ರೆಸ್ಟೋರೆಂಟ್ ಒಂದರಲ್ಲಿ ಆಯೋಜನೆಯಾಗಿತ್ತು ‘ಪಾಕಿಸ್ತಾನ್ ಫುಡ್ ಫೆಸ್ಟಿವಲ್’, ಅತಿಥಿಗಳಾಗಿ ಆಗಮಿಸಿದ ಬಜರಂಗದಳದ ಯೋಧರು: ಮುಂದೇನಾಯ್ತು ನೋಡಿ

in Kannada News/News 436 views

ಕೆಲ ಜನರ ಯೋಚನೆಗಳು ನಿಜಕ್ಕೂ ವಿಚಿತ್ರ, ವಿಭಿನ್ನವಾಗಿರುತ್ತೆ, “ಧಂದಾ ಕರೋ ತೋ ಬಡಾ ಕರೋ ಪುರುಷೋತ್ತಮ್ ಭಾಯಿ, ವರನಾ ನಾ ಕರೋ” ಇದೇ ಯೋಚನೆಯೊಂದಿಗೆ ಗುಜರಾತ್‌ನ ರೆಸ್ಟಾರೆಂಟ್ ಗ್ರಾಹಕರನ್ನ ಆಕರ್ಷಿಸಲು ‘ಪಾಕಿಸ್ತಾನ್ ಫುಡ್ ಫೆಸ್ಟಿವಲ್’ ಆಯೋಜಿಸಿತ್ತು. ಆದರೆ ಅದರ ಈ ವಿಶಿಷ್ಟ (ಅವರ ಪ್ರಕಾರ) ಯೋಜನೆ ರೆಸ್ಟೋರೆಂಟ್‌ನ ಮೇಲೆ ಎಂಥಾ ಪರಿಣಾಮ ಬೀರಬಹುದು ಅಂತ ಅದು ಊಹಿಸಿಯೂ ಇರಲಿಲ್ಲ. ಕೊನೆಗೆ ಕ್ಷಮೆ ಕೇಳದೆ ಬೇರೆ ದಾರಿ ಇರದೆ ಕ್ಷಮೆಯಾಚನೆಯೂ ಮಾಡಬೇಕಾಯಿತು.

ಇತ್ತೀಚಿನ ಕೆಲ ವರ್ಷಗಳಲ್ಲಿ, ಇಡೀ ಜಗತ್ತಿಗೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹೇಗಿದೆ ಅನ್ನೋದರ ಬಗ್ಗೆ ಪರಿಚಿತವಾಗಿದೆ, ಮತ್ತು ಪಾಕಿಸ್ತಾನದ ಬಗ್ಗೆ ಕೆಲವು ಜನರ ಕುರುಡು ಪ್ರೀತಿಯು ಜನರನ್ನು ಹೇಗೆ ಕೆರಳಿಸುತ್ತದೆ ಮತ್ತು ಏಕೆ? ಹಗಲಿರುಳು ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಯತ್ನಿಸುತ್ತಿರುವ ದೇಶವನ್ನು ಯಾರಾದರೂ ಹೊಗಳಿದರೆ, ಯಾವುದೇ ಭಾರತೀಯನಿಗೂ ಕೋಪ ಬರುವುದು ಸಹಜ. ಈ ಸಂಚಿಕೆಯಲ್ಲಿ ಗುಜರಾತ್‌ನ ಸೂರತ್‌ನಲ್ಲಿರುವ ‘ಟೇಸ್ಟ್ ಆಫ್ ಇಂಡಿಯಾ’ ರೆಸ್ಟೋರೆಂಟ್ ‘ಪಾಕಿಸ್ತಾನ ಫುಡ್ ಫೆಸ್ಟಿವಲ್’ ಎಂಬ ಹೆಸರಿನ ಫುಡ್ ಫೆಸ್ಟಿವಲ್ ಆಯೋಜಿಸಿತ್ತು.

ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಅಸ್ಲಂ ಸೈಕಲ್‌ವಾಲಾ ಅವರ ಮೂಲಕ ಈ ವಿಷಯ ಜನರಿಗೆ ತಿಳಿದಿದ್ದು, ಅವರು ಈ ಫುಡ್ ಫೆಸ್ಟಿವಲ್ ‌ನ ಹೋರ್ಡಿಂಗ್ ಅನ್ನು ವೀಡಿಯೊ ಮಾಡಿ ಸೋಮವಾರ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು ಮತ್ತು ಅದು ನೋಡು ನೋಡುತ್ತಲೇ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿಬಿಟ್ಟಿತು.

ಇಂಥದ್ದನ್ನ ಕಂಡ ಬಳಿಕ ಬಜರಂಗದಳದ ಯೋಧರು ಹೊರ ಬರುವುದು ಸಹಜ. ಅವರು ತಕ್ಷಣವೇ ‘ಟೆಸ್ಟ್ ಆಫ್ ಇಂಡಿಯಾ’ ಮೇಲೆ ದಾ ಳಿ ಮಾಡಿದರು ಮತ್ತು ರೆಸ್ಟೋರೆಂಟ್ ಅನ್ನು ವಿರೋಧಿಸಿದರು. ಇದರೊಂದಿಗೆ ಹೋರ್ಡಿಂಗ್ ಅನ್ನು ಬೇರು ಕಿತ್ತು ಎಲ್ಲರ ಸಮ್ಮುಖದಲ್ಲಿ ಸುಟ್ಟು ಹಾಕಿ ‘ಪಾಕಿಸ್ತಾನ ಫುಡ್ ಫೆಸ್ಟಿವಲ್’ ರದ್ದುಗೊಳಿಸುವಂತೆ ಆಗ್ರಹಿಸಿದರು.

ಅಷ್ಟೇ ಅಲ್ಲ, ಬಜರಂಗದಳದ ಸ್ಥಳೀಯ ಮುಖಂಡ ದೇವಿಪ್ರಸಾದ್ ದುಬೆ ಮಾತನಾಡಿ, ‘ಇಂತಹ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಿಂದ ತಿಳಿದು, ಸ್ಥಳೀಯ ಸಂಯೋಜಕ ದಿನೇಶ್ ನವಾಡಿಯಾ ಅವರಿಂದ ಒಪ್ಪಿಗೆ ಪಡೆದು ಪ್ರತಿಭಟನೆ ನಡೆಸಿದ್ದೇವೆ. ನಾವು ರೆಸ್ಟೋರೆಂಟ್ ಮಾಲೀಕರೊಂದಿಗೆ ಮಾತನಾಡಿದಾಗ, ಅವರು ಕ್ಷಮೆಯಾಚಿಸಿದರು ಮತ್ತು ಈ ಫುಡ್ ಫೆಸ್ಟಿವಲ್ ‌ನ್ನ ರದ್ದುಗೊಳಿಸಿದರು, ಮತ್ತು ನಾವು ನಿಮ್ಮ ಮಾತಿಗೆ ಬದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಡಿಸೆಂಬರ್ 22 ರೊಳಗೆ ನಮ್ಮ ಸ್ವಯಂಸೇವಕರನ್ನು ನೇಮಿಸಿಕೊಳ್ಳುತ್ತೇವೆ ಎಂದು ಹೇಳಿದ್ದೇವೆ, ಇಲ್ಲದಿದ್ದರೆ ಪರಿಣಾಮಗಳು ಸಕಾರಾತ್ಮಕವಾಗಿರುವುದಿಲ್ಲ ಎಂದು ಅವರಿಗೆ ವಾರ್ನಿಂಗ್ ಕೊಟ್ಟಿದ್ದೇವೆ” ಎಂದರು.

ಕೊನೆಯಲ್ಲಿ, ನಿರೀಕ್ಷಿಸಿದಂತೆ ಸಂಭವಿಸಿತು. ‘ಟೇಸ್ಟ್ ಆಫ್ ಇಂಡಿಯಾ’ ಮಾಲೀಕ ಸ್ವಾಮಿ ಸಂದೀಪ್ ಡಾವರ್ ಅವರು ವಿವಾದಿತ ‘ಪಾಕಿಸ್ತಾನ ಫುಡ್ ಫೆಸ್ಟಿವಲ್’ ರದ್ದುಗೊಳಿಸಿದ್ದಲ್ಲದೆ, ಬಜರಂಗದಳದ ಕ್ಷಮೆಯಾಚಿಸಿದ್ದಾರೆ ಮತ್ತು ‘ಪಾಕಿಸ್ತಾನ ಫುಡ್ ಫೆಸ್ಟಿವಲ್’ ಆಹಾರ ಉತ್ಸವದ ಬದಲಿಗೆ ಸೀ ಫುಡ್ ಫೆಸ್ಟಿವಲ್ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ತಾನು ಪಾಕಿಸ್ತಾನದ ರಾಜಕೀಯ ವ್ಯವಸ್ಥೆಗೆ ವಿರುದ್ಧವಾಗಿದ್ದೇನೆ, ಅವರ ವಿಭಿನ್ನ ಶೈಲಿಯ ಆಹಾರಗಳನ್ನು ಜಗತ್ತಿಗೆ ತೋರಿಸುವುದು ನಮ್ಮ ಉದ್ದೇಶವಾಗಿತ್ತು ಅಷ್ಟೇ ಎಂದು ಸಮಜಾಯಿಶಿ ನೀಡಿದ್ದಾರೆ.

ಈಗ ಕಾರಣ ಏನೇ ಇರಲಿ, ಆದರೆ ‘ಟೇಸ್ಟ್ ಆಫ್ ಇಂಡಿಯಾ’ ‘ಪಾಕಿಸ್ತಾನ ಫುಡ್ ಫೆಸ್ಟಿವಲ್’ ಮೂಲಕ ಮಾರ್ಕೆಟಿಂಗ್ ಮಾಡಲು ಯೋಚಿಸಿತ್ತು ಮತ್ತು ಈ ಆಲೋಚನೆ ಅವರ ವಿರುದ್ಧವೇ ಬ್ಯಾಕ್‌ಫೈರ್ ಆಗಿದ್ದಂತೂ ಸುಳ್ಳಲ್ಲ.

Advertisement
Share this on...