ನನಗೆ ಈ ಮುಸ್ಲಿಮರ ವೋಟ್ ಬೇಕೇ ಇಲ್ಲ, ರಾಜ್ಯವನ್ನ ಸ್ವಚ್ಛ ಮಾಡಿಯೆ ಸಿದ್ಧ, ಇವರೆಲ್ಲಾ….”: ಹಿಮಂತ್ ಬಿಸ್ವಾ ಶರ್ಮಾ

in Kannada News/News 276 views

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಇಂಡಿಯಾ ಟುಡೆ ಕಾನ್ಕ್ಲೇವ್‌ ನಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಅವರು ಬಾಂಗ್ಲಾದೇಶದ ನುಸುಳುಕೋರರು, ಅತಿಕ್ರಮಣವನ್ನು ತೆಗೆದುಹಾಕುವ ಸರ್ಕಾರದ ಅಭಿಯಾನ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದರು. ಅವರು ಬಿಜೆಪಿಗೆ ಮಿಯಾನ್ ಮತಗಳು ಬೇಕಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಪೂರ್ವ ಬಂಗಾಳ ಮೂಲದ ಮುಸ್ಲಿಮರನ್ನು ಅಸ್ಸಾಂನಲ್ಲಿ ಮಿಯಾ ಎಂದು ಕರೆಯಲಾಗುತ್ತದೆ.

Advertisement

ಈ ಸಮಯದಲ್ಲಿ ಮಾತನಾಡಿದ ಶರ್ಮಾ, “ಅಸ್ಸಾಂನಲ್ಲಿ ಬಂಗಾಳಿ ಮೂಲದ ಮುಸ್ಲಿಂ ಸಮುದಾಯದ ಮತಗಳು ಬಿಜೆಪಿಗೆ ಅಗತ್ಯವಿಲ್ಲ. ನನಗೆ ಮಿಯಾ ಮುಸ್ಲಿಮರ ಮತ ಬೇಕಾಗಿಲ್ಲ. ನಾವು ಸಾಮರಸ್ಯದಿಂದ ಬದುಕುತ್ತೇವೆ. ನಾನು ಮತಕ್ಕಾಗಿ ಅವರ ಬಳಿಗೆ ಹೋಗುವುದಿಲ್ಲ ಮತ್ತು ಅವರು ಕೂಡ ನನ್ನ ಬಳಿಗೆ ಬರುವುದಿಲ್ಲ” ಎಂದರು. ಈ ಸಮಯದಲ್ಲಿ, ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಲಖಿಂಪುರ್ ಖೇರಿ ಹಿಂಸಾಚಾರದ ಬಗ್ಗೆ ರಾಜಕಾರಣ ಮಾಡಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡರು.

ಅವರು ಮಾತನಾಡುತ್ತ, “ಪ್ರಿಯಾಂಕಾ ಕಸ ಗುಡಿಸುವುದನ್ನ ಯಾಕೆ ನ್ಯಾಶನಲ್ ನ್ಯೂಸ್ ಆಗಿ ಮಾಡಲಾಗುತ್ತಿದೆ? ಇದನ್ನು ಹಬ್ಬದಂತೆ ಯಾಕೆ ಚಿತ್ರಿಸಲಾಗುತ್ತಿದೆ? ನನ್ನ ತಾಯಿ ಕೂಡ ಮನೆ ಗುಡಿಸುತ್ತಾರೆ. ಲಕ್ಷಾಂತರ ಭಾರತೀಯರು ಈ ಕೆಲಸವನ್ನು ತಮ್ಮ ಮನೆಗಳಲ್ಲಿ ಮಾಡುತ್ತಾರೆ” ಎಂದರು. ವಾಸ್ತವವಾಗಿ, ಇಂಡಿಯಾ ಟುಡೇ ತನ್ನ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸೀತಾಪುರ ಜಿಲ್ಲೆಯ PAC ಗೆಸ್ಟ್ ಹೌಸ್ ಅನ್ನು ಗುಡಿಸಿದ ವಿಡಿಯೋವನ್ನು ತೋರಿಸಿದರು, ನಂತರ ಶರ್ಮಾ ತಮ್ಮ ಪ್ರತಿಕ್ರಿಯೆಯನ್ನು ನೀಡಿದರು.

ಮುಂದೆ ಮಾತನಾಡಿದ ಅವರು, “ವಲಸಿಗ ಮುಸ್ಲಿಮರಿಂದಾಗಿ ಅಸ್ಸಾಂ ತನ್ನ ಗುರುತು, ಸಂಸ್ಕೃತಿ ಮತ್ತು ಭೂಮಿಯನ್ನು ಕಳೆದುಕೊಂಡಿದೆ ಎಂದು ರಾಜ್ಯದ ಅನೇಕ ಜನರು ನಂಬಿದ್ದಾರೆ. ಈ ಹಿಂದೆ ಅಸ್ಸಾಂನಲ್ಲಿ ಸಮುದಾಯ ಆಧಾರಿತ ರಾಜಕೀಯ ಇರಲಿಲ್ಲ” ಎಂದು ಶರ್ಮಾ ಹೇಳಿದ್ದಾರೆ. ವಲಸಿಗ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅತಿಕ್ರಮಣ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಅವರು ಮುಂದೆ ಮಾತನಾಡುತ್ತ, “ಅನೇಕ ಅಸ್ಸಾಮಿ ಜನರು ಹಾಗೆ ಯೋಚಿಸುತ್ತಾರೆ. ಇದೆಲ್ಲವೂ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಯಿತು. ನಾನು ಇತಿಹಾಸದ ಈ ಭಾರವನ್ನು ನನ್ನ ಜೊತೆ ಇಟ್ಟುಕೊಂಡು ಜೀವಿಸುತ್ತಿದ್ದೇನೆ. ರಾಜ್ಯದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕುವ ಕಾರ್ಯ ಮುಂದುವರಿದಿದೆ” ಎಂದು ಅವರು ಹೇಳಿದರು.

ಗಮನಿಸುವ ಅಂಶವೇನೆಂದರೆ ಕಳೆದ ತಿಂಗಳು (ಸೆಪ್ಟೆಂಬರ್ 2021) ಅಸ್ಸಾಂನ ಸಿಪಜಾರ್ ನಲ್ಲಿ, ಅತಿಕ್ರಮಣವನ್ನು ತೆರವುಗೊಳಿಸಲು ಹೋದ ಪೊಲೀಸರ ಮೇಲೆ ಮುಸ್ಲಿಮರ ಗುಂಪೊಂದು ದಾಳಿ ನಡೆಸಿದ್ದು, ಇದರಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದರು. ಈ ಘಟನೆಯ ಹಿಂದೆ PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಕೈವಾಡವಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. ದರ್ರಾಂಗ್ ಜಿಲ್ಲೆಯ ಧೋಲ್ಪುರದಲ್ಲಿ ಪಿಎಫ್‌ಐ ‘ಮೂರನೇ ಬಲ’ವಾಗಿ ಕಾರ್ಯನಿರ್ವಹಿಸುತ್ತಿದೆ, ಇದು ಅಕ್ರಮ ಅತಿಕ್ರಮಣಕಾರರನ್ನು ಪ್ರೇರೇಪಿಸಿತು. ನಂತರ ಅವರು ಅತಿಕ್ರಮಣ ತೆರವುಗೊಳಿಸಲು ಹೋದ ಸರ್ಕಾರಿ ತಂಡದ ಮೇಲೆ ದಾ ಳಿ ಮಾಡಿದರು ಎಂದು ಅವರು ಹೇಳಿದ್ದರು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಅಸ್ಸಾಂನಲ್ಲಿ 5548 ಬಿಘಾಗಳ 26 ಸತ್ರಗಳ (ವೈಷ್ಣವ ಮಠಗಳು) ಭೂಮಿಯನ್ನು ನುಸುಳುಕೋರರು ಆಕ್ರಮಿಸಿಕೊಂಡಿದ್ದಾರೆ. ಅಸ್ಸಾಂನ 4 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವು ಅತಿಕ್ರಮಣದಲ್ಲಿದೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ಇದು ರಾಜ್ಯದ ಒಟ್ಟು ಅರಣ್ಯ ಪ್ರದೇಶದ 22%. ಭಾಗವಾಗಿದೆ. ಅಸ್ಸಾಂನ 33 ಜಿಲ್ಲೆಗಳ ಪೈಕಿ 15 ಜಿಲ್ಲೆಗಳಲ್ಲಿ ಬಾಂಗ್ಲಾದೇಶದ ನುಸುಳುಕೋರರು ಪ್ರಾಬಲ್ಯ ಹೊಂದಿದ್ದಾರೆ ಎಂದು ಸರ್ಕಾರಿ ಸಮಿತಿಯು ಕಂಡುಹಿಡಿದಿದೆ. ಈ ಅತಿಕ್ರಮಣದಾರರು ಹಳ್ಳಿ ಹಳ್ಳಿಗಳನ್ನೇ ಆಕ್ರಮಿಸಿಕೊಂಡಿದ್ದಾರೆ.

Advertisement
Share this on...