ಜಾರ್ಖಂಡ್ ರಾಜ್ಯದ ಅಂತಾರಾಷ್ಟ್ರೀಯ ಖ್ಯಾತ ಶೂಟರ್ ಕೊನಿಕಾ ಲಾಯಕ್ ಬಗ್ಗೆ ಮಹತ್ವದ ಸುದ್ದಿಯೊಂದು ಬರುತ್ತಿದೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಲಾಕ್ಡೌನ್ ಸಮಯದಲ್ಲಿ ಜಾರ್ಖಂಡ್ನ ನಿವಾಸಿ ಕೋನಿಕಾ ಲಾಯಕ್ಗೆ ಚಲನಚಿತ್ರ ನಟ ಸೋನು ಸೂದ್ ಅವರು ಶೂಟಿಂಗ್ ಗನ್ (Gifted Rs 2.7 Lakh Rifle By Sonu Sood)) ಉಡುಗೊರೆಯಾಗಿ ನೀಡಿದ್ದರು. ಅಷ್ಟಕ್ಕೂ ಕೋನಿಕಾ ಲಾಯಕ್ ಗೆ ಆಗಿದ್ದೇನು? ಆಕೆ ಮಾಡಿಕೊಂಡಿದ್ದೇನು? ಇಂದು ಸೋಶಿಯಲ್ ಮೀಡಿಯಾಗಳಲ್ಲಿ ಕೋನಿಕಾ ಲಾಯಕ್ ಚರ್ಚೆಯ ವಿಷಯವಾಗಿದ್ದಾದರೂ ಯಾಕೆ? ಅನ್ನೋದನ್ನ ಈ ಸುದ್ದಿಯ ಮೂಲಕ ನಿಮಗೆ ತಿಳಿಸುತ್ತೇವೆ.
ಝಾರ್ಖಂಡ್ ರಾಜ್ಯದ ಅಂತರರಾಷ್ಟ್ರೀಯ ಶೂಟರ್ ಕೋನಿಕಾ ಲಾಯಕ್ ಇನ್ನಿಲ್ಲ. ಕೋನಿಕಾ ಲಾಯಕ್ 26 ವರ್ಷ ವಯಸ್ಸಾಗಿತ್ತು. ಕೋಲ್ಕತ್ತಾದ ಹಾಸ್ಟೆಲ್ನಲ್ಲಿ ಫ್ಯಾನ್ಗೆ ನೇ ಣು ಬಿ ಗಿ ದುಕೊಂಡು ಕೊನಿಕಾ ಲಾಯಕ್ ಆ ತ್ಮ ಹ ತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ, ಚಲನಚಿತ್ರ ನಟ ಸೋನು ಸೂದ್ ಕೋನಿಕಾ ಲಾಯಕ್ ಗೆ 2.70 ಲಕ್ಷ ರೂಪಾಯಿಯ ಜರ್ಮನ್ ರೈಫಲ್ ಹಣ್ಣನ್ನು ಉಡುಗೊರೆಯಾಗಿ ನೀಡಿದಾಗ ಕೋನಿಕಾ ಲಾಯಕ್ ಬಗ್ಗೆ ಜನರಿಗೆ ಗೊತ್ತಾಗಿತ್ತು. ಅವರ ಬಗ್ಗೆ ಚಿತ್ರನಟ ಸೋನು ಸೂದ್ ಕೂಡ ಟ್ವೀಟ್ ಮಾಡಿದ್ದರು.
ಝಾರ್ಖಂಡ್ ಸರ್ಕಾರದಿಂದ ಯಾವುದೇ ಹಾಯ ಸಿಗಲಿಲ್ಲ
ಜನವರಿ 27 ರಂದು, ಶೂಟರ್ ಕೊನಿಕಾ ಲಾಯಕ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿದ್ದರು, ಅವರು ತಮ್ಮ ಟ್ವೀಟ್ ನಲ್ಲಿ “ನಾನು 11 ನೇ ಜಾರ್ಖಂಡ್ ರಾಜ್ಯ ರೈಫಲ್ ಶೂಟಿಂಗ್ ಚಾಂಪಿಯನ್ಶಿಪ್-2020 ರಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದೇನೆ. ಆದರೆ ಇದುವರೆಗೂ ಜಾರ್ಖಂಡ್ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ. ದಯವಿಟ್ಟು ಒಂದು ರೈಫಲ್ ಗಾಗಿ ಸಹಾಯ ಮಾಡಿ” ಎಂದಿದ್ದರು.
ಇದಾದ ಬಳಿಕ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren), ಸೋನು ಸೂದ್ (Sonu Sood) ಮತ್ತು ಜಾರ್ಖಂಡ್ ಕ್ರೀಡಾ ಇಲಾಖೆ (Jharkhand Sport Department) ಯನ್ನು ಟ್ಯಾಗ್ ಮಾಡುವ ಮೂಲಕ ಸಹಾಯ ಕೋರಿದ್ದರು. ಈ ಟ್ವೀಟ್ ಅನ್ನು ಸೋನು ಸೂದ್ ಅವರು ಮಾರ್ಚ್ 10 ರಂದು ನೋಡಿದ್ದರು. ಆಗ ಸಹಾಯ ಮಾಡಲು ಮುಂದೆ ಬಂದ ಸೋನು ಸೂದ್ “ನಾನು ನಿಮಗೆ ರೈಫಲ್ ನೀಡುತ್ತೇನೆ” ಎಂದು ಕೋನಿಕಾ ಲಾಯಕ್ ಅವರನ್ನ ಟ್ಯಾಗ್ ಮಾಡಿ, “ನೀವು ದೇಶಕ್ಕೆ ಪದಕ ಕೊಡಬೇಕು. ನಿಮ್ಮ ರೈಫಲ್ ನಿಮ್ಮ ಬಳಿ ತಲುಪುತ್ತದೆ” ಎಂದಿದ್ದರು.
11th Jharkhand State Rifle Shooting Championship-2020 me one gold and one silver jeeta hai maine magar jharkhand government se koi help nahi mila hai abhi tak pls help for one rifle @HemantSorenJMM @SonuSood @SportsJharkhand @ourcmo pic.twitter.com/sScD4saNFR
— Konica Layak (@konica_layak) January 27, 2021
ರೈಫಲ್ ಬೆಲೆ ಲಕ್ಷಾಂತರ ರೂ.ಇತ್ತು
ಟ್ವೀಟ್ ನಂತರ, ಸೋನು ಸೂದ್ ಕೋನಿಕಾ ಲಾಯಕ್ ಗೆ ಸಹಾಯ ಮಾಡಲು ಪ್ರಾರಂಭಿಸಿದರು. ಆದರೆ ನಮ್ಮ ದೇಶದಲ್ಲಿ ಆ ರೈಫಲ್ ಲಭ್ಯವಿಲ್ಲದ ಕಾರಣ ಅದೇ ಸಮಯದಲ್ಲಿ ಸೋನು ಸೂದ್ ತನ್ಮ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಆದರೆ ಕೆಲವು ದಿನಗಳ ನಂತರ ಸೋನು ಸೂದ್ ಕೈಗೆ ಜರ್ಮನ್ ರೈಫಲ್ ಸಿಕ್ಕಿತು. ಆ ರೈಫಲ್ ನ್ನ 2.5 ಲಕ್ಷ ರೂಪಾಯಿ ಕೊಟ್ಟು ಖರೀದಿಸಿ ಅದನ್ನ ಕೋನಿಕಾ ಲಾಯಕ್ ಗೆ ಸೋನು ಸೂದ್ ಗಿಫ್ಟ್ ಮಾಡಿದ್ದರು.
ಇದರ ನಂತರ, ಜೂನ್ 26 ರಂದು, ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದ ಕೋನಿಕಾ ಲಾಯಕ್, “ಸೋನು ಸರ್ ನನ್ನ ಗನ್ ತಲುಪಿದೆ. ನನ್ನ ಕುಟುಂಬದಲ್ಲಿ ಸಂತಸದ ಅಲೆ ಇದೆ. ನನ್ನ ಇಡೀ ಹಳ್ಳಿಯು ನಿಮ್ಮನ್ನು ಆಶೀರ್ವದಿಸುತ್ತಿದೆ. ನೀವು ನೂರು ಕಾಲ ಸುಖವಾಗಿ ಬಾಳಿ” ಎಂದಿದ್ದರು. ಇದಲ್ಲದೆ, ಅವರು ಸಹಾಯಕ್ಕಾಗಿ ಇನ್ನೂ ಅನೇಕ ಜನರಿಗೂ ಧನ್ಯವಾದ ಹೇಳಿದ್ದರು. “ಈ ಗೋಲ್ಡ್ ಮೆಡಲ್ ಪಕ್ಕಾ” ಎಂದು ಸೋನು ಸೂದ್ ಟ್ವೀಟ್ ಮಾಡಿದ್ದರು.
@sonusood सर मेरी बंदूक़ आ गई।मेरे परिवार में ख़ुशी की लहर फैल गई है और पूरा गाँव आपको आशीर्वाद दे रहा है। जुग जुग जीयो @sonusood सर🙏 thank you @Govindagarwal_ bhai pic.twitter.com/TDk14WZeG3
— Konica Layak (@konica_layak) June 26, 2021
इंडिया का ओलंपिक मेडल पक्का 🏅
बस अब दुआओं की जरूरत.@SoodFoundation 🇮🇳 https://t.co/NkoRkDfvAx— sonu sood (@SonuSood) June 26, 2021
ಆ ತ್ಮ ಹ ತ್ಯೆಗೆ ಕಾರಣವೇನು?
ಒಲಿಂಪಿಯನ್ ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ಜೋಯ್ದೀಪ್ ಕರ್ಮಾಕರ್ ಅವರ ಬಳಿ ತರಬೇತಿ ಪಡೆಯುತ್ತಿದ್ದ ಜಾರ್ಖಂಡ್ನ 26 ವರ್ಷದ ಶೂಟರ್ ಕೋನಿಕಾ ಲಾಯಕ್ ಅವರು ಕೋಲ್ಕತ್ತಾದ ಹೊರವಲಯದಲ್ಲಿರುವ ಹೌರಾದ ಬಲ್ಲಿಯಲ್ಲಿ ವಾಸಿಸುತ್ತಿದ್ದ ಹಾಸ್ಟೆಲ್ ಕೊಠಡಿಯಲ್ಲಿ ಬುಧವಾರ ನೇ ಣು ಹಾಕಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ, ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದೇನೆ ಎಂದು ರಾಷ್ಟ್ರೀಯ ಶೂಟರ್ ಬರೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊನಿಕಾ ಫೆಬ್ರವರಿಯಲ್ಲಿ ಮದುವೆಯಾಗಬೇಕಿತ್ತು.
ಅಕ್ಟೋಬರ್ನಲ್ಲಿ ಅಹಮದಾಬಾದ್ನಲ್ಲಿ ನಡೆದ ಅಲ್ ಇಂಡಿಯಾ ಜಿವಿ ಮಾವ್ಲಂಕರ್ ಚಾಂಪಿಯನ್ಶಿಪ್ನಲ್ಲಿ ಟಾರ್ಗೆಟ್ನ್ನ ತಿದ್ದಿದ ಆರೋಪದ ಮೇಲೆ ಅನರ್ಹಗೊಂಡ ನಂತರ ಕೋನಿಕಾ ಈ ವರ್ಷದ ನ್ಯಾಷನಲ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.