ಭಾರತೀಯ ಸೇನೆ ಕಳಿಸಿದ ಒಂದೇ ಒಂದು ಸಾಲಿನ‌ ಪತ್ರ ಓದಿ 93 ಸಾವಿರ ಸೈನಿಕರೊಂದಿಗೆ ಸರೆಂಡರ್ ಆಗಿದ್ದ ಪಾಕ್ ಸೇನೆ: ಭಾರತೀಯ ಸೇನೆಯ ಆ ಪತ್ರದಲ್ಲಿ ಅಂಥದ್ದೇನಿತ್ತು ನೋಡಿ

in Kannada News/News 353 views

1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವು ಹಲವಾರು ದಿನಗಳವರೆಗೆ ನಡೆಯಿತು. 2 ಪ್ಯಾರಾ ಬೆಟಾಲಿಯನ್ ಗ್ರೂಪ್ ಆಗಮನದ ನಂತರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪಾಕಿಸ್ತಾನ ಸೇನೆಯು ಎಲ್ಲಾ ಕಡೆಯಿಂದ ಸುತ್ತುವರಿಯಲ್ಪಟ್ಟಿತು. ಈ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಎಕೆ ನಿಯಾಜಿ ಅವರಿಗೆ ಶರಣಾಗುವಂತೆ ಭಾರತೀಯ ಸೇನೆಯಿಂದ ಪತ್ರ ಕಳುಹಿಸಲಾಗಿತ್ತು.

Advertisement

ಈ ಪತ್ರವು ಕೇವಲ ಒಂದು ಸಾಲಿನದ್ದಾಗಿತ್ತು. ಆದರೆ ಜನರಲ್ ನಿಯಾಜಿಗೆ ಪತ್ರವನ್ನು ಸಾಗಿಸುತ್ತಿದ್ದ ಕ್ಯಾಪ್ಟನ್ ನಿರ್ಭಯ್ ಮತ್ತು ಅವರ ಟೀಮ್ ನ ಮೇಲೆಯೆ ದಾಳಿ ಮಾಡಲಾಯಿತು. ಹೇಗೋ ಆ ಒನ್ ಲೈನ್ ಲೆಟರ್ ಅನ್ನು ಪಾಕಿಸ್ತಾನಿ ಆರ್ಮಿ ಆಫೀಸರ್ ಗೆ ತಲುಪಿಸಲಾಯಿತು. ಮತ್ತು ನಿಯಾಜಿ ಆ ಪತ್ರವನ್ನು ಓದಿದ ತಕ್ಷಣ ಪಾಕ್ ಸೇನೆಯ 93 ಸಾವಿರ ಅಧಿಕಾರಿಗಳು ಮತ್ತು ಸೈನಿಕರು ಶರಣಾದರು. ಒಂದು ಸಣ್ಣ ಫೋನ್ ಸಂಭಾಷಣೆಯಲ್ಲಿ, ಒಂದು ಸಾಲಿನ ಪತ್ರದ ಈ ಕೊಂಡೊಯ್ದಿದ್ದ ಹಾಗು ನಂತರ ಲೆಫ್ಟಿನೆಂಟ್ ಜನರಲ್ ಆದ ಕ್ಯಾಪ್ಟನ್ ನಿರ್ಭಯ್ ಶರ್ಮಾ ಖಾಸಗಿ ಸುದ್ದಿವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.

“ನಾವು ಢಾಕಾ ನಗರದ ಹೊರಗೆ ಬಾರ್ಡರ್ ನಲ್ಲಿ ನಿಂತಿದ್ದೆವು.‌ ನಾಲ್ಕೂ ಕಡೆಯಿಂದ ಢಾಕಾ ನಗರವನ್ನ ಭಾರತೀಯ ಸೇನೆ ಸುತ್ತುವರೆದಿತ್ತು. ಡಿಸೆಂಬರ್ 16 ರ ಬೆಳಿಗ್ಗೆ ಮೇಜರ್ ಜನರಲ್ ಜಿ.ನಾಗರಾ ರವರ ಒಂದು ಮೆಸೇಜೆ ಡಿಸೆಂಬರ್ 16 ರ ಬೆಳಿಗ್ಗೆ, ಮೇಜರ್ ಜನರಲ್ ಜಿ. ಅವರ ಎಡಿಸಿ ಕ್ಯಾಪ್ಟನ್ ಮೆಹ್ತಾ ಮೂಲಕ ನಾಗ್ರಾದಿಂದ ಸಂದೇಶವನ್ನು ಸ್ವೀಕರಿಸಿದರು. ಈ ಸಂದೇಶವು ನಮ್ಮ CO ಕರ್ನಲ್ KS ಪನ್ನು ಅವೆ ಹೆಸರಿನಿಂದ ಬಂದಿತ್ತು. ಆ ಮೆಸೇಜ್ ನಲ್ಲಿ ಈ ಪತ್ರವನ್ನ ಜನರಲ್ ನಿಯಾಜಿವರೆಗೆ ತಲುಪಿಸಬೇಕು ಎಂದು ಬರೆದಿತ್ತು. CO ಸಾಹೇಬರು ಆ ಪತ್ರವನ್ನ ತಲುಪಿಸಲು ನನ್ನನ್ನ ಆಯ್ಕೆ ಮಾಡಿದರು. ನನಗೆ ಕ್ಯಾಪ್ಟನ್ ಮೆಹ್ತಾ ರವರ ಜೊತೆ ಹೋಗಬೇಕಿತ್ತು. ಬೆಳಿಗ್ಗೆ 10.45 ಕ್ಕೆ ನಾನು ನನ್ನ ಟೀಮ್‌ನ ಮೇಜರ್ ಸೇಠಿ, ಲೆಫ್ಟಿನೆಂಟ್ ತೇಜೆಂದರ್ ಹಾಗು ಕ್ಯಾಪ್ಟನ್ ಮೆಹ್ತಾ ಜೊತೆ ಢಾಕಾಗೆ ಪ್ರವೇಶಿಸಿದೆವು. ಭಾರತೀಯ ಸೇನೆ ಢಾಕಾಗೆ ನುಗ್ಗುತ್ತಿರೋದಿ ಇದೇ ಮೊದಲ ಬಾರಿಯಾಗಿತ್ತು. ನಾವು ಜೀಪಿನಲ್ಲಿದ್ದೆವು ಮತ್ತು ಶರಣಾಗತಿಯ ಸಂದೇಶವನ್ನು ಹೊತ್ತು ಇತಿಹಾಸದ ಭಾಗವೂ ಆಗಲು ಹೊರಟಿದ್ದೆವು.

ಆ ಒನ್ ಲೈನ್ ಲೆಟರ್ ನಲ್ಲಿ ಲೆಫ್ಟಿನೆಂಟ್ ಜನರಲ್ ನಿಯಾಜಿ ಗಾಗಿ ಲೆಫ್ಟಿನೆಂಟ್ ಜನರಲ್ ನಾಗರಾ ರವರ ಮೆಸೇಜ್ ಹೀಗಿತ್ತು, “My dear Abdullah, I am here. The game is up, I suggest you give yourself up to me and I will take care of you.”

ಭಾರತ-ಪಾಕ್ ವಿಭಜನೆಗೂ ಮೊದಲೇ ಜನರಲ್ ನಿಯಾಜಿ ಮತ್ತು ಜನರಲ್ ನಾಗ್ರಾ ಪರಸ್ಪರ ಪರಿಚಯಸ್ಥರಾಗಿದ್ದರು. ಜನರಲ್ ನಿಯಾಜಿ ಅದಾಗಲೇ ಶರಣಾಗತಿಗೆ ಒಪ್ಪಿಕೊಂಡಿದ್ದರು. ಆದರೆ ಅವರು ಕೆಲವು ಷರತ್ತುಗಳನ್ನು ಹಾಕಿದ್ದರು, ಅದನ್ನು ನಮ್ಮ ಸೇನಾ ಮುಖ್ಯಸ್ಥ ಜನರಲ್ ಸ್ಯಾಮ್ ಮಾನೆಕ್ಷಾ ಅವರು ತಿರಸ್ಕರಿಸಿದರು. ಪಾಕಿಸ್ತಾನ ಸೇನೆಗೆ ಶರಣಾಗುವ ಆದೇಶ ಬಂದಿಲ್ಲ ಎಂಬುದು ನಮಗೆ ಗೊತ್ತಿರಲಿಲ್ಲ. ನಾವು ಸೇತುವೆಯೊಂದರ ಬಳಿ ತಲುಪಿದಾಗ, ನಮ್ಮ ಮೇಲೆ ಗುಂಡುಗಳು ಹಾರಲು ಪ್ರಾರಂಭಿಸಿದವು. ನಂತರ ನಾನು ನನ್ನ ಜೋರಾಗಿ ಕೂಗಿ ಗುಂಡು ಹಾರಿಸುವುದನ್ನು ನಿಲ್ಲಿಸಲು ಹೇಳಿದೆ. ಗುಂಡಿನ ದಾಳಿ ನಿಂತಿತು, ಆದರೆ ಅವರು ನಮ್ಮ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. ಅವರು ಪಾಕಿಸ್ತಾನ ಸೇನೆಯ ಜೂನಿಯರ್ ಕಮಿಷನ್ಡ್ ಅಧಿಕಾರಿಯಾಗಿದ್ದರು. ನಮ್ಮನ್ನ  ಮುಟ್ಟಿದರೂ ಅದರ ಪರಿಣಾಮ ನೆಟ್ಟಿಗಿರಲ್ಲ ಎಚ್ಚರಿಕೆಯ ಧಾಟಿಯಲ್ಲಿ ಹೇಳಿದ್ದೆ. ಭಾರತೀಯ ಸೇನೆಯು ಢಾಕಾವನ್ನು ಎಲ್ಲಾ ಕಡೆಯಿಂದ ಸುತ್ತುವರೆದಿದೆ ಮತ್ತು ಅವರ ಜನರಲ್ ನಿಯಾಜಿ ಶರಣಾಗಲು ಸಿದ್ಧರಾಗಿದ್ದಾರೆ.

ನಾನು ಆತನ ಸೀನಿಯರ್ ಆಫೀಸರ್‌ನ್ನ ಹಿರಿಯರನ್ನು ಕರೆಯಲು ಹೇಳಿದೆ. ಆಗ ಅವರ ಕ್ಯಾಪ್ಟನ್ ಅಲ್ಲಿಗೆ ಬಂದರು. ನಾನು ಪತ್ರದ ಬಗ್ಗೆ ಎಲ್ಲಾ ವಿವರಗಳೊಂದಿಗೆ ಹೇಳಿದೆ. ನಂತರ ಅವರು ನಮ್ಮನ್ನು ತಮ್ಮ ಕಮಾಂಡರ್‌ಗಳಲ್ಲಿ ಒಬ್ಬರ ಬಳಿಗೆ ಕರೆದೊಯ್ದರು ಮತ್ತು ಅವರು ನಮ್ಮಿಂದ ಪತ್ರವನ್ನು ತೆಗೆದುಕೊಂಡು ಸ್ವಲ್ಪ ಸಮಯ ಉಳಿಯಲು ಹೇಳಿದರು. ಸುಮಾರು ಅರ್ಧ ಗಂಟೆಯ ನಂತರ ಮೇಜರ್ ಜನರಲ್ ಮೊಹಮ್ಮದ್ ಜಮ್ಶೆಡ್ ನಮ್ಮ ಮುಂದೆ ಬಂದು ಜೀಪಿನಲ್ಲಿ ಸೇರಿಕೊಂಡರು. ನನ್ನ ಮತ್ತು ಮೇಜರ್ ಸೇಠಿ ನಡುವೆ ಜಮ್ಶೆಡ್ ಕುಳಿತಿದ್ದರು. ಜಮ್ಶೆಡ್ ಖಾಕಿ ಡ್ರೆಸ್‌ನಲ್ಲಿದ್ದರು. ಪಾಕಿಸ್ತಾನದ ಜೀಪ್ ಒಂದು ನಮ್ಮನ್ನು ಹಿಂಬಾಲಿಸುತ್ತಿತ್ತು.

ನಾವು ನಮ್ಮ ಸ್ಥಳಕ್ಕೆ ಹಿಂತಿರುಗುತ್ತಿದ್ದೆವು. ಮತ್ತೊಮ್ಮೆ ನಮ್ಮ ಮೇಲೆ ಗುಂಡಿನ ದಾಳಿ ಆರಂಭವಾಯಿತು. ಮೇಜರ್ ಸೇಠಿ ಕಾಲಿಗೆ ಗುಂಡು ತಗುಲಿತು ಮತ್ತು ಒಂದು ಗುಂಡು ತೇಜೇಂದರ್‌ಗೂ ತಗುಲಿ ಅಲ್ಲಿಯೇ ಹುತಾತ್ಮನಾದ. ಸ್ವಲ್ಪ ಸಮಯದ ನಂತರ ನಾವು ನಮ್ಮ ಸ್ಥಳಕ್ಕೆ ಬಂದೆವು. ಅಲ್ಲಿ ಕರ್ನಲ್ ಪನ್ನು ಜೊತೆ ಜನರಲ್ ನಾಗರಾ ಇದ್ದರು. ಹೀಗಾಗಿ ಮೇಜರ್ ಜನರಲ್ ಮೊಹಮ್ಮದ್ ಜಮ್ಶೆಡ್ ತನ್ನ ಪಿಸ್ತೂಲನ್ನು ಜನರಲ್ ನಾಗರಾ ಗೆ ಒಪ್ಪಿಸಿದ. ಬಳಿಕ ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಎಕೆ ನಿಯಾಜಿ ತಮ್ಮ 93,000 ಸೈನಿಕರ ಜೊತೆ ಭಾರತೀಯ ಸೇನೆಯೆದುರು ಸರೆಂಡರ್ ಆಗಲು ಒಪ್ಪಿಕೊಂಡರು”

Advertisement
Share this on...