ಭವ್ಯ ಕಾಶಿ ಕಾರಿಡಾರ್ ನೋಡಿ “ನನ್ನ ಮಸ್ಜಿದ್‌ನ್ನ‌ ಈ ಮೋದಿ, ಯೋಗಿ….”ಎಂದು ಗಳಗಳನೆ ಕಣ್ಣೀರಿಟ್ಟ ಜ್ಞಾನವಾಪಿ ಮಸ್ಜಿದ್ ಗೆ ನಮಾಜ್ ಮಾಡಲು ಬಂದ ಮುಸ್ಲಿಂ ಯುವಕ

in Kannada News/News 1,507 views

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ (13 ಡಿಸೆಂಬರ್ 2021) ‘ಶ್ರೀಕಾಶಿ ವಿಶ್ವನಾಥ ಕಾರಿಡಾರ್’ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ವಿಶ್ವನಾಥ ಧಾಮದ ದೈವಿಕತೆ ಮತ್ತು ಭವ್ಯತೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಇನ್ನು ಭಕ್ತರು ಗಂಗಾ ಘಾಟ್‌ನಿಂದ ನೇರವಾಗಿ ಬಂದು ಬಾಬಾ ವಿಶ್ವನಾಥನ ಜಲಾಭಿಷೇಕ ಮಾಡಬಹುದಾಗಿದೆ. ಆದರೆ ನಿರ್ದಿಷ್ಟ ವರ್ಗದ ಕೆಲವು ಜನರು ಇದರಿಂದ ಕಂಗಾಲಾಗಿದ್ದಾರೆ‌. ಈ ಕಾರಿಡಾರ್‌ನಿಂದ ಜ್ಞಾನವಾಪಿ ಮಸೀದಿ ಮುಚ್ಚಿಹೋಗಿದೆ ಎಂದು ಅವರು ಭಾವಿಸುತ್ತಿದ್ದಾರೆ.

Advertisement

ಯುಟ್ಯೂಬ್ ಚಾನೆಲ್ UP Tak ಜ್ಞಾನವಾಪಿ ಮಸೀದಿಯಲ್ಲಿ ನಮಾಜ್ ಮಾಡಲು ಬಂದ ಕೆಲವು ಜನರೊಂದಿಗೆ ಮಾತನಾಡಿದೆ. ಕೆಲವರು ಮಸೀದಿಯ ಹೊದಿಕೆಯ ಬಗ್ಗೆ ಮಾತನಾಡಿದರೆ, ಕೆಲವರು ಅಭಿವೃದ್ಧಿ ಸೀಮಿತವಾಗಿದೆ ಎಂದು ಮಾತನಾಡಿದರು. ವಾರಣಾಸಿ ಬದಲಾವಣೆ ವಿಚಾರವಾಗಿ ಮೊಹಮ್ಮದ್ ಶಾಗೀರ್, ಇದಕ್ಕೆಲ್ಲಾ ಕಾರಣ ಅಭಿವೃದ್ಧಿಯಲ್ಲ ಬದಲಾಗಿ ಇದೆಲ್ಲ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಎಂದಿದ್ದಾರೆ.

ಅದೇ ಸಮಯದಲ್ಲಿ, ಅಭಿವೃದ್ಧಿಯನ್ನು ಸೀಮಿತಗೊಳಿಸಲಾಗಿದೆ ಎಂದು ಶೌಕತ್ ಅಲಿ ಉಳಿದ ಮುಸಲ್ಮಾನರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು. ಇದೆಲ್ಲ ಮಂದಿರ-ಮಸೀದಿವರೆಗೆ ಮಾತ್ರ ಎನ್ನುತ್ತಾರೆ. ಇಡೀ ವಾರಣಾಸಿಯೇ ಬದಲಾಗಿದೆಯೆಂದೇನಲ್ಲ, ಕೇವಲ ಮಂದಿರ-ಮಸೀದಿ ಏಕತೆ ತೋರಿಸಲು ಅಭಿವೃದ್ಧಿಯ ರೂಪ ನೀಡಲಾಗಿದೆ ಎಂದು ಬಿಲಾಲ್ ಅಹಮದ್ ಹೇಳಿದ್ದಾರೆ. ದೇವಸ್ಥಾನ ಮಾತ್ರ ಅಭಿವೃದ್ಧಿಯಾಗಿದೆ ಎನ್ನುತ್ತಾರೆ ಹಮೀದ್ ಅನ್ಸಾರಿ.

ಕೋಲ್ಕತ್ತಾದಿಂದ ಬಂದಿದ್ದ ನೌಶಾದ್ ಆಲಂ ಮಾತನಾಡುತ್ತ, “ನಾವು ನಮಾಜ್ ಮಾಡಲು ಕೋಲ್ಕತ್ತಾದಿಂದ ಇಲ್ಲಿಗೆ ಬಂದಿದ್ದೆವು. ಮಸೀದಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಮತ್ತು ದೇವಾಲಯವನ್ನು ಈ ರೀತಿ ಬೃಹತ್ ಮಾಡಲಾಗಿದೆ ಎಂದು ನಮಗೆ ಈ ಪರಿಸ್ಥಿತಿಯನ್ನು ನೋಡಿದರೆ ಅರ್ಥವಾಗುತ್ತಿಲ್ಲ. ಏನಿದು? ನಾನು ಒಬ್ಬ ಟೂರಿಸ್ಟ್, ನಾನು ಈ ನೋವನ್ನು ಅನುಭವಿಸಬಲ್ಲೆ” ಎಂದಿದ್ದಾರೆ.

ಆಕ್ರೋಶಗೊಂಡ ನೌಷಾದ್, “ನಿಮಗೆ ಕಾಣಿಸುತ್ತಿಲ್ಲವೇ? ನೀವು ಮಸೀದಿಯನ್ನು ನೋಡಬಹುದೇ? ನನಗೆ ಸಹಿಸಲಾಗುತ್ತಿಲ್ಲ. ನೀವು ಸತ್ಯವನ್ನು ಹೇಗೆ ಮರೆಮಾಚಬಹುದು? ಒಂದನ್ನು ಮುಚ್ಚಿಟ್ಟು ಮತ್ತೊಂದನ್ನು ಗ್ರ್ಯಾಂಡ್ ಮಾಡಲಾಗಿದೆ. ಇದು ಹಿಂದೂಸ್ಥಾನ. ಇಲ್ಲಿ ಪ್ರಜಾಪ್ರಭುತ್ವವಿದೆ. ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದು ಸಂವಿಧಾನ ಹೇಳುತ್ತದೆ. ನೀವು ಬೇರೊಬ್ಬರ ಹಕ್ಕುಗಳನ್ನು ನಿಗ್ರಹಿಸುತ್ತೀರಿ, ಇದು ಹೇಗೆ ಸಾಧ್ಯ? ಮೊದಲ ಬಾರಿಗೆ ನಾನು ಈ ಮಸೀದಿಯಲ್ಲಿ ನಮಾಜ್ ಮಾಡಿದ್ದೇನೆ ಮತ್ತು ನಾನು ಅನುಭವಿಸಿದ ನೋವು, ನನ್ನ 40 ವರ್ಷಗಳ ಜೀವನದಲ್ಲಿ ನಾನು ಎಂದಿಗೂ ಅನುಭವಿಸಲಿಲ್ಲ” ಎಂದಿದ್ದಾನೆ.

ಹೀಗೆ ಹೇಳಿದ ನೌಶಾದ್ ಆಲಂ ಗಳಗಳನೆ ಕಣ್ಣೀರಡಲಾರಂಭಿಸಿದ. ಆ್ಯಂಕರ್ ಆತನನ್ನ ಸಮಾಧಾನಪಡಿಸಿ ನಂತರ ಏಕಪಕ್ಷೀಯ ಅಭಿವೃದ್ಧಿ ಏನಾಗಿದೆ ಎಂದು ನೀವು ಭಾವಿಸುತ್ತೀರಾ? ಎಂದು ಕೇಳಿದಾಗ, ನೌಶಾದ್, “ಅಭಿವೃದ್ಧಿ ಮಾತು ಬಿಡಿ, ಬೇರೊಬ್ಬರ ಹಕ್ಕನ್ನು ಹತ್ತಿಕ್ಕಲಾಗಿದೆ” ಎಂದು ಹೇಳಿದನು. ನಂತರ ಆತ ಮತ್ತೆ ಅಳಲು ಪ್ರಾರಂಭಿಸಿ ಮುಂದೆ ಮಾತನಾಡಲು ನಿರಾಕರಿಸಿದನು.

18 ಏಪ್ರಿಲ್ 1669 ರಂದು, ಔರಂಗಜೇಬನು ಕಾಶಿ ವಿಶ್ವನಾಥ ದೇವಾಲಯವನ್ನು ನಾಶಮಾಡುವ ಆದೇಶವನ್ನು ಹೊರಡಿಸಿದ್ದನು ಎಂಬುದು ಗಮನಾರ್ಹವಾಗಿದೆ. ಈ ಆದೇಶದ ಪ್ರತಿಯನ್ನ ಇಂದಿಗೂ ಕೋಲ್ಕತ್ತಾದ ಏಷ್ಯಾಟಿಕ್ ಲೈಬ್ರರಿಯಲ್ಲಿ ಸಂರಕ್ಷಿಸಿಡಲಾಗಿದೆ. ಆ ಕಾಲದ ಬರಹಗಾರ ಸಾಕಿ ಮುಸ್ತೈದ್ ಖಾನ್ ಬರೆದ ‘ಮಸೀದೇ ಅಲಮಗಿರಿ’ಯಲ್ಲಿ ಈ ಕೆಡವುವಿಕೆಯ ವಿವರಣೆ ಇದೆ. 2 ಸೆಪ್ಟೆಂಬರ್ 1669 ರಂದು, ಔರಂಗಜೇಬ್ ದೇವಾಲಯದ ಧ್ವಂಸವನ್ನು ಪೂರ್ಣಗೊಳಿಸಿದ ಬಗ್ಗೆ ತಿಳಿಸಲಾಗಿತ್ತು.

Advertisement
Share this on...