ನವದೆಹಲಿ: ಶೀಘ್ರದಲ್ಲೇ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು ತಮ್ಮ ಶಕ್ತಿ ಮೀರಿ ಅಧಿಕಾರದ ಗದ್ದುಗೆ ಹಿಡಿಯಲು ತಮ್ಮ ಸರ್ವ ಪ್ರಯತ್ನಗಳನ್ನ ಮಾಡಲಾರಂಭಿಸಿವೆ. ಈ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಪ್ರತಿಯೊಂದು ಪಕ್ಷಗಳೂ ಜನರಿಗೆ ಭರಪೂರ್ ಭರವಸೆಗಳನ್ನು ನೀಡುತ್ತಿವೆ. ರ್ಯಾಲಿ ಮತ್ತು ಪ್ರಚಾರಗಳೂ ಆರಂಭವಾಗಿವೆ.
ಈ ನಡುವೆ ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ದೊಡ್ಡ ಹೇಳಿಕೆಯೊಂದನ್ನ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ ಗೆಲುವಿನ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಸುಬ್ರಮಣಿಯನ್ ಸ್ವಾಮಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಪ್ರಚಂಡ ಗೆಲುವಿನ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಶುಕ್ರವಾರ (ಡಿಸೆಂಬರ್ 17) ತಮ್ಮ ಟ್ವಿಟ್ಟರ್ನಲ್ಲಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಹೀಗೆ ಬರೆದಿದ್ದಾರೆ, “ನನ್ನ ಇತ್ತೀಚಿನ ಮಥುರಾ ಪ್ರದೇಶಗಳಿಗೆ ಭೇಟಿ ನೀಡಿದಾಗ, ಅನೇಕ ಪ್ರದೇಶಗಳ ಕೆಲವು VHS ಸದಸ್ಯರು 2022 ಯುಪಿ ಚುನಾವಣೆಯ ಪ್ರಕ್ಷೇಪಗಳ ಬಗ್ಗೆ ನನ್ನೊಂದಿಗೆ ಮಾತನಾಡಿದರು. ಯೋಗಿ ಆದಿತ್ಯನಾಥ್ ಅವರಿಗೆ 2017 ರಲ್ಲಿ ಬಿಜೆಪಿಗೆ ಸಿಕ್ಕ ದೊಡ್ಡ ಗೆಲುವಿನಂತೆಯೇ ಈ ಬಾರಿಯೂ ಗೆಲ್ಲಿಸಲಿದ್ದೇವೆ ಎಂದು VHS ಅಂದಾಜಿಸಿದೆ ಆದರೆ 300+-. ಆದರೆ ಕ್ರೆಡಿಟ್ ಪಡೆಯಲು ಪ್ರಯತ್ನಿಸುವವರ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದೇನೆ”
In my recent visit to Mathura areas some VHS members from other areas spoke to me about their projections for 2022 UP elections. VHS estimate is that Yogi Adityanath will lead BJP to as large a victory as in 2017, i.e., 300+-. But beware of those who will try to grab the credit.
— Subramanian Swamy (@Swamy39) December 17, 2021
ಈ ಟ್ವೀಟ್ನಲ್ಲಿ, ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಅಧಿಕಾರಕ್ಕೆ ಬರುವ ಬಗ್ಗೆ ಮಾತನಾಡಿದ್ದಾರೆ ಆದರೆ ಕ್ರೆಡಿಟ್ ಪಡೆಯುವವರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕ್ರೆಡಿಟ್ ಪಡೆಯುವ ಬಗ್ಗೆ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ಗೆಲುವಿನಲ್ಲಿ ಯಾವುದೇ ಪಾತ್ರವನ್ನು ನಿರ್ವಹಿಸದವರು ಅನೇಕ ಸಾಧನೆಗಳಿಗೆ ಕ್ರೆಡಿಟ್ ತೆಗೆದುಕೊಳ್ಳಲು ಹೆಸರುವಾಸಿಯಾಗಿದ್ದಾರೆ, ಹಾಗಾಗಿ ಅಂಥವರಿಂದ ಎಚ್ಚರದಿಂದಿರಲು ಸಲಹೆ ನೀಡಿದ್ದೇನೆ ಎಂದಿದ್ದಾರೆ.
ಮಹತ್ವದ ಸಂಗತಿ ಎಂದರೆ, ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ರಾಜಕೀಯ ಸಂಚಲನ ಮೂಡಿದೆ. ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಬ್ಯಾನರ್ ಮತ್ತು ಪೋಸ್ಟರ್ಗಳ ಮೂಲಕ ಸಾರ್ವಜನಿಕರನ್ನು ಓಲೈಸಲು ಪ್ರಯತ್ನಿಸುತ್ತಿವೆ. ಇದಲ್ಲದೇ ಬಿಜೆಪಿ, ಕಾಂಗ್ರೆಸ್, ಎಸ್ಪಿ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳು ತಮ್ಮ ಹಿರಿಯ ನಾಯಕರನ್ನೇ ಚುನಾವಣಾ ಪ್ರಚಾರಕ್ಕೆ ಇಳಿಸಿವೆ.
ಬಿಜೆಪಿಗೆ 2017 ಕ್ಕಿಂತಲೂ ಹೆಚ್ಚು ಸೀಟು ಸಿಗಬಹುದು: ಪ್ರಶಾಂತ್ ಕಿಶೋರ್
ಭಾರತೀಯ ಜನತಾ ಪಕ್ಷ (ಬಿಜೆಪಿ) ಕುರಿತು ಹೇಳಿಕೆ ನೀಡಿರುವ ಪ್ರಶಾಂತ್ ಕಿಶೋರ್, ಈ ಬಾರಿ 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 2017ರ ಚುನಾವಣೆಗಿಂತ ಹೆಚ್ಚು ಸ್ಥಾನ ಗಳಿಸಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಬಾರಿಯೂ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ. ಅವರು ರಾಹುಲ್ ಗಾಂಧಿ ಬಗ್ಗೆ ಹೇಳಿಕೆ ನೀಡಿದ ನಂತರ ಕೆಲವರು ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಬಹುದು ಎಂದು ಊಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ದರು ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲಿಲ್ಲ ಎಂದು ಹೇಳಿದ್ದಾರೆ.