ನಿನ್ನೆ ರಾಜಸ್ಥಾನದ ಜೈಪುರದಲ್ಲಿ ‘ಮೆಹಂಗಾಯಿ ಹಟಾವೋ’ ರ‌್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, “ನಾನು ಹಿಂದೂ, ಆದರೆ ನಾನು ಹಿಂದುತ್ವವಾದಿ ಅಲ್ಲ, ಹಿಂದುತ್ವವಾದಿ ತನ್ನ ಇಡೀ ಜೀವನವನ್ನು ಅಧಿಕಾರದ ಹುಡುಕಾಟದಲ್ಲಿ ಕಳೆಯುತ್ತಾನೆ, ಆತನಿಗೆ ಸತ್ಯವನ್ನ ಕಟ್ಟಿಕೊಂಡು ಏನೂ ಮಾಡಬೇಕಾಗಿಲ್ಲ” ಎಂದಿದ್ದರು. ರಾಹುಲ್ ಗಾಂಧಿಯವರ ಈ ಹೇಳಿಕೆಯ ನಂತರ ಜೆಡಿಯು ನಾಯಕ ಅಜಯ್ ಅಲೋಕ್ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತ, “ಪಾರ್ಸಿ ತಂದೆ ಮತ್ತು ಕ್ರಿಶ್ಚಿಯನ್ ತಾಯಿಯ ಮಗನಿಗೆ ಹಿಂದುತ್ವದ ವಿರುದ್ಧ ಮಾತನಾಡಲು ಎಷ್ಟು ಧೈರ್ಯ?” ಎಂದು ಗರಂ ಆಗಿದ್ದಾರೆ.
ಅಜಯ್ ಅಲೋಕ್ ತಮ್ಮ ಟ್ವೀಟ್‌ನಲ್ಲಿ, “ಹಿಂದುತ್ವ ಎಂದರೆ ಪಾರ್ಸಿ ತಂದೆ ಮತ್ತು ಕ್ರಿಶ್ಚಿಯನ್ ತಾಯಿಯ ಮಗ ಕೂಡ ಜನಿವಾರಧಾರಿ ಬ್ರಾಹ್ಮಣರಾದರೂ ಜನರು ವಿರೋಧಿಸುವುದಿಲ್ಲ, ಆದರೆ ಹಿಂದುತ್ವದ ಬಗ್ಗೆ ಭಾಷಣಗಳನ್ನು ನೀಡುವುದು, ಹಿಂದುತ್ವವನ್ನು ನಿಂದಿಸಿದಾಗ ಮಿತಿ ಮೀರಿದಂತಾಗುತ್ತೆ. ದೇಶದ 100 ಕೋಟಿ ಜನರು ಹಿಂದುತ್ವವಾದಿಗಳು. ಈ ರೀತಿಯಾಗಿ ನಿಂದನಾತ್ಮಕ ಮಾತುಗಳಾಡೋಕೆ ಎಷ್ಟು ಧೈರ್ಯ? ಬದಲಾಗಿ” ಎಂದು ಎಂದಿದ್ದಾರೆ.
हिंदुत्व ये हैं की एक पारसी पिता और ईसाई माँ की औलाद कभी जनेउधारी ब्राह्मण बनती हैं तो लोग आपत्ति नहीं करते लेकिन हद्द तब हो जाति हैं जब ये हिंदुत्व पे प्रवचन देते हैं और हिंदुत्ववादीयो को गालियाँ , देश के 100 Cr लोग हिन्दुत्ववादी हैं और इनकी इतनी हिम्मत की ये अपशब्द कहे ,सुधरो
— Dr Ajay Alok (@alok_ajay) December 13, 2021
ಏನಂದಿದ್ರು ರಾಹುಲ್ ಗಾಂಧಿ?
ಹಿಂದೂ ಮತ್ತು ಹಿಂದುತ್ವ ಪದಗಳು ಒಂದೇ ಅಲ್ಲ, ಎರಡು ವಿಭಿನ್ನ ಪದಗಳು ಮತ್ತು ಅವುಗಳ ಅರ್ಥವೂ ವಿಭಿನ್ನವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಆಗಮಿಸಿದ್ದರು. ಅಲ್ಲಿ ವೇದಿಕೆಯಿಂದಲೇ ಹಿಂದೂಗಳ ಬಗ್ಗೆ ಬಹಳ ಮಹತ್ವದ ಹೇಳಿಕೆಯೊಂದನ್ನ ರಾಹುಲ್ ಗಾಂಧಿ ನೀಡಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಜನತಾ ಪಕ್ಷವನ್ನೂ (ಬಿಜೆಪಿ) ತರಾಟೆಗೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. 2014ರಿಂದ ನಮ್ಮ ದೇಶದಲ್ಲಿ ಹಿಂದುತ್ವವಾದಿಗಳ ಆಡಳಿತವಿದೆ ಆದರೆ ನಮ್ಮ ದೇಶದಲ್ಲಿ ಹಿಂದುಗಳ ಆಡಳಿತವನ್ನು ಮರಳಿ ತರಬೇಕಾಗಿದೆ ಎಂದರು. ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ಈ ರೀತಿ ವಿಚಿತ್ರವಾಗಿ ಮಾತನಾಡಿದ ನಂತರವೇ ಅನೇಕರು ಅವರ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ.
ಭಾರತ ಹಿಂದುತ್ವವಾದಿಗಳದ್ದಲ್ಲ ಬದಲಾಗಿ ಹಿಂದುಗಳ ದೇಶ
ಭಾರತ ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ವಿಭಿನ್ನವಾದ ಮಾತುಗಳನ್ನು ಹೇಳಿದ್ದಾರೆ. ಗಾಂಧೀಜಿ ಕುರಿತು ಮಾತನಾಡಿದ ಅವರು, ಗಾಂಧೀಜಿ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದಾರೆ. ಮತ್ತೊಂದೆಡೆ, ಗೋಡ್ಸೆ ಹಿಂದುತ್ವ ಚಿಂತನೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದ ಎಂದಿದ್ದಾರೆ. ಗೋಡ್ಸೆ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು ಇದೇ ಮೊದಲೇನಲ್ಲ, ಈ ಹಿಂದೆಯೂ ಅವರು ಅನೇಕ ಬಾರಿ ಗೋಡ್ಸೆ ವಿಚಾರ, ಹಿಂದುತ್ವದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮಹಾತ್ಮ ಗಾಂಧಿಯವರು ತಮ್ಮ ಇಡೀ ಜೀವನವನ್ನು ಸತ್ಯದ ಹುಡುಕಾಟದಲ್ಲಿ ಕಳೆದರು ಮತ್ತು ಕೊನೆಯಲ್ಲಿ ಹಿಂದುತ್ವವಾದಿಯೊಬ್ಬ ಅವರ ಎದೆಗೆ ಮೂರು ಗುಂಡುಗಳನ್ನು ಹಾರಿಸಿದ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಹಿಂದುತ್ವವಾದಿ ತನ್ನ ಇಡೀ ಜೀವನವನ್ನು ಅಧಿಕಾರದ ಹುಡುಕಾಟದಲ್ಲಿ ಕಳೆಯುತ್ತಾನೆ. ಅವರು ಕೇವಲ ಅಧಿಕಾರವನ್ನು ಬಯಸುತ್ತಾರೆ ಮತ್ತು ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ….. ಅವರ ಮಾರ್ಗ ಸತ್ಯಾಗ್ರಹವಲ್ಲ, ಅವರ ಮಾರ್ಗ ‘ಸತ್ತಾ’ಗ್ರಹ (ಅಧಿಕಾರದ ಹಪಹಪಿ) ಎಂದರು.
ಅವರು ಮುಂದೆ ಮಾತನಾಡುತ್ತ, “ನರೇಂದ್ರ ಮೋದಿ ಮತ್ತು ಅವರ ಮೂರ್ನಾಲಕ್ಕು ಉದ್ಯೋಗಪತಿಗಳು, ಹಿಂದುತ್ವವಾದಿಗಳು ಏಳು ವರ್ಷಗಳಲ್ಲಿ ಈ ದೇಶವನ್ನು ಹಾಳು ಮಾಡಿದ್ದಾರೆ, ಎಲ್ಲವನ್ನೂ ಮುಗಿಸಿದ್ದಾರೆ. ರೈತರ ಆತ್ಮ, ರೈತರ ಎದೆ, ಮೋದಿ ಅವರ ಎದೆಗೆ ಚೂರಿ ಹಾಕಿದ್ದಾರೆ ಎಂದರು. ಮುಂದಿನಿಂದಲ್ಲ ಹಿಂದಿನಿಂದ. ಯಾಕೆ? ಯಾಕಂದ್ರೆ ಹಿಂದುತ್ವವಾದಿಗಳಾಗಿದ್ದರೆ ಅವರು ಹಿಂದಿನಿಂದಲೇ ಕೊಲ್ಲುತ್ತಾರೆ” ಎಂದರು.
ಹಿಂದುಗಳು ಸದಾ ಸತ್ಯದ ಪರವಾಗಿರುತ್ತಾರೆ
ನಾಥೂರಾಮ್ ಗೋಡ್ಸೆ ಬಗ್ಗೆ ಯೋಚಿಸುವ ಜನರು ಯಾವಾಗಲೂ ಅಧಿಕಾರವನ್ನು ಬಯಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಜನರಿಗೂ ಸತ್ಯದೊಂದಿಗೂ ಯಾವುದೇ ಸಂಬಂಧವಿಲ್ಲ. ಅಷ್ಟೇ ಅಲ್ಲ, ಹಿಂದೂ ಯಾವಾಗಲೂ ಸತ್ಯದೊಂದಿಗೆ ಬದುಕುತ್ತಾನೆ ಎಂದೂ ಹೇಳಿದ್ದಾರೆ. ಸತ್ಯದ ಕಾರಣದಿಂದ ಹಿಂದೂ ಸಮುದಾಯದ ಜನರು ಇಂದಿಗೂ ನಮ್ಮ ದೇಶದಲ್ಲಿ ಮುಕ್ತವಾಗಿ ಬದುಕಲು ಸಾಧ್ಯವಾಗಿದೆ. ಹಿಂದೂ ಎಂದಿಗೂ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.
#WATCH | "Who is Hindu? The one who embraces everybody, fears nobody, and respects every religion," says Congress leader Rahul Gandhi at the party's rally against inflation in Jaipur, Rajasthan pic.twitter.com/OnKjsQOoRJ
— ANI (@ANI) December 12, 2021
ದೊಡ್ಡ ಪ್ಲ್ಯಾಟ್‌ಫಾರಂನ್ನ ಕಳೆದುಕೊಂಡ ರಾಹುಲ್ ಗಾಂಧಿ
ಹಿಂದುತ್ವ ಮತ್ತು ಹಿಂದುತ್ವವಾದಿಗಳ ಬಗ್ಗೆ ರಾಹುಲ್ ನೀಡಿದ ಹೇಳಿಕೆ ಅಪ್ರಸ್ತುತವಾಗಿತ್ತು. ಬೆಲೆಯೇರಿಕೆಗೆ ಸಂಬಂಧಿಸಿದಂತೆ ಈ ರ‌್ಯಾಲಿಯನ್ನ ಆಯೋಜಿಸಲಾಗಿತ್ತು. ಜೈಪುರದ ವಿದ್ಯಾನಗರ ಸ್ಟೇಡಿಯಂನಲ್ಲಿ ನಡೆದ ಈ ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ರಾಜಸ್ಥಾನದ ಜೊತೆಗೆ ನೆರೆಯ ಹರಿಯಾಣ, ಪಂಜಾಬ್, ಮಧ್ಯಪ್ರದೇಶ ಮತ್ತು ದೆಹಲಿಯಿಂದಲೂ ಜನರು ಆಗಮಿಸಿದ್ದರು. ದೇಶಾದ್ಯಂತದ ಕಾಂಗ್ರೆಸ್ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಆದರೆ, ಈ ದೊಡ್ಡ ರ್ಯಾಲಿ ಮೂಲಕ ಸರ್ಕಾರವನ್ನು ಸುತ್ತುವರಿಯುವ ಅವಕಾಶವನ್ನು ರಾಹುಲ್ ಕಳೆದುಕೊಂಡರು. ಭಾಷಣದ ಹೆಚ್ಚಿನ ಭಾಗವನ್ನು ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವನ್ನು ವಿವರಿಸಲು ರಾಹುಲ್ ಗಾಂಧಿ ಹೆಣಗಾಡುತ್ತ ತಮಗೆ ಸಿಕ್ಕಿದ್ದ ಅದ್ಭುತ ವೇದಿಕೆಯನ್ನ ಕಳೆದುಕೊಂಡರು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.