ಗಂಭೀರ ಕಾಯಿಲೆಗೆ ತುತ್ತಾಗಿ ಕರೀನಾ ಖಾನ್ ಸ್ಥಿತಿ ಗಂಭೀರ: ಪ್ಲೀಸ್ ಕರೀನಾಗಾಗಿ ಪ್ರಾರ್ಥನೆ ಮಾಡಿ ಎಂದ ಸೈಫ್ ಹಾಗು ಕರಿಶ್ಮಾ ಕಪೂರ್

in Kannada News/News 1,823 views

ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋವೊಂದು ಭಾರೀ ವೈರಲ್ ಆಗುತ್ತಿದೆ. ‌ಈ ಫೋಟೋ ನೋಡಿದ ಬಳಿಕ‌ ನೆಟ್ಟಿಗರು ಈ ಫೋಟೋವನ್ನ ತಮ್ಮ ಫ್ಯಾಮಿಲಿ ಹಾಗು ಇತರ ಸ್ನೇಹಿತರಿಗೂ ಫಾರ್ವರ್ಡ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಫೋಟೋವನ್ನ‌ ನೋಡಿ ಪ್ರಶ್ನಿಸುತ್ತಲೂ ಇದ್ದಾರೆ. ಅಷ್ಟಕ್ಕೂ ಕರೀನಾ ಕಪೂರ್ ಈ ರೀತಿಯಾಗಿ ಕಂಡುಬರುತ್ತಿರೋದ್ಯಾಕೆ? ಕರೀನಾ ಕಪೂರ್ ಬಗ್ಗೆ ಆಕೆಯ ಅಕ್ಕ ಕರಿಶ್ಮಾ ಕಪೂರ್, ಗಂಡ ಸೈಫ್ ಅಲಿ ಖಾನ್ ಏನಂದಿದ್ದಾರೆ ಅನ್ನೋದನ್ನ ಈ ಸುದ್ದಿಯ ಮೂಲಕ ನಿಮಗೆ ತಿಳಿಸುತ್ತೇವೆ

Advertisement

ಕರೀನಾ ಕಪೂರ್ ಫ್ಯಾನ್ಸ್‌ಗೆ ಆಘಾತ

ಹಿಂದಿ ಚಿತ್ರರಂಗದ ಖ್ಯಾತ ನಟಿ ಕರೀನಾ ಕಪೂರ್ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಕರೀನಾ ಕಪೂರ್ ಅವರು ಕೆಲವೊಮ್ಮೆ ತಮ್ಮ ಚಿತ್ರದ ಬಗ್ಗೆ ಚರ್ಚೆಗೆ ಗ್ರಾಸವಾದರೆ ಕೆಲವೊಮ್ಮೆ ಅವರ ಪತಿ ಸೈಫ್ ಅಲಿ ಖಾನ್ ಬಗ್ಗೆ ಚರ್ಚೆಯ ವಿಷಯವಾಗಿ ಅವರು ಸುದ್ದಿಯಲ್ಲಿರುತ್ತಾರೆ. ಆದರೆ, ಈ ಬಾರಿ ಕರೀನಾ ಕಪೂರ್ ಅವರು ಕೋವಿಡ್‌ನಿಂದ ಬಳಲುತ್ತಿರುವ ಕಾರಣ ಸುದ್ದಿಯಲ್ಲಿದ್ದಾರೆ. ಈ ಕಾರಣಕ್ಕಾಗಿ ಕರೀನಾ ಕಪೂರ್ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಮತ್ತೊಂದೆಡೆ ಈ ಅವರ ಅಭಿಮಾನಿಗಳು ಕರೀನಾ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇತ್ತೀಚೆಗೆ ಕರಿಷ್ಮಾ ಕಪೂರ್ ಕರೀನಾ ಕಪೂರ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಕರೀನಾಗಾಗಿ ಎಲ್ಲರೂ ಪ್ರಾರ್ಥಿಸಿ ಎಂದ ಕರಿಶ್ಮಾ ಹಾಗು ಸೈಫ್ ಅಲಿ ಖಾನ್

ನಿಮಗೆ ತಿಳಿದಿರುವಂತೆ ಕರೀನಾ ಕಪೂರ್ (Kareena Kapoor Health Update) ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಕೋವಿಡ್ ನಿಂದ ಬಳಲುತ್ತಿದ್ದಾರೆ. ಕೋವಿಡ್‌ನಿಂದಾಗಿ ಕುಟುಂಬಸ್ಥರು ಕೂಡ ಅವರಿಗೆ ಕಿಮ್ಮತ್ತು ನೀಡದ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಸಿನಿಮಾ ನಟಿ ಕರೀನಾ ಕಪೂರ್ ಅಕ್ಕ ಕರಿಷ್ಮಾ ಕಪೂರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಕರೀನಾ ಕಪೂರ್ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂದು ಕರಿಷ್ಮಾ ಕಪೂರ್ ಹೇಳಿದ್ದಾರೆ. ಇದೇ ಕಾರಣಕ್ಕೆ ಅವರ ಕುಟುಂಬ ಸದಸ್ಯರು ಕರೀನಾ ಬಗ್ಗೆ ಮಾತನಾಡುತ್ತಿದ್ದಾರೆ. ಕರೀನಾ ಕಪೂರ್‌ಗಾಗಿ ಪ್ರಾರ್ಥಿಸುವಂತೆ ಕರಿಷ್ಮಾ ಕಪೂರ್ ಹಾಗು ಪತಿ ಸೈಫ್ ಸಲಿ ಖಾನ ಕೇಳಿಕೊಂಡಿದ್ದಾರೆ.

ಮನೆಯಿಂದ ಸೈಫ್ ಅಲಿ ಖಾನ್‌ನ್ನ ದೂರವಿಟ್ಟ ಕರೀನಾ

ಈ ದಿನಗಳಲ್ಲಿ ಕರೀನಾ ಕಪೂರ್ ತನ್ನ ಮನೆಯಲ್ಲಿಯೇ ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಕರೀನಾ ಕಪೂರ್ ಅವರನ್ನು ನೋಡಲು, ವೈದ್ಯರು ಬೆಳಿಗ್ಗೆ ಮತ್ತು ಸಂಜೆ ಅವರ ಮನೆಗೆ ಭೇಟಿ ನೀಡುತ್ತಾರೆ. ಕೋವಿಡ್‌ನಿಂದಾಗಿ ಕರೀನಾ ಕಪೂರ್ ತನ್ನ ಪತಿ ಸೈಫ್ ಅಲಿ ಖಾನ್ ಅವರನ್ನು ಮನೆಯಿಂದ ಬೇರ್ಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಅವರ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದವು. ಫೋಟೋ ನೋಡಿದ ನಂತರ ಜನ ಸೋಶಿಯಲ್ ಮೀಡಿಯಾಗಳಲ್ಲಿ ನಾನಾ ತರಹದ ಮಾತುಗಳನ್ನಾಡುತ್ತಿದ್ದರು. ಏತನ್ಮಧ್ಯೆ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಕರೀನಾ ಕಪೂರ್ ತನ್ನ ಪತಿ ತನ್ನನ್ನು ಮನೆಯ ಹೊರಗಿನಿಂದಲೇ ನೋಡಲು ಬರುತ್ತಾರೆ ಎಂದು ತಿಳಿಸಿದ್ದರು.

Advertisement
Share this on...