ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ಒಂದೂ ರೂಪಾಯಿ ಫೀಸ್ ಕೂಡ ಪಡೆಯಲ್ಲ ಡಾ.ಶಿಪ್ರಾ, ಆಸ್ಪತ್ರೆಯಲ್ಲೆಲ್ಲಾ ಸಿಹಿ ಕೂಡ ಹಂಚುತ್ತಾರೆ

in Helath-Arogya/Kannada News/News 536 views

ಇಂದಿಗೂ ನಮ್ಮ ದೇಶದಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ಆಸಕ್ತಿ ಹೊಂದಿರುವ ಇಂತಹ ಹಲವಾರು ವೈದ್ಯರುಗಳಿದ್ದಾರೆ. ಇವರು ರೋಗಿಗಳಿಂದ ಒಂದು ನಯಾ ಪೈಸೆಯನ್ನೂ ತೆಗೆದುಕೊಳ್ಳದೇ ಕೆಲಸ ಮಾಡುವ ವೈದ್ಯರಿದ್ದು ರೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಸಹಾಯ ಮಾಡುತ್ತಲೇ ಇರುತ್ತಾರೆ. ಅಂತಹುದೇ ವೈದ್ಯರೊಬ್ಬರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಾಸಿಸುತ್ತಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ನೆಲೆಸಿರುವ ಡಾ.ಶಿಪ್ರಾ ಧರ್ ಅವರು ತಮ್ಮ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ಜನಿಸಿದಾಗ ಅವರ ಪೋಷಕರಿಂದ ಒಂದು ರೂಪಾಯಿ ಕೂಡ ಫೀಸ್ ಮಾಡಿಲ್ಲ. ಅಷ್ಟೇ ಅಲ್ಲದೆ ಅವರು ತಮ್ಮ ಆಸ್ಪತ್ರೆಯಲ್ಲಿ ಸಿಹಿ ಹಂಚುತ್ತಾರೆ ಹೆಣ್ಣುಮಗುವಿನ ಜನನವನ್ನು ಖುಷಿ ಖುಷಿಯಿಂದ ಆಚರಿಸುತ್ತಾರೆ.

Advertisement

ಹೆಣ್ಣುಮಗು ಜನಿಸಿದರೆ ಒಂದು ರೂಪಾಯಿ ಕೂಡ ಪಡೆಯಲ್ಲ

ಉತ್ತರ ಪ್ರದೇಶದ ವಾರಣಾಸಿ ನಿವಾಸಿಯಾಗಿರುವ ಡಾಕ್ಟರ್ ಶಿಪ್ರಾ ಧರ್ ಅವರು ತಮ್ಮ ಸ್ವಂತ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಡಾ. ಶಿಪ್ರಾ ಧಾರ್ ಅವರ ಈ ನರ್ಸಿಂಗ್ ಹೋಮ್ ಸಾಕಷ್ಟು ಜನಪ್ರಿಯವಾಗಿದೆ. ಡಾ.ಶಿಪ್ರಾ ಧರ್ ಅವರ ನರ್ಸಿಂಗ್ ಹೋಂನಲ್ಲಿ ಹೆಣ್ಣಮಗು ಜನಿಸಿದರೆ, ಡಾ.ಶಿಪ್ರಾ ಆ ಪೋಷಕರಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ. ಇಂಟರೆಸ್ಟಿಂಗ್ ಸಂಗತಿಯೇನೆಂದರೆ ಡಾ.ಶಿಪ್ರಾ ಅವರ ಈ ಉತ್ತಮ ಕಾರ್ಯಕ್ಕೆ ಅವರ ಪತಿ ಡಾ.ಎಂ.ಕೆ.ಶ್ರೀವಾಸ್ತವ ಕೂಡ ಅವರಿಗೆ ಸಹಾಯ ಮಾಡುತ್ತಾರೆ. ಪತಿ-ಪತ್ನಿಯರಿಬ್ಬರೂ ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯವಾಗಿದ್ದು, ಜನ ಇವರನ್ನು ಕೊಂಡಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಶಿಪ್ರಾ, ”ದಂಪತಿಗಳಿಗೆ ಹೆಣ್ಣು ಮಗು ಜನಿಸಿದರೆ ಶುಲ್ಕ ಕಟ್ಟುವ ಹಾಗಿಲ್ಲ ಎಂದು ಹೇಳಿದೆವು. ಆದಾಗ್ಯೂ, ಸಿಸೇರಿಯನ್ ಹೆರಿಗೆಯೇನಾದರೂ ಆದರೆ ಅತ್ಯಲ್ಪ ಶುಲ್ಕವನ್ನು ವಿಧಿಸಲಾಗುತ್ತದೆ. ಪತಿ ಶ್ರೀವಾಸ್ತವ ಅವರು ಮುಂದಿನ ದಿನಗಳಲ್ಲಿ ಸಿಸೇರಿಯನ್ ಹೆರಿಗೆ ಶುಲ್ಕವನ್ನು ಮನ್ನಾ ಮಾಡಲು ಯೋಜಿಸಿದ್ದಾರೆ” ಎಂದು ಹೇಳಿದರು.

“ಹೌದು. ಇದರಿಂದ ನಮಗೆ ಆರ್ಥಿಕವಾಗಿ ಸ್ವಲ್ಪ ಕಷ್ಟವಾಗಬಹುದು. ಒಮ್ಮೊಮ್ಮೆ ಆಸ್ಪತ್ರೆ ನಡೆಸಲು ಹಣದ ಕೊರತೆಯೂ ಕಾಡುತ್ತದೆ. ಆದರೆ, ಸಮಾಜಕ್ಕಾಗಿ ಏನನ್ನಾದರೂ ಮಾಡುವಾಗ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ” ಎಂದು ಅವರು ಹೇಳುತ್ತಾರೆ.

ಇದೇ ರೀತಿಯ initiative ತೆಗೆದುಕೊಳ್ಳಲು ಅವರ ಇನ್ನೂ ಕೆಲವರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. “ನಾನು ಇತರ ವೈದ್ಯರೊಂದಿಗೂ ಮಾತುಕತೆ ನಡೆಸುತ್ತಿದ್ದೇನೆ ಮತ್ತು ಹೆಣ್ಣು ಮಗುವನ್ನು ಉಳಿಸಲು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಅವರು ಹೇಳಿದರು.

ಶ್ರೀವಾಸ್ತವ ಅವರು ಔಷಧ ತಯಾರಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದರು. “ಫಾರ್ಮಾ ಕಂಪನಿಗಳು ಉಚಿತವಾಗಿ ಔಷಧಿಗಳನ್ನು ನೀಡಲು ಪ್ರಾರಂಭಿಸಿದರೆ ಈ ಉಪಕ್ರಮವು ದೊಡ್ಡ ಉತ್ತೇಜನವನ್ನು ಪಡೆಯುತ್ತದೆ. ಇದೇನಾದರು ಆದರೆ ಹೆರಿಗೆ ಪ್ರಕರಣಗಳಲ್ಲಿ ಅವರು ಉಚಿತವಾಗಿ ಔಷಧಿಗಳನ್ನು ಒದಗಿಸಬಹುದು” ಎಂದು ಹೇಳುತ್ತಾರೆ ಡಾ.ಶಿಪ್ರಾ.

ತನ್ನ ಪತಿಯ ಸಹಾಯದಿಂದ, ಅವರು ಗ್ರಾಮೀಣ ಪ್ರದೇಶಗಳಲ್ಲಿ ಮೆಡಿಕಲ್ ಕ್ಯಾಂಪ್ ಗಳನ್ನ ನಡೆಸಲು ಯೋಜಿಸಿದ್ದಾರೆ. ಹೆಣ್ಣು ಮಕ್ಕಳ ವಿಚಾರದಲ್ಲಿ ಜನರನ್ನು ಜಾಗೃತಗೊಳಿಸಬೇಕು. ನಾವು ಗ್ರಾಮೀಣ ಜನರನ್ನು ತಲುಪಬೇಕು ಮತ್ತು ಅಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಇದಲ್ಲದೆ, ಶಿಪ್ರಾ ಅವರು ಬಡ ಹೆಣ್ಣುಮಕ್ಕಳಿಗೆ ಓದಿಸುತ್ತಾರೆ ಮತ್ತು ಅವರ ಶೈಕ್ಷಣಿಕ ವೆಚ್ಚವನ್ನು ಭರಿಸುತ್ತಾರೆ. ಪ್ರಸ್ತುತ, ಅವರು 12 ಹೆಣ್ಣುಮಕ್ಕಳಿಗೆ ಕಲಿಸುತ್ತಿದ್ದಾರೆ. “ಈ ಹುಡುಗಿಯರ ಬಳಿ ಶಾಲೆ ಸೇರಿ ಓದುವಷ್ಟು ಸಂಪನ್ಮೂಲಗಳಿರಲಿಲ್ಲ ಹಾಗಾಗಿ ಇವರನ್ನ ಓದಿಸುತ್ತಿದ್ದೇವೆ ಎನ್ನುತ್ತಾರೆ ಶಿಪ್ರಾ.

ಈ ರೀತಿಯಾಗಿ ಜನರಿಗೆ ಸಹಾಯ ಮಾಡುತ್ತಾರೆ

ಡಾ ಶಿಪ್ರಾ ಅವರು ಬನಾರಸ್ ಹಿಂದೂ ಯೂನಿವರ್ಸಿಟಿಯಿಂದ ಎಂಬಿಬಿಎಸ್ ಮತ್ತು ಎಂಡಿ ಮಾಡಿದ್ದಾರೆ. ಡಾ. ಶಿಪ್ರಾ ಅವರು ಹೆಣ್ಣುಮಕ್ಕಳನ್ನ ಉಚಿತವಾಗಿ ಡೆಲಿವರಿ ಮಾಡುವುದಷ್ಟೇ ಅಲ್ಲದೆ ಇತರ ಸಾಮಾಜಿಕ ಕಾರ್ಯಗಳೊಂದಿಗೆ ಸಹ ಸಂಬಂಧ ಹೊಂದಿದ್ದಾರೆ. ಅವರು ಮಕ್ಕಳಿಗೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರಿಗೆ ವಿಶೇಷ ಚಿಕಿತ್ಸೆ ನೀಡುತ್ತಾರೆ. ಇದರೊಂದಿಗೆ, ಅವರು ತಮ್ಮ ಸಂಬಳದಿಂದ ಉಳಿತಾಯ ಮಾಡಿದ ಹಣವನ್ನು ಮತ್ತು ಬಡ ಮತ್ತು ನಿರ್ಗತಿಕರಿಗೆ ಆಹಾರ ಧಾನ್ಯಗಳು ಮತ್ತು ಬಟ್ಟೆಗಳನ್ನು ನೀಡುವ ಮೂಲಕ ಸಹಾಯ ಮಾಡುತ್ತಾರೆ. ಡಾ.ಶಿಪ್ರಾ ಅವರು ಸಮಾಜಸೇವೆ ಮಾಡು ಸದಾ ಜಾಗೃತ ಹಾಗು ಉತ್ಸುಕರಾಗಿದ್ದಾರೆ.

ಪ್ರಧಾನಿ ಮೋದಿ ಕೂಡ ಶ್ಲಾಘಿಸಿದ್ದಾರೆ

ಡಾ.ಶಿಪ್ರಾ ಅವರ ಈ ಶ್ಲಾಘನೀಯ ಕಾರ್ಯದ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ತೆರೆದ ವೇದಿಕೆಯಿಂದ ವಾರಣಾಸಿ ತಲುಪಿ ಡಾ.ಶಿಪ್ರಾ ಅವರನ್ನು ಹೊಗಳಿದರು ಮತ್ತು ಅವರೇ ಖುದ್ದು ಡಾ.ಶಿಪ್ರಾ ಅವರನ್ನು ಭೇಟಿ ಮಾಡಲು ತೆರಳಿದರು. ಡಾ. ಶಿಪ್ರಾ ಅವರಿಗೆ ಹೆಣ್ಣುಮಕ್ಕಳ ಮೇಲೆ ವಿಶೇಷ ಪ್ರೀತಿ ಇದೆ, ಆದ್ದರಿಂದ ಅವರು ತಮ್ಮ ಕೆಲಸದಿಂದ ಸಮಯವನ್ನು ತೆಗೆದುಕೊಳ್ಳುತ್ತಾರೆ ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾರೆ. ಅಷ್ಟೇ ಅಲ್ಲ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೂ ಹಣ ನೀಡುತ್ತಾರೆ. ಇಂದಿನ ಸಮಯದಲ್ಲಿ ಡಾ.ಶಿಪ್ರಾ ರಂತಹ ಜನರು ಸಮಾಜದಲ್ಲಿ ಒಂದು ಪ್ರೇರಣೆ ನೀಡಿ ಜಾಗೃತೆ ಮೂಡಿಸುತ್ತಿದ್ದಾರೆ ಮತ್ತು ಇವರನ್ನು ಕಂಡು ಸಮಾಜದಲ್ಲಿ ಹೆಣ್ಣುಮಕ್ಕಳೆಡೆಗಿನ ಗೌರವ ಮತ್ತಷ್ಟು ಹೆಚ್ಚಾಗಲು ಸ್ಪೂರ್ತಿ ನೀಡುತ್ತಿದ್ದಾರೆ.

Advertisement
Share this on...