ಬಿಗ್ ಬ್ರೇಕಿಂಗ್: ಟ್ವಿಟ್ಟರ್ CEO ಸ್ಥಾನದಿಂದ ಕೆಳಗಿಳಿದ ಜ್ಯಾಕ್ ಡೋರ್ಸಿ, ಈ ಭಾರತೀಯನಿಗೆ ಸಿಗಲಿದೆ Twitter CEO ಹುದ್ದೆ

in Kannada News/News 130 views

Jack Dorsey Resign: ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನ ಸಿಇಒ ಜ್ಯಾಕ್ ಡೋರ್ಸಿ (Jack Dorsey) ಅವರು ತಮ್ಮ CEO ಹುದ್ದೆಯನ್ನು ತೊರೆದಿದ್ದಾರೆ.

ಈ ಬಗ್ಗೆ ಸ್ವತಃ ಜಾಕ್ ಡೋರ್ಸಿ (Jack Dorsey)

Advertisement
ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಜ್ಯಾಕ್ ಡೋರ್ಸಿ ನಂತರ, ಕಂಪನಿಯ CTO ಪರಾಗ್ ಅಗರ್ವಾಲ್ (Parag Agrawal New Twitter CEO) ಅವರನ್ನು CEO ಮಾಡಬಹುದು ಎಂದು ಹೇಳಲಾಗುತ್ತಿದೆ.

ಟ್ವಿಟರ್ ಮುಖ್ಯಸ್ಥ ಜಾಕ್ ಡಾರ್ಸಿ ತಮ್ಮ ಟ್ವೀಟ್ ನಲ್ಲಿ ಹೀಗೆ ಬರೆದಿದ್ದಾರೆ, “ಸಹ ಸಂಸ್ಥಾಪಕರಿಂದ ಸಿಇಒ, ಅಧ್ಯಕ್ಷರು, ಕಾರ್ಯನಿರ್ವಾಹಕ ಅಧ್ಯಕ್ಷರು, ಮಧ್ಯಂತರ-ಸಿಇಒನಿಂದ ಸಿಇಒವರೆಗೆ ಕಂಪನಿಯಲ್ಲಿ ಸುಮಾರು 16 ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಅಂತಿಮವಾಗಿ ನಾನು ಹೊರಡುವ ಸಮಯ ಬಂದಿದೆ ಎಂದು ನಾನು ನಿರ್ಧರಿಸಿದೆ. ಪರಾಗ್ (ಪರಾಗ್ ಅಗರ್ವಾಲ್) ನಮ್ಮ ಮುಂದಿನ CEO ಆಗಲಿದ್ದಾರೆ”.

ಪರಾಗ್ ಅಗರ್ವಾಲ್ ಎದುರಿವೆ ಈ ಸವಾಲುಗಳು

ಎಲಿಯಟ್ ಮ್ಯಾನೇಜ್‌ಮೆಂಟ್‌ನ ಸಂಸ್ಥಾಪಕ ಮತ್ತು ಬಿಲಿಯನೇರ್ ಹೂಡಿಕೆದಾರ ಪಾಲ್ ಸಿಂಗರ್, ಜಾಕ್ ಡಾರ್ಸೆ ಎರಡು ಸಾರ್ವಜನಿಕ ಕಂಪನಿಗಳಲ್ಲಿ ಒಂದರ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಹೇಳಿದ್ದರು. ಈಗ ಡೋರ್ಸೆ ಕೆಳಗಿಳಿಯುವುದರೊಂದಿಗೆ, ಹೊಸ ಸಿಇಒ ಪರಾಗ್ ಅಗರ್ವಾಲ್ ಟ್ವಿಟರ್‌ನ ಇಂಟರ್ನಲ್ ಟಾರ್ಗೆಟ್ ಗಳನ್ನು ಪೂರೈಸಬೇಕಾಗುತ್ತದೆ. 2023 ರ ಅಂತ್ಯದ ವೇಳೆಗೆ 315 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಲು ಮತ್ತು ವಾರ್ಷಿಕ ಆದಾಯವನ್ನು ಕನಿಷ್ಠ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿಯು ಈ ವರ್ಷದ ಆರಂಭದಲ್ಲಿ ಹೇಳಿದೆ.

ಯಾರು ಈ ಪರಾಗ್ ಅಗರ್ವಾಲ್?

ಪರಾಗ್ ಅಗರ್ವಾಲ್ (ಪಿಕು) ಒಬ್ಬ ಇಂಡೋ-ಅಮೆರಿಕನ್. ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ ಮತ್ತು ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ಪದವಿ ಪಡೆದರು. ಅವರನ್ನು ಈಗ ಟ್ವಿಟರ್‌ನ ಸಿಇಒ ಮಾಡಲಾಗಿದೆ. ಇದಕ್ಕೂ ಮೊದಲು, ಅವರು ಟ್ವಿಟರ್‌ನ ಟೆಕ್ನಿಕಲ್ ಸ್ಟ್ರ್ಯಾಟೆಜಿಕ್, ಮಶಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಗ್ರಾಹಕ, ಆದಾಯ ಮತ್ತು ವಿಜ್ಞಾನ ತಂಡಗಳನ್ನು ನೋಡಿಕೊಳ್ಳುತ್ತಿದ್ದರು.

ಈ ಹಿಂದೆಯೂ ರಾಜೀನಾಮೆ ಕೊಟ್ಟಿದ್ದ ಜ್ಯಾಕ್ ಡೋರ್ಸಿ

ಜುಲೈ 2006 ರಲ್ಲಿ ಬಳಕೆದಾರರಿಗಾಗಿ Twitter ಅನ್ನು ಪ್ರಾರಂಭಿಸಲಾಯಿತು. ಟ್ವಿಟರ್‌ನಲ್ಲಿ ಮೊದಲ ಟ್ವೀಟ್ ಅನ್ನು ಅದರ ಸಹ-ಸಂಸ್ಥಾಪಕ ಮತ್ತು ಸಿಇಒ ಜಾಕ್ ಡಾರ್ಸಿ ಮಾಡಿದ್ದರು. ಸಿಇಒ ಆಗಿ ಡಾರ್ಸಿ ಅವರ ಮೊದಲ ಅವಧಿಯು 2008 ರವರೆಗೆ ಇತ್ತು. ಸಿಇಒ ಡಿಕ್ ಕಾಸ್ಟೊಲೊ ಕೆಳಗಿಳಿದ ನಂತರ ಅವರು 2015 ರಲ್ಲಿ ಟ್ವಿಟರ್ ಬಾಸ್ ಆಗಿ ಮರಳಿದರು. ಇಂದು ಪ್ರಪಂಚದಾದ್ಯಂತ ಟ್ವಿಟರ್‌ನ ಕೋಟ್ಯಂತರ ಬಳಕೆದಾರರಿದ್ದಾರೆ.

Advertisement
Share this on...