ಬಿಗ್ ಬ್ರೇಕಿಂಗ್: ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ಬಿರುಕು, ಶಿವಸೇನೆ ವಿರದ್ಧ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

in Kannada News/News 236 views

ಮುಂಬೈ: ಮಹಾರಾಷ್ಟ್ರದ ಮಹಾ ಅಘಾಡಿ ಸರ್ಕಾರ (MVA) ವನ್ನು ನಡೆಸುತ್ತಿರುವ ಶಿವಸೇನೆ ಮತ್ತು ಅದನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಮುನ್ನೆಲೆಗೆ ಬಂದಿದೆ. ರಾಹುಲ್ ಗಾಂಧಿ ರ‌್ಯಾಲಿ ವಿಚಾರಕ್ಕೆ ಎರಡೂ ಪಕ್ಷಗಳ ನಡುವೆ ವಾಗ್ವಾದ ನಡೆದಿದೆ. ಮುಂಬೈ ಕಾಂಗ್ರೆಸ್ ಸೋಮವಾರ ಬಾಂಬೆ ಹೈಕೋರ್ಟ್‌ನಲ್ಲಿ BMC (ಬೃಹತ್ ಮುಂಬೈ ಮಹಾನಗರ ಪಾಲಿಕೆ) ವಿರುದ್ಧ ಅರ್ಜಿ ಸಲ್ಲಿಸಿದೆ. ಡಿಸೆಂಬರ್ 28 ರಂದು ಶಿವಾಜಿ ಪಾರ್ಕ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ರ‌್ಯಾಲಿಗೆ BMC ಅನುಮತಿ ನೀಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದಕ್ಕೆ ಒಪ್ಪಿಗೆ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ ಹೈಕೋರ್ಟ್‌ ಮೊರೆ ಹೋಗಿತ್ತು. ರಾಹುಲ್ ರ ರ‌್ಯಾಲಿ ಶಿವಾಜಿ ಪಾರ್ಕ್ ನಲ್ಲಿ ನಡೆಯಬೇಕೋ ಬೇಡವೋ ಎಂಬುದನ್ನು ಕೋರ್ಟ್ ಈಗ ನಿರ್ಧರಿಸಲಿದೆ. BMC ಮೂಲಗಳ ಪ್ರಕಾರ, ಕರೋನಾ ಮತ್ತು ವಿಶೇಷವಾಗಿ ಓಮಿಕ್ರಾನ್ ರೂಪಾಂತರವನ್ನು ತಡೆಗಟ್ಟಲು ಯಾವುದೇ ರೀತಿಯ ರಾಜಕೀಯ ಮೆರವಣಿಗೆ ಅಥವಾ ರ‌್ಯಾಲಿಗಳನ್ನು ಅನುಮತಿಸದಿರಲು ನಿರ್ಧರಿಸಲಾಗಿದೆ.

Advertisement

ಇದೇ ಕಾರಣಕ್ಕೆ ರಾಹುಲ್ ಗಾಂಧಿ ರ‌್ಯಾಲಿಗೆ ಅನುಮತಿ ಸಿಕ್ಕಿಲ್ಲ. BMC ಯಲ್ಲಿ ಶಿವಸೇನೆ ಬಹುಮತ ಹೊಂದಿದೆ. ಶಿವಸೇನೆ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯವೂ ಸಾಕ್ಷಿಯಾಗಿದೆ. ಕಾಂಗ್ರೆಸ್ ಸ್ಥಿತಿ ಪಾಳುಬಿದ್ದ ಅರಮನೆಯಂತಾಗಿದೆ ಎಂದು ಈ ಸಂಪಾದಕೀಯದಲ್ಲಿ ಬರೆಯಲಾಗಿದೆ. ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರದಲ್ಲಿ ಮುಸ್ಲಿಮರು ಶಿವಸೇನೆಗೆ ಮತ ಹಾಕುತ್ತಾರೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.

ಶಿವಸೇನೆ ಮತ್ತು ಅದರ ಸರ್ಕಾರವನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ನಡುವೆ ಬಹಳ ಸಮಯದಿಂದ ಸಂಘರ್ಷವಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಅವರು ಉದ್ಧವ್ ಸರ್ಕಾರ ಮತ್ತು ಶಿವಸೇನೆಯ ಸಚಿವರ ವಿರುದ್ಧ ಹಲವು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ. ಪಾಲಿಕೆ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಹೋರಾಡಲಿದೆ ಎಂದು ನಾನಾ ಪಟೋಲೆ ಹೇಳಿದ್ದಾರೆ. ಇದರ ವಿರುದ್ಧ ಶಿವಸೇನೆಯ ಸಚಿವರು, ಮುಖಂಡರು ಕೂಡ ಪಟೋಲೆ ಅವರನ್ನು ಹಲವು ಬಾರಿ ಟಾರ್ಗೆಟ್ ಮಾಡಿದ್ದಾರೆ. ಇದೀಗ ರಾಹುಲ್ ರ‌್ಯಾಲಿಗೆ ಒಪ್ಪಿಗೆ ಸಿಗದ ವಿಚಾರವಾಗಿ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿರುವ ರೀತಿ ನೋಡಿದರೆ ಶಿವಸೇನೆ-ಕಾಂಗ್ರೆಸ್ ನಡುವಿನ ಭಿನ್ನಮತ ಮತ್ತಷ್ಟು ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗಿದೆ.

ಶಿವಸೇನೆ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು ಈ ಹಿಂದೆ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಕಾಂಗ್ರೆಸ್ ಹಾಗು ಶಿವಸೇನೆಯ ನಡುವಿನ ಘರ್ಷಣೆಯ ಪರಿಸ್ಥಿತಿ ನಿರ್ಮಾಣದ ವಿಚಾರಕ್ಕಾಗೇ ಅವರು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್ ಇಲ್ಲದ ಮೋದಿ ಪರ್ಯಾಯದ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಹಲವು ಬಾರಿ ಬರೆದುಕೊಂಡಿದೆ. ಹೀಗಿರುವಾಗ ಶಿವಸೇನೆ ಸಮಸ್ಯೆ ಬಗೆಹರಿಸಲು ಹವಣಿಸುತ್ತಿರುವಂತೆ ತೋರುತ್ತಿದ್ದು, ಇದೀಗ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಇಬ್ಬರ ನಡುವಿನ ಘರ್ಷಣೆ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳಬಹುದು.

ರಾಹುಲ್ ಗಾಂಧಿ, ಕಾಂಗ್ರೆಸ್ಸನ್ನ ಹಾಡಿ ಹೊಗಳಿ ಬರೆದಿದ್ದ ಸಂಜಯ್ ರಾವತ್

2024ರ ಲೋಕಸಭೆ ಚುನಾವಣೆಯ ತಯಾರಿಯಲ್ಲಿ ವಿವಿಧ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ರಣತಂತ್ರ ರೂಪಿಸುತ್ತಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದರು. ಬಿಜೆಪಿಗೆ ಸವಾಲೆಸೆಯಲು ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಾತ್ರ ನಿರ್ಣಾಯಕವಾಗಲಿದೆ. ಇದನ್ನು ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದು, ಶಿವಸೇನೆ ಪರವಾಗಿ ಸಂಜಯ್ ರಾವತ್ ಕೂಡ ಇದೇ ಮಾತನ್ನ ಹೇಳಿದ್ದಾರೆ. ಆದರೆ ಈಗ ಯುಪಿಎ ಮತ್ತು ಕಾಂಗ್ರೆಸ್ ತಮ್ಮ ಶಕ್ತಿ ಮತ್ತು ಪ್ರಭಾವವನ್ನು ಕಳೆದುಕೊಂಡಿವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಮೈತ್ರಿ ಮಾಡಿಕೊಳ್ಳಬೇಕು. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸಂಜಯ್ ರಾವತ್ ಇತ್ತೀಚೆಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿ ಮಾಡಿದ್ದರು. ಸಂಜಯ್ ರಾವತ್ ಅವರು ಆ ಸಭೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಪಾತ್ರದ ಬಗ್ಗೆ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ‘ರೋಖ್‌ಠೋಕ್’ ಎಂಬ ಲೇಖನವನ್ನು ಬರೆದಿದ್ದಾರೆ.

ಸಂಜಯ್ ರಾವುತ್ ಈ ಬಗ್ಗೆ ಬರೆಯುತ್ತ, ‘ಇಂದು, ಶ್ರೀ ಗಾಂಧಿಯವರ ನಾಯಕತ್ವದ ಬಗ್ಗೆ ಹೆಚ್ಚಿನ ಗೊಂದಲಗಳು ಮತ್ತು ಅನುಮಾನಗಳು ಸೃಷ್ಟಿಯಾಗುತ್ತಿವೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದ ಪ್ರತಿಪಕ್ಷಗಳು ಒಂದಾಗಲು ಸಿದ್ಧವಿಲ್ಲ. ಅದಕ್ಕಾಗಿಯೇ ಮೋದಿ ಮತ್ತು ಅವರ ಪಕ್ಷಕ್ಕೆ ಮೈದಾನ ಮುಕ್ತವಾಗಿದೆ, ಅಂತಹ ಚಿತ್ರಣವನ್ನು ಮಾಡಲಾಗುತ್ತಿದೆ. ಇದು ಅಷ್ಟು ಸತ್ಯವಲ್ಲ’ ಎಂದಿದ್ದಾರೆ.

‘ಕಾಂಗ್ರೆಸ್ ಬಲಹೀನವಾಗಿದೆ, ಹೊಸ ನಾಯಕರನ್ನು ಸಿದ್ಧಪಡಿಸುವ ವ್ಯವಸ್ಥೆ ಬಂದ್ ಆಗಿದೆ’

ಶಿವಸೇನೆಯ ಮುಖವಾಣಿ ‘ಸಾಮ್ನಾ’ ದಲ್ಲಿ ಬರೆದ ತಮ್ಮ ರೋಖ್‌ಠೋಕ್ ಲೇಖನದಲ್ಲಿ ಸಂಜಯ್ ರಾವತ್, “ಕಳೆದ 10 ವರ್ಷಗಳಿಂದ ಕಾಂಗ್ರೆಸ್ ನಿರಂತರವಾಗಿ ಸೋಲನ್ನು ಅನುಭವಿಸುತ್ತಿರುವುದು ನಿಜ. ಅದಕ್ಕೇ ಕಾಂಗ್ರೆಸ್ ಮುಗೀತು ಅಂತ ಹೇಳೋಕಾಗಲ್ಲ. 13 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಗೆದ್ದಿತು ಅದೇ ಕಾರಣಕ್ಕಾಗಿ ಪ್ರಧಾನಿ ಮೋದಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದರು. ರೈತರ ಜೊತೆ ಚರ್ಚೆ ಮಾಡಲ್ಲ ಆಂತ ಹೇಳ್ತಾ ಹೇಳ್ತಾನೆ ಗೃಹ ಸಚಿವ ಅಮಿತ್ ಶಾ ಅವರು ರೈತರೊಂದಿಗೆ ಚರ್ಚೆಗೆ ಚಾಲನೆ ನೀಡಿದರು. ಆದರೆ ‘ನನ್ನ ಮಾತನ್ನ ನೆನಪಿಡಿ. ಸರ್ಕಾರ ಈ ಮೂರು ಕಪ್ಪು ಕಾನೂನುಗಳನ್ನು ಹಿಂಪಡೆಯಲೇಬೇಕು, ಅದು ಆಗೇ ಆಗುತ್ತೆ’ ಹೀಗೆ ಹೇಳಿದ ರಾಹುಲ್ ಗಾಂಧಿ ಮಾತುಗಳನ್ನು ಮೀಡಿಯಾಗಳು ಸಲೀಸಾಗಿ ಮರೆತುಬಿಟ್ಟವು. ಇಂದು ಮಾಧ್ಯಮಗಳು ಸ್ವತಂತ್ರವಾಗಿಲ್ಲ ಮತ್ತು ಕಾಂಗ್ರೆಸ್ ಅಥವಾ ಗಾಂಧಿ ಪರವಾಗಿ ಸಮರ್ಥವಾಗಿ ಪ್ರಸ್ತುತಪಡಿಸುವ ಅಂತಹವರು ಇಲ್ಲ. ಕಾಂಗ್ರೆಸ್ ನ ಸಾಂಪ್ರದಾಯಿಕ ಕಾರ್ಯಶೈಲಿಯೇ ಇದಕ್ಕೆ ಕಾರಣ. ನಾಯಕನನ್ನು ತಯಾರು ಮಾಡುವ ಹೊಣೆ ಹೊತ್ತುಕೊಂಡು ಕೆಲಸ ಮುಂದಕ್ಕೆ ಕೊಂಡೊಯ್ಯುವ ವ್ಯವಸ್ಥೆ ಬಂದ್ ಆಗಿದೆ” ಎಂದರು.

‘ಹಳೆಯ, ಹಿರಿಯ ಕಾಂಗ್ರೆಸ್ಸಿಗರು ಮುನಿಸಿಕೊಂಡಿರೋದ್ಯಾಕೆ?’ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಹೀಗಿತ್ತು

ಸಂಜಯ್ ರಾವತ್ ಹೇಳುವ ಪ್ರಕಾರ ಅವರು ರಾಹುಲ್ ಗಾಂಧಿ ಜೊತೆ ಮಾತನಾಡುತ್ತ, “ಅಷ್ಟಕ್ಕೂ ಕಾಂಗ್ರೆಸ್ ಪಕ್ಷದ ಹಳೆಯ, ಹಿರಿಯ ನಾಯಕರು ಪಕ್ಷದ ವಿರುದ್ಧ ಮುನಿಸಿಕೊಂಡು ಪಕ್ಷ ಬಿಟ್ಟು ಹೋಗ್ತಿರೋದ್ಯಾಕೆ?” ಅಂತ ಕೇಳಿದಾಗ ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, “ಈ ವರಿಷ್ಠ ನಾಯಕರಿಗೆ ನಾವು ಈವರೆಗೆ ಎಲ್ಲವನ್ನೂ ಕೊಟ್ಟೆವು. ಇಂದು ಪಕ್ಷಕ್ಕೆ ಈ ನಾಯಕರ ಅಗತ್ಯವಿದೆ ಆದರೆ ಇವರು ಮಾತ್ರ ಹೀಗೆ ಮಾಡ್ತಿದಾರೆ. ಇದಕ್ಕೆ ನಾನೇನು ಮಾಡೋಕಾಗತ್ತೆ? ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೋದರು. ಅವರ ಪಂಜಾಬ್ ಮುಖ್ಯಮಂತ್ರಿಯಾಗಿದ್ದರು. ಅವರ ಕಾರ್ಯಕಾಲದಲ್ಲಿ ಕಾಂಗ್ರೆಸ್ ಗ್ರಾಫ್ ಕೆಳಕ್ಕೆ ಬಂತು. ಆಗ ನಾವು ಒಂದು ‘ಪೋಲ್’ ಮಾಡಿದೆವು‌. ಆ ಪೋಲ್ ನಲ್ಲಿ ಕೇವಲ 6% ಜನ ಇಷ್ಟಪಟ್ಟರು. ಮುಖ್ಯಮಂತ್ರಿ ರೇಸ್ ನಲ್ಲೂ ಇರದ ಮುಖಗಳನ್ನ ಅಮರಿಂದರ್ ಸಿಂಗ್ ರಿಗಿಂತ ಹೆಚ್ಚು ವೋಟ್ ಬಂದವು. ಅಮರಿಂದರ್ ಸಿಂಗ್‌ರನ್ನ ನಾವು ಇಲ್ಲಿ ಕರೆಸಿ ಚುನಾವಣೆಯಲ್ಲಿ ಜನರಿಗೆ ನೀಡಿದ್ದ ಆಶ್ವಾಸೆಗಳನ್ನ ಈಡೇರಿಸಿ ಎಂದು ಹೇಳಿದೆವು. ಆದರೆ ಅವರ ರೆಸ್ಪಾನ್ಸ್ ಮಾತ್ರ ಸೈಲೆನ್ಸ್ ಆಗಿತ್ತು. ಏನಾದರೂ ಮಾಡಿ ಇಲ್ಲಾಂದ್ರೆ ಪಕ್ಷ ನಿಮ್ಮ ಮೇಲೆ ಆ್ಯಕ್ಷನ್ ತೆಗೆದುಕೊಳ್ಳಬೇಕಾಗುತ್ತೆ ಅಂತ ಹೇಳದ್ವಿ‌. ಆಗ ಪಕ್ಷದ ‘ವರಿಷ್ಠ’ ನಾಯಕ ಅಮರಿಂದರ್ ಪರ ನಿಂತು ಬಿಟ್ಟರು. ಅಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ನನಗೆ ಸಲಹೆ ನೀಡಲಾರಂಭಿಸಿದರು. ಒಂದು ವೇಳೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರನ್ನ ಇಳಿಸಿರಲಿಲ್ಲವಾಗಿದ್ದರೆ ಪಂಜಾಬ್ ಕಾಂಗ್ರೆಸ್ ಕಥೆ ಮುಗಿದೇ ಬಿಟ್ಟಿರುತ್ತಿತ್ತು. ಇಂತಹ ವರಿಷ್ಠರನ್ನ ಕಟ್ಗೊಂಡು ಏನು ಮಾಡಬೇಕು? ನಾನು ಯಾವತ್ತೂ ಯಾರನ್ನೂ ಅಪಮಾನ ಮಾಡಿಲ್ಲ”

ಗುಲಾಂ ನಬಿ ಆಜಾದ್ ಅವರ ಅಸಮಾಧಾನದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ‘ನಾನು ಅವರಿಗೆ ಏನು ಅಗೌರವ ಮಾಡಿದ್ದೇನೆ? ಕಾಂಗ್ರೆಸ್ ನಿಂದಾಗಿ ಅವರು ಹಲವು ವರ್ಷಗಳಿಂದ ಈ ಹುದ್ದೆಯಲ್ಲಿದ್ದಾರೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಅಲ್ಲಿಗೆ ಅವರ ಅವಧಿ ಮುಗಿದ ಮೇಲೆ ನೀವು ಜಮ್ಮು-ಕಾಶ್ಮೀರಕ್ಕೆ ಹೋಗಿ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾಗಬೇಕು ಎಂದು ಅವರೊಂದಿಗೆ ಮಾತನಾಡಿದ್ದೆ. ಚುನಾವಣೆಗಳು ಬರುತ್ತಿವೆ. ಅಲ್ಲಿ ಮತ್ತೆ ಮುಖ್ಯಮಂತ್ರಿಯಾಗಬಹುದು. ಆದರೆ ಅವರು ಆ ಪದವಿ ಬಿಡಲು ನಿರಾಕರಿಸಿದರು. ಅಲ್ಲಿ ಪಕ್ಷ ಅಸ್ತಿತ್ವದಲ್ಲಿಲ್ಲ ಎಂದರು. ಆಜಾದ್ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು, ಆದರೆ ಅವರ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಈಗ ಅಲ್ಲಿ ಅಸ್ತಿತ್ವದಲ್ಲಿಲ್ಲ. ಈಗ ಅಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ” ಎಂದರು.

‘ಪ್ರಿಯಾಂಕಾ ಗಾಂಧಿಯನ್ನ ಮನೆಯಿಂದ ಹೊರ ಹಾಕಿದ್ದಾರೆ, ಈಗಿನ ಸರ್ಕಾರದ ಬಗ್ಗೆ ಕರುಣೆ ಬಂತು’

ಸಂಜಯ್ ರಾವತ್ ಅವರು ಮುಂದೆ ಬರೆಯುತ್ತ, ‘ಬುಧವಾರ 10 ಜನಪಥ್‌ನಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾದರು. ‘ಈಗಿಬ ದಿನಗಳಲ್ಲಿ ನೀವು ಇಲ್ಲಿ ವಾಸಿಸುತ್ತಿದ್ದೀರಾ?’ ಎಂದೆ. ಇದಕ್ಕೆ ಪ್ರಿಯಾಂಕಾ, ‘ಈಗಿನ ಮೋದಿ ಸರ್ಕಾರ ನನ್ನನ್ನು ಮನೆಯಿಂದ ಹೊರಹಾಕಿದಾಗಿನಿಂದ, ನಾನು ಖಾನ್ ಮಾರ್ಕೆಟ್ ಬಳಿಯ ಕಟ್ಟಡದಲ್ಲಿ ವಾಸಿಸುತ್ತಿದ್ದೇನೆ. ಆದರೆ ಅಲ್ಲಿ ಜನರನ್ನು ಭೇಟಿ ಮಾಡಲು ಸಾಧ್ಯವಿಲ್ಲ, ಹಾಗಾಗಿ ಇಲ್ಲಿಗೆ ಬಂದು ಭೇಟಿಯಾಗುತ್ತೇವೆ’ ಎಂದು ಇಂದಿರಾಗಾಂಧಿಯವರ ಮೊಮ್ಮಗಳು, ಪಂಡಿತ್ ನೆಹರೂ ಅವರ ಮರಿಮೊಮ್ಮಗಳು, ರಾಜೀವ್ ಗಾಂಧಿಯವರ ಮಗಳು ಇದನ್ನೆಲ್ಲ ನನಗೆ ಹೇಳುತ್ತಿದ್ದರು. ಅಂದು ಭಯೋತ್ಪಾದಕರ ದಾಳಿಯಲ್ಲಿ ಅಜ್ಜಿ-ತಂದೆ ಸಾವನ್ನಪ್ಪಿದ ಆಡಳಿತಗಾರರ ಮನಸ್ಥಿತಿಯ ಬಗ್ಗೆ ಅನುಕಂಪವಿತ್ತು, ಭದ್ರತೆಯ ಕಾರಣದಿಂದಲೂ ಬಿಜೆಪಿ ಸರ್ಕಾರ ಅವರಿಗೆ ಸರ್ಕಾರಿ ಮನೆ ನೀಡಲು ಸಾಧ್ಯವಾಗಲಿಲ್ಲ. ಬದಲಾಗಿ ಆಕೆ ವಾಸವಿದ್ದ ಮನೆಯಿಂದ ಹೊರ ಹಾಕಲಾಯಿತು. ಇಂದು ದೆಹಲಿಯ ಹಲವು ಸರ್ಕಾರಿ ಮನೆಗಳನ್ನು ‘ಅತಿಥಿ ವಸತಿ’ ಹೆಸರಿನಲ್ಲಿ ಕೆಲವರು ಮತ್ತು ಸಂಘಟನೆಗಳು ವಶಪಡಿಸಿಕೊಂಡಿದ್ದಾರೆ.

‘ಇಲ್ಲೂ, ಅಲ್ಲೂ ಕೇಂದ್ರ ತನಿಖಾ ಸಂಸ್ಥೆಗಳು ಹಿಂದೆ ಬಿದ್ದಿವೆ’

ಕೇಂದ್ರ ತನಿಖಾ ಸಂಸ್ಥೆಗಳ ಬಗ್ಗೆ ಮಾತನಾಡಿದ ಸಂಜಯ್ ರಾವುತ್, ‘ಸದ್ಯ ಎಲ್ಲೆಡೆ ಒಂದು ರೀತಿಯ ಭಯವನ್ನು ಸೃಷ್ಟಿಸಲಾಗುತ್ತಿದೆ. ಈ ಭಯ ಇಡಿ, ಸಿಬಿಐ, ಆದಾಯ ತೆರಿಗೆ ಏಜೆನ್ಸಿಗಳದ್ದು. ಮಹಾರಾಷ್ಟ್ರ ಮತ್ತು ಬಂಗಾಳದಲ್ಲಿ ಈ ಸಂಸ್ಥೆಗಳು ಬಿಜೆಪಿಗಾಗಿ ಕೆಲಸ ಮಾಡುತ್ತವೆ. ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿಯ ಮಂತ್ರಿಗಳನ್ನು ತನಿಖೆಯಲ್ಲಿ ಸಿಲುಕಿಸಲಾಗಿದೆ. ಬಿಜೆಪಿ ವಿರುದ್ಧ ಮಾತನಾಡುವವರನ್ನು ಶತ್ರುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪ್ರಿಯಾಂಕಾ ಗಾಂಧಿ ಏನು ಹೇಳಿದ್ದಾರೆ ಎಂಬುದು ಮುಖ್ಯ. ‘ನೀವು ಮಹಾರಾಷ್ಟ್ರ, ಬಂಗಾಳದ ಬಗ್ಗೆ ಮಾತನಾಡುತ್ತಿದ್ದೀರಿ? ನಾನು ಮತ್ತು ನನ್ನ ಕುಟುಂಬ ಕೂಡ ಅದೇ ಚಕ್ರದಲ್ಲಿ ಸಾಗುತ್ತಿದ್ದೇವೆ. ಲಖೀಂಪುರ ಖೇರಿಗೆ ಹೋದ ತಕ್ಷಣ ನನ್ನ ಪತಿಗೆ ಆದಾಯ ತೆರಿಗೆ ಇಲಾಖೆಯಿಂದ ಒಂದೇ ದಿನದಲ್ಲಿ 69 ನೋಟಿಸ್ ಬಂದಿದ್ದರೂ ನಾನು ಹಿಂದೆ ಸರಿಯಲಿಲ್ಲ. ಹೋರಾಟ ಮಾಡುತ್ತಲೇ ಇರುತ್ತೇನೆ, ಪಕ್ಷವನ್ನು ಮತ್ತೆ ಕಟ್ಟಲು ಪ್ರಯತ್ನಿಸುತ್ತಿದ್ದೇನೆ. ಇದು ಒಂದು ಸವಾಲು. ಜಿಲ್ಲಾ ಮಟ್ಟದಲ್ಲಿ ಕೆಲಸ ಮಾಡುವ ನಮ್ಮ ಜನರ ಮೇಲೆ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದರು ಎಂದು ಸಂಜಯ್ ರಾವತ್ ಬರೆದಿದ್ದಾರೆ.

ಕೊನೆಯಲ್ಲಿ, ಸಂಜಯ್ ರಾವುತ್ ತಮ್ಮ ಲೇಖನದಲ್ಲಿ ಹೀಗೆ ಬರೆದಿದ್ದಾರೆ, ‘ರಾಹುಲ್-ಪ್ರಿಯಾಂಕಾ, ಸಹೋದರ ಸಹೋದರಿಯರ ಮುಂದಿರುವ ಸವಾಲು ಕಾಂಗ್ರೆಸ್ ಅನ್ನು ಉಳಿಸುವುದಾಗಿದೆ. ತಿಲಕರ ಮಾರ್ಗದಿಂದ ಮಾತ್ರ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಸಾಧ್ಯ. ಬಿಜೆಪಿ-ಮೋದಿಯವರ ತೇಜೋವಧೆಯಿಂದ ಹೊತ್ತಿ ಉರಿಯುತ್ತಿರುವ, ಪ್ರಖರ ರಾಷ್ಟ್ರೀಯತೆ, ಹುಸಿ ಪ್ರಭೆಯಿಂದ ಹೊತ್ತಿ ಉರಿಯುತ್ತಿರುವ ಸಮಾಜದಲ್ಲಿ ಮೂಡಿರುವ ಕೀಳರಿಮೆ ತೊಲಗಬೇಕಿದೆ. ಈ ಯುದ್ಧದ ಘೋಷವನ್ನ ಯಾರಾದರೂ ಬಾರಿಸುತ್ತಾರೆಯೇ?’ ಎಂದಿದ್ದಾರೆ‌.

Advertisement
Share this on...