ಹರಿಯಾಣದ ಗುರುಗ್ರಾಮ್‌ನಲ್ಲಿ ಕಳೆದ ಹಲವಾರು ದಿನಗಳಿಂದ ಹಿಂದೂಗಳು ಬೀದಿ ಬೀದಿಗಳಲ್ಲಿ ರೋಡ್ ಜ್ಯಾಮ್ ಮಾಡಿ ಬಹಿರಂಗ ಪ್ರಾರ್ಥನೆಗಾಗಿ ಅಲ್ಲಿ ನಮಾಜ್ ಮಾಡುತ್ತಿದ್ದ ಮುಸಲ್ಮಾನರನ್ನ ವಿರೋಧಿಸುತ್ತಲೇ ಬಂದಿದ್ದರು. ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಿಳಿಯುತ್ತಲೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಅವರು ಮಹತ್ವದ ನಿರ್ಧಾರವನ್ನೂ ತೆಗೆದುಕೊಂಡಿದ್ದಾರೆ. ಈ ಸುದ್ದಿಯ ಮೂಲಕ ಅವರು ಹೇಳಿದ್ದೇನು? ಯಾವ ನಿರ್ಧಾರ ಕೈಗೊಂಡಿದ್ದಾರೆ? ಈ ಬಗ್ಗೆ ಇದೀಗ ಚರ್ಚೆಯಾಗುತ್ತಿರೋದಾದರು ಯಾಕೆ? ಬನ್ನಿ ಸಂಪೂರ್ಣ ಸುದ್ದಿಯನ್ನು ನಿಮಗೆ ವಿವರವಾಗಿ ತಿಳಿಸುತ್ತೇವೆ.
ತೆರೆದ ಮೈದಾನ, ರಸ್ತೆಗಳಲ್ಲಿ ನಮಾಜ್ ಮಾಡುವುದನ್ನ ಸಹಿಸಲ್ಲ: ಮನೋಹರ್‌ಲಾಲ್ ಖಟ್ಟರ್
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬಹಿರಂಗ ಪ್ರಾರ್ಥನೆಗೆ ಸಂಬಂಧಿಸಿದಂತೆ ಬಹಳ ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ. ಅವರು ಹೇಳಿಕೆ ನೀಡಿದ ನಂತರವೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹರಿಯಾಣದ ಗುರುಗ್ರಾಮದಲ್ಲಿ ಯಾರೂ ಧಾರ್ಮಿಕ ಕಾರ್ಯಕ್ರಮಗಳನ್ನು ತೆರೆದ ಸ್ಥಳದಲ್ಲಿ ನಡೆಸುವಂತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡೋದನ್ನ ಸಹಿಸಲು ಸಾಧ್ಯವಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಅಷ್ಟೇ ಅಲ್ಲ ಈ ವಿಚಾರವಾಗಿ ಅವರು ಇನ್ನೂ ಹಲವು ಮಾತುಗಳನ್ನು ಹೇಳಿದ್ದಾರೆ.
"खुले में नमाज कतई बर्दाश्त नहीं की जाएगी"- CM मनोहर लाल खट्टर(@mlkhattar) #Namaz#Gurugram @VijayVst0502 @vinod_bansal @naveenjindalbjp @TarekFatah pic.twitter.com/ipNcxwL9W8
— O News हिंदी (@ONewshindi) December 11, 2021
ಸ್ಥಳೀಯ ಆಡಳಿತಗಳಿಗೆ ಖಡಕ್ ಸೂಚನೆ ಕೊಟ್ಟ ಖಟ್ಟರ್
ಮುಸ್ಲಿಂ ಸಮುದಾಯದ ಜನರು ತೆರೆದ ಬಯಲಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಬಾರದು ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಅಂತಹವರು ತಮ್ಮ ತಮ್ಮ ಮನೆಯಲ್ಲೂ ಈ ಕೆಲಸವನ್ನು ಮಾಡಬಹುದು. ಇದಕ್ಕಾಗಿ ಗುರುಗ್ರಾಮಕ್ಕೆ ಬಂದು ಬಯಲಿನಲ್ಲಿ ನಮಾಜ್ ಮಾಡುವುದು ಅನಿವಾರ್ಯವಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದ ಹಲವು ಅಧಿಕಾರಿಗಳು ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಬಳಿಕ ಮಾತನಾಡಿ, ಪರಸ್ಪರ ನಿರ್ಣಯ ಕೈಗೊಂಡು ಶೀಘ್ರವೇ ಬಗೆಹರಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ಹೇಳಿದರು. ವಿಶೇಷವೆಂದರೆ ಈ ಕುರಿತಾದ ಮಾಹಿತಿಯನ್ನ ಅವರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ತಿಳಿಸಿದ್ದಾರೆ.
ಟ್ವೀಟ್ ಮಾಡಿ ಮಾಹಿತಿ ನೀಡಿದ ಮೊಹಮ್ಮದ್ ಘಜಾಲಿ
ಇನ್ನು ಹರಿಯಾಣದ ಗುರುಗ್ರಾಮದಲ್ಲಿ ನಮಾಜ್ ಇರುವುದಿಲ್ಲ ಎಂದು ಪತ್ರಕರ್ತ ಮೊಹಮ್ಮದ್ ಘಜಾಲಿ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಅವರು ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡುತ್ತಿರುವುದನ್ನ ಕಾಣಬಹುದು. ಹಲವು ಪತ್ರಕರ್ತರು ಕೂಡ ಸಿಎಂ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು, ಅವರ ಪ್ರಶ್ನೆಗಳಿಗೆ ಮನೋಹರ್ ಲಾಲ್ ಖಟ್ಟರ್ ಉತ್ತರಿಸುತ್ತಿದ್ದಾರೆ. ಇನ್ನು ಗುರುಗ್ರಾಮದಲ್ಲಿ ತೆರೆದ ಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಇರುವುದಿಲ್ಲ ಎಂದು ಮನೋಹರ್ ಲಾಲ್ ಖಟ್ಟರ್ ಸ್ಪಷ್ಟವಾಗಿ ಹೇಳಿರುವುದನ್ನು ನೀವು ವೀಡಿಯೊದಲ್ಲಿ ಕೇಳಬಹುದು.
"Friday prayers in open spaces wont be allowed in Gurugram," says Haryana CM Manohar Lal Khattar @mlkhattar @ndtv pic.twitter.com/tyo0IikbB6
— Mohammad Ghazali (@ghazalimohammad) December 10, 2021
ಸಾವರ್ಜನಿಕ ಜಾಗಗಳಲ್ಲಿ ಇನ್ನುಮುಂದೆ ನಡೆಯಲ್ಲ ನಮಾಜ್
ಈಗ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಡೆಯಲ್ಲ. ಗುರುಗ್ರಾಮದಲ್ಲಿ ನಮಾಜ್ ಇರುತ್ತದೆ ಆದರೆ ಅದು ವಕ್ಫ್ ಬೋರ್ಡ್ ಭೂಮಿ ಮತ್ತು ಮದರಸಾ ಹೊಂದಿರುವ 12 ಸ್ಥಳಗಳಲ್ಲಿ ಮಾತ್ರ. ಇನ್ನೊಂದೆಡೆ ಸಾರ್ವಜನಿಕ ಸ್ಥಳಗಳ ಬಗ್ಗೆ ಮಾತನಾಡುವುದಾದರೆ ಈಗ ಕೇವಲ 6 ಕಡೆ ಮಾತ್ರ ನಮಾಜ್ ನಡೆಯಲಿದೆ. ಎರಡೂ ಸಮುದಾಯಗಳ ಜನರು ಒಟ್ಟಿಗೆ ಕುಳಿತುಕೊಂಡ ನಂತರ ಈ ನಿರ್ಣಯಕ್ಕೆ ಬರಲಾಗಿದೆ. ಎರಡೂ ಸಮುದಾಯಗಳ ಜನರೊಂದಿಗೆ ಹರಿಯಾಣ ಸರ್ಕಾರದ ಅಧಿಕಾರಗಳೂ ಇದರಲ್ಲಿ ಭಾಗವಹಿಸಿದ್ದರು.
ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಪರಸ್ಪರ ಕುಳಿತು ಮಾತುಕತೆ ನಡೆಸುವ ಮೂಲಕ ಈ ವಿಷಯವನ್ನು ಬಗೆಹರಿಸಲು ಪ್ರಯತ್ನಿಸಿದರು. ಮುಸ್ಲಿಂ ಸಮುದಾಯದ ಪರವಾಗಿ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಅನೇಕ ಜನರು ಇದರಲ್ಲಿ ಭಾಗವಹಿಸಿದ್ದರು. ಮತ್ತೊಂದೆಡೆ ಹಿಂದೂ ಸಮುದಾಯದ ಅನೇಕ ಜನರೂ ಉಪಸ್ಥಿತರಿದ್ದರು. ಅಷ್ಟೇ ಅಲ್ಲ, ಹಿಂದೂ ಸಂಘಟನಯ ಅನೇಕ ಜನರು ಇದರಲ್ಲಿ ಭಾಗವಹಿಸಿದ್ದರು. ಎಲ್ಲ ಜನರು ತಮ್ಮ ತಮ್ಮಲ್ಲೇ ಒಮ್ಮತವನ್ನು ಮಾಡಿಕೊಂಡು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ನಿರ್ಧಾರದ ನಂತರ ಎರಡೂ ಸಮುದಾಯದ ಜನರು ಸಂತಸಗೊಂಡಿದ್ದಾರೆ.
ಹಿಂದೂ ಸಂಘರ್ಷ ಸಮಿತಿಯ ಅನೇಕರು ಪಾಲ್ಗೊಂಡಿದ್ದರು
ಈ ಸಭೆಯಲ್ಲಿ ಹಿಂದೂ ಸಂಘರ್ಷ ಸಮಿತಿಯ ಅನೇಕ ಜನರು ಭಾಗವಹಿಸಿದ್ದರು. ಸ್ಥಳೀಯ ಆಡಳಿತ ಒಪ್ಪಿಗೆ ನೀಡಿದ ಬಳಿಕವಷ್ಟೇ 12 ಮಸೀದಿ ಹಾಗೂ 6 ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ನಡೆಸಲಾಗುವುದು ಎಂದು ಹೇಳಲಾಗಿದೆ. ಈ ನಿರ್ಧಾರದ ಬಳಿಕ ಈ ವಿಚಾರದಲ್ಲಿ ಯಾವುದೇ ಪಕ್ಷದ ಮುಖಂಡರು ರಾಜಕೀಯ ಮಾಡಬಾರದು ಎಂದು ಎರಡೂ ಸಮುದಾಯದ ಜನರು ಹೇಳಿದ್ದಾರೆ. ಇದರೊಂದಿಗೆ ಮುಸ್ಲಿಂ ಸಮುದಾಯದ ಜನರು ಈ ನಿರ್ಧಾರದಿಂದ ಸಂತುಷ್ಟರಾಗದಿದ್ದರೆ ಇದೇ 10ರಂದು ಏನು ಬೇಕಾದರೂ ಆಗಬಹುದು ಎಂದು ಹೇಳಲಾಗಿತ್ತು ಆದರೆ ಇದೀಗ ಸ್ವತಃ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟ ಮಾಹಿತಿ ನೀಡಿದ್ದಾರೆ.