೆಸರುವಾಸಿಯಾಗಿದ್ದನೆಂದರೆ ಈ ರಾಣಿ ಎಂತಹ ವೀರಾಂಗಿಣಿಯಾಗಿರಬಹುದು ನೀವೇ ಯೋಚಿಸಿ.

ಚುಡೈಲ್ (ಮಾಟಗಾತಿ) ರಾಣಿ ಹೆಸರಿನಿಂದಲೇ ಖ್ಯಾತಿ ಪಡೆದಿದ್ದ ರಾಣಿ ದಿಡ್ಡಾ

ಇತಿಹಾಸದ ಪುಟಗಳಲ್ಲಿ, ಕಾಶ್ಮೀರದ ರಾಣಿ ದಿಡ್ಡಾಗೆ ಚುಡೈಲ್ (ಮಾಟಗಾತಿ) ರಾಣಿಯ ಸ್ಥಾನಮಾನವನ್ನು ನೀಡಲಾಯಿತು, ಏಕೆಂದರೆ ಅವಳ ಮಾನಸಿಕ ಶಕ್ತಿಯು ಅನೇಕ ಶತ್ರುಗಳನ್ನು ಮತ್ತು ರಾಜರನ್ನು ಮಂಡಿಯೂರುವಂತೆ ಮಾಡುತ್ತಿತ್ತು. ದೊಡ್ಡ ದೊಡ್ಡ ರಾಜರುಗಳೂ ಸಹ ಈಕೆಯ ಎದುರು ಸೋಲನ್ನು ಒಪ್ಪಿಕೊಳ್ಳುತ್ತಿದ್ದರು. ರಾಜರುಗಳು ಈಕೆಯ ಎದುರು ಸೋತರೆ ಈಕೆ ಒಬ್ಬ ಚುಡೈಲ್ (ಮಾಟಗಾತಿ) ಹಾಗಾಗಿ ನಾವು ಸೋತೆವು ಎಂದು ತಮ್ಮ ಸೋಲನ್ನ ಮರೆಮಾಚಲು ಅಪಪ್ರಚಾರ ಮಾಡುತ್ತಿದ್ದರು, ಆಗಿನಿಂದ ರಾಣಿ ದಿಡ್ಡಾ ಚುಡೈಲ್ ರಾಣಿ. ನಂತರ, ಪತಿ ಕ್ಷೇಮಗುಪ್ತನು ಮರಣಹೊಂದಿದಾಗ, ಈಕೆಯನ್ನ ಸೋಲಿಸಲು, ಶತ್ರುಗಳು ದಿಡ್ಡಾ ಗೆ ಸತಿ ಸಹಗಮನ ಪದ್ಧತಿಯನ್ನ ನೆನಪಿಸಿದರು, ಆದರೆ ದಿಡ್ಡಾ ಮಾತ್ರ ಶತ್ರುಗಳ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿ ಕ್ಷೇಮಗುಪ್ತನ ಮೊದಲ ಹೆಂಡತಿಯನ್ನು ಸತಿಸಹಗಮನ ಮಾಡುವಂತೆ ಮಾಡಿದಳು. ರಾಣಿ ದಿಡ್ಡಾ ತನ್ನ ಸ್ವಂತ ನಿಯಮಗಳ ಮೇಲೆ ಸಿಂಹಾಸನವನ್ನು ಏರಿದಳು ಮತ್ತು ಸುಮಾರು 50 ವರ್ಷಗಳ ಕಾಲ ಆಳಿದಳು.

ಇಂದು ದಿಡ್ಡಾಳ ಕಥೆ ಇತಿಹಾಸದ ಪುಟಗಳಲ್ಲಿ ನಾವು ಕಾಣದಿದ್ದರೂ, ಆಕೆಯ ಸಾಹಸಗಾಥೆ ಇಂದಿಗೂ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ದಿಡ್ಡಾ ಅಂತಹ ನಾಯಕಿಯಾಗಿದ್ದು, ತನ್ನದೇ ಆದ ನಿಯಮಗಳ ಮೇಲೆ ಜೀವನ ನಡೆಸುತ್ತಿದ್ದಳು ಮತ್ತು ತನ್ನದೇ ಆದ ನಿಯಮಗಳ ಮೇಲೆ ಜೀವಿಸಿದಳು. ಆಕೆ ಶತ್ರುಗಳ ದುರುದ್ದೇಶಪೂರಿತ ಚಿಂತನೆಗೆ ಸವಾಲು ಹಾಕಿದಳು. ಇಂತಹ ಮಹಾನ್ ನಾಯಕಿಯನ್ನು ನಮ್ಮ ದೇಶ ಯಾಕೆ ಇತಿಹಾಸದ ಪುಟಗಳಲ್ಲಿ ಜಾಗ ನೀಡಲಿಲ್ಲ ಅನ್ನೋದನ್ನ ಪ್ರತಿಯೊಬ್ಬರೂ ಯೋಚಿಸಲೇಬೇಕು.

ಕ್ಷೇಮಗುಪ್ತನ ಮೃತ್ಯು

ಒಂದು ದಿನ ಬೇಟೆಯ ಸಮಯದಲ್ಲಿ ಕ್ಷೇಮಗುಪ್ತನು ಹತನಾದನು. ಅವನ ಮರಣದ ನಂತರ, ದಿಡ್ಡಾಳ ಜೀವನದಲ್ಲಿ ಬಿರುಗಾಳಿಯೇ ಎದ್ದಿತು. ಒಂದು ಕಡೆ ಗಂಡನ ಸಾವಿನ ದುಃಖವಿದ್ದರೆ ಇನ್ನೊಂದು ಕಡೆ ಸತಿ ಸಹಗಮನ ಆಗುವ ಸಂಪ್ರದಾಯವಿತ್ತು ಅದೇ ಸಮಯದಲ್ಲಿ ಹಾಗೇನಾದರೂ ಮಾಡಿದರೆ ರಾಜ್ಯಭಾರದ ಜವಾಬ್ದಾರಿ ಪುಟ್ಟ ರಾಜಕುಮಾರನ ಮೇಲೆ ಬೀಳುತ್ತಿತ್ತು. ಮರಣದ ಸಮಯದಲ್ಲಿ, ರಾಜ್ಯವನ್ನು ಸುರಕ್ಷಿತ ಕೈಯಲ್ಲಿ ಕೊಡುವ ರಾಜನ ಪ್ರತಿಜ್ಞೆಯು ಪುಟ್ಟ ಮಗನಿಗೆ ಅಧಿಕಾರ ನೀಡುತ್ತದೆ, ಇದರಿಂದಾಗಿ ರಾಣಿ ದಿಡ್ಡಾ ಸತಿ ಸಹಗಮನ ಮಾಡಲು ನಿರಾಕರಿಸಿದಳು.

ಗದ್ದುಗೆ ಏರಿದ ರಾಣಿ ದಿಡ್ಡಾ

ಪತಿಯ ನಿಧನದ ಬಳಿಕ ದಿಡ್ಡಾಳ ಜೀವನ ತುಂಬಾ ಕಷ್ಟಕರವಾಯಿತು. ತನ್ನ ಅಂಗವೈಕಲ್ಯದ ಹೊರತಾಗಿಯೂ, ಆಕೆ ತನ್ನ ಗಂಡನ ಮರಣದ ನಂತರ ರಾಜ್ಯದ ಅಧಿಕಾರ ವಹಿಸಿಕೊಳ್ಳಲು ನಿರ್ಧರಿಸಿದಳು. ಆಕೆ ಅನೇಕ ಯುದ್ಧಗಳಲ್ಲಿ ತನ್ನ ಬುದ್ಧಿಮತ್ತೆಯಿಂದ ಗೆದ್ದಳು. ಈಕೆಯ ಕಾರಣದಿಂದಲೇ ಜಗತ್ತಿನಲ್ಲಿ ಗೆರಿಲ್ಲಾ ಟೆಕ್ನಿಕ್ ಮತ್ತು ವಿಶ್ವದ ಮೊದಲ ಕಮಾಂಡೋ ಸೈನ್ಯ ರಚಿಸಲಾಯಿತು.

ಸಮಯ ಕಳೆಯಿತು ಮತ್ತು ಯಾವ ಮಗನಿಗಾಗಿ ಆಕೆ ಸತಿ ಸಹಗಮನ ನಿರಾಕರಿಸಿದ್ದಳೋ ಅದೇ ಮಗ ಆಕೆಯನ್ನ ಅರಮನೆಯಿಂದ ಹೊರಹಾಕಿದನು. ಇದಾದ ನಂತರವೂ ಆಕೆ ತನ್ನ ಪ್ರಜೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಳು. ದೇವಾಲಯಗಳ ನಿರ್ಮಾಣದಿಂದ ಹಿಡಿದು ಇಡೀ ಏಷ್ಯಾದೊಂದಿಗೆ ವ್ಯಾಪಾರ ಮಾಡಲು ಮತ್ತು ಇರಾನ್‌ಗೆ ವಿಸ್ತರಿಸುವ ಅಖಂಡ ಭಾರತದ ಗಡಿಗಳನ್ನು ರಕ್ಷಿಸಲು ರಣ ತಂತ್ರವನ್ನು ಸಿದ್ಧಪಡಿಸಿದಳು.

ಇತಿಹಾಸದ ಪುಟಗಳಲ್ಲಿ ನೋಡಿದರೆ, ಭಾರತವನ್ನು ಪ್ರವೇಶಿಸಿ ಸಾಕಷ್ಟು ವಿನಾಶವನ್ನು ಉಂಟುಮಾಡಿದ ಭಯಂಕರ ಮೆಹಮೂದ್ ಘಜ್ನವಿಯ ಉಲ್ಲೇಖವೂ ಇದೆ. ಪುಸ್ತಕಗಳಲ್ಲಿ ಉಲ್ಲೇಖವಿರುವ ವಿಷಯಗಳ ಬಗ್ಗೆ ಮಾತನಾಡುವುದಾದರೆ, ಮೆಹಮೂದ್ ಘಜ್ನವಿ ಸೋಮನಾಥ ಮಂದಿರ ಹಾಗು ಅನೇಕ ನಗರಗಳ ಲೂಟಿ ಮಾಡಿದ್ದರ ಬಗ್ಗೆ ನಮಗೆ ಗೊತ್ತಿದೆ ಆದರ ಅನೇಕ ನಗರಗಳನ್ನು ಧ್ವಂಸಗೊಳಿಸಿದ ಘಜ್ನವಿಯನ್ನು ದಿಡ್ಡಾ ಭಾರತಕ್ಕೆ ಒಂದಲ್ಲ ಎರಡಲ್ಲ ಬಾರಿ ಪ್ರವೇಶಿಸದಂತೆ ತಡೆದು ಯುದ್ಧದಲ್ಲಿ ಸೋಲಿಸಿ ಮಣ್ಣುಮುಕ್ಕಿಸಿದ್ದಳು ಅನ್ನೋದು ಈವರೆಗೆ ಯಾರಿಗೂ ತಿಳಿದಿಲ್ಲ.

ದಿಡ್ಡಾಳ ಈ ಸಾಹಸಗಾಥೆ ಇತಿಹಾಸದಲ್ಲಿ ಮರೆಯಾಗಿರಬಹುದು, ಆದರೆ ದಿಡ್ಡಾ ತನ್ನ ರಾಜ್ಯವನ್ನು ನಿಭಾಯಿಸಿದ ರೀತಿ ಭಾರತಕ್ಕೆ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಈ ಲೇಖನದ ಮೂಲಕ, ಅಂತಹ ಅದ್ಭುತ, ವೀರ ರಾಣಿಯ ಕಥೆಯನ್ನು ತಿಳಿಸುವ ಸಣ್ಣ ಪ್ರಯತ್ನ ಇದಾಗಿದೆ.

– Vinod Hindu Nationalist

Advertisement
Share this on...