ಉತ್ತರ ಪ್ರದೇಶದಲ್ಲಿ ಪೊಲೀಸ್ ಸ್ಟೇಷನ್ ಒಂದಿದೆ, ಇದುವರೆಗೂ ಯಾವುದೇ ಅಧಿಕಾರಿಯೂ ಈ ಪೊಲೀಸ್ ಠಾಣೆಯ ಮುಖ್ಯ ಆಸನದ ಮೇಲೆ ಕುಳಿತುಕೊಳ್ಳುವ ಧೈರ್ಯವನ್ನು ತೋರಿಸಿಲ್ಲ. ಹೌದು ಉತ್ತರಪ್ರದೇಶದ ವಾರಣಾಸಿಯ ಪೊಲೀಸ್ ಠಾಣೆಯಲ್ಲಿ ಬಾಬಾ ಕಾಲಭೈರವ್ ಕಳೆದ ಹಲವಾರು ವರ್ಷಗಳಿಂದ ಪೋಲಿಸ್ ಅಧಿಕಾರಿ ಕುಳಿತುಕೊಳ್ಳುವ ಆಸನದ ಮೇಲೆಯೇ ವಿರಾಜಮಾನರಾಗಿದ್ದಾರೆ. ಯಾವುದೇ ಪೋಲಿಸ್ ಅಧಿಕಾರಿಗಳು ಬಂದರೂ ಅವರು ಪಕ್ಕದಲ್ಲಿ ಇರುವ ಮತ್ತದು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಹಲವಾರು ವರ್ಷಗಳಿಂದ ಈ ಸ್ಟೇಷನ್‌ಗೆ IAS ಆಗಲಿ IPS ಅಧಿಕಾರಿಗಳು ಹತ್ತಿರವೂ ಸುಳಿದಿಲ್ಲವೆಂದರೆ ನಿಮಗೆ ಆಶ್ಚರ್ಯವಾಗುತ್ತದೆ.
ಮುಖ್ಯ ಆಸನದ ಮೇಲೆ ಈ ಕಾರಣಕ್ಕಾಗಿ ಕುಳಿತುಕೊಳ್ಳುವುದಿಲ್ಲ ಅಧಿಕಾರಿಗಳು
ವಾರಣಾಸಿಯ ವಿಶ್ವೇಶ್ವರಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಹೇಳುವ ಪ್ರಕಾರ, ಈ ಸಂಪ್ರದಾಯವು ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ ಎಂದು ಹೇಳುತ್ತಾರೆ. ಯಾವುದೇ ಅಧಿಕಾರಿಯ ನಿಯೋಜನೆಗಾಗಿ ಇಲ್ಲಿಗೆ ಬಂದರೂ ಅವರು ತಮ್ಮ ಕುರ್ಚಿಯ ಮೇಲೆ ಕುಳಿತುಕೊಳ್ಳಲಿಲ್ಲ. ಕಾಶಿಯ ಕೊತ್ವಾಲ್ ಬಾಬಾ ಕಾಲಭೈರವ್ ಯಾವಾಗಲೂ ಅಧಿಕಾರಿಗೆ ಮೀಸಲಿಟ್ಟ ಮುಖ್ಯ ಆಸನದ ಮೇಲೆ ವಿರಾಜಮಾನರಾಗುತ್ತಾರೆ. ದೂರು ನೀಡಲು ಹಾಗು ಪೋಲಿಸ್ ಠಾಣೆಯ ಉಸ್ತುವಾರಿಯನ್ನ ಸ್ವತಃ ಬಾಬಾ ಮಹಾಕಾಲ್ ನೋಡಿಕೊಳ್ಳುತ್ತಾರೆ, ಹಾಗಾಗಿ ಕಾಶಿ ವಿಶ್ವನಾಥನೇ ಈ ಪೋಲಿಸ್ ಠಾಣೆಯ ಉಸ್ತುವಾರಿ ಎಂದು ಅಲ್ಲಿನ ಜನರು ನಂಬುತ್ತಾರೆ. ಬಾಬಾ ಮಹಾಕಾಲ್‌ಗೆ ಪೂಜೆ ಸಲ್ಲಿಸಿದೆ ಇಲ್ಲಿನ ಪೊಲೀಸರು ಯಾವುದೇ ಕೆಲಸವನ್ನು ಪ್ರಾರಂಭಿಸುವುದಿಲ್ಲ.
ಇಡೀ ಕಾಶಿಯ ಮೇಲುಸ್ತುವಾರಿಯನ್ನ ಬಾಬಾ ಮಹಾಕಾಲ್ ನೋಡಿಕೊಳ್ತಾರೆ
ಮಾನ್ಯತೆಗಳ ಪ್ರಕಾರ ಕಾಶಿಯ ಬಾಬಾ ವಿಶ್ವನಾಥನೇ ಇಡೀ ಕಾಶಿ ನಗರದ ಮೇಲುಸ್ತುವಾರಿಯನ್ನ ಕಾಲಭೈರವ್ ಬಾಬಾ ಕೈಗೆ ಒಪ್ಪಿಸಿದ್ದಾನೆ ಎಂದು ಹೇಳಲಾಗುತ್ತದೆ. ಬಾಬಾ ಕಾಲಭೈರವನ ಅನುಮತಿಯಿಲ್ಲದೆ ಯಾವುದೇ ವ್ಯಕ್ತಿ ಕೂಡ ನಗರಕ್ಕೆ ಪ್ರವೇಶಿಸುವಂತೂ ಇಲ್ಲ.
ಕಳೆದ 18 ವರ್ಷಗಳಿಂದ ಈ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್ಟೇಬಲ್ ಒಬ್ಬರು ಹೇಳುವ ಪ್ರಕಾರ, “ನಾನು ಇಲ್ಲಿಯವರೆಗೂ ಇಲ್ಲಿನ ಅಧಿಕಾರಿ ಮೂಲ ಆಸನದ ಮೇಲೆ ಕುಳಿತುಕೊಂಡಿದ್ದನ್ನ ನೋಡಿಲ್ಲ. ಪಕ್ಕದಲ್ಲಿರುವ ಆಸನದ ಮೇಲೆಯೇ ಅವರು ಕುಳಿತುಕೊಳ್ಳುತ್ತಾರೆ. ಆದರೆ ಈ ಪರಂಪರೆಯನ್ನ ಯಾರು ಯಾವಾಗಿನಿಂದ ಶುರು ಮಾಡಿದರು ಅನ್ನೋದು ಮಾತ್ರ ಗೊತ್ತಿಲ್ಲ. ಜನರು ಹೇಳುವ ಪ್ರಕಾರ ಈ ಪರಂಪರೆ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ” ಎನ್ನುತ್ತಾರೆ.
ಮಾನ್ಯತೆಗಳ ಪ್ರಕಾರ ಸನ್ 1715 ರಲ್ಲಿ ಬಾಜೀರಾವ್ ಪೇಶ್ವಾ ಕಾಲಭೈರವನ ಮಂದಿರ ನಿರ್ಮಾಣ ಮಾಡಿದ್ದ. ಇಲ್ಲಿಗೆ ಬರುವ ಯಾವುದೇ ದೊಡ್ಡ ಅಧಿಕಾರಿಗಳೇ ಆದರೂ ಅವರು ಮೊದಲು ಬಾಬಾ ಮಹಾಕಾಲನ ದರ್ಶನ ಪಡೆದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಬಾಬಾ ಕಾಲಭೈರವನ ಮಂದಿರದಲ್ಲಿ ಪ್ರತಿದಿನ 4 ಬಾರಿ ಆರತಿಯಾಗುತ್ತದೆ. ಇದರಲ್ಲಿ ರಾತ್ರಿ ವೇಳೆಯ ಆರತಿ ತುಂಬಾ ವಿಶೇಷವೆಂದು ಹೇಳಲಾಗುತ್ತದೆ. ಆರತಿಗೂ ಮುನ್ನ ಬಾಬಾಗೆ ಸ್ನಾನ ಮಾಡಿಸಿ ಶೃಂಗಾರ ಮಾಡಲಾಗುತ್ತದೆ. ವಿಶೇಷ ಸಂಗತಿಯೇನೆಂದರೆ ಆರತಿ ಸಮಯದಲ್ಲಿ ಅರ್ಚಕರ ಹೊರತಾಗಿ ಮಂದಿರದೊಳಗೆ ಯಾರಿಗೂ ಪ್ರವೇಶಿಸುವ ಅನುಮತಿಯಿರಲ್ಲ. ಬಾಬಾಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಲಾಗುತ್ತದೆ. ಅಲ್ಲದೆ, ಬಾಬಾ ಕಾಲಭೈರವನ ಮುಂದೆ ಅಖಂಡ್ ದೀಪ ಸದಾ ಉರಿಯುತ್ತಿರುತ್ತದೆ.
ಕಾಶಿ ಪ್ರವೇಶಕ್ಕೂ ಮುನ್ನ ಕಾಲಭೈರವ ದರ್ಶನ ಪಡೆದೇ ಆಗಮಿಸಿದ ಪ್ರಧಾನಿ ಮೋದಿ
ಕಾಶಿ ವಿಶ್ವನಾಥ ಧಾಮವನ್ನು ದೇಶಕ್ಕೆ ಸಮರ್ಪಿಸಲು ಪ್ರಧಾನಿ ಸೋಮವಾರ ವಾರಣಾಸಿ ತಲುಪಿದ್ದರು. ಪ್ರಧಾನಿ ಮೋದಿಯವರು 13 ಡಿಸೆಂಬರ್ 2021 ರ ಬೆಳಿಗ್ಗೆ ವಾರಣಾಸಿ ತಲುಪಿದರು. ವಾರಣಾಸಿ ವಿಮಾನ ನಿಲ್ದಾಣದಲ್ಲಿ ಅವರನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರಮಾಡಿಕೊಂಡರು. ವಿಮಾನ ನಿಲ್ದಾಣದಿಂದ ನೇರವಾಗಿ ಕಾಲ ಭೈರವ ದೇವಾಲಯಕ್ಕೆ ಪ್ರಧಾನಿ ಮೋದಿ ಆಗಮಿಸಿದರು. ಕಾಶಿ ನಗರವನ್ನು ಪ್ರವೇಶಿಸಲು ಕಾಲ ಭೈರವನ ಅನುಮತಿ ಅಗತ್ಯವೆಂದು ಹೇಳಲಾಗುತ್ತದೆ. ಕಾಲಭೈರವನ ದರ್ಶನದ ನಂತರವೇ ಪ್ರಧಾನಿ ಮೋದಿ ಖಿಡಕಿಯಾ ಘಾಟ್‌ಗೆ ತೆರಳಿದರು.
– Vinod Hindu Nationalist