“ಮುಸ್ಲಿಮರ ವೋಟಿಂಗ್ ಪವರ್ ಕಿತ್ಗೊಂಡು ಅವರನ್ನ ಎರಡನೆಯ ದರ್ಜೆಯ ನಾಗರಿಕರನ್ನಾಗಿ ಮಾಡಬೇಕು, ಇಲ್ಲಿರಬೇಕಾದರೆ ಮುಸ್ಲಿಮರೆಲ್ಲಾ…”: ಮಹಾಮಂಡಲೇಶ್ವರ್ ಯತೀಂದ್ರನಾಥ ಸ್ವಾಮೀಜೀ

in Kannada News/News 13,932 views

ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಜುನಾ ಅಖಾಡಾದ ಮಹಾಮಂಡಲೇಶ್ವರ ಯತೀಂದ್ರಾನಂದ ಗಿರಿ ಸ್ವಾಮೀಜಿ ಯವರು ಭಾರತದ ಮುಸ್ಲಿಮರ ಬಗ್ಗೆ ದೊಡ್ಡ ಹೇಳಿಕೆಯೊಂದನ್ನ ನೀಡಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಬದುಕುವ ಹಕ್ಕಿಲ್ಲ ಎಂದು ಮಹಾಮಂಡಲೇಶ್ವರರು ಭಾನುವಾರ ಹೇಳಿದ್ದಾರೆ. ಮುಸ್ಲಿಮರ ಮತದಾನದ ಹಕ್ಕನ್ನು ಕಸಿದುಕೊಂಡು ಅವರನ್ನು ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಬೇಕು. ಮುಸ್ಲಿಮರು ಭಾರತದಲ್ಲಿ ಬದುಕಬೇಕಾದರೆ ನಿರಾಶ್ರಿತರಾಗಿ ಬದುಕಬೇಕು ಎಂದಿದ್ದಾರೆ.

Advertisement

ಮಹಾಮಂಡಲೇಶ್ವರ ಯತೀಂದ್ರಾನಂದ ಗಿರಿ ಅವರು ಸಂಭಲ್ ನಲ್ಲಿರುವ ಬಿಜೆಪಿ ನಾಯಕ ಕಪಿಲ್ ಸಿಂಘಾಲ್ ಅವರ ನಿವಾಸಕ್ಕೆ ಭೇಟಿ ಕೊಟ್ಟರು. ಈ ವೇಳೆ ಅವರು ಮುಸ್ಲಿಮರ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ಭಾರತ ಇಬ್ಭಾಗವಾಗಿ ಪಾಕಿಸ್ತಾನವನ್ನು ಅವರಿಗಾಗಿ ನೀಡಿದಾಗ ಮುಸ್ಲಿಮರು ಭಾರತದಲ್ಲಿ ಇರೋದಾದರೂ ಯಾಕೆ? ಅವರು ಇಲ್ಲಿಂದ ಹೊರಡಬೇಕು ಎಂದರು.

ಭಾರತ ವಿಭಜನೆಯನ್ನು ಸ್ಮರಿಸಿದ ಯತೀಂದ್ರಾನಂದ ಗಿರಿ, 1947ರಲ್ಲಿ ದೇಶ ವಿಭಜನೆಯಾದಾಗ ಜಾತ್ಯತೀತ ನಾಯಕರು ಎಂದು ಕರೆಸಿಕೊಳ್ಳುವವರು ಭೌಗೋಳಿಕ ಅಥವಾ ಇತಿಹಾಸದ ಆಧಾರದಲ್ಲಿ ದೇಶವನ್ನು ವಿಭಜಿಸದೆ ಧರ್ಮದ ಆಧಾರದ ಮೇಲೆ ವಿಭಜಿಸಿದರು. ಹಿಂದೂ-ಮುಸ್ಲಿಂ ಇಬ್ಬರು ಸಹೋದರರು ಎಂದು ಹೇಳುತ್ತಿದ್ದರು, ಆದರೆ ಸಂಸ್ಕೃತಿಯನ್ನು ಪಡೆಯದವರು ಎಂದಿಗೂ ಸಹೋದರರಾಗಲು ಸಾಧ್ಯವಿಲ್ಲ ಎಂದು ಮಹಾಮಂಡಲೇಶ್ವರರು ಹೇಳಿದರು.

ಭಾರತದ ಬಹುಭಾಗವನ್ನು ಮುಸ್ಲಿಮರಿಗೆ ನೀಡಲಾಗಿದೆ ಎಂದು ಹೇಳಿದರು. ಈಗ ಹಕ್ಕು ಇಲ್ಲದಿದ್ದರೂ ಅವರಿಗೆ ಭೂಮಿ ಕೊಟ್ಟರೆ ಭಾರತದಲ್ಲಿ ಅವರ ಹಕ್ಕು ಏನು? ಅವರು ಈಗ ಭಾರತದಲ್ಲಿ ಏನು ಮಾಡುತ್ತಿದ್ದಾರೆ? ಅವರು ಭಾರತದ ಸಂಸ್ಕೃತಿಯನ್ನು ಮತ್ತು ಇಲ್ಲಿನ ಸರ್ಕಾರವನ್ನು ದ್ವೇಷಿಸುತ್ತಿದ್ದಾರೆಂದರೆ ಅವರು ಪಾಕಿಸ್ತಾನಕ್ಕೆ ಹೋಗಬೇಕು. ಭಾರತದಲ್ಲಿ ಇರಬೇಕಾದರೆ ಅವರು ನಿರಾಶ್ರಿತರಾಗೇ ಬದುಕಬೇಕು ಎಂದರು.

ಯತೀಂದ್ರಾನಂದ ಗಿರಿ ಮಾತನಾಡಿ, ಇಲ್ಲಿ ನೆಲೆಸಿದ್ದರೂ ಮುಸ್ಲಿಮರು ಇಲ್ಲಿನ ಸಂಸ್ಕೃತಿ ಮತ್ತು ಜನರನ್ನು ತಮ್ಮವರೆಂದು ಪರಿಗಣಿಸುತ್ತಿಲ್ಲ. ಮುಸ್ಲಿಂ ಸಮುದಾಯವು ದೇಶದ ಸಂಪನ್ಮೂಲಗಳ ಸಂಪೂರ್ಣ ಲಾಭವನ್ನು ಪಡೆಯುತ್ತಿದೆ, ಆದರೆ ಪ್ರತಿದಿನ ಭಾರತದ ಸಂಸ್ಕೃತಿ ಮತ್ತು ಸರ್ಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು. ಭಾರತದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಸಿದ್ಧವಿಲ್ಲದವನು ಭಾರತದ ಪ್ರಜೆಯಾಗಲು ಅರ್ಹನಲ್ಲ. ಆದ್ದರಿಂದ ಅವರ ಮತದಾನದ ಹಕ್ಕನ್ನು ರದ್ದುಪಡಿಸಿ ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡಬೇಕು ಎಂದರು.

ಲಕ್ನೋವನ್ನು ಶಾಹೀನ್ ಬಾಗ್ ಮಾಡಬೇಕು ಎಂಬ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿಕೆಗೆ ತಿರುಗೇಟು ನೀಡಿದ ಯತೀಂದ್ರಾನಂದ್ ಗಿರಿ, “ಇದಕ್ಕಾಗೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾವಾಗಿನಿಂದಲೊ ಕಾಯುತ್ತಿದ್ದಾರೆ. ಇದಕ್ಕಾಗಿ ಓವೈಸಿಯನ್ನು ಯಾವಾಗಿನಿಂದಲೋ ಯೋಗಿಜಿ ಆಹ್ವಾನಿಸುತ್ತಿದ್ದಾರೆ. ಓವೈಸಿಗೆ ಲಕ್ನೋಗೆ ಬರಲು ಧೈರ್ಯವಿದ್ದರೆ, ಅದನ್ನು ಮಾಡಿ ತೋರಿಸಲಿ. ಮುಖ್ಯಮಂತ್ರಿಗಳು ಅವರನ್ನು ಆತ್ಮೀಯವಾಗೇ ಸ್ವಾಗತಿಸಲಿದ್ದಾರೆ” ಎಂದು ಹೇಳಿದರು

Advertisement
Share this on...