ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಸರ್ಜಿಕಲ್ ಸ್ಟ್ರೈಕ್ ಹೀರೋ ಬ್ರಿಗೇಡಿಯರ್ ತಂಗಿ: ಈ ವಿಷಯ ತಿಳಿಯುತ್ತಲೇ ಪ್ರಧಾನಿ ಮೋದಿ ಮಾಡಿದ್ದೇನು ನೋಡಿ

in Kannada News/News 252 views

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಅಗಾಧ ವ್ಯಕ್ತಿತ್ವದ ಬಗ್ಗೆ ಇಡೀ ಜಗತ್ತಿಗೇ ತಿಳಿದಿದೆ, ಆದರೆ ಇಂದು ನಡೆದ ಒಂದು ಘಟನೆಯಿಂದ ಇಡೀ ಪ್ರಪಂಚದ ಮುಂದೆ ಅವರ ಅಪಾರ ಔದಾರ್ಯವನ್ನು ಮತ್ತೆ ಪ್ರತಿಫಲಿಸುವಂತೆ ಮಾಡಿದೆ. ಪ್ರಧಾನಿ ಮೋದಿಯವರ ವಿಶೇಷತೆಯೇನೆಂದರೆ ಅವರು ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಚಟುವಟಿಕೆಗಳನ್ನು ಬಹಳ ಗಂಭೀರವಾಗಿ ಗಮನಿಸುತ್ತಾರೆ. ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸಲು ಅವರಿಗೆ ಮನಸ್ಸಿಲ್ಲ. ಈ ನಡುವೆ ಕ್ಯಾನ್ಸರ್ ಪೀಡಿತರೊಬ್ಬರು ಅವರಿಗೆ ಪತ್ರ ಬರೆದಾಗ ಅದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ತಮ್ಮ ಕ್ರಿಯಾಶೀಲತೆಯನ್ನು ತೋರಿದರು. ನಿಸ್ಸಂದೇಹವಾಗಿ, ಈ ಕ್ರಿಯಾಶೀಲತೆಯ ಮೂಲಕ, ನಾವೆಲ್ಲರೂ ಅವರ ಅಗಾಧ ವ್ಯಕ್ತಿತ್ವದ ಜೊತೆಗೆ ಅವರ ಔದಾರ್ಯವನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಬನ್ನಿ ಈ ಬಗ್ಗೆ ನಿಮಗೆ ವಿಸ್ತೃತವಾಗಿ ತಿಳಿಸುತ್ತೇವೆ.

Advertisement

ಕ್ಯಾನ್ಸರ್ ನಿಂದ ಬಳಲುತ್ತಿರುವ ಸರ್ಜಿಕಲ್ ಸ್ಟ್ರೈಕ್ ಹೀರೋ ಬ್ರಿಗೇಡಿಯರ್ ಡಿಎಸ್ ಹೂಡಾ ಅವರ ಸಹೋದರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರ ಒಂದೇ ಒಂದು ಹೆಜ್ಜೆ ತನ್ನಂತಹ ಕ್ಯಾನ್ಸರ್ ಪೀಡಿತರಿಗೆ ಬದುಕನ್ನು ನೀಡಬಹುದು ಎಂದು ಅವರು ತಮ್ಮ ಪತ್ರದಲ್ಲಿ ಕೋರಿದ್ದಾರೆ. ಬ್ರಿಗೇಡಿಯರ್ ಸಹೋದರಿ ಪ್ರಧಾನಿ ಮೋದಿಯವರಿಗೆ ಮಾಡಿದ ಬೇಡಿಕೆ ಅಂತ ತಿಳಿದರೆ ನೀವು ಆಶ್ಚರ್ಯ ಪಡುತ್ತೀರ. ಹೌದು ಅವರ ಈ ಒಂದು ಬೇಡಿಕೆ ಇದು ಅನೇಕ ಕ್ಯಾನ್ಸರ್ ಪೀಡಿತರಿಗೆ ಹೊಸ ಜೀವನವನ್ನು ನೀಡಲು ಸಹಾಯ ಮಾಡುತ್ತದೆ.

ವಾಸ್ತವವಾಗಿ, ಅವರು ಏಪ್ರಿಲ್ 2021 ರಲ್ಲಿ US ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಅನುಮೋದಿಸಿದ ಸಸಿತುಜುಮಾಬ್ ಗೋವಿಟೆಕಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿಯೂ ಅನುಮೋದಿಸುವಂತೆ ಪ್ರಧಾನಿ ಮೋದಿಯವರನ್ನು ವಿನಂತಿಸಿದ್ದರು. ಇದನ್ನು ಯುರೋಪಿಯನ್ ಔಷಧಿಗಳ ಸಂಸ್ಥೆ ಕೂಡ ಅನುಮೋದಿಸಿದೆ. ಈಗ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬ್ರಿಗೇಡಿಯರ್ ಡಿಎಸ್ ಹೂಡಾ ಅವರ ಸಹೋದರಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ಕ್ಯಾನ್ಸರ್‌ನಿಂದ ಬಳಲುತ್ತಿರುವ ನನ್ನಂತಹ ಸಾವಿರಾರು ಜನರಿಗೆ ಹೊಸ ಜೀವನವನ್ನು ಪಡೆಯಲು ಭಾರತೀಯ ಮಾರುಕಟ್ಟೆಯಲ್ಲಿ ಈ ಔಷಧಿಯನ್ನ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಬ್ರಿಗೇಡಿಯರ್‌ ಹೂಡಾ ರವರ 68 ವರ್ಷದ ಸಹೋದರಿಗೆ ಟ್ರಿಪಲ್ ನೆಗೆಟಿವ್ ಬ್ರೆಸ್ಟ್ (ಸ್ತನ) ಕ್ಯಾನ್ಸರ್ ಇದೆ.

ಇದರ ಚಿಕಿತ್ಸೆಯು ಸೀಮಿತ ಪ್ರಮಾಣದಲ್ಲಿ ಲಭ್ಯವಿದೆ, ಆದರೆ ಈ ಔಷಧಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನುಮೋದಿಸಿದರೆ ಅನೇಕ ಜೀವಗಳನ್ನು ಉಳಿಸಬಹುದು. ಅದೇ ಸಮಯದಲ್ಲಿ, ಈ ಪತ್ರವನ್ನು ಗಮನದಲ್ಲಿಟ್ಟುಕೊಂಡು, ಪಿಎಂಒ ತಕ್ಷಣವೇ ಕ್ಯಾನ್ಸರ್ ಸರ್ವೈವರ್ ಬ್ರಿಗೇಡಿಯರ್ ಅವರ ಸಹೋದರಿಯನ್ನು ಫೋನ್ ಮಾಡಿ ಅವರು ಸ್ವತಃ ಫೋನ್ ಮೂಲಕ ಅದರ ಮಾಹಿತಿಯನ್ನ ನೀಡಿದ್ದಾರೆ. ಅದೇ ಸಮಯದಲ್ಲಿ, ಬ್ರಿಗೇಡಿಯರ್ ಅವರ ಈ ಟ್ವೀಟ್ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಜನರು ಕೂಡ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

ಈ ಬ್ರಿಗೇಡಿಯರ್ ಟ್ವೀಟ್ ಮಾಡಿದ್ದು, “ಪಿಎಂಒದಿಂದ ಕರೆ ಬಂದಿದೆ ಮತ್ತು ನನ್ನ ಸಹೋದರಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಅವರ ಫೋನ್ ಮತ್ತು ಅವರು ಮಾತನಾಡಿದ ಗೌರವ ಮತ್ತು ವಿನಮೃತೆಯನ್ನ ನೋಡಿ ನಿಜಕ್ಕೂ ಖುಷಿಯಾಯ್ತು. ಈ ವಿಷಯದ ಬಗ್ಗೆ ನಾವು ಪರಿಶೀಲಿಸುತ್ತೇವೆ ಎಂದಿದ್ದಾರೆ. ನಾನು ಭಾರತೀಯ ಮತ್ತು ನನ್ನ ವೈಯಕ್ತಿಕ ಹಸ್ತಕ್ಷೇಪದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ” ಎಂದು ಬ್ರಿಗೇಡಿಯರ್ ಹೇಳಿದರು.

ಸರ್ಜಿಕಲ್ ಸ್ಟ್ರೈಕ್ ನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬ್ರಿಗೇಡಿಯರ್

2016 ರಲ್ಲಿ ಉರಿ ದಾ ಳಿ ಯ ನಂತರ ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಊಹಿಸಲಾಗಿತ್ತು, ಆದರೆ ನಂತರ ಈ ಎಲ್ಲಾ ವರದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು.

Advertisement
Share this on...