Fact Check: ನಿಜಕ್ಕೂ ಬಾಳ್ ಠಾಕ್ರೆ, ಅಶೋಕ್ ಸಿಂಘಲ್, ಅಡ್ವಾಣಿ, ಸುಬ್ರಮಣಿಯನ್ ಸ್ವಾಮಿ ಪುತ್ರಿಯರು ಹಾಗು ಪ್ರಧಾನಿ ಮೋದಿ ಅಣ್ಣನ ಮಗಳು ಮುಸ್ಲಿಮರನ್ನ ಮದುವೆಯಾಗಿದ್ದಾರಾ?

in Kannada News/News 3,621 views

ಸೋಶಿಯಲ್ ಮೀಡಿಯಾಗಳಲ್ಲಿ ಕೆಲವರು ಒಂದು ಪೇಪರ್ ಕಟಿಂಗ್‌ನ್ನ ಶೇರ್ ಮಾಡುತ್ತಿದ್ದಾರೆ. ಇದರ ಟೈಟಲ್ ನಲ್ಲಿ ವೋಟ್ ಬರೆಯುವ ಬದಲು ‘ಬೋಟ್’ ಎಂದು ಬರೆದ “ಬೋಟ್ ಗಾಗಿ ಯಾಕೆ ನಿಮ್ಮ ಅಸಲಿಯತ್ತನ್ನ ಮುಚ್ಚಿಡುತ್ತೀರ? ಮೋದಿಯ ಅಣ್ಣನ ಮಗಳ ಗಂಡ ಮುಸ್ಲಿಂ, ಬಿಜೆಪಿಯ ಶಹನವಾಜ್ ಹುಸೇನ್ ಪತ್ನಿ, ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ್ ಜೋಶಿ ಮಗಳು, ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ ಪತ್ನಿ ವಿಶ್ವ ಹಿಂದೂ ಪರಿಷತ್ ನಾಯಕ ದಿ.ಶ್ರೀ ಅಶೋಕ್ ಸಿಂಘಲ್ ಮಗಳು, ಲಾಲಕೃಷ್ಣ ಅಡ್ವಾಣಿ ಮಗಳು ಎರಡನೆಯ ಮದುವೆಯಾಗಿದ್ದು ಆಕೆಯ ಗಂಡ ಮುಸ್ಲಿಂ, ಶಿವಸೇನೆ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಪುತ್ರಿಯ ಗಂಡ ಮುಸ್ಲಿಂ, ಸುಬ್ರಮಣಿಯನ್ ಸ್ವಾಮಿ ಪುತ್ರಿಯ ಗಂಡ ಮುಸ್ಲಿಂ, ಇದೆಲ್ಲ ನೋಡಿದ ಬಳಿಕ ಇವರ ಬಣ್ಣ ಬಯಲಾಗಿದೆ ನೋಡಿ” ಎಂಬ ಫೇಕ್ ಪೋಸ್ಟ ಒಂದು ವೈರಲ್ ಆಗುತ್ತಿದೆ

Advertisement

ಈ ಪೇಪರ್ ಕಟಿಂಗ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ತಾರ್ ಅಬ್ಬಾಸ್ ನಖ್ವಿ, ಮುರುಳಿ ಮನೋಹರ್ ಜೋಶಿ, ಲಾಲಕೃಷ್ಣ ಅಡ್ವಾಣಿ, ಬಾಳ್ ಠಾಕ್ರೆ ಹಾಗು ಅಶೋಕ್ ಸಿಂಘಲ್ ರವರ ಚಿತ್ರ ಹಾಕಲಾಗಿದೆ.

ಈ ಸುದ್ದಿಯ ವಿಶ್ವಾಸಾರ್ಹತೆಯ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದಾಗ ಈ ಪೇಪರ್ ಕಟಿಂಗ್ ಫೇಕ್ ಎಂದು ತಿಳಿದುಬಂದಿದೆ. ಬಿಜೆಪಿ ನಾಯಕ ಶಹನವಾಜ್ ಹುಸೇನ್ ಪತ್ನಿ ಮುರುಳಿ ಮನೋಹರ್ ಜೋಶಿ ಮಗಳಲ್ಲ,‌ ಪ್ರಧಾನ ಮೋದಿಯವರ ಅಣ್ಣನ ಮಗಳು ಮುಸ್ಲಿಮನನ್ನಲ್ಲ ಬದಲಾಗಿ ಅವರದೇ ಜಾತಿಯ ವ್ಯಕ್ತಿಯನ್ನ ಮದುವೆಯಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ (VHP) ನಾಯಕ ದಿವಂಗತ ಅಶೋಕ್ ಸಿಂಘಲ್ ರವರು ಮದುವೆಯೇ ಆಗಿರಲಿಲ್ಲ ಹಾಗು ಶಿವಸೇನೆ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಮೊಮ್ಮಗಳು ಡಾ.ಮನನ್ ಠಕ್ಕರ್ ಅನ್ನೋರ್ ಜೊತೆ ಮದುವೆಯಾಗಿದ್ದಾಳೆ.

ವೈರಲ್ ಆಗುತ್ತಿರುವ ಪೇಪರ್ ಕಟಿಂಗ್‌ನ್ನ ಸರಿಯಾಗಿ ಗಮನಿಸಿದರೆ ಇದು ಎಡಿಟೆಡ್ ಅಂತ ಗೊತ್ತಾಗುತ್ತದೆ. ಈ ಪೇಪರ್ ಕಟಿಂಗ್‌ನಲ್ಲಿನ ಯಾವುದೇ ವಾಕ್ಯ ಅಥವ ಸಾಲುಗಳ ಬಳಿಕ ಪೂರ್ಣ ವಿರಾಮವಾಗಲಿ, ಕ್ವಾಮಾ ಆಗಲಿ ಇಲ್ಲ. ಅಷ್ಟೇ ಅಲ್ಲ, ಮುಖ್ತಾರ್ ಅಬ್ಬಾಸ್ ನಕ್ವಿ ರವರ ಫೋಟೋ ಎರಡು ಕಡೆ ಹಾಕಲಾಗಿದೆ. ವಾಕ್ಯ ವಿನ್ಯಾಸದಲ್ಲೂ ತಪ್ಪು ತಪ್ಪಾಗಿ ಬರೆಯಲಾಗಿದೆ. ಹೆಡಿಂಗ್ ನಲ್ಲಿ ‘ವೋಟ್’ ಅಂತ ಬರೆಯುವ ಜಾಗದಲ್ಲಿ ‘ಬೋಟ್’ ಅಂತ ಹಾಗು ‘ರಿಶ್ತೇದಾರಿ’ ಅಂತ ಬರೆಯುವ ಜಾಗದಲ್ಲಿ ‘ರಿಸ್ತೆದಾರಿ’ ಅಂತ ಬರೆಯಲಾಗಿದೆ.

ಮೇಲಿರುವ ಕಟಿಂಗ್ ನಲ್ಲಿರುವ ಎಲ್ಲ ಅಂಶಗಳೂ ಸುಳ್ಳು ಎಂಬುದು ಇದರಿಂದ ಸಾಬೀತಾಗುತ್ತದೆ. ಬನ್ನಿ ವಿವರವಾಗಿ ಎಲ್ಲರ ಬಗ್ಗೆಯೂ ನಿಮಗೆ ತಿಳಿಸುತ್ತೇವೆ

1. ಪ್ರಧಾನಿ ಮೋದಿಯ ಅಣ್ಣನ ಮಗಳು ಮುಸ್ಲಿಂ ವ್ಯಕ್ತಿಯನ್ನ ಮದುವೆಯಾಗಿದ್ದಾಳೆ

ಫ್ಯಾಕ್ಟ್ ಚೆಕ್: ಅಮರ್ ಉಜಾಲಾದಲ್ಲಿ ಪ್ರಕಟವಾದ ಸುದ್ದಿಯು 12 ಅಕ್ಟೋಬರ್ 2019 ರದ್ದಾಗಿದ್ದು, ಇದರ ಪ್ರಕಾರ “ಪ್ರಧಾನಿ ಮೋದಿ ಅವರ ಅಣ್ಣನ ಮಗಳಾದ ದಮಯಂತಿ ಅವರ ಪರ್ಸ್‌ನ್ನ ಕಳ್ಳರು ಕಿತ್ತುಕೊಂಡಿದ್ದಾರೆ. ಅವರು ಪ್ರಧಾನಿಯವರ ಹಿರಿಯ ಸಹೋದರ ಪ್ರಹ್ಲಾದ್ ಮೋದಿಯವರ ಮಗಳು. ಆಕೆಯ ಗಂಡನ ಹೆಸರು ವಿಕಾಸ್ ಮೋದಿ” ಎಂದು ಪ್ರಕಟವಾಗಿತ್ತು.

ದೈನಿಕ್ ಭಾಸ್ಕರ್ ನಲ್ಲಿ 5 ವರ್ಷಗಳ ಹಿಂದೆ ಪ್ರಕಟವಾದ ಸುದ್ದಿ ಪ್ರಕಾರ, ಪ್ರಧಾನಿ ಮೋದಿಯವರ ಅಣ್ಣನ ಮಗಳು ನಿಕುಂಜಬೆನ್ ನಿಧನರಾಗಿದ್ದಾರೆ. ನಿಕುಂಜಬೆನ್ ಅವರು ಪ್ರಧಾನಿ ಮೋದಿಯವರ ಹಿರಿಯ ಸಹೋದರ ಪ್ರಹ್ಲಾದ್ ಮೋದಿಯವರ ಮಗಳು. ಆಕೆ ಟ್ಯೂಷನ್ ಕಲಿಸುತ್ತಿದ್ದರು ಮತ್ತು ಪತಿ ಜಗದೀಶ್ ಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು”

ಗುಜರಾತ್ ದೈನಿಕ್ ಜಾಗರಣ್‌ನ ಮುಖ್ಯ ವರದಿಗಾರ ಶತ್ರುಘ್ನ ಹೇಳುವ ಪ್ರಕಾರ, ಪ್ರಧಾನಿ ಮೋದಿಯವರ ಯಾವ ಅಣ್ಣನ ಮಕ್ಕಳೂ ಯಾವುದೇ  ಮುಸ್ಲಿಮರನ್ನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರ ಸಹೋದರರ ಮಕ್ಕಳು ಅವತ ಜಾತಿಯಲ್ಲೇ ವಿವಾಹವಾಗಿದ್ದಾರೆ.

2. ಬಿಜೆಪಿ ನಾಯಕ ಶಾನವಾಜ್ ಹುಸೇನ್ ಅವರ ಪತ್ನಿ ಮುರಳಿ ಮನೋಹರ್ ಜೋಶಿ ಅವರ ಪುತ್ರಿ.

ಫ್ಯಾಕ್ಟ್ ಚೆಕ್: ಅಕ್ಟೋಬರ್ 28, 2020 ರಂದು, ಜನಸತ್ತಾ ದಲ್ಲಿ ಶಹನವಾಜ್ ಹುಸೇನ್ ಮತ್ತು ಅವರ ಪತ್ನಿ ರೇಣು ಅವರ ಲವ್ ಸ್ಟೋರಿ ಬಗ್ಗೆ ವರದಿ ಪ್ರಕಟವಾಗಿತ್ತು. ಅದರಲ್ಲಿ ಶಹನವಾಜ್ ಅವರ ಪತ್ನಿಯ ಹೆಸರು ರೇಣು ಮತ್ತು ಆಕೆ ಶಾಲಾ ಶಿಕ್ಷಕಿ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ಮುರಳಿ ಮನೋಹರ್ ಜೋಶಿ ಅವರ ಹೆಣ್ಣುಮಕ್ಕಳ ಹೆಸರುಗಳು ಪ್ರಿಯಂವದಾ ಜೋಶಿ ಮತ್ತು ನಿವೇದಿತಾ ಜೋಶಿಯಾಗಿದೆ.

3. ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಪತ್ನಿ ವಿಎಚ್‌ಪಿ (ವಿಶ್ವ ಹಿಂದೂ ಪರಿಷತ್) ನಾಯಕ ದಿವಂಗತ ಅಶೋಕ್ ಸಿಂಘಲ್ ಅವರ ತಂಗಿ

ಫ್ಯಾಕ್ಟ್ ಚೆಕ್: ನವೆಂಬರ್ 17, 2015 ರಂದು, ಟೈಮ್ಸ್ ಆಫ್ ಇಂಡಿಯಾ ದಲ್ಲಿ VHP ಯ ಫೈರ್‌ಬ್ರಾಂಡ್ ನಾಯಕ ಅಶೋಕ್ ಸಿಂಘಲ್ ಬಗ್ಗೆ ವರದಿ ಮಾಡಿದೆ. ಇದರ ಪ್ರಕಾರ ಅಶೋಕ್ ಸಿಂಘಲ್ ಮತ್ತು ಅವರ ಸಹೋದರಿಗೆ ಮದುವೆಯೇ ಆಗಿಲ್ಲ.

4. ಲಾಲ್ ಕೃಷ್ಣ ಅಡ್ವಾಣಿ ಅವರ ಮಗಳು ಮುಸ್ಲಿಂ ವ್ಯಕ್ತಿಯ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದಾರೆ

ಫ್ಯಾಕ್ಟ್ ಚೆಕ್: ಪ್ರತಿಭಾ ಅಡ್ವಾಣಿ ಅವರು ಹೋಟೆಲ್ ಎಕ್ಸಿಕ್ಯೂಟಿವ್ ಕೈಲಾಶ್ ಥಡಾನಿ ಅವರನ್ನು ವಿವಾಹವಾಗಿದ್ದಾರೆ. ಆದರೆ ಕೆಲವು ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು. ಇದರ ಬಳಿಕ ಪ್ರತಿಭಾ ಅಡ್ವಾಣಿ ಎರಡನೆಯ ಮದುವೆಯಾಗಿಲ್ಲ.

5. ಸುಬ್ರಮಣಿಯನ್ ಸ್ವಾಮಿ ಅವರ ಪುತ್ರಿ ಸುಹಾಸಿನಿ  ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆ.

ಫ್ಯಾಕ್ಟ್ ಚೆಕ್: ಜುಲೈ 18, 2021 ರಂದು ಜನಸತ್ತಾ ದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸುಬ್ರಮಣಿಯನ್ ಸ್ವಾಮಿ ಅವರ ಅಳಿಯ ಮುಸ್ಲಿಂ. ಅವರ ಮಗಳು ಸುಹಾಸಿನಿ ನದೀಮ್ ಹೈದರ್ ಅವರನ್ನು ವಿವಾಹವಾಗಿದ್ದಾರೆ. ಇದು ನಿಜವಾದ ಸುದ್ದಿ

6. ಬಾಳ್ ಠಾಕ್ರೆಯವರ ಮೊಮ್ಮಗಳು ಮುಸ್ಲಿಮನನ್ನ ಮದುವೆಯಾಗಿದ್ದಾರೆ

ಫ್ಯಾಕ್ಟ್ ಚೆಕ್: ಬಾಳ್ ಠಾಕ್ರೆಯವರ ಮೊಮ್ಮಗಳು ನೇಹಾ ರವರ ವಿವಾಹದ ಸುದ್ದಿ ನವೆಂಬರ್ 29, 2019 ರಂದು ನ್ಯೂಸ್ 18 ನಲ್ಲಿ ವರದಿಯಾಗಿತ್ತು. “ಹೀಗೊಂದು ವದಂತಿ ಹಬ್ಬಿಸಲಾಗಿದೆ” ಎಂದು ಅದರಲ್ಲಿ ಬರೆಯಲಾಗಿದೆ. ಜೆವೆಲರಿ ಡಿಸೈನರ್ (ಆಭರಣ ವಿನ್ಯಾಸಕಿ) ನೇಹಾ ಠಾಕ್ರೆ ಅವರ ತಂದೆಯ ಹೆಸರು ಬಿಂದು ಮಾಧವ್. ಅವರು ಡಾ. ಮನನ್ ಠಕ್ಕರ್ ಅವರನ್ನು ವಿವಾಹವಾದರು. ಡಾ. ಮನನ್ ಠಕ್ಕರ್ ಗುಜರಾತಿಯಾಗಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಇದು ಸಂಪೂರ್ಣ ಸುಳ್ಳು ಮತ್ತು ನಕಲಿ ಸುದ್ದಿ ಎಂದಿದ್ದಾರೆ. ಅದೇ ಸಮಯದಲ್ಲಿ, ಬಿಜೆಪಿಯ ರಾಷ್ಟ್ರೀಯ ವಕ್ತಾರ ಬಿಜಯ್ ಸೋನಕರ್ ಶಾಸ್ತ್ರಿ ಮಾತನಾಡಿ ಇದು ಸಂಪೂರ್ಣವಾಗಿ ಸುಳ್ಳು. ಸತ್ಯಕ್ಕೆ ದೂರ ಮತ್ತು ಕಿಡಿಗೇಡಿಗಳ ಚೇಷ್ಟೆ. ಅಶೋಜ್ ಸಿಂಘಲ್ ಅವಿವಾಹಿತರಾಗಿದ್ದರು, ಜೋಶಿಯವರ ಮಗಳು ಹಿಂದೂವನ್ನು ಮದುವೆಯಾಗಿದ್ದಾರೆ. ಅಡ್ವಾಣಿ ಅವರಿಗೆ ಒಬ್ಬ ಮಗಳಿದ್ದಾಳೆ. ಮೋದಿ ಜಿಯವರ ಎಲ್ಲಾ ಸೊಸೆಯಂದಿರು ತಮ್ಮದೇ ಸಮಾಜದಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Advertisement
Share this on...