ಸದ್ಯ ಕೊರೊನಾವೈರಸ್ ಲಸಿಕೆಯನ್ನ ವಿಶ್ವದ ಅನೇಕ ದೇಶಗಳಲ್ಲಿ ಜನರಿಗೆ ವ್ಯಾಕ್ಸಿನೇಷನ್ ಮಾಡುತ್ತಿರುವ ಸಮಯದಲ್ಲೇ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಭವಿಷ್ಯದ ಸಾಂಕ್ರಾಮಿಕ ರೋಗಗಳ ಬಗ್ಗೆ ಭವಿಷ್ಯವಾಣಿ ನುಡಿದು ಜಗತ್ತಿಗೆ ಎಚ್ಚರಿಸಿದ್ದು ಇದು ಪ್ರಪಂಚದಾದ್ಯಂತ ಕಳವಳವನ್ನು ಉಂಟುಮಾಡಿದೆ.
ನೆನಪಿರಲಿ, 2015 ರಲ್ಲಿಯೇ ಕರೋನಾ ವೈರಸ್‌ನಂತಹ ಸಾಂಕ್ರಾಮಿಕ ರೋಗದ ಬಗ್ಗೆ ಗೇಟ್ಸ್ ಎಚ್ಚರಿಸಿದ್ದರು. ಈಗ ಕರೋನಾ ವೈರಸ್ ನಂತರ, ಬಿಲ್ ಗೇಟ್ಸ್ ಇನ್ನೂ ಎರಡು ವಿಪತ್ತುಗಳ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಜಗತ್ತು ಮತ್ತೆ ಆತಂಕಕ್ಕೊಳಗಾಗುವಂತೆ ಮಾಡಿದ್ದಾರೆ. ಗೇಟ್ಸ್ ಪ್ರಕಾರ, ಕರೋನದ ನಂತರ, ಈಗ ಅಂತಹ ಎರಡು ಭಯಾನಕ ವಿಪತ್ತುಗಳು ಬರಲಿವೆ, ಅದು ಇಡೀ ಮಾನವಕುಲಕ್ಕೇ ಮಾ-ರ-ಕ-ವಾಗುವ ಸಾಧ್ಯತೆಯಿದೆ ಎಂದಿದ್ದಾರೆ.
2015 ರಲ್ಲಿ ಬಿಲ್ ಗೇಟ್ಸ್ ಭವಿಷ್ಯವಾಣಿ
2015 ದ ಬಗ್ಗೆ ಮಾತನಾಡುವುದಾದರೆ, ಆ ಸಂದರ್ಭದಲ್ಲೇ ಬಿಲ್ ಗೇಟ್ಸ್ ಕೊರೋನಾ ವೈರಸ್ ಬಗ್ಗೆ ಭವಿಷ್ಯ ನುಡಿದಿದ್ದರು, ಅದು ಈಗ ಅಂದರೆ 2020 ರಲ್ಲಿ ನಿಜವಾಗಿತ್ತು. ಇದೀಗ ಜನರು ಕರೋನಾದಂತಹ ಭಯಾನಕ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಲಸಿಕೆ ಸಾಮಾನ್ಯ ಜನರಿಗೆ ತಲುಪಿಲ್ಲ, ಅಂತಹ ಸಮಯದಲ್ಲಿ, ಗೇಟ್ಸ್ ಅವರ ಈ ಭವಿಷ್ಯವಾಣಿಯು ಜನರನ್ನ ಮತ್ತೆ ಬೆ-ಚ್ಚಿ-ಬೀ-ಳಿ-ಸಿ-ದೆ.
ಬಿಲ್ ಗೇಟ್ಸ್ ಹೇಳುವ ಪ್ರಕಾರ, ಈಗ ಕರೋನಾ ವೈರಸ್ ಗಿಂತಲೂ ಭೀಕರವಾದ ವಿಪತ್ತುಗಳನ್ನ ಸಹ ಜನರ ಎದುರಿಸಲು ಸಿದ್ಧರಾಗಿರಿ ಎಂಬ ಮುನ್ಸೂಚನೆಯನ್ನು ಸಹ ನೀಡಿದ್ದಾರೆ. ಇದಕ್ಕೆ ಕಾರಣವೇನೆಂದರೆ ಜನರು ಅಂತಹ ವಿಪತ್ತು ಬರೋಕೂ ಮುಂಚೆಯೇ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಿದ್ಧರಾಗಿರಲಿ ಎಂಬುದಾಗಿದೆ.
ಮುಂದಿನ ಪ್ರಕೋಪ? ನಾವು ಸಿದ್ಧರಾಗಿಲ್ಲ
ಮುಂದಿನ ಪ್ರಕೋಪ? ನಾವು ಸಿದ್ಧರಾಗಿಲ್ಲ… ಇದರ ಬಗ್ಗೆ ಮಾತನಾಡುವುದಾದರೆ ಈ ಶಿರ್ಷಿಕೆಯ 2015 ರ ಟೆಡ್ ಟಾಕ್ ನಲ್ಲಿ ಬಿಲ್ ಗೇಟ್ಸ್ ಕೊರೋನಾ ಮಹಾಮಾರಿಯ ರೀತಿಯ ಸಂಭವನೀಯ ವೈರಸ್ ಗಳ ಬಗ್ಗೆ ಮಾತನಾಡಿದ್ದರು. ಆಗ ಗೇಟ್ಸ್ ಮಾತನಾಡುತ್ತ ಮುಂದಿನ ಕೆಲ ದಶಕಗಳಲ್ಲಿ 10 ಲಕ್ಷಕ್ಕೂ ಅಧಿಕ ಸಾ-ವು ಸಂಭವಿಸುತ್ತದೆ, ಇದಕ್ಕೆ ಯು-ದ್ಧ-ವಲ್ಲ ಬದಲಾಗಿ ಒಂದು ಸಾಂಕ್ರಾಮಿಕ ವೈರಸ್ ಕಾರಣವಾಗಬಹುದು ಎಂದಿದ್ದರು. ಅವರು ಮುಂದೆ ಮಾತನಾಡುತ್ತ ಇದು ಮಿ-ಸೈ-ಲ್ ಗಳಲ್ಲ ಬದಲಾಗಿ ಮೈಕ್ರೋಬ್ಸ್ ಆಗಿರಲಿವೆ ಎಂದಿದ್ದರು.
ಈಗ ಬಿಲ್ ಗೇಟ್ಸ್ ನುಡಿದ ಭವಿಷ್ಯವೇನು?
ಕರೋನಾ ವೈರಸ್ ಸಾಂಕ್ರಾಮಿಕವು ಜಗತ್ತನ್ನು ಬೆಚ್ಚಿಬೀಳಿಸಿದೆ, ಆದ್ದರಿಂದ ಮಾರ್ಚ್ 2020 ರಲ್ಲಿ ಬಿಲ್ ಗೇಟ್ಸ್ 2015 ರಲ್ಲಿ ಹೇಳಿದ್ದ ಮಾತುಗಳು ವಿಶ್ವದ ಗಮನ ಸೆಳೆದಿತ್ತು. ಗೇಟ್ಸ್ ಆರು ವರ್ಷಗಳ ಹಿಂದೆ ಕರೋನಾವನ್ನು ಊಹಿಸಿದ್ದರು. ಮೈಕ್ರೋಸಾಫ್ಟ್ ಮುಖ್ಯಸ್ಥ ಕೆಲವು ದಿನಗಳ ಹಿಂದೆ ಜನಪ್ರಿಯ ಯೂಟ್ಯೂಬ್ ಚಾನೆಲ್ “ವೆರಿಟಾಸಿಯಂ” ಅನ್ನು ನಡೆಸುತ್ತಿರುವ ಡೆರೆಕ್ ಮುಲ್ಲರ್ ಅವರೊಂದಿಗೆ ಮಾತನಾಡುತ್ತಾ, ತನ್ನ ಭವಿಷ್ಯದ ಬಗ್ಗೆ ತನಗೆ ಒಳ್ಳೆಯ ಭಾವನೆ ಇಲ್ಲ ಎಂದು ಹೇಳಿದ್ದಾರೆ